ಬೈಕ್ ಕ್ಲಚ್, ಸಮಸ್ಯೆಗಿದೆ ಪರಿಹಾರ
Team Udayavani, Jan 4, 2019, 8:04 AM IST
ನಿಮ್ಮ ಬಳಿ ಬೈಕ್ ಇದೆ ಮತ್ತು ಗೇರ್ ಹಾಕುವಾಗೆಲ್ಲ ನೆಗೆದಂತೆ ಭಾಸವಾಗುತ್ತಿದೆ ಎಂದಾದರೆ, ನಿಸ್ಸಂಶಯವಾಗಿ ಕ್ಲಚ್ ಹೋಗಿದೆ ಎಂದರ್ಥ. ವಾಹನ ವೇಗವಿದ್ದಾಗ ಮುಖ್ಯ ಡ್ರೈವ್‌ನಿಂದ ಗೇರ್ ಅನ್ನು ತಪ್ಪಿಸಿ, ಇನ್ನೊಂದು ಗೇರ್ ಹಾಕುವಂತೆ ಅನುಕೂಲ ಮಾಡಿಕೊಡುವ ಕೆಲಸವನ್ನು ಕ್ಲಚ್ ಮಾಡುತ್ತದೆ.
ಕ್ಲಚ್ ಸಮಸ್ಯೆ ಪತ್ತೆ ಹಚ್ಚೋದು ಹೇಗೆ?
ಕ್ಲಚ್ ಸವೆದಿದ್ದರೆ ಗೇರ್ ಹಾಕುವ ವೇಳೆ ನೆಗೆದಂತೆ ಭಾಸವಾಗಬಹುದು. ನಿರ್ದಿಷ್ಟ ಗೇರ್‌ನಲ್ಲಿದ್ದಾಗ ಕ್ಲಚ್ ಹಿಡಿದರೂ ವಾಹನ ನಿಯಂತ್ರಣಕ್ಕೆ ಬಾರದೇ ಇರಬಹುದು ಅಥವಾ ಗೇರ್ ಶಿಫ್ಟ್ ವೇಳೆ ತುಂಬ ಕಷ್ಟ ಎಂದು ಭಾಸವಾಗ ಬಹುದು. ಅಲ್ಲದೇ ಗೇರ್ ಬದಲಾವಣೆ ವೇಳೆ ಶಬ್ಧ ಬರಬಹುದು.
ವೇಗದ ಚಾಲನೆ ಸಾಧ್ಯವಿಲ್ಲ
ಕ್ಲಚ್ ಸವೆದು ಗೇರ್- ಶಾಫ್ಟ್ಗೆ ಎಂಗೇಜ್ ಆಗದೇ ಇರುವುದರಿಂದ ವೇಗದ ಚಾಲನೆ ಸಾಧ್ಯವಾಗುವುದಿಲ್ಲ. ಎಕ್ಸಲರೇಟರ್ ಕೊಟ್ಟರೂ ಮೀಟರ್‌ನಲ್ಲಿ ಆರ್‌ಪಿಎಂ ಹೆಚ್ಚಾಗುತ್ತದೇ ವಿನಾ ವೇಗ ವೃದ್ಧಿಸುವುದಿಲ್ಲ.
ಹೆಚ್ಚಿದ ಶಬ್ದ
ನಿಮ್ಮ ಬೈಕ್ ಎಂಜಿನ್‌ನಿಂದ ಒಳಗೇನಾದರೂ ಶಬ್ಧ ಬರುತ್ತಿದ್ದರೆ, ಗೇರ್ ಹಾಕುವ ವೇಳೆ ಕಟಕಟ ಶಬ್ಧ ಬರುತ್ತಿದ್ದರೆ ಅದಕ್ಕೆ ಕ್ಲಚ್ ಸಮಸ್ಯೆ ಕಾರಣವಾಗಿರಬಹುದು.
ಕ್ಲಚ್ ಯಾವಾಗ ಬದಲಿಸಬೇಕು?
ಮೇಲೆ ಹೇಳಿದ ಎಲ್ಲ ಸಮಸ್ಯೆಗಳು ಕಾಡಿದಾಗ ಕ್ಲಚ್ ಬದಲಾಯಿಸುವುದು ಉತ್ತಮ. ಕ್ಲಚ್ ಸವೆದಿದ್ದರೆ ಸುಲಭವಾಗಿ ಗೇರ್ ಹಾಕುವುದು ಸಾಧ್ಯವಿಲ್ಲ ಮತ್ತು ಕ್ಲಚ್‌ನಿಂದಾಗಿ ಎಂಜಿನ್‌ನ ಇತರ ಭಾಗಗಳ ಸಮಸ್ಯೆಗೂ ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ವೇಗವಾಗಿ ಸಮಸ್ಯೆ ಗೋಚರವಾದ ತತ್‌ಕ್ಷಣ ಕ್ಲಚ್ ಬದಲಾಯಿಸಬೇಕು. ಸಾಮಾನ್ಯವಾಗಿ ಕ್ಲಚ್‌ಗಳು 25- 40 ಸಾವಿರ ಕಿ.ಮೀ. ವರೆಗೆ ಬಾಳಿಕೆ ಬರಬಲ್ಲವು.
ಕ್ಲಚ್ ಉತ್ತಮವಾಗಿ ನಿರ್ವಹಣೆ ಹೇಗೆ?
ಬೈಕ್ ಕಂಪೆನಿ ಹೇಳಿದ ಉತ್ತಮ ದರ್ಜೆ ಆಯಿಲ್ ಅನ್ನೇ ಬಳಸುವುದು ಉತ್ತಮ. ಅರ್ಧ ಹಳೆ ಆಯಿಲ್ ಇನ್ನರ್ಧ ಹೊಸ ಆಯಿಲ್ ತುಂಬಿಸುವುದು ಇತ್ಯಾದಿ ಮಾಡಬಾರದು. ಅತಿಯಾದ ಟ್ರಾಫಿಕ್ ಇರುವ ಜಾಗಗಳಲ್ಲಿ ಆಗಾಗ್ಗೆ ಕ್ಲಚ್ ಬಳಕೆ ಆಗುತ್ತಾದರೂ, ಹೆಚ್ಚಾ ಕಡಿಮೆ ಒಂದೇ ಗೇರ್‌ನಲ್ಲಿ ಚಾಲನೆಯ ಅಭ್ಯಾಸ ಇಟ್ಟುಕೊಳ್ಳವುದು ಒಳ್ಳೆಯದು. ಹಾಗೆಯೇ ಕೈಯಲ್ಲಿ ಅರ್ಧ ಕ್ಲಚ್ ಹಿಡಿದು ಸಾಗುವುದು, ಕ್ಲಚ್ ಡ್ರೈವಿಂಗ್‌ನಿಂದ ಕ್ಲಚ್ ವೇಗವಾಗಿ ಸವೆಯುತ್ತದೆ.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.