ಬೇಸಗೆಗೆ ಮನೆ ಸಿದ್ಧವಾಗಲಿ
Team Udayavani, Feb 23, 2019, 9:23 AM IST
ಚಳಿಗಾಲ ಮುಗಿಯಿತು, ಬೇಸಗೆ ಅಡಿ ಇಟ್ಟಾಗಿದೆ. ಮನೆಯ ಒಳಾಂಗಣ, ಹೊರಾಂಗಣ ವಿನ್ಯಾಸದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು. ಮನೆಯೊಳಗೆ ಹೆಚ್ಚು ಬೆಳಕು ಬರುವುದರಿಂದ ಮತ್ತು ಬೇಸಗೆ ಬಿಸಿ ಪ್ರಭಾವ ಬೀರುವುದರಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯ ಇದೆ. ಜತೆಗೆ ಒಳಾಂಗಣದಲ್ಲಿ ಒಂದಷ್ಟು ಬದಲಾವಣೆಗಳನ್ನೂ ಮಾಡಿಕೊಂಡರೆ ಮನೆ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.
ಫರ್ನೀಚರ್ ಗಳ ಬಣ್ಣ ಬದಲಾಯಿಸಿ
ಮನೆಯ ಒಳಾಂಗಣ, ಹೊರಾಂಗಣ ಅಲಂಕಾರಕ್ಕೆ ಬಳಸುವ ಫರ್ನಿಚರ್ ಅಥವಾ ಅವುಗಳ ಫ್ಯಾಬ್ರಿಕ್ ಗಳ ಬಣ್ಣ ಬದಲಾವಣೆ ಸಾಧ್ಯವಿದ್ದರೆ ಮಾಡಿ. ಮುಖ್ಯವಾಗಿ ಗಾಢ ಹಸುರು, ಕ್ರೀಮ್, ಪೀಚ್, ತೆಳು ಹಳದಿ ಬಣ್ಣದ ಫರ್ನೀಚರ್ ಗಳು ಹೆಚ್ಚು ಆಕರ್ಷಕವಾಗಿ ಕಾಣುವುದು.
ಆಕರ್ಷಕ ಕುಶನ್ ಬಳಸಿ
ಒಂದೇ ಬಣ್ಣದ ಹೆಚ್ಚು ಬ್ರೈಟ್ ಆಗಿ ಕಾಣುವ ಕುಶನ್ಸ್ ಗಳನ್ನು ಬಳಸಿ. ಅದು ಮನೆಯ ಗೋಡೆ, ಸೋಫಾ ಸೆಟ್‌ಗೆ ಹೊಂದಿಕೆಯಾಗುವಂತಿರಲಿ. ಬೇರೆ ಬೇರೆ ಆಕೃತಿಯ, ಗಾತ್ರದ ಕುಶನ್ಸ್ ಗಳನ್ನು ಅಲಂಕಾರಕ್ಕೆ ಬಳಸಬಹುದು.
ಹಗುರವಾದ ವಸ್ತುಗಳಿಂದ ಅಲಂಕರಿಸಿ
ಕಾಡಿನಲ್ಲಿ ಸಿಗುವ ಬಳ್ಳಿಯಿಂದ ಮಾಡಿರುವ ಫರ್ನಿಚರ್ ಗಳು, ಬಾಸ್ಕೆಟ್, ಬುಟ್ಟಿಗಳನ್ನು ಮನೆಯ ಅಲಂಕಾರಕ್ಕೆ ಬಳಸಬಹುದು. ಇವು ಹೆಚ್ಚು ಆರಾಮದಾಯಕ ಮತ್ತು ಪರಿಸರ ಸ್ನೇಹಿ ವಸ್ತುಗಳಾಗಿವೆ. ಮನೆಗೆ ಸಾಂಪ್ರದಾಯಿಕ ಲುಕ್ ಕೊಡುವ ಈ ವಸ್ತುಗಳು ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಲಿವಿಂಗ್ ರೂಮ್‌ನ ಮೂಲೆಗಳಲ್ಲಿ ಇಂಥ ವಸ್ತುಗಳಿಂದ ಮಾಡಿದ ಬುಟ್ಟಿಗಳಲ್ಲಿ ಪ್ಲಾಸ್ಟಿಕ್ ಹೂಗಳನ್ನು ಇಟ್ಟು ಅಲಂಕರಿಸಬಹುದು.
ನೇತಾಡುವ ಗಿಡಗಳು
ಇನ್ನು ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ನೇತಾಡುವ ಗಿಡಗಳು ಹೆಚ್ಚು ಪ್ರಾಮುಖ್ಯ ಪಡೆದಿವೆ. ಮನೆಯ ಒಳಾಂಗಣ, ಹೊರಾಂಗಣದಲ್ಲಿ ಗಾಜಿನ ಪಾತ್ರೆಗಳಲ್ಲಿ ನೇತಾಡುವ ಗಿಡಗಳನ್ನು ಹಾಕಿದರೆ ಮನೆಯೊಳಗೆ ತಾಜಾ ಗಾಳಿ ಬರುವುದಲ್ಲದೇ ಮನೆಯನ್ನು ತಂಪಾಗಿಯೂ ಇರಿಸುತ್ತದೆ. ಇದನ್ನು ಕಿಚನ್ ಶೆಲ್ಫ್ ನ ಮೇಲೆಯೂ ಇಡಬಹುದಾಗಿದೆ.
ಗೋಡೆಗಳ ಬಣ್ಣ
ಬೇಸಗೆಯಲ್ಲಿ ಗೋಡೆಗಳ ಬಣ್ಣ ಕಣ್ಣಿಗೆ ಆಕರ್ಷಕವಾಗಿ ಕಾಣುವಂತಿರಬೇಕು. ಹೆಚ್ಚಾಗಿ ನೀಲಿ, ಬಿಳಿ ಬಣ್ಣದಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.
ಗಿಡಗಳನ್ನು ಬೆಳೆಸಿ
ಮನೆಯ ಒಳಾಂಗಣ, ಹೊರಾಂಗಣದಲ್ಲಿ ಹಸಿರು ಗಿಡಗಳನ್ನು ಬೆಳೆಸಿ. ಇದು ಇತ್ತೀಚಿನ ಟ್ರೆಂಡ್ ಕೂಡ ಆಗಿದೆ. ಟೇಬಲ್, ಗೋಡೆಗಳ ಮೂಲೆ, ದ್ವಾರಗಳಲ್ಲಿ ಗಿಡಗಳನ್ನಿಡುವುದರಿಂದ ಮನೆಯ ಸೌಂದರ್ಯ ಹೆಚ್ಚಾಗುವುದು. ಹಸುರು- ಬಿಳಿ ಬಣ್ಣ ಇಲ್ಲಿ ಸೇರುವುದರಿಂದ ಮನೆಯ ಆಕರ್ಷಣೆ ಮತ್ತಷ್ಟು ಹೆಚ್ಚಾಗುವುದು. ಜತೆಗೆ ಮನೆಯೊಳಗೆ ಸ್ವಚ್ಛ ಗಾಳಿ ಹರಿದು ತಂಪಾಗಿರಿಸುತ್ತದೆ.
ಕನ್ನಡಿ ಬಳಸಿ
ಕನ್ನಡಿಗಳು ಮನೆಯೊಳಗೆ ಹೆಚ್ಚು ಬೆಳಕು ಇರುವಂತೆ ಮಾಡುವುದು. ಜತೆಗೆ ಕೊಠಡಿಯು ಹೆಚ್ಚು ವಿಸ್ತಾರವಾಗಿ ಕಾಣುವಂತೆ ಮಾಡುತ್ತದೆ. ಸಾಮಾನ್ಯ ವಿನ್ಯಾ ಸದ ಚೌಕ, ತ್ರಿಕೋನ, ರೌಂಡ್ ಮಾದರಿಯ ಗಾಜುಗಳನ್ನು ಲೀವಿಂಗ್ ರೂಮ್ ನಲ್ಲಿ ಇರಿಸಬಹುದು. ಇದು ಮನೆಯೊಳಗೆ ಬೇಸಗೆ ಸೌಂದರ್ಯದ ಅನುಭಮತ್ತು ಹಿತವನ್ನು ಕೊಡುವುದು.
ವಿ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.