ಬೈಕ್ ಟಯರ್: ನಿರ್ವಹಣೆ ಹೇಗೆ?
Team Udayavani, Jan 11, 2019, 7:21 AM IST
ಬೈಕ್ ಟೈರ್‌ಗಳು ಅಂದರೆ ನಿಮ್ಮ ಕಾಲಿನ ಶೂ ಇದ್ದಂತೆ. ಎಂಜಿನ್ ಪ್ರಬಲವಾಗಿದ್ದರೂ, ಟಯರ್ ಸರಿಯಾಗಿ ಇರದಿದ್ದರೆ ಪ್ರಯೋಜನವಿ ರಲಾರದು. ಬೈಕ್ ಬಳಕೆಗೆ ಅನುಗುಣವಾಗಿ ಟಯರ್‌ನಲ್ಲಿ ಗಾಳಿಯ ಪ್ರಶರ್, ಲೋಡ್ ಸಾಮರ್ಥ್ಯ ಗಮನಿಸಬೇಕು.
ಗಾಳಿಯ ಪ್ರಶರ್ ಎಷ್ಟಿರಬೇಕು?
ನಗರಗಳಲ್ಲಿ ಸಾಮಾನ್ಯ ಬಳಕೆಗೆ ನಿಗದಿಪಡಿಸಿದ ಗಾಳಿಯ ಪ್ರಶರ್ ಸಾಕಾಗುತ್ತಾದರೂ ಹೈವೇ ರೈಡಿಂಗ್ ವೇಳೆ ಟಯರ್‌ಗೆ ತುಸು ಹೆಚ್ಚಿನ ಗಾಳಿ (3-4 ಪಿಎಸ್‌ಐ ಹೆಚ್ಚು) ಹಾಕಬೇಕು. ಕಾರಣ ವೇಗದ ಚಾಲನೆ ವೇಳೆ ಟಯರ್ ಘರ್ಷಣೆ ಹೆಚ್ಚಿದ್ದು, ಶಾಖ ಹೆಚ್ಚಾಗುವುದರಿಂದ ಹೆಚ್ಚಿನ ಗಾಳಿ ಸುಲಲಿತ ಸವಾರಿ ನೀಡಲು ಅನುಕೂಲವಾಗುತ್ತದೆ. ಹಾಗೆಯೇ ಬೈಕ್‌ನಲ್ಲಿ ಎಷ್ಟು ಲೋಡ್ ಇದೆ ಎನ್ನುವುದರ ಅನುಗುಣವಾಗಿಯೂ ಪ್ರಶರ್ ಬದಲಾಗುತ್ತದೆ. ಬೈಕ್ ಎಷ್ಟು ಲೋಡ್ ತಡೆದುಕೊಳ್ಳುತ್ತದೆ ಎಂಬುದನ್ನು ಯೂಸರ್‌ಮ್ಯಾನುವಲ್‌ನಲ್ಲಿ ಪರಿಶೀಲಿಸಿ, ಅದಕ್ಕೆ ತಕ್ಕಂತೆ 3-4 ಪಿಎಸ್‌ಐ ಟಯರ್ ಪ್ರಶರ್ ಹೆಚ್ಚಿಸಬೇಕು. ಆದರೆ ಓವರ್‌ಲೋಡ್ ಅನ್ನು ಬೈಕ್‌ಗಳಿಗೆ ಹಾಕದೇ ಇರುವುದು ಉತ್ತಮ. ಓವರ್‌ಲೋಡ್‌ನಿಂದ ಬೈಕ್‌ನ ಸಸ್ಪೆನÒನ್ ಮತ್ತು ಟ್ಯೂಬ್‌ನಾಬ್ ಮೇಲೆ ಒತ್ತಡ ಬೀಳುತ್ತದೆ.
ವಾರಕ್ಕೊಮ್ಮೆ ಪ್ರಶರ್ ಚೆಕಪ್
ಟಯರ್‌ನಲ್ಲಿರುವ ಗಾಳಿಯ ಒತ್ತಡವನ್ನು ಕನಿಷ್ಠ ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆಯಾದರೂ ಮಾಡಬೇಕು. ಇದರಿಂದ ನಿರಂತರ ಒಂದೇ ಪ್ರಶರ್ ಕಾಯ್ದುಕೊಳ್ಳಲು ನೆರವಾಗುತ್ತದೆ. ಜತೆಗೆ ಗಾಳಿಯ ಒತ್ತಡ ಕಡಿಮೆಯಾಗಿ ಹೆಚ್ಚಿನ ಟಯರ್ ಸವೆತವನ್ನೂ ತಡೆಗಟ್ಟಬಹುದು.
ಹೆಚ್ಚು ಪ್ರಶರ್ ಬೇಡ
ಅಗತ್ಯವಿಲ್ಲದ ಹೊರತಾಗಿ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಗಾಳಿ ಪ್ರಶರ್ ಅನ್ನು ಟಯರ್‌ಗಳಿಗೆ ಹಾಕಬಾರದು. ಗಾಳಿಯ ಒತ್ತಡ ಹೆಚ್ಚಾದರೂ, ಕಡಿಮೆಯಾದರೆ ಅದರ ಪರಿಣಾಮ ಮೈಲೇಜ್ ಮೇಲೆ ಆಗುತ್ತದೆ. ಆದ್ದರಿಂದ ಸಾಮಾನ್ಯ ಚಾಲನೆಯ ಸಂದರ್ಭಗಳಲ್ಲಿ ಬೈಕ್ ಯೂಸರ್ ಮ್ಯಾನುವಲ್‌ನಲ್ಲಿ ಹೇಳಿದಷ್ಟೇ ಗಾಳಿಯ ಪ್ರಶರ್ ಇದ್ದರೆ ಒಳ್ಳೆಯದು.
ಏರ್ ವಾಲ್ಟ್ ಕ್ಯಾಬ್
ಗಾಳಿ ಹಾಕುವ ನಾಬ್‌ನ ಮೇಲ್ಭಾಗ ಕಪ್ಪನೆಯ ಒಂದು ಕ್ಯಾಪ್ ಅನ್ನು ನೀವು ನೋಡಿರಬಹುದು. ಈ ಕ್ಯಾಪ್ ಟಯರ್‌ನಲ್ಲಿ ಸದಾ ಇರುವಂತೆ ನೋಡಿಕೊಳ್ಳಿ. ಈ ನಾಬ್‌ನ ಒಳಗೆ ವಾಲ್‌್ವ ಇದ್ದು ಗಾಳಿ ಒಳಗೆ ತೆಗೆದುಕೊಳ್ಳುತ್ತದೆ. ಇದರ ಮೇಲೆ ಹೊಯಿಗೆ ಕಣ, ಕೆಸರು ಮೆತ್ತಿಕೊಂಡಿದ್ದರೆ, ನಿಧಾನವಾಗಿ ಗಾಳಿಯ ಪ್ರಶರ್ ಹೊರಟು ಹೋಗಬಹುದು. ಆದ್ದರಿಂದ ಹಾಗಾಗದಂತೆ ತಡೆಯಲು ಕ್ಯಾಪ್ ಅಗತ್ಯವಾಗುತ್ತದೆ.
ಟಯರ್ ಥ್ರೆಡ್ ಪರಿಶೀಲಿಸಿ
ಎರಡು ತಿಂಗಳಿಗೆ ಒಂದು ಬಾರಿಯಾದರೂ ಟಯರ್ ಥ್ರೆಡ್ ಪರಿಶೀಲಿಸಿ. ಒಂದು ವೇಳೆ ಯಾವುದಾದರೂ ಒಂದೇ ಕಡೆ ಹೆಚ್ಚು ಸವೆತ ವಾಗುತ್ತಿದ್ದರೆ ಸ್ವಿಂಗ್ ಆರ್ಮ್, ರಿಮ್, ಶಾಕ್ಸ್ ಇತ್ಯಾದಿಗಳ ಸಮಸ್ಯೆ ಇರಬಹುದು. ಇದರಿಂದ ಟಯರ್ ಹಾನಿಗೊಳಗಾಗುತ್ತದೆ. ಇದನ್ನು ತಪ್ಪಿಸಲು ಥ್ರೆಡ್ ಎಲ್ಲ ಬದಿಯಲ್ಲೂ ಸರಿಯಾಗಿ ದೆಯೇ ಎಂಬುದನ್ನು ಪರಿಶೀಲಿಸುವುದು ಬೆಸ್ಟ್.
••ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.