ಬಾತ್‌ರೂಮ್ ನಿರ್ಮಿಸುವ ವೇಳೆ ಇರಲಿ ಎಚ್ಚರ
Team Udayavani, Jul 20, 2019, 5:00 AM IST
ಮನೆಯನ್ನು ಕಟ್ಟುವಾಗ ಪ್ರತಿ ಭಾಗವನ್ನು ಕಟ್ಟುವಾಗ ಇಂಚಿಚು ಗಮನಹರಿಸಬೇಕಾಗುತ್ತದೆ. ಬಾತ್‌ರೂಂ ನಿರ್ಮಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಬೇರೆ ಕೋಣೆಗಳನ್ನು ನಿರ್ಮಿಸಿದಷ್ಟು ಸುಲಭವಾಗಿ ಬಾತ್‌ರೂಮ್ ನಿರ್ಮಾಣ ಸಾಧ್ಯವಿಲ್ಲ. ಟೈಲ್ಸ್ನಿಂದ ಹಿಡಿದು ಗೋಡೆಯ ಬಣ್ಣದ ವರೆಗೆ ಯೋಚನೆ ಮಾಡಬೇಕಾಗುತ್ತದೆ.
ಸ್ಥಳದ ಆಯ್ಕೆ
ಬಾತ್‌ರೂಮ್ ನಿರ್ಮಿಸುವ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ
ಮಾಡಿ. ನೀರು ಇಂಗುವ ಪ್ರದೇಶವಾದರೆ ಇನ್ನು ಉತ್ತಮ. ಏಕೆಂದರೆ ಪ್ರತಿದಿನ ಸ್ನಾನ ಮಾಡಿದ ಮತ್ತು ಇನ್ನಿತರ ನೀರು ಹೋಗುವುದರಿಂದ ಕುಸಿಯುವ ಸಾಧ್ಯತೆಗಳಿರುತ್ತವೆ. ಬಾತ್‌ರೂಮ್‌ಗಳನ್ನು ಕಟ್ಟುವಾಗ ಗೋಡೆಯ ಮೇಲ್ಭಾಗದಲ್ಲಿ ಸಣ್ಣ ರಂಧ್ರದ ಕಿಟಕಿಗಿಳನ್ನು ಇರಿಸುವುದು ಉತ್ತಮ.
ನೆಲದ ಆಯ್ಕೆಯ ಬಗ್ಗೆ ಇರಲಿ ಗಮನ
ಟೈಲ್ಸ್ಗಳನ್ನು ಆಯ್ಕೆ ಮಾಡುವಾಗ ಸ್ವಲ್ಪ ಗಮನ ಹರಿಸಬೇಕು. ಜಾರುವ ಮೇಲ್ಮೈಗಿಂತ ಗಡುಸಾದ ಮೇಲ್ಮೈ ಇರುವ ಟೈಲ್ಸ್ಗಳನ್ನು ಹಾಕುವುದರಿಂದ ನೆಲ ಜಾರುವುದಿಲ್ಲ ಇಲ್ಲವಾದಲ್ಲಿ ನೆಲ ಜಾರುವ ಸಂಭವವಿರುತ್ತದೆ. ಇದರಿಂದ ಮನೆಯಲ್ಲಿ ವಯಸ್ಸಾದವರಿದ್ದರೆ ಅವರಿಗೆ ಕಷ್ಟವಾಗುತ್ತದೆ.ಅಲ್ಲದೆ ಕುಟುಂಬದ ರಕ್ಷಣೆಗೂ ಇದು ತುಂಬಾ ಮುಖ್ಯವಾಗಿದೆ.
ಗೋಡೆಗಳಲ್ಲಿ ಅಲ್ಲಲ್ಲಿ ಹಿಡಿಕೆಗಳನ್ನು ಇಡುವುದು ಕೂಡ ಉತ್ತಮ. ಇದು ಬಟ್ಟೆಗಳನ್ನು ಇಡಲು ಸಹಾಯವಾಗುವುದಲ್ಲದೆ ಇದನ್ನು ಹಿಡಿದು ಕೂಡ ನಡೆಯಬಹುದು. ಸಾಬೂನ್ ಮತ್ತು ಇನ್ನಿತರ ಸಾಮಗ್ರಿಗಳನ್ನು ಇಡಲು ವ್ಯವಸ್ಥೆ ಮಾಡಿಕೊಳ್ಳಿ ಸಾಬೂನ್ ಅಥವಾ ಇನ್ನಿತರ ಡಿಟರ್ಜೆಂಟ್ಗಳ ನೀರು ಬಿದ್ದಲ್ಲಿ ಅದನ್ನು ಆಗಲೇ ತೊಳೆದು ಬೀಡಿ. ಬಾತ್ ಟಬ್‌ಗಳನ್ನು ನಿರ್ಮಿಸುವುದಾದರೆ ಅದನ್ನು ಬೀಸಿ ನೀರಿನಿಂದ ತೊಳೆಯುವ ವ್ಯವಸ್ಥೆ ರೂಢಿಸಿಕೊಳ್ಳಿ.
ಸ್ವಚ್ಛತೆಗೆ ಗಮನ ನೀಡಿ
ಟೈಲ್ಸ್ಗಳ ಮಧ್ಯೆ ಪಾಚಿ ಕಟ್ಟುವುದನ್ನು ಸ್ವಚ್ಛ ಮಾಡುತ್ತಲೇ ಇರಿ. ಇಲ್ಲವಾದಲ್ಲಿ ಅದು ಅಲ್ಲಲ್ಲಿಯೇ ಕಲೆ ಕಟ್ಟುತ್ತದೆ. ಶವರ್ ಮತ್ತು ನಲ್ಲಿಗಳನ್ನು ಅಳವಡಿಸುವ ಸಂದರ್ಭಗಳಲ್ಲಿ ಲೀಕೆಜ್ ಬರದಂತೆ ಗಮನ ಹರಿಸಿ. ಬಿಸಿ ನೀರಿನ ವ್ಯವಸ್ಥೆ ಯಾವ ರೀತಿಯಲ್ಲಿ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಗೀಸರ್ ಅಥವಾ ಬೊಯ್ಲರ್‌ಗಳನ್ನು ಇರಿಸಿಕೊಳ್ಳಿ, ಗೀಸರ್‌ನ ವ್ಯವಸ್ಥೆ ಮಾಡಿಕೊಂಡರೆ ಗ್ಯಾಸ್ ಇಡಲು ಕೂಡ ಸರಿಯಾದ ಜಾಗ ಮಾಡಿಕೊಳ್ಳಿ. ಅನೇಕ ಮಂದಿ ಬಾತ್‌ರೂಮ್‌ಗಳಲ್ಲಿ ವಾಷಿಂಗ್ ಮಿಶನ್ ಇಡುತ್ತಾರೆ.ಅದರಿಂದ ಬರುವ ನೀರು ಬಾತ್‌ರೂಮ್‌ನ ಸ್ವಚ್ಛತೆ ಹಾಳಾಗದಂತೆ, ನೇರವಾಗಿ ಹೊರಗೆ ಹೋಗಲು ವ್ಯವಸ್ಥೆ ಮಾಡಿಕೊಳ್ಳಿ. ಇದೆಲ್ಲದಕ್ಕಿಂತ ಮುಖ್ಯವಾಗಿ ವಿದ್ಯುತ್ ಸಂಪರ್ಕ ನೀಡುವಾಗ ತುಂಬಾ ಎಚ್ಚರವಹಿಸಿಕೊಳ್ಳಬೇಕು. ಬಾತ್‌ರೂಮ್‌ನಲ್ಲಿ ಬೆಳಗ್ಗಿನ ಸಮಯ ಪ್ರಕಾಶ ಮಾನವಾದ ಬೆಳಕು ಬರುವ ರೀತಿಯಲ್ಲಿದ್ದರೆ ಉತ್ತಮ.
ಬಾತ್‌ಟಬ್, ಶವರ್ ಹೀಗೆ ಸ್ನಾನಗೃಹಕ್ಕೆ ಬೇಕಾಗುವುದನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂದು ಮೊದಲೇ ನಿರ್ಧರಿಸಿಕೊಳ್ಳಿ ಇದರಿಂದ ನಿಮ್ಮ ಸ್ನಾನಗೃಹವನ್ನು ನೀವು ಇನ್ನಷ್ಟು ಸುಂದರವಾಗಿಸಿಬಹುದಲ್ಲದೆ ಸುರಕ್ಷಿತವಾಗಿಯೂ ಇಟ್ಟುಕೊಳ್ಳಬಹುದು.
•ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.