ಮೋಡಿ ಮಾಡಿದೆ ಕುಚ್ಚು
Team Udayavani, Oct 26, 2018, 12:47 PM IST
ಕುಚ್ಚು ಇಲ್ಲದ ಸೀರೆಗಳು ಅಷ್ಟೊಂದು ವ್ಯಾಮೋಹ ಹುಟ್ಟಿಸುವುದಿಲ್ಲ. ನವಿಲುಗರಿಯಂತೆ ಮುದ ನೀಡುವ ಕುಚ್ಚು ಸೀರೆಗೆ ಜತೆಯಾಗಿದ್ದರೆ ಅದೇ ಒಂದು ವಿಶೇಷ ಆಕರ್ಷಣೆ. ಈವರೆಗೂ ತೀರಾ ಸಾಂಪ್ರದಾಯಿಕವಾಗಿ ಸೆಳೆಯುತ್ತಿದ್ದ ಕುಚ್ಚು, ಈಗ ಮಾಡರ್ನ್ ರೂಪ ತಾಳಿದೆ. ಸೀರೆ ಮಾತ್ರವಲ್ಲ ಆಧುನಿಕ ಉಡುಗೆ ತೊಡುಗೆಯಲ್ಲೂ ಸ್ಥಾನ ಪಡೆದುಕೊಂಡಿದೆ.
ಸೀರೆಗೆ ಕುಚ್ಚು ಇದ್ದರೆ ಮಾತ್ರ ಹೆಚ್ಚು ಆಕರ್ಷಣೆ ಎನ್ನುವುದನ್ನು ಫ್ಯಾಶನ್ ಲೋಕ ಅರಿತುಕೊಂಡಿದೆ. ಸಾಂಪ್ರದಾಯಿಕ ರೇಷ್ಮೆ ಸೀರೆಯೋ, ಹೊಸ ವಿನ್ಯಾಸದ ಮಾಡರ್ನ್ಸೀ ರೆಯೋ ಅಥವಾ ಒಂದು ಕಾಟನ್ ಸೀರೆಯೋ… ಯಾವುದೋ ಒಂದು, ಇದಕ್ಕೆ ಕಲಾತ್ಮಕ ಕುಚ್ಚೊಂದು ಇರಲೇಬೇಕು ಎನ್ನುವುದು ಎಲ್ಲರ ನಂಬಿಕೆ. ಈಗಂತೂ, ರೇಷ್ಮೆ ಸೀರೆಯ ಸೆರಗಿಗೆ; ಬಣ್ಣ ಬಣ್ಣದ ರೇಷ್ಮೆ ದಾರದ ಕುಚ್ಚು, ಟ್ಯಾಸೆಲ…, ಗೊಂಡೆ ಎಂದೆಲ್ಲ ಕರೆಸಿಕೊಳ್ಳುವ ಈ ಅದ್ಭುತ ಕಲಾಕೃತಿ ಇದ್ದರೆ ಮಾತ್ರ ಸೀರೆಯ ಸೆರಗಿನ ಅಂದ ಹೆಚ್ಚುವುದು ಎನ್ನುವ ಭಾವನೆ ಆವರಿಸಿದೆ.
ಮೊದಲೆಲ್ಲ ಸೀರೆಗೆ ಸಾಧಾರಣವಾಗಿ ಒಂದು ಬಣ್ಣದ ಕುಚ್ಚು ಹಾಕುತ್ತಿದ್ದರು. ಈಗ ಬೇರೆ ಬೇರೆ ಬಣ್ಣದ ದಾರಗಳಿಂದ, ಸೀರೆಯಲ್ಲಿರುವ ಬಣ್ಣಗಳ ಜತೆ ಹೊಂದಿಸಿ ಕಲಾತ್ಮಕವಾಗಿ ಹೆಣೆಯುವುದು, ಕ್ರೋಶಾದಲ್ಲಿ ವಿಧವಿಧ ವಿನ್ಯಾಸದಲ್ಲಿ ಹೊಲಿಯುವುದು ಚಾಲ್ತಿಯಲ್ಲಿದೆ.
ಸೀರೆಗೆ ಹೊಂದುವ ಕ್ರಿಸ್ಟಲ್ ಮಣಿಗಳು, ಬೆಳ್ಳಿ, ಬಂಗಾರದ ಬಣ್ಣದ ಮಣಿಗಳು, ಬಣ್ಣದ ಪುಟ್ಟ ಪುಟ್ಟ ಕೊಳವೆಗಳು, ಮುತ್ತುಗಳು, ಕೊಳವೆಯಾಕಾರದ ಮಣಿ, ಹೂವಿನ ಆಕಾರದ ಬಿÇÉೆಗಳು… ಹೀಗೆ ವಿಧವಿಧದ ಆಲಂಕಾರಿಕ ವಸ್ತುಗಳನ್ನು ಅವರವರ ಅಭಿರುಚಿಗೆ ತಕ್ಕಂತೆ ಕಲಾತ್ಮಕವಾಗಿ ಹೆಣೆದ ಕುಚ್ಚುಗಳನ್ನು ನೋಡುವುದೇ ಕಣ್ಣಿಗಾನಂದ.
ಎಲ್ಲದಕ್ಕೂ ಕುಚ್ಚಿನ ಅಲಂಕಾರ
ಕುಚ್ಚು ಅಥವಾ ಟ್ಯಾಸಲ್ ಎಂಬ ನೇತಾಡುವ ರೇಶಿಮೆ ದಾರಗಳ ಗುಂಪು, ಹಿಂದೆಲ್ಲ ನಾರಿಮಣಿಯರ ಸೀರೆಯ ಸೆರಗನ್ನು ಅಲಂಕರಿಸುತ್ತಿತ್ತು. ಅದೀಗ ಆಧುನಿಕ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟು, ಎಲ್ಲ ವಸ್ತುಗಳ ಮೇಲೂ ಮೋಡಿ ಮಾಡಿದೆ. ಹಗುರಾದ ತಂತಿಯೊಂದಿಗೆ ಹೆಣೆದುಕೊಂಡ ಬಣ್ಣ ಬಣ್ಣದ ಕುಚ್ಚು ಕಿವಿಯ ಆಭರಣವಾಗುತ್ತದೆ. ಕೈಬಳೆಯಲ್ಲಿ ನೇತಾಡುವ ಕುಚ್ಚುಗಳು ಬಳೆಯ ಅಂದ ಹೆಚ್ಚಿಸುತ್ತವೆ. ಉದ್ದದ ಸರಕ್ಕೆ ಕುಚ್ಚುಗಳ ಪದಕ, ಸಿಲ್ಕ… ದಾರವನ್ನು ದಪ್ಪನಾಗಿ ಸುತ್ತಿ ಮಣಿಗಳಿಂದ ಅಲಂಕರಿಸಿ, ಅದಕ್ಕೆ ಕುಚ್ಚುಗಳ ಪೆಂಡೆಂಟ್‌ನ ನೆಕ್ಲೇಸ್ ಹೀಗೆ ಒಡವೆಗಳ ಲೋಕದಲ್ಲೂ ಕುಚ್ಚು ರಾರಾಜಿಸುತ್ತಿದೆ.
ಇನ್ನು ಚೂಡಿದಾರ್ ನಲ್ಲಿಯೂ ಆಲಂಕಾರಿಕವಾಗಿ ಡಿಸೈನ್ ಮಾಡಿ ಕುಚ್ಚು ಸೇರಿಸಿದರೆ ಆಕರ್ಷಣೀಯ. ಕುರ್ತಾ, ಜೀನ್ಸ್ ಪ್ಯಾಂಟ್, ಡಿಸೈನರ್ ಬ್ಲೌಸ್ ಸಹಿತ ಅವರವರ ಅಭಿರುಚಿಗೆ ತಕ್ಕಂತೆ ಅಲಂಕಾರಿಕವಾಗಿ ಹೆಣೆದ ಕುಚ್ಚು ಹೊಸತನಕ್ಕೆ ನಾಂದಿ ಹಾಡಿದೆ. ಅಲ್ಲದೇ ಹ್ಯಾಂಡ್ ಬ್ಯಾಗ್, ಬಣ್ಣದ ಕುಚ್ಚಿರುವ ಪಾದರಕ್ಷೆಗಳೂ ಮಾರ್ಕೆಟ್‌ಗೆ ಕಾಲಿಟ್ಟಿವೆ. ಸೀರೆ, ಸಲ್ವಾರ್, ಜೀನ್ಸ್ … ಹೀಗೆ ಎಲ್ಲದಕ್ಕೂ ಹೊಂದುವ ಕುಚ್ಚು ಇರುವ ಚಪ್ಪಲಿಗಳು ಸದ್ಯಕ್ಕೆ ಚಾಲ್ತಿಯಲ್ಲಿರುವ ಫ್ಯಾಷನ್. ಮನೆಯ ಪರದೆಗಳಿಗೆ, ಒರಗು ದಿಂಬುಗಳಿಗೆ ಕುಚ್ಚು ಸೇರಿಸಿ ಹೊಲಿದರೆ ಮತ್ತಷ್ಟು ಸೊಬಗು.
ಶಾರದಾ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.