ಉದ್ಯೋಗ ಕ್ಷೇತ್ರದಲ್ಲಿ ಜಾಣತನ ಇರಲಿ
Team Udayavani, Oct 22, 2018, 1:14 PM IST
ಉದ್ಯೋಗ ಅಂತ ಬಂದರೆ, ಪುರುಷರಿಗೆ ಮಾತ್ರಲ್ಲದೆ, ಮಹಿಳೆಗೂ ಅನಿವಾರ್ಯವಾಗಿರುತ್ತದೆ. ಕೌಟುಂಬಿಕ ಜಗತ್ತಿನ ಜತೆ ವೃತ್ತಿಕ್ಷೇತ್ರವನ್ನೂ ನಿಭಾಯಿಸಲು ಮಹಿಳೆಯರು ಸಾಕಷ್ಟು ಜಾಣತನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಎರಡನ್ನೂ ಸರಿದೂಗಿಸುವ ಮಧ್ಯೆ ಬೇಸತ್ತು ಹೋಗದೆ ಜವಾಬ್ದಾರಿಗಳನ್ನು ಹೊರಲೇಬೇಕಾಗಿದೆ. ಒತ್ತಡದ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಅನುಭಸಲೇಬೇಕಾಗಿದೆ.
ಆತ್ಮೀಯತೆ ಇರಲಿ
ಎಂಜಿನಿಯರ್, ಆಸ್ಪತ್ರೆ, ಕ್ರೀಡೆ ಹೀಗೆ ಯಾವುದೇ ವೃತ್ತಿಕ್ಷೇತ್ರವನ್ನು ಗಮನಿಸಿದರೂ ಮಹಿಳೆಯರಿಗೆ ಹಲವಾರು ಸವಾಲುಗಳು ಇದ್ದೇ ಇವೆ. ಯಾವುದೇ ಕ್ಷೇತ್ರದಲ್ಲಿಯೂ ಪುರುಷರಿಗಿರುವ ಪ್ರಾಧಾನ್ಯ ಮಹಿಳೆಯರಿಗೆ ನೀಡುವುದಿಲ್ಲ. ಇವುಗಳ ನಿವಾರಣೆಗೆ ಮಹಿಳೆಯರು ತಮ್ಮ ಸಹೋದ್ಯೋಗಿಗಳ ಜತೆ ಆತ್ಮೀಯತೆಯಿಂದ ಬೆರೆತು ಸುಖ-ದುಃಖಗಳಲ್ಲಿ ಭಾಗಿಯಾಗಿ.
ಭದ್ರತೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಾಗುವ ಅಪರಾಧಗಳು ಹೆಚ್ಚು. ತಾವು ಕಚೇರಿಗೆ ಬರುವಾಗ ಸ್ವಂತ ಗಾಡಿಯಿಲ್ಲದೆ, ಬರುವ ಸಂದರ್ಭದಲ್ಲಿ ತಮ್ಮ ಜಾಗರೂಕತೆ ಅತೀ ಅಗತ್ಯವಾಗಿದೆ. ತಮ್ಮ ಭದ್ರತಾ ದೃಷ್ಟಿಯಿಂದ ಕಚೇರಿಯ ಸೆಕ್ಯೂರಿಟಿ ಗಾರ್ಡ್‌ಗಳನ್ನು ಪರಿಚಯಿಸಿಕೊಳ್ಳಿ, ಅಥವಾ ಕಚೇರಿಯ ಗಾಡಿಯಲ್ಲಿಯೇ ಮನೆಗೆ ತೆರಳುವ ವ್ಯವಸ್ಥೆ ಮಾಡಿಕೊಳ್ಳಿ. ಗಾಡಿಯಲ್ಲಿ ಪ್ರಯಾಣಿಸುವಿರಾದರೆ ಸೆಕ್ಯೂರಿಟಿ ಗಾರ್ಡ್, ಅಥವಾ ಡ್ರೈವರ್ ಅನ್ನು ನೇಮಿಸಿಕೊಳ್ಳುವುದು ಸೂಕ್ತ.
ಶಿಫ್ಟ್ ಗಳನ್ನು ಬದಲಾಯಿಸಿಕೊಳ್ಳಿರಿ
ಅಶೋಕ್ ಯೂನಿವರ್ಸಿಟಿಯಲ್ಲಿನ ಸಂಶೋಧನೆಯಲ್ಲಿ, ಶೇ. 73 ರಷ್ಟು ಭಾರತೀಯ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಬಿಡುವುದು ಮಗು ಹುಟ್ಟಿದ ಅನಂತರ ಎನ್ನುವುದು ತಿಳಿದುಬಂದಿದೆ. 30 ನೇ ವಯಸ್ಸಿನ ಅನಂತರ ಕೆಲಸವನ್ನು ಬಿಡುವವರೇ ಹೆಚ್ಚಾಗಿದ್ದಾರೆ. ಇದರಿಂದ ಮನೆಯಲ್ಲಿಯೇ ಇದ್ದು, ಕೆಲಸ ನಿರ್ವಹಿಸುವ ಆಯ್ಕೆಯನ್ನು ಮಾಡಿಕೊಂಡರೆ, ಉತ್ತಮ. ಶಿಫ್ಟ್ ಗಳನ್ನು ಬದಲಾಯಿಸಿಕೊಂಡರೂ ಒಳ್ಳೆಯದೇ.
ಸಮಾನತೆ ಇರಲಿ
ಭಾರತದಲ್ಲಿ ವಿವಿಧ ರಂಗಗಳಲ್ಲಿಯೂ ಪುರುಷರಷ್ಟೇ ಮಹಿಳೆಯರಿಗೂ ಪ್ರಾಧಾನ್ಯತೆ ಸಿಗಬೇಕು ಎನ್ನುವುದು ಹಲವು ವರ್ಷ ಹಿಂದಿನಿಂದಲೇ ಕೇಳಿಬರುತ್ತಿರುವ ಮಾತಾದರೂ ಇಂದು ಪುರುಷರಿಗಿಂತ ಮಹಿಳೆಯರಿಗೆ ಶೇ. 20ರಷ್ಟು ಸಂಬಳ ಕಡಿಮೆ ಎಂದು ಮಾನ್ವರ್ ಸ್ಯಾಲರಿ ಇಂಡಕ್ಸ್ ನ ವರದಿಯ ಮೂಲಕ ತಿಳಿದುಬಂದಿದೆ.
ಶ್ರುತಿ ನೀರಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.