ಸ್ಟೋರ್ ರೂಮ್ ಹೀಗಿರಲಿ…
Team Udayavani, Feb 23, 2019, 7:30 AM IST
ನಗರ ಪ್ರದೇಶ ಬೆಳೆಯುತ್ತಿದ್ದಂತೆ ವಾಸಿಸುವ ಜಾಗಗಳು ಕಿರಿದಾಗುತ್ತಾ ಹೋಗುತ್ತಿವೆ. ಇದ್ದ ಸಣ್ಣ ಜಾಗದಲ್ಲೇ ನಾವು ಹೊಂದಿಸಿಕೊಂಡು, ವಸ್ತುಗಳನ್ನು ಕ್ರಿಯಾತ್ಮಕವಾಗಿ ಜೋಡಿಸುವುದು ಅನಿವಾರ್ಯವಾಗಿದೆ. ಅಡುಗೆ ಕೋಣೆಯ ವಸ್ತುಗಳನ್ನು ಜೋಡಿಸಿಡಲು ಸ್ಟೋರ್ ರೂಮ್ ಎಂಬ ಕೋಣೆ ಪ್ರತಿಯೊಂದು ಮನೆಯಲ್ಲಿಯೂ ಇರುತ್ತದೆ. ಆದರೆ ಕೆಲವೊಂದು ಸಲ ವಸ್ತುಗಳು ಇಟ್ಟ ಜಾಗದಲ್ಲಿ ಸಿಗುವುದಿಲ್ಲ. ನಮ್ಮ ಜೋಡಣೆಯ ಲೋಪದಿಂದಾಗಿ ಒಂದಷ್ಟು ಸಮಯವನ್ನು ನಾವು ಹುಡುಕುವುದರಲ್ಲೇ ಕಳೆದು ಬಿಡುತ್ತೇವೆ. ಇಂತಹ ತೊಂದರೆಗಳನ್ನು ತಪ್ಪಿಸಲು ಸ್ಟೋರ್ ರೂಮ್‌ನ್ನು ಹೀಗೆ ಕ್ರಿಯಾತ್ಮಕವಾಗಿ ಜೋಡಿಸಬಹುದು.
ಕಪಾಟುಗಳ ಜೋಡಣೆ
ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದಕ್ಕಿಂತ ಕಪಾಟುಗಳಲ್ಲಿ ಜೋಡಿಸಿಡುವುದು ಒಳಿತು. ಕಪಾಟುಗಳು ದೊಡ್ಡದಾಗಿದ್ದು, ಅವುಗಳಲ್ಲಿ ಸಣ್ಣ ಸಣ್ಣ ಕೋಣೆಗಳಿರಲಿ. ದಿನಸಿ ಸಾಮಗ್ರಿಗಳೆಲ್ಲವನ್ನು ಡಬ್ಬದಲ್ಲಿ ಹಾಕಿ ಕಪಾಟಿನ ಒಂದೇ ಕೋಣೆಯಲ್ಲಿಡಿ. ಅಡುಗೆ ಮಾಡುವಾಗ ಎಲ್ಲವೂ ಒಂದೇ ಜಾಗದಲ್ಲಿ ಸಿಗುತ್ತದೆ.
ಕಬೋರ್ಡ್‌ಗಳ ಬಾಗಿಲುಗಳನ್ನು ಕೂಡ ಉಪಯೋಗಿಸಿಕೊಳ್ಳಬಹುದು. ಬಾಗಿಲುಗಳ ಒಳ ಭಾಗಕ್ಕೆ ಹುಕ್ ಗಳನ್ನು ಜೋಡಿಸಿ ಸೌಟು, ಅಳತೆ ಪಾತ್ರೆಗಳನ್ನು ಜೋಡಿಸಿಕೊಳ್ಳಬಹುದು.
ಬ್ಲ್ಯಾಕ್‌ಬೋರ್ಡ್ ಬಳಸಿ
ಬಾಗಿಲುಗಳಲ್ಲಿ ಒಂದು ಬ್ಲ್ಯಾಕ್ ಬೋರ್ಡ್‌ನ್ನು ಜೋಡಿಸಿಟ್ಟುಕೊಂಡರೆ ನೀವು ಮನೆಬಿಟ್ಟು ಹೋಗುವ ಸಂದರ್ಭ ಬಂದರೆ ಮನೆಯವರಿಗೆ ಅಗತ್ಯಕ್ಕೆ ಬೇಕಾದ ಆಹಾರಗಳನ್ನು ಹೇಗೆ ತಯಾರಿಸುವುದೆಂದು ಅದರಲ್ಲಿ ಬರೆದಿಟ್ಟು ಹೋಗಬಹುದು.
ಪೆಗ್‌ಬೋರ್ಡ್‌ಗಳ ಜೋಡಣೆ
ಸ್ಟೋರ್ ರೂಮ್‌ನಲ್ಲೊಂದು ಪೆಗ್‌ಬೋರ್ಡ್‌ನ್ನು ಜೋಡಿಸಿಡಬೇಕು. ಇದರಿಂದ ಪಾತ್ರೆಗಳನ್ನು ಅದರಲ್ಲಿ ಜೋಡಿಸಲು ಸಹಾಯವಾಗುತ್ತದೆ. ಚೂರಿಗಳನ್ನಿಡಲು ಬೇರೆಯೇ ವ್ಯವಸ್ಥೆ ಮಾಡಬೇಕು. ಅದು ಸ್ವಲ್ಪ ಎತ್ತರದಲ್ಲಿದ್ದರೆ ಒಳಿತು. ಮಕ್ಕಳು ಮನೆಯಲ್ಲಿದ್ದರೆ ಅವರ ಕೈಗೆಟುಕದಂತಹ ಜಾಗವಾಗಿರಲಿ. ಅಯಸ್ಕಾಂತೀಯ ಗುಣವಿರುವ ನೈಫ್ ಹೋಲ್ಡರ್‌ಗಳು ಲಭಿಸುತ್ತವೆ. ಅವುಗಳಲ್ಲಿ ಚೂರಿಯನ್ನು ಜೋಡಿಸಿಡುವುದರಿಂದ ಅಪಾಯದ ಸಾಧ್ಯತೆ ಕಡಿಮೆಯಾಗುತ್ತದೆ.
ಬಾಸ್ಕೆಟ್‌ಗಳಿರಲಿ
ಸ್ಟೋರ್ ರೂಮ್‌ನ ಗೋಡೆಗಳಿಗೆ ಒಂದು ಬಾಸ್ಕೆಟ್‌ನ್ನು ಜೋಡಿಸಿಡುವುದರಿಂದ ಕೆಲವು ಅಗತ್ಯ ಸಾಮಗ್ರಿಗಳನ್ನು ಅದರಲ್ಲಿ ಹಾಕಬಹುದು. ತರಕಾರಿ ಹಾಗೂ ಹಣ್ಣುಹಂಪಲುಗಳನ್ನು ಹಾಕಲೂ ಅವಕಾಶವಿದೆ.
ಶುಚಿಗೊಳಿಸುವ ಸಾಮಗ್ರಿಗಳು
ಅಡುಗೆ ಮನೆ ಹಾಗೂ ಪಾತ್ರೆಗಳನ್ನು ಶುಚಿಗೊಳಿಸುವ ಸಾಬೂನು, ಹ್ಯಾಂಡ್ ವಾಷ್‌ನಂತಹ ಕೆಲವು ಸಾಮಗ್ರಿಗಳನ್ನು ಕಬೋರ್ಡ್‌ನ ಕೆಳಗಿನ ಶೆಲ್ಫ್ ನಲ್ಲಿ ಅಥವಾ ಬೇರೇಯೇ ಒಂದು ಡಬ್ಬದಲ್ಲಿ ಹಾಕಿ ಈ ಕೋಣೆಯಲ್ಲಿಟ್ಟು ಬಿಡಿ. ಅಗತ್ಯ ಬರುವಾಗ ವೇಗವಾಗಿ ತೆಗೆದುಕೊಳ್ಳಬಹುದು.
ಇದು ಮಾತ್ರವಲ್ಲದೆ ಕೆಲವೊಂದು ಅಪರೂಪಕ್ಕೆ ಬಳಸುವ ವಸ್ತುಗಳನ್ನು ಈ ಕೋಣೆಯ ಒಂದು ಬದಿಯಲ್ಲಿಟ್ಟುಬಿಡಿ. ಇದರಿಂದ ಅಡುಗೆ ಮನೆ ಸ್ವತ್ಛವಾಗಿ ಕಾಣುತ್ತದೆ. ಅಡುಗೆ ಕೋಣೆಯ ಅಂದವನ್ನು ಹೆಚ್ಚಿಸುಲ್ಲಿ ಸ್ಟೋರ್ ರೂಮ್‌ಗಳ ಪಾತ್ರ ಮಹತ್ವದ್ದು.
ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.