ಸ್ವಚ್ಚ , ಸುಂದರವಾಗಿರಲಿ ಬೆಡ್‌ ರೂಮ್‌


Team Udayavani, Mar 16, 2019, 7:41 AM IST

16-march-11.jpg

ದಿನವಿಡೀ ದುಡಿದು ದಣಿದು ಮನೆಗೆ ಬಂದಾಗ ಒಂದಿಷ್ಟು ಸಮಾಧಾನ ಹಾಗೂ ಆರಾಮದಾಯಕ ಅನುಭವ ನೀಡುವ ಸ್ಥಳವೆಂದರೆ ಬೆಡ್‌ ರೂಮ್‌. ಹೀಗಾಗಿ ಇಲ್ಲಿನ ಸ್ವತ್ಛತೆ ಹಾಗೂ ವಿಷಯಗಳನ್ನು ಆಸಕ್ತಿದಾಯಕವಾಗಿರುವಂತೆ ನೋಡಿ ಕೊಂಡರೆ, ಸುಸಜ್ಜಿತವಾಗಿಟ್ಟುಕೊಂಡರೆ ದಣಿದು ಬಂದ ಮನಸ್ಸಿಗೆ ಸಮಾಧಾನ, ಒಂದಿಷ್ಟು ಚೈತನ್ಯ ಹಾಗೂ ಉತ್ಸಾಹ ಭರಿತ ಭಾವನೆಯನ್ನು ನೀಡುತ್ತದೆ.

 ಸುಸಜ್ಜಿತವಾಗಿರಲಿ
ಮಲಗುವ ಕೋಣೆ ಸುಸಜ್ಜಿತವಾಗಿದ್ದರೆ ಸಾಕಷ್ಟು ಸಕಾರಾತ್ಮಕ ಶಕ್ತಿ ಮನಸ್ಸಿನಲ್ಲಿ ತುಂಬುತ್ತದೆ. ಇದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಣೆ, ಆಸಕ್ತಿ ಹಾಗೂ ಮನೆ ಮಂದಿಯ ಜತೆ ಉತ್ತಮ ಸಂಬಂಧವನ್ನು ಕಲ್ಪಿಸುವುದು. ಅದ್ದರಿಂದ ಮಲಗುವ ಕೋಣೆಯನ್ನು ಸ್ವಚ್ಚ ಹಾಗೂ ಆಕರ್ಷಣೆಯಿಂದ ಕೂಡಿರುವಂತೆ ಮಾಡಲು ಪ್ರಯತ್ನಿಸಬೇ ಕು. ಹಳೆಯ ಸ್ಥಳವಾದರೂ ಹೊಸ ಸ್ವರೂಪವನ್ನು ಆಗಾಗ್ಗೆ ನೀಡುತ್ತಿರಬೇಕು.

 ಆಕರ್ಷಕವಾಗಿರಲಿ ರಗ್‌
ಮಲಗುವ ಕೋಣೆಗೆ ಆಗಮಿಸುತ್ತಿದ್ದಂತೆ ಕಣ್ಣು ನೋಡುವುದು ಮಲಗುವ ಹಾಸಿಗೆಯನ್ನು. ಮಲಗುವ ಕೋಣೆಯಲ್ಲಿ ಆಸಕ್ತಿದಾಯಕ ಅಥವಾ ಸುಂದರ ರಗ್‌/ ಕಂಬಳಿಯನ್ನು ಬಳಸುವುದರಿಂದ ಮನಸ್ಸಿಗೆ ಒಂದಿಷ್ಟು ಖುಷಿ ಕೊಡುತ್ತದೆ. ಕೋಣೆಯ ಗೋಡೆಗೆ ಹಾಗೂ ಬೆಡ್‌ನ‌ ಹಾಸಿಗೆಯ ಮೇಲಿರುವ ರಗ್ಗಳಿಗೆ ಹೊಂದಾಣಿಕೆಯಾಗುವ ಬಣ್ಣವಿದ್ದರೆ ಹೆಚ್ಚು ಆಕರ್ಷಣೀಯವಾಗುತ್ತದೆ. ರಗ್‌ನ ಸೂಕ್ತ ಅಳತೆ ಹಾಗೂ ಬಣ್ಣಗಳ ಆಯ್ಕೆ ಬಹುಮುಖ್ಯವಾಗಿರುತ್ತದೆ.

 ಒಳಾಂಗಣ ಗಿಡಗಳು
ಮಲಗುವ ಕೋಣೆಯಲ್ಲಿ ಒಳಾಂಗಣ ಗಿಡಗಳನ್ನಿ ಡುವುದರಿಂದ ಕೋಣೆಗೆ ಸ್ವಚ್ಚ , ಸುಂದರ ನೋಟವನ್ನು ನೀಡುವುದು. ಅಲ್ಲದೇ ಕೋಣೆಯೊಳಗೆ ತಾಜಾ ಗಾಳಿ ಹರಿದಾಡಲು ಇದು ಸಹಾಯಕವಾಗುತ್ತದೆ. ಸೂಕ್ತವಾದ ಒಳಾಂಗಣ ಗಿಡಗಳ ಆಯ್ಕೆ ಮಾಡಿ ಇಲ್ಲಿ ಇಡುವುದರಿಂದ ಮನಸ್ಸಿನ ಋಣಾತ್ಮಕ ಭಾವನೆಯೂ ದೂರವಾಗುವುದು.

 ವಾಲ್‌ ಪೇಪರ್‌ ಹಾಕಿ
ಮಂಕಾದ ಮಲಗುವ ಕೋಣೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬೆಡ್‌ ರೂಮ್‌ನ ಗೋಡೆಯ ಬಣ್ಣ ಬದಲಾವಣೆ ಮಾಡುತ್ತಿರಿ. ಆಕರ್ಷಕ ವಾಲ್‌ ಪೇಪರ್‌ ಬಳಸಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಗೋಡೆ ಅಲಂಕಾರಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿ.

 ವರ್ಣಚಿತ್ರ ಬಳಸಿ
ಗೋಡೆಯ ಮೇಲೆ ಹಾಕಿದ ವರ್ಣ ಚಿತ್ರಗಳು ಹಳೆಯದಾಗಿದ್ದರೆ ಅಥವಾ ಬಣ್ಣ ಕಳೆದು ಕೊಂಡಿದ್ದರೆ ಬದಲಿಸಿ. ಕಪ್ಪು- ಬಿಳುಪು ವರ್ಣ ಚಿತ್ರಗಳಾದರೆ ಬೇಗನೆ ಹಾಳಾಗುವುದಿಲ್ಲ. ಮೇಣದ ಬತ್ತಿ, ಹೂಗಳ ಜೋಡಣೆ ಹಾಗೂ ಒಳಾಂಗಣ ಅಲಂಕಾರದಿಂದ ಕೋಣೆಗೆ ಹೊಸ ಮೆರುಗು ನೀಡಬಹುದು.

 ಹಾಸಿಗೆಯ ಸ್ಥಾನ
ಮಲಗುವ ಕೋಣೆಯಲ್ಲಿ ಹಾಸಿಗೆಯನ್ನು ಸೂಕ್ತ ಸ್ಥಾನದಲ್ಲಿರಿಸಿ. ಮಧ್ಯೆ ಇಟ್ಟರೆ ಆಚೆ, ಈಚೆ ಅಲಂಕಾರಿಕ ವಸ್ತುಗಳನ್ನು ಜೋಡಿಸಿಡಬಹುದು. ಒಂದು ಮೂಲೆಯಲ್ಲಿಟ್ಟರೆ ಹೆಚ್ಚು ಸ್ಪೇಸ್‌ ಕಾಣುತ್ತದೆ.

 ಅನಗತ್ಯ ವಸ್ತುಗಳನ್ನು ತೆಗೆಯಿರಿ
ಅನಗತ್ಯ ವಸ್ತುಗಳನ್ನು ಮಲಗುವ ಕೋಣೆಯಲ್ಲಿಡಬೇಡಿ. ಇದರಿಂದ ಕೋಣೆಯ ಸೌಂದರ್ಯ ಹಾಳಾಗುವುದು. ಹೀಗಾಗಿ ವಾರದಲ್ಲೊಮ್ಮೆಯಾದರೂ ಮಲಗುವ ಕೋಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದು ಸ್ವಚ್ಚಗೊಳಿಸಿ. ಮಲಗುವ ಕೋಣೆಯಲ್ಲಿ ಎಲ್ಲವನ್ನೂ ಅಲ್ಲದಿದ್ದರೂ ಕೆಲವೊಂದನ್ನಾದರೂ ವಾರಕ್ಕೊಮ್ಮೆ ಬದಲಾಯಿಸಿ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಕೊಡಿ. ಹೊರಗಿನ ಧೂಳು ಒಳ ಬಾರದಂತೆ ನೋಡಿಕೊಳ್ಳಿ. 

 ಬೆಡ್‌ ಶೀಟ್‌ ಗಳ ಆಯ್ಕೆ ಎಚ್ಚರ
ಋತುಗಳಿಗೆ ಅನುಗುಣವಾಗಿ ಬೆಡ್‌ ಶೀಟ್‌ ಗಳನ್ನು ಬದಲಿಸಿಕೊಳ್ಳಿ. ಹೂವಿನ ಚಿತ್ರ ಇರುವ ಬೆಡ್‌ ಶೀಟ್‌ಗಳು ಮನಸ್ಸಿಗೆ ಖುಷಿ ಕೊಡುತ್ತದೆ. ಜತೆಗೆ ನಿಮ್ಮ ಮೆಚ್ಚಿನ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳಿ. ವಿನ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ.

ಕರ್ಟನ್‌ ಬದಲಿಸಿ
ಮಲಗುವ ಕೋಣೆಯಲ್ಲಿ ಹೊಸ ಬೆಡ್‌ ಶೀಟ್‌, ಫ‌ಲಕಗಳನ್ನು ಅಳವಡಿಸುವಾಗ ಕರ್ಟನ್‌ ಗಳನ್ನೂ ಬದಲಿಸಿ. ತಿಳಿಯಾದ ಬಣ್ಣದ ಪರದೆಯನ್ನು ಆಯ್ಕೆ ಮಾಡುವುದರಿಂದ ಕಣ್ಣಿಗೆ ತಂಪಾದ ಅನುಭವ ನೀಡುತ್ತದೆ.

ಟಾಪ್ ನ್ಯೂಸ್

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

7-rabakavi

Rabkavi Banhatti: ಮೊಬೈಲ್ ಕಳ್ಳತನ ಪತ್ತೆ: ವಾರಸುದಾರರಿಗೆ ಹಸ್ತಾಂತರ

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

6-udupi

Udupi: ಯತಿಗಳ ಸಮಾಗಮ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.