ಕೆಲಸ-ಕುಟುಂಬಕ್ಕೆ ಇರಲಿ ಸಮಾನ ಪ್ರಾಶಸ್ತ್ಯ
Team Udayavani, Nov 26, 2018, 1:36 PM IST
ಮದುವೆಯಾದ ಅನಂತರ ಹೆಣ್ಣು ತನ್ನ ಕೆಲಸದ ಜತೆಗೆ ಹೆತ್ತ ತಂದೆ, ತಾಯಿ ಹಾಗೂ ಗಂಡನನ್ನು ನಿಭಾಯಿಸುವುದು ಎಂದರೆ ಅದೊಂದು ನಿಜವಾದ ಚಾಣಾಕ್ಷತನ ಎನ್ನಬಹುದು. ಏಕೆಂದರೆ ಮದುವೆಯಾಗಿ ಜೀವನ ಎಂಬ ನೌಕೆಯಲ್ಲಿ ನಾವಿಕನಾಗಿರುವ ಗಂಡನ ಮಾತನ್ನು ಕೇಳಿಕೊಳ್ಳುವು ಅಥವಾ ಅವನೊಂದಿಗಿನ ಹೊಂದಾಣಿಕೆ ಎಲ್ಲವೂ ಮುಖ್ಯವಾಗಿರುವಾಗ. ಇಷ್ಟು ವರ್ಷ ಹೆತ್ತು, ಹೊತ್ತು, ಬೆಳೆಸಿ, ಸಾಕಿದ ಅಪ್ಪ, ಅಮ್ಮ ಕಷ್ಟವಾಗುತ್ತಾರೆ ಎಂಬ ಮಾತನ್ನು ಹೆಣ್ಣಾದವಳು ಸಹಿಸುವುದಿಲ್ಲ. ಮಾತ್ರವಲ್ಲದೆ ಅವಳು ಅದಕ್ಕೋಸ್ಕರ ತನ್ನ ಗಂಡನೊಂದಿಗೆ ಜಗಳವಾಡುವುದು ಸರಿಯಲ್ಲ. ಹಾಗಾದರೆ ಅದಕ್ಕವಳು ಏನು ಮಾಡಬೇಕು. ಎಲ್ಲ ಮದುವೆಯಾದ, ಅಪ್ಪ ಅಮ್ಮನಿಗೆ ಒಬ್ಬಳೇ ಹೆಣ್ಣು ಮಗಳಿರುವ ಎಲ್ಲರಿಗೂ ಈ ಪ್ರಶ್ನೆ ಕಾಡುತ್ತದೆ.
ಕುಟುಂಬ ಮತ್ತು ಕೆಲಸ
ಹೆಣ್ಣಿಗೆ ತನ್ನ ಗಂಡ, ಹೆತ್ತವರನ್ನು ನೋಡಿಕೊಳ್ಳುವುದರ ಜತೆಗೆ ಅವಳು ಇಂದು ಸ್ವತಂತ್ರಳಾಗಿರುವುದರಿಂದ ತನ್ನ ಕೆಲಸವನ್ನೂ ಮಾಡಬೇಕಾಗುತ್ತದೆ. ಹಾಗಾಗಿ ಈಕೆಗೆ ಗಂಡಸರಿಗಿಂತ ಅಧಿಕ ಮನೋಬಲ ಹಾಗೂ ಮನೆಯವರ ಸಹಕಾರವೂ ಅಗತ್ಯವಾಗಿರುತ್ತದೆ.
ಗಂಡನೊಂದಿಗೆ ಆತ್ಮೀಯತೆ
ಗಂಡನೇ ಹೆಣ್ಣಿಗೆ ಜೀವನದ ಪ್ರಮುಖ ವ್ಯಕ್ತಿ, ಹಾಗೆಯೇ ಗಂಡನಿಗೂ ತನ್ನ ಹೆಂಡತಿ ಕೇವಲ ಹೆಂಡತಿಯಾಗಿರದೆ ಸ್ನೇಹಿತೆ ಎಂಬ ಮನೋಭಾವವನ್ನು ಬೆಳೆಸಿಕೊಂಡು ಅನ್ಯೋನ್ಯತೆ, ಭಾವನೆಗಳ ಅರ್ಥೈಸುವಿಕೆ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದು ಈ ಎಲ್ಲವೂ ಪರಸ್ಪರ ನಡೆದರೆ. ಅವರ ಮಧ್ಯೆ ಯಾವುದೇ ಗೋಡೆ ಎಂಬ ಮಾತುಬಾರದು. ಇಲ್ಲಿ ಗಂಡ ಅಥವಾ ಹೆಣ್ಣನ್ನು ಕೀಳರಿಮೆಯಿಂದ ನೋಡಬಾರದು.
ವಿವಾಹ ಪೂರ್ವ ಮಾತುಕತೆ
ಒಬ್ಬಳೇ ಹೆಣ್ಣು ಮಗಳಾದವಳಿಗೆ ತನ್ನ ಮದುವೆಯಾದ ಅನಂತರ ತನ್ನ ಹೆತ್ತವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆಯಾಗುವುದು ಸಹಜ. ಅದಕ್ಕೆ ವಿವಾಹ ಪೂರ್ವದಲ್ಲೇ ತನ್ನ ಗಂಡನಾಗುವವನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ ಒಪ್ಪಿದರೆ ಇವರು ಸಂಸಾರ ನಡೆ ಸುವ ಮನೆಗೆ ತನ್ನ ಹೆತ್ತವರನ್ನು ಕರೆಸಿಕೊಂಡು ಅವರನ್ನು ನೋಡಿಕೊಳ್ಳಬಹುದು ಅಥವಾ ಮದುವೆಯಾಗುವ ಮುಂಚಿತವಾಗಿಯೇ ಹೆಣ್ಣು ತನ್ನ ಗಂಡನಾಗುವನಲ್ಲಿ ತನ್ನ ತಂದೆ, ತಾಯಿಯರನ್ನು ನಾನೇ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುವುದರಿಂದ ಗಂಡನಾದವನು ಹೆಂಡತಿ ಮನೆಯಲ್ಲಿದ್ದು ಜೀವನ ನಡೆಸುವಂತೆ ಮಾತುಕತೆ ನಡೆಸಬಹುದು. ಇದರಿಂದಲೂ ಮುಂದೆ ಯಾವುದೇ ಸಂಸಾರದಲ್ಲಿ ತೊಂದರೆಗಳು ಎದುರಾಗಲು ಸಾಧ್ಯವಿಲ್ಲ.
ಕೆಲಸದ ಒತ್ತಡ
ಮನೆಯ ಸಮಾರಂಭಗಳಿಗೆ ಬಿಡುವು ಮಾಡಿಕೊಂಡು ಅದರಲ್ಲೂ ಭಾಗಿಯಾಗುವುದು ಕೆಲಸಕ್ಕೆ ಹೋಗುವ ಹೆಣ್ಣಿಗೆ ಅನಿವಾರ್ಯವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ಕೆಲಸಕ್ಕೆ ಒತ್ತು ನೀಡಬೇಕಾದ ಅನಿವಾರ್ಯವು ಇರುತ್ತದೆ. ಮನೆಯಲ್ಲಿನ ತಂದೆ, ತಾಯಿ, ಅತ್ತೆ, ಮಾವ, ಗಂಡ, ಮಕ್ಕಳಿಗೆ ಸಮಾನ ಪ್ರಾಶಸ್ತ್ಯ ನೀಡುವುದು. ಗಂಡ ಹೆಂಡತಿ ಅರಿತು ಜೀವನವನ್ನು ನಡೆಸಿದರೆ ಸಾರ್ಥಕ ಜೀವನ ನಡೆಸಬಹುದು.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.