ಬೇಕಿಂಗ್ ಪಾತ್ರೆ ಅಡುಗೆ ಈಗ ಸುಲಭ
Team Udayavani, Oct 27, 2018, 3:17 PM IST
ಅಡುಗೆ ಮಾಡುವವರಿಗೆ ಅಡುಗೆಗಿಂತ ಪಾತ್ರೆಗಳ ಆಯ್ಕೆ, ನಿರ್ವಹಣೆ, ಶುಚಿಗೊಳಿಸುವ ಚಿಂತೆಯೇ ಹೆಚ್ಚು. ಗ್ಯಾಸ್ ಒಲೆಗಾದರೆ ಸ್ಟೀಲ್, ಅಲುಮಿನಿಯಂ ಪಾತ್ರೆಗಳನ್ನು ಬಳಸಬಹುದು. ಆದರೆ ಓವನ್, ಎಲೆಕ್ಟ್ರಿಕ್ ಗ್ಯಾಸ್ ಗಳಲ್ಲಿ ಎಲ್ಲ ಪಾತ್ರೆಗಳನ್ನು ಬಳಸಲು ಸಾಧ್ಯವಾಗದು. ಇದಕ್ಕೆಂದೇ ನಾನಾ ಮಾದರಿಯ ಪಾತ್ರೆಗಳು ಬಂದಿವೆ. ಇವುಗಳಲ್ಲಿ ಅಡುಗೆ ಮಾಡುವುದು ಸುಲಭ, ಸ್ವಚ್ಛತೆಯೂ ಕಷ್ಟವಲ್ಲ. ಇವುಗಳಲ್ಲಿ ಮುಖ್ಯವಾಗಿ ಬೇಕಿಂಗ್ ಪಾನ್, ಟಿನ್, ಬೌಲ್‌ಗಳು ಸೇರಿವೆ.
ಹಲವು ವಿಧ
ಇದರಲ್ಲಿ ಹಲವಾರು ವಿಧಗಳಿವೆ. ಮಾಡಬಹುದಾದ ಖಾದ್ಯಗಳಿಗೆ ಅನುಗುಣವಾಗಿ ಮುಖ್ಯವಾಗಿ ಚೌಕಾಕೃತಿ, ಬಳಸಿ ಬೀಸಾಡಬಹುದಾದ, ವಿಂಟೇಜ್, ಸಣ್ಣದು, ಕೇಕ್ ಟಿನ್, ರೆಕ್ಟ್ಯಾಂಗಲ್, ನೋವೆಲ್ಟಿ, ಅಲೂಮಿನಿಯಂ, ಮಿನಿ, ರೌಂಡ್, ಕಪ್ ಕೇಕ್, ಫ್ಯಾನ್ಸಿ, ಡೆಕೋರೇಟಿವ್ ಮೊದಲಾದ ವಿಧಗಳಿವೆ. ಸ್ವಚ್ಛ ಹಾಗೂ ಸುಂದರವಾಗಿ ಕಾಣುವ ಈ ಪಾತ್ರೆಗಳ ನಿರ್ವಹಣೆಯೂ ಸುಲಭ. ಇವುಗಳಲ್ಲಿ ಆಹಾರ ಪದಾರ್ಥಗಳು ಅಂಟಿಕೊಳ್ಳುವುದಿಲ್ಲ. ಬೇಗನೆ ಆರುವ ಗುಣ ಹೊಂದಿರುವುದರಿಂದ ಕೈ ಸುಡುವ ಪ್ರಮೇಯವೂ ಕಡಿಮೆ.
ಸಿಲಿಕಾನ್ ಬೇಕಿಂಗ್ ಪ್ಯಾನ್ ಗಳನ್ನು ಫ್ರೀಜರ್‌ನಲ್ಲಿ ಸುಮಾರು 40 ಡಿಗ್ರಿವರೆಗೆ, ಓವನ್ ನಲ್ಲಿ 250 ಡಿಗ್ರಿ ಸೆಂಟ್ರಿಗ್ರೇಡ್ ವರೆಗೆ ಬಳಸಬಹುದು. ಹಗುರವಾಗಿರುವ ಈ ಪಾತ್ರಗಳು ಮುರಿಯುವ, ಗೀರಾಗುವ, ತುಕ್ಕು ಹಿಡಿಯುವ ಸಮಸ್ಯೆ ಇರುವುದಿಲ್ಲ. ಕೇಕ್, ಕುಕ್ಕೀಸ್, ಬ್ರೆಡ್, ಬನ್ ಮಾಡಲು ಹೆಚ್ಚಾಗಿ ಇವುಗಳನ್ನು ಬಳಸಲಾಗುತ್ತದೆ.
ಇವುಗಳಿಗೆ ಹಲವು ಮಾದರಿ ಅಥವಾ ವಿನ್ಯಾಸದ ಬೇಕಿಂಗ್ ಟಿನ್‌ಗಳು ಸಿಗುತ್ತವೆ. ಡಿಶ್ ವಾಶ್ ಬಳಸಿ ಸ್ವಚ್ಛಗೊಳಿಸಬಹುದು. ತೊಳೆದು ಒಣಗಿದ ಅನಂತರ ಅಡುಗೆಗೆ ಇವನ್ನು ಬಳಸುವುದು ಸೂಕ್ತ. ಸರಕ್ಷಿತ ಬಳಕೆಗೆ ಹೇಳಿ ಮಾಡಿಸಿದಂತಿರುವ ಈ ಪಾತ್ರೆಗಳಲ್ಲಿ ಮಾಡಿದ ಆಹಾರದ ರುಚಿ ಕೆಡುವ, ಬದಲಾಗುವ ಸಾಧ್ಯತೆಗಳು ಇಲ್ಲ. ಯಾಕೆಂದರೆ ಈ ಪಾತ್ರೆಯು ಬಿಸಿಯಾದಾಗ ಇದರ ಯಾವುದೇ ಗುಣ ಆಹಾರದಲ್ಲಿ ಸೇರುವುದಿಲ್ಲ.
ಅತ್ಯಂತ ಹಗುರ ಮತ್ತು ವಿವಿಧ ಮಾದರಿ ಹಾಗೂ ಸಣ್ಣ ಗಾತ್ರಗಳಲ್ಲಿ ಇವುಗಳು ಲಭ್ಯವಿರುವುದರಿಂದ ಶೇಖರಿಸಿಡುವುದು ಕೂಡ ಸುಲಭ. ಸರಿಯಾದ ವಿಧಾನದಲ್ಲಿ ಈ ಪಾತ್ರೆಗಳನ್ನು ಬಳಸಿದರೆ ತಳ ಹಿಡಿಯುವ ಆತಂಕವೂ ಇದರಲ್ಲಿ ಇಲ್ಲ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.