ಹೂಡಿಕೆ ಮಾಡುವಾಗ ಇರಲಿ ಎಚ್ಚರ
Team Udayavani, Mar 18, 2019, 7:51 AM IST
ಇವತ್ತು ಹೂಡಿಕೆ ಮಾಡಿದ ಹಣ ಐದು, ಹತ್ತು ಪಟ್ಟು ಹೆಚ್ಚಾಗುವುದು ರಿಯಲ್ ಎಸ್ಟೇಟ್‌ನಲ್ಲಿ ಮಾತ್ರ. ಹೀಗಾಗಿ, ಎಲ್ಲರೂ ಸೈಟು, ಮನೆಯ ಮೇಲೆ ಹೂಡಿಕೆ ಮಾಡುತ್ತಾರೆ. ಹೂಡಿಕೆ ಅನ್ನೋದು ಎಲ್ಲವೂ ಸರಿಯಾಗಿದ್ದರೆ ಮಾತ್ರ. ನಿಮಗೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ಬೇನಾಮಿ ಆಸ್ತಿಯ ಮೇಲೆ ಹೂಡಿಕೆ ಮಾಡಿದರೆ ಮುಂದೆ ಬರೀ ಸಂಕಟ ಪಡಬೇಕಾಗುತ್ತದೆ.
ಸ್ವತ್ತು ವರ್ಗಾವಣೆ ಅಧಿನಿಯಮದ ನಿಯಮದಂತೆ ಖರೀದಿಸುವ ವ್ಯಕ್ತಿಗೆ ಆ ಸ್ವತ್ತಿನ ಸ್ವರೂಪ ಗೊತ್ತಿರುತ್ತದೆ ಎನ್ನುವ ಪೂರ್ವಭಾವನೆಯಿರುವುದರಿಂದ ಹಾಗೂ ಒಂದು ಸ್ವತ್ತು ಬೇನಾಮಿಯಾಗಿ¨ªೆಂದು ಖರೀದಿಸಿದ ಅನಂತರವೂ ವಿಚಾರಣೆಗೆ ಒಳಪಡುವ ಸಾಧ್ಯತೆಯಿರುವುದರಿಂದ ಎಚ್ಚರದಿಂದ ಹೂಡಿಕೆ ಮಾಡುವುದು ಸೂಕ್ತ.
ಹೂಡಿಕೆದಾರರು ಈ ಮೊದಲು ಸ್ವತ್ತಿನ ಇತರ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ಅದು ಕಾನೂನು ಬದ್ಧವಾದ ಮಾಲಕತ್ವ ಹಾಗೂ ಸ್ವಾಧೀನತೆಯನ್ನು ಹೊಂದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವ ಜತೆಗೆ ಮುಂಜಾಗ್ರತೆ ವಹಿಸುವುದು ಸೂಕ್ತ.
– ಒಂದು ವೇಳೆ ಸ್ವತ್ತನ್ನು ಖರೀದಿಸಲು ಖಾಸಗಿ ವ್ಯಕ್ತಿಯಿಂದ ಹಣಕಾಸಿನ ನೆರವು ಪಡೆದದ್ದು ಕಂಡು ಬಂದರೆ, ಹಣಕಾಸು ನೆರವು ನೀಡಿದ ವ್ಯಕ್ತಿಯು ತನ್ನ ಆದಾಯ ತೆರಿಗೆ ದಾಖಲಾತಿಗಳಲ್ಲಿ ಈ ಕುರಿತಂತೆ ವಿವರಣೆಗಳನ್ನು ನೀಡಿದ್ದರ ಬಗ್ಗೆ ಪರಿಶೀಲನೆ ಅತ್ಯಗತ್ಯ.
– ವ್ಯಕ್ತಿ ಅದನ್ನು ಯಾವ ಮೂಲದಿಂದ ತನ್ನ ಮಾಲಕತ್ವಕ್ಕೆ ಪಡೆದ ಎಂಬುದರ ಮಾಹಿತಿ ಪಡೆಯುವುದು, ಮಾಲಕನು ಆ ಸ್ವತ್ತನ್ನು ಖರೀದಿಸಲು ಪಡೆದ ಆದಾಯ ಅಥವಾ ಸಂಪನ್ಮೂಲದ ಮಾಹಿತಿ, ತೆರಿಗೆ ದಾಖಲಾತಿಗಳನ್ನು ಸಂಗ್ರಹಿಸುವುದು ಸೂಕ್ತ.
– ಸ್ವತ್ತು ಖರೀದಿಸಲು ಹಣಕಾಸು ಸಂಸ್ಥೆಗಳಿಂದ ಸಾಲ ಹಾಗೂ ಹಣಕಾಸಿನ ನೆರವು ಪಡೆದಿದ್ದರೆ ಅದನ್ನು ಯಾರು ಹಾಗೂ ಹೇಗೆ ಪಾವತಿಸಿದ್ದಾರೆಂದು ಅಥವಾ ಪಾವತಿಸುತ್ತಿರುವ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ಒಂದು ವಿಷಯ ಬಹಳ ಮುಖ್ಯ.
ಯಾವುದೇ ಸ್ಥಿರ ಸ್ವತ್ತುಗಳನ್ನು ಖರೀದಿಸುವಾಗ ನಿಮ್ಮ ಆದಾಯದ ಮೂಲ ಬಹಿರಂಗಪಡಿಸಿ ಹಾಗೂ ಚೆಕ್ ಅಥವಾ ಬ್ಯಾಂಕ್ ವ್ಯವಹಾರದ ಮೂಲಕ ಮಾಡಿಕೊಳ್ಳುವುದು ಎಲ್ಲ ರೀತಿಯಲ್ಲೂ ಒಳ್ಳೆಯದು. ಜತೆಗೆ ಖರೀದಿ ಪತ್ರ, ದಾಖಲಾತಿಗಳಲ್ಲಿ ದರಗಳನ್ನು ನಮೂದಿಸುವುದು ಸೂಕ್ತ. ನೆಮ್ಮದಿ ಬೇಕು ಎಂತಾದರೆ, ಎಲ್ಲ ಹೂಡಿಕೆ ಕಾನೂನಿನ ಅಡಿಯಲ್ಲಿ ನಡೆಯಬೇಕು. ರಿಯಲ್ ಎಸ್ಟೇಟ್ ಭಾಷೆಯಲ್ಲಿ ಇದನ್ನು ವೈಟ್ ಬ್ಯುಸಿನೆಸ್ ಅಂತಾರೆ.
ಉಮಾ ಮಹೇಶ ವೈದ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.