ಸಾಧಕರ ಯಶಸ್ಸಿನ ಗುಟ್ಟು ತಿಳಿಸುವ ವಿಶೇಷ ಉಪನ್ಯಾಸ ಸರಣಿ
Team Udayavani, Jan 15, 2020, 4:31 AM IST
ಪ್ರತಿ ದಿನ, ಪ್ರತಿ ಕ್ಷಣ ಒತ್ತಡದ ಬದುಕು. ಬದುಕಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲವೆಂಬ ಭ್ರಮೆ. ಪ್ರತಿಷ್ಠಿತ ಕಾಲೇಜಿನ ಮೆಟ್ಟಿಲೇರಿ ಓದಿ ಮುಗಿಸಿದ ಮೇಲೂ ಬದುಕಿನಲ್ಲಿ ಸಾರ್ಥ ಕತೆಯ ಕುರಿತು ಸಂಶಯ.
ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ, ಕೋಟ್ಯಂತರ ರೂಪಾಯಿಗಳ ವ್ಯವಹಾರ, ನಿಮ್ಮದೇ ಕಂಪನಿ, ಗಗನಚುಂಬಿ ಟವರ್‌ಗಳಲ್ಲಿ ಮನೆ, ಕಪ್ಪು ಕಾರು ಹೀಗೆ ಜೀವನದಲ್ಲಿ ಎಷ್ಟೇ ಇದ್ದರೂ ತೃಪ್ತ ಭಾವ ಇರುವುದಿಲ್ಲ.
ಈ ಗುಂಪಿನ ಮಧ್ಯೆ ಇನ್ನೊಂದು ವರ್ಗವೂ ಇದೆ. ಬದುಕಿನಲ್ಲಿ ಸಮಸ್ಯೆ ಬಂದಾಗ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದಾ ಆ ಸಮಸ್ಯೆಗೆ ಶರಣಾಗಿ ಬಲಿಯಾಗುವುದು ಅಥವಾ ಆ ಸಮಸ್ಯೆಯನ್ನೇ ನಮ್ಮ ಬೆಳವಣಿಗೆಗೆ ವೇದಿಕೆಯನ್ನಾಗಿ ಮಾಡಿ ಕೊಂಡು ಸಾಧಿಸುವುದು.
ಹೀಗೆ ಸಮಸ್ಯೆಯನ್ನೇ ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡು ಯಶಸ್ಸು ಕಂಡ ಸಾಧಕರ ಮಾತುಗಳನ್ನು ನೀವು ಕೇಳುವುದು ನಿಜಕ್ಕೂ ಸ್ಫೂರ್ತಿ ದಾಯಕ ಸಂಗತಿ.
ಹೌದು ಟೆಡ್‌ಟಾಕ್ ತಮ್ಮ ಯಶೋಗಾ ಥೆಯನ್ನು ಹಂಚಿಕೊಳ್ಳುವವರಿಗೆ ಉತ್ತಮ ವೇದಿಕೆ. ಸಾಧಿಸ ಬೇಕೆಂಬ ಛಲ ಇರುವವರೆಗೂ ಪ್ರೇರಣೆಯಾಗಿದೆ. 1984 ಫೆಬ್ರವರಿ 23 ರಂದು ಈ ಪರಿಕಲ್ಪನೆ ಪ್ರಾರಂಭವಾಗಿದ್ದು, ಸುಮಾರು 20 ಭಾಷೆಗಳಲ್ಲಿ 3000ಕ್ಕೂ ಹೆಚ್ಚು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ, ಮನೋ ರಂಜನೆ ಸೇರಿದಂತೆ ಹತ್ತಾರು ಕ್ಷೇತ್ರಗಳ ಸಾಧ ಕರು ತಮ್ಮ ಜೀವನ ಏರುಪೇರುಗಳಿಂದ ಹಿಡಿದು ಉತ್ತಮ ಜೀವನ ನಿರ್ವಹಣೆಗೆ ಅಗತ್ಯ ವಾಗುವ ಸ್ಪೂರ್ತಿದಾಯಕ ವಿಷಯವನ್ನು ಹಂಚಿಕೊಳ್ಳುತ್ತಾರೆ.
ಮತ್ತೂಂದು ಅಚ್ಚರಿಯ ಸಂಗತಿ ಎಂದರೆ ಇದುವರೆಗೂ ಇಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಪ್ರತಿ ವ್ಯಕ್ತಿಯೂ ನನ್ನ ಕೈಯಲ್ಲಿ ಏನೂ ಆಗದೆಂದು ಕೈಚೆಲ್ಲಿ ಕುಳಿತು ಅನಂತರ ವಿಜಯ ಪತಾಕೆ ಹಾರಿಸಿದವರು. ಬದುಕಿನಲ್ಲಿ ಪ್ರೇರಣೆ ಎಂಬುದು ತೀರಾ ಮುಖ್ಯ. ಕೈ ಚೆಲ್ಲಿ ಕುಳಿತಾಗ ಮತ್ತೆ ಎದ್ದು ನಡೆಸುವುದು ಮತ್ತೂಬ್ಬರ ಸಾಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.