ಅಂದದ ಮನೆಗೆ ಚೆಂದದ ಕನ್ನಡಿ
Team Udayavani, Aug 4, 2018, 2:39 PM IST
ಮನೆಯಲ್ಲಿ ವೈವಿಧ್ಯಮಯವಾದ ಕನ್ನಡಿಗಳ ಬಳಕೆಯಿಂದ ಸಾಂಪ್ರಾದಾಯಿಕ ಶೃಂಗಾರವನ್ನು ಹೆಚ್ಚಿಸಬಹುದು. ಮಾರುಕಟ್ಟೆಯಲ್ಲಿ ವಿಧ ವಿಧವಾದ ವಿನ್ಯಾಸ ಹಾಗೂ ಆಕೃತಿಯ ಕನ್ನಡಿಗಳು ದೊರೆಯುತ್ತಿವೆ. ಮನೆಯ ವಿನ್ಯಾಸ, ಸೌಂದರ್ಯ ಹೆಚ್ಚಿಸುವಲ್ಲಿ ಅತ್ಯುತ್ತಮ ಆಕೃತಿಗಳ ಕನ್ನಡಿಗಳಿಗೆ ಕೂಡ ಒಂದು ಸ್ಥಾನವಿದೆ. ಈ ಕಾರಣಕ್ಕಾಗಿ ಇಂದು ಅನೇಕರು ಮನೆಯ ಮಲಗುವ ಕೋಣೆ ಹಾಗೂ ಸ್ಟಡಿ ರೂಮ್, ಬಾತ್ ರೂಂ ಹಾಗೂ ಲೀವಿಂಗ್ ರೂಮ್‌ನಲ್ಲಿ ವೈವಿಧ್ಯಮಯ ವಿನ್ಯಾಸದ ಕನ್ನಡಿಗಳಿಂದ ಮನೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಇಂತಹ ಹತ್ತು ಹಲವು ಪ್ರಕಾರದ ಕನ್ನಡಿಗಳಲ್ಲಿ ಕೆಲವೊಂದಿಷ್ಟು ಇಲ್ಲಿವೆ.
ಕಿಟಕಿಯಾಕೃತಿ
ವಿಶೇಷವಾಗಿ ಮನೆಯ ಹೊರಾಂಗಣ ಹಾಗೂ ಲೀವಿಂಗ್ ರೂಮ್‌ಗಳಲ್ಲಿ ನೈಸರ್ಗಿಕ ಬೆಳಕು ಹಾಗೂ ಗಾಳಿ ಮನೆಯೊಳಗೆ ಬರಲಿ ಎಂದು ಕಿಟಕಿಗಳಿಗೆ ಹೆಚ್ಚು ಕನ್ನಡಿಯನ್ನೇ ಬಳಸಲಾಗುತ್ತದೆ. ಕಿಟಕಿಯ ಮೂಲಕ ಶಾಖವನ್ನು ಹಿಡಿದಿಟ್ಟು, ನೇರವಾಗಿ ಬೆಳಕು ಮಾತ್ರ ಬೀಳುವ ಕಾರಣಕ್ಕೆ ಕಿಟಕಿಗಳಿಗೆ ಕನ್ನಡಿಯನ್ನೇ ಹೆಚ್ಚಾಗಿ ಬಳಸಲಾಗುತ್ತದೆ.
ಗೋಡೆ ಕನ್ನಡಿ
ಮಾರ್ಬಲ್ ಹಾಗೂ ವುಡ್‌ನ ಆಕೃತಿಯಿಂದ ತಯಾರಿಸಿದ ಗೋಡೆ ಕನ್ನಡಿ ಬಳಕೆಯಿಂದ ಮನೆಯೊಳಗೆ ಸಾಂಪ್ರಾದಾಯಿಕ ಕಳೆ ಹೆಚ್ಚುತ್ತದೆ. ಗೋಡೆ ಕನ್ನಡಿಗಳನ್ನು ಮನೆಯ ಟೈಲ್ಸ್‌ಗಳೊಳಗೆ ಜೋಡಿಸಬಹುದು. ಇದಕ್ಕೆ ವಿವಿಧ ಆಕೃತಿಯಾಕಾರದಲ್ಲಿ ವಿನ್ಯಾಸಗೊಳಿಸದರೆ, ಮನೆಗೆ ಶ್ರೀಮಂತಿಕೆ ಲುಕ್ ಸಿಗುತ್ತದೆ. ವ್ಯಾನಿಟಿ ಮಿರರ್ ವ್ಯಾನಿಟಿ ಮಿರರ್‌ಗಳು ಮಲಗುವ ಕೋಣೆಗೆ ಹೆಚ್ಚು ಸೂಕ್ತ. ಕೋಣೆಯ ಸುತ್ತಮುತ್ತಲಿನಲ್ಲಿ ಸಣ್ಣ ಸಣ್ಣ ಕನ್ನಡಿಗಳನ್ನು ಗೋಡೆ ಹಾಗೂ ಟೇಬಲ್‌ಗಳಿಗೆ ವಿವಿಧ ಆಕೃತಿಗಳಲ್ಲಿ ಅಂಟಿಸಲಾಗುತ್ತದೆ. ಸಣ್ಣ ಸಣ್ಣ ಕನ್ನಡಿಗಳಿಗೆ ವೈವಿಧ್ಯಮಯವಾದ ಹೂವುಗಳ ಕಲಾಕೃತಿ ತಯಾರಿಸಲಾಗುತ್ತದೆ. ಇದರಿಂದ ಕೋಣೆಯ ಸೊಬಗು ಹೆಚ್ಚುತ್ತದೆ.
ಬ್ಯಾಕ್ ಸ್ಲ್ಯಾಶ್ ಮಿರರ್
ಅಡುಗೆ ಮನೆಯ ಕಿಚನ್ ಸೆಲ್ಫ್ ಹಾಗೂ ಗೋಡೆ ಮಧ್ಯೆ ಇರುವ ಸ್ಥಳಾವಕಾಶದ ಜಾಗದಲ್ಲಿ ಅಳವಡಿಸುವ ಮಿರರ್‌ಗಳನ್ನು ಬ್ಯಾಕ್‌ಸ್ಪ್ಯಾಶ್ ಮಿರರ್ ಎನ್ನಲಾಗುತ್ತದೆ. ಇವು ಗೋಡೆಯ ಟೈಲ್ಸ್‌ಗಳಿಗೆ ಅಂಟಿಸಿರುವುದರಿಂದ ಅಡುಗೆ ಮನೆಗೊಂದು ವಿಭಿನ್ನ ಲುಕ್ ಸಿಗುತ್ತದೆ.
ಪೋರ್ಚ್ ಮಿರರ್
ಮನೆಯ ಹೊರಾಂಗಣದ ಗಾರ್ಡನ್‌ಗಳಲ್ಲಿ ಹೆಚ್ಚಾಗಿ ಪೋರ್ಚ್ ಮಿರರ್‌ಗಳ ಬಳಸಲಾಗುತ್ತದೆ. ಗಾರ್ಡನ್‌ನ ಸೌಂದರ್ಯ ಹಾಗೂ ವಾತಾವರಣವನ್ನು ಪೋರ್ಚ್ ಮಿರರ್‌ಗಳು ಪ್ರತಿಬಿಂಬಿಸುತ್ತವೆ. ಇದರಿಂದ ಮನೆಯ ಹೊರಾಂಗಣವನ್ನು ಸೌಂದರ್ಯ ಹೆಚ್ಚಾಗುತ್ತದೆ.
ಮೆಟ್ಟಿಲು ಕನ್ನಡಿ
ಮನೆಯ ಮೆಟ್ಟಿಲುಗಳಿಗೆ ವಿವಿಧ ಕಲಾಕೃತಿ ಹಾಗೂ ಗಾತ್ರದ ಕನ್ನಡಿ ಬಳಕೆಯಿಂದ ಮನೆಯ ಶ್ರೀಮಂತಿಕೆ ಹೆಚ್ಚಾಗುತ್ತದೆ. ಕನ್ನಡಿಗಳಿಂದ ಹತ್ತುವ ಮೆಟ್ಟಿಲುಗಳಿಗೆ ನೀರಸವಾಗಿ ಮನೆಯೊಳಗೂ ಹೊಳಪು ಹೆಚ್ಚಾಗುತ್ತದೆ.
ವಾಲ್ ಡೆಕರ್ ಮಿರರ್
ಮನೆಯ ಗೋಡೆಗಳ ಚೆಲುವು ಹೆಚ್ಚಿಸಬೇಕಾದರೆ, ನಾವು ಗೋಡೆಗಳಿಗೆ ವಿವಿಧ ಆಕೃತಿ ಹಾಗೂ ವಿನ್ಯಾಸ, ಗಾತ್ರದ ಕನ್ನಡಿ ಅಳವಡಿಕೆ ಸೂಕ್ತ. ಅಳವಡಿಸುವ ಕನ್ನಡಿಗಳಿಗೆ ಹೂ ಹಾಗೂ ಕಲಾಕೃತಿಯಿಂದ ವಿನ್ಯಾಸಗೊಳಿಸಿದರೆ, ವಾಲ್ ಡೆಕರ್ ಮಿರರ್‌ನಿಂದ ಹೊಳಪು ಸಾಧ್ಯ. ಹೀಗೆ ಮನೆಯ ಒಳಾಂಗಣ, ಹೊರಾಂಗಣದ ಸೌಂದರ್ಯ ಹೆಚ್ಚಿಸುವ ಕನ್ನಡಿಗಳಿಗೆ ಪ್ರತಿ ಮನೆಯಲ್ಲೂ ಒಂದು ಪ್ರಮುಖ ಸ್ಥಾನವಿದೆ.
ಶಿವಸ್ಥಾವರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.