ಸೋಫಾ ಖರೀದಿಸುವಾಗ ಎಚ್ಚರ ವಹಿಸಿ
Team Udayavani, Nov 16, 2019, 4:36 AM IST
ಮನೆ ಅಂದವಾಗಿರಲು ಮನೆಯೊಳಗೆ ಪೀಠೊಪಕರಣಗಳು ಬೇಕಾಗುತ್ತವೆ. ಮನೆಗೆ ವಸ್ತುಗಳನ್ನು ಖರೀದಿಸುವಾಗ ಹಲವಾರು ರೀತಿಯಲ್ಲಿ ಗಮನಹರಿಸಬೇಕಾಗುತ್ತದೆ. ಅಂತೆಯೇ ಮನೆಯ ಸೊಬಗನ್ನು ಹೆಚ್ಚಿಸುವಲ್ಲಿ ಕೂಡ ಸೋಫಾಗಳು ಹೆಚ್ಚು ಆಕರ್ಷಿಸುತ್ತವೆ. ಹಾಗಾಗರೆ ಸೋಫಾಗಳನ್ನು ಖರೀದಿಸುವಾಗ ಹೆಚ್ಚು ಕಾಳಜಿ ಹಾಗಯೇ ಕೆಲವೊಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಸೋಫಾ ಇಡಬೇಕಾದ ಜಾಗವನ್ನು ಅಳತೆ ಮಾಡಿ
ಸೋಫಾವನ್ನು ಖರೀಸುವಾಗ ಮೊದಲು ಮಾಡಬೇಕಾದ ಕೆಲಸವೆಂದರೆ ನೀವು ಸೋಫಾವನ್ನು ಇಡಬಯಸುವ ಜಾಗದ ಅಳತೆ ಮಾಡಿಕೊಳ್ಳುವುದು. ನೀವು ಅಂಗಡಿ ಅಥವಾ ಶೋ ರೂಂಗಳಿಂದ ನೇರವಾಗಿ ಸೋಫಾವನ್ನು ಕೊಂಡೊಯ್ಯುವ ಬದಲಿ ನಿಮ್ಮ ಮನೆಗೆ ಎಷ್ಟು ದೊಡ್ಡದು ಅಥವಾ ಎಷ್ಟು ಚಿಕ್ಕ ಸೋಫಾ ಬೇಕು ಎಂಬುವುದನ್ನು ಅಳತೆ ಮಾಡಿಕೊಂಡು ನಂತರ ಸೋಫಾ ಖರೀದಿಸಿಕೊಳ್ಳಿ.
ವಿನ್ಯಾಸ ನೋಡಿಕೊಂಡು ಸೋಫಾ ಖರೀದಿಸಿ
ಸೋಫಾವನ್ನು ಖರೀದಿಸುವಾಗ ಮನೆಯಲ್ಲಿರುವ ಉಳಿದ ಪೀಠೊಪಕರಣಗಳ ಶೈಲಿಯೊಂದಿಗೆ ಸಮನ್ವಯಗೊಳಿಸಿ ಸೋಫಾ ಖರೀದಿಸಿ. ಹಾಗಾಗಿ ನಿಮಗೆ ಕಲಾತ್ಮಕ ಅಥವಾ ಇನ್ನಾವುದೇ ಶೈಲಿಯಲ್ಲಿ ನಿಮಗೆ ಅನುಕೂಲವಾಗುವಂತೆ ಸೋಫಾ ಖರೀದಿಸಿ. ಸೋಪಾ ಖರೀದಿಸುವಾಗ ಅದರ ವಿನ್ಯಾಸ ಹಾಗೂ ನಿಮ್ಮ ಉಳಿದ ಪೀಠೊಪಕರಣಗಳೊಂದಿಗೆ ಸೋಫಾ ಹೇಗೆ ಕಾಣುತ್ತದೆ ಎಂಬುವುದರ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ.
ನೀವು ಸೋಫಾವನ್ನು ಖರೀದಿ ಮಾಡುವಾಗ ಅದರಲ್ಲಿ ಬಳಸಿರುವ ಬಟ್ಟೆಯ ಬಗ್ಗೆ ಸರಿಯಾಗಿ ಗಮನ ಕೊಡಿ. ನೀವು ಸೋಫಾವನ್ನು ಹೇಗೆ ಬಳಸುತ್ತೀರಿ, ಎಲ್ಲಿ ಇಡುತ್ತೀರಿ ಎಂಬುವುದನ್ನು ನೀವು ಮೊದಲೇ ತಿಳಿದುಕೊಂಡು ಅನಂತರ ಫ್ಯಾಬ್ರಿಕ್‌ನನ್ನು ಆಯ್ಕೆ ಮಾಡಿಕೊಳ್ಳಿ. ನೀವು ಸೋಫಾ ಖರೀದಿಸುವಾಗ ಅದರ ಬಣ್ಣವನ್ನು ಗಮನದಲ್ಲಿಟ್ಟುಕೊಳ್ಳಿ. ಮನೆಯ ಇತರ ಪೀಠೊಪಕರಣ, ಗೋಡೆಯ ಬಣ್ಣ ಮುಂತಾದವುಗಳನ್ನು ಗಮನಿಸಿ ಸೋಫಾವನ್ನು ಖರೀದಿಸುವುದು ಉತ್ತಮ.
ಸೋಫಾದ ಸ್ಪಚ್ಛತೆ ಹೇಗೆ ?
ಸೋಫಾವನ್ನು ಖರೀದಿಸಿದ್ದೀರಿ ಎಂದಾದರೆ ಅದರ ಸ್ವತ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಸೋಫಾವನ್ನು ಸ್ವಚ್ಛಗೊಳಿಸುವಾಗ ಬಟ್ಟೆ, ವ್ಯಾಕ್ಯೂಮ್ ಕ್ಲೀನರ್‌ನನ್ನು ಬಳಸಿಕೊಂಡು ಅದರ ಮೇಲೆ ಇರುವ ಧೂಳು ಕಸ ಇನ್ನಿತರ ವಸ್ತುಗಳನ್ನು ಸ್ವತ್ಛಗೊಳಿಸಿ. ಸೋಫಾ ಕಲೆಗಳಿಂದ ಕೂಡಿದರೆ ಅಥವಾ ಗಟ್ಟಿಯಾದ ಧೂಳು ತುಂಬಿಕೊಂಡಿದ್ದರೆ ಅದನ್ನು ಶುಚಿಗೊಳಿಸಲು ಗಟ್ಟಿ ಮುಟ್ಟಾದ ಬ್ರಶ್ ಬಳಸಿಕೊಂಡು ಸೋಫಾ ಶುಚಿಗೊಳಿಸಬಹುದು. ವಾರಕ್ಕೊಂದು ಬಾರಿ ಸೋಫಾಕ್ಕೆ ಬಳಸಿ ಬಟ್ಟೆಗಳನ್ನು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.
ಆರಾಮದಾಯಕ ನೋಡಿಕೊಳ್ಳಿ
ಮನೆಯಲ್ಲಿರುವ ಸೋಫಾ ಜಾಗಕ್ಕೆ ತುಂಬಾ ದೊಡ್ಡದಾಗಿರಬಾರದು ಅಥವಾ ತುಂಬಾ ಚಿಕ್ಕದಾಗಿಯೂ ಇರಬಾರದು. ನೀವು ಎತ್ತರವಾಗಿದ್ದರೆ ಸೋಫಾದ ಆಸನಗಳು ಆಳವಾಗಿದಿಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಅದು ನಿಮಗೆ ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ಮಾಡುತ್ತದೆಯೇ ಎಂಬುವುದನ್ನು ಅರಿತುಕೊಳ್ಳಿ.
- ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.