ಅಲೈವ್, ಇದು ಬದುಕಿನ ಹೋರಾಟ
Team Udayavani, Aug 20, 2018, 3:42 PM IST
ಕೇರಳ, ಕೊಡಗಿನಲ್ಲಿ ಭಾರೀ ಮಳೆ, ಪ್ರವಾಹದಂತ ಪ್ರಕೃತಿಯ ಮುನಿಸು ಕಂಡಾಗ ಬದುಕಿನಲ್ಲಿ ಎಲ್ಲವೂ ಕಳೆದುಕೊಂಡವರನ್ನು ನೋಡಿದಾಗ ಹೃದಯ ಭಾರವಾಗುತ್ತದೆ. ಈ ಪರಿಸ್ಥಿತಿಯಲ್ಲೂ ನೆನಪಾಗುವುದು ಫ್ರಾಂಕ್ ಮಾರ್ಷಲ್ ನಿರ್ದೇ ಶದ 1993ರಲ್ಲಿ ತೆರೆಗೆ ಬಂದ ಹಾಲಿವುಡ್ ಚಿತ್ರ ‘ಅಲೈವ್. ಮನುಷ್ಯ ಬದುಕಲಿಕ್ಕಾಗಿ ಏನೆಲ್ಲ ಮಾಡಬಲ್ಲ ಎಂಬುದನ್ನು ತೋರಿಸಿರುವ ಚಿತ್ರವಿದು.
ಉರುಗ್ವೆಯ ಫುಟ್ಬಾಲ್ ತಂಡ ಬೇರೆ ದೇಶದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಂಭ್ರಮದಿಂದ ಹೊರಟಿರುತ್ತದೆ. ಆದರೆ ಇವರ ಈ ಸಂಭ್ರಮ ಕೆಲವೇ ಕೆಲವು ಕ್ಷಣಗಳು ಎಂಬ ಅರಿವು ಯಾರಿಗೂ ಇರುವುದಿಲ್ಲ. ಉರುಗ್ವೆ ಆಟಗಾರರು ಕುಳಿತಿದ್ದ ವಿಮಾನ, ಬ್ರಿಟಿಷ್ ಕೊಲಂಬಿಯಾದ ಪರ್ಸೆಲ್ ಮೌಂಟೆನ್ಸ್ ಎಂಬ ಹಿಮಪರ್ವತಗಳ ಸಾಲಿನಲ್ಲಿ ಅಪಘಾತಕ್ಕೀಡಾಗುತ್ತದೆ. ಈ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರೆ, ಇನ್ನು ಕೆಲವು ಮಂದಿ ಗಂಭೀರ ಗಾಯಗೊಳ್ಳುತ್ತಾರೆ. ಬದುಕಿರುವ ಮಂದಿ ತಮ್ಮ ಜೀವ ಉಳಿಸಿಕೊಳ್ಳಲು ನಡೆಸುವ ಹೋರಾಟವೇ ಈ ಚಿತ್ರದ ಸಂಪೂರ್ಣ ಕತೆ.
ವಿಮಾನದಲ್ಲಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ಗಾಯಗೊಂಡವರಿಗೆ ತಮ್ಮಲ್ಲಿದ್ದ ಪ್ರಥಮ ಚಿಕಿತ್ಸೆ ಕಿಟ್‌ಗಳಿಂದ ಉಪಚರಿಸುತ್ತಾರೆ. ಆದರೂ ಕೆಲವರ ಸಾವು ಇಡೀ ಉರುಗ್ವೆಯ ಫುಟ್ಬಾಲ್ ತಂಡವನ್ನು ಸಂಪೂರ್ಣವಾಗಿ ಧೃತಿಗೆಡಿಸುತ್ತದೆ. ಸಹ ಪ್ರಯಾಣಿಕರ ಅಳಿದುಳಿದ ಲಗೇಜುಗಳಲ್ಲಿದ್ದ ವೈನ್, ಚಾಕೋಲೆಟ್ ಗಳನ್ನು ತಿಂದು ಜೀವ ಉಳಿಸಿಕೊಳ್ಳಲು ಇವರು ಹೋರಾಟವನ್ನೇ ನಡೆಸುತ್ತಾರೆ. ಕೆಲವು ಹೊತ್ತಿನಲ್ಲಿ ಅವೆಲ್ಲವೂ ಖಾಲಿಯಾಗುತ್ತದೆ. ಮುಂದೆ ಎದುರಾಗುವುದು ಅಳಿವು- ಉಳಿವಿನ ಪ್ರಶ್ನೆ.
ಸಾಮಾಜಿಕ ಕಟ್ಟುಪಾಡುಗಳು, ನಿಯಮಗಳು ಎಲ್ಲವನ್ನೂ ಗಾಳಿಗೆ ತೂರಿ ಅಮಾನವೀಯರಂತೆ ಬದುಕುವ ಅನಿವಾರ್ಯತೆ ಎದುರಾದಾಗ ಜೀವ ಉಳಿಸಿಕೊಂಡವರು ತಮ್ಮ ಅಸ್ತಿತ್ವಕ್ಕಾಗಿ, ಬದುಕಲಿಕ್ಕಾಗಿ ಏನೇನು ಮಾಡಬೇಕಾಗುತ್ತೆ ಎಂಬುದನ್ನು ನಿರ್ಮಾಪಕರು ಚಿತ್ರ ದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ನಿಸರ್ಗದ ದೈತ್ಯ ಶಕ್ತಿಯ ಮುಂದೆ ಮನುಷ್ಯ ಎಷ್ಟು ಅಸಹಾಯಕ ಎಂಬುದರ ಚಿತ್ರಣ ಇಲ್ಲಿದೆ.
ಚೇತನ್ ಓ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.