ಆರೋಗ್ಯ ರಕ್ಷಾ ಕವಚ ಅಲಸಂಡೆ ಬೀಜ
Team Udayavani, Feb 4, 2020, 5:51 AM IST
ವಯಸ್ಸಾಗುತ್ತಾ ಹೋದಂತೆ ಮೂಳೆಗಳ ಆರೋಗ್ಯವು ಕುಂದುತ್ತಾ ಹೋಗುತ್ತದೆ. ಇದರಿಂದ ಮೂಳೆ ಮುರಿತದ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಲಸಂಡೆ ಬೀಜದಲ್ಲಿರುವ ಪ್ರಮುಖ ಖನಿಜಾಂಶಗಳಾದ ಕ್ಯಾಲ್ಸಿಯಂ, ಫೋಸ್ಪರಸ್, ಪೊಟ್ಯಾಶಿಯಂ, ಮೆಗ್ನಿಶಿಯಂ, ಸೋಡಿಯಂಗಳು ಮೂಳೆ ಗಳನ್ನು ಬಲಗೊಳಿಸಿ ಅಕಾಲಿಕವಾಗಿ ಗೋಚರಿಸುವಂತಹ ವೃದ್ಧಾಪ್ಯದ ಲಕ್ಷಣಗಳನ್ನು ತಡೆಯಬಲ್ಲದು.
ಅಲಸಂಡೆ ಬೀಜವು ಸಾಕಷ್ಟು ಪೋಷಕಾಂಶ, ವಿಟಮಿನ್ ಹೊಂದಿದೆ. ಈ ಸಣ್ಣ ಬೀಜ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದು ಉತ್ತಮ.
·ಕಡಿಮೆ ಕೊಬ್ಬು ಮತ್ತು ಕ್ಯಾಲೊರಿ ಹೊಂದಿರುವ ಅಲಸಂಡೆ ಬೀಜವು ಹೃದಯದ ಆರೋಗ್ಯಕ್ಕೆ ಉತ್ತಮ. ಚರ್ಮ, ಉಗುರು, ಕೂದಲು ಮತ್ತು ಸ್ನಾಯುಗಳ ಬಲಗೊಳಿಸಿ, ದೇಹದ ಬೆಳವಣಿಗೆಗೆ ಬೇಕಾದ ಪ್ರೋಟಿನ್ ಅನ್ನು ಒದಗಿಸುತ್ತದೆ.
·ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೂ ಉತ್ತಮ. ಕಣ್ಣಿನ ರೆಟಿನಾ ಭಾಗದಲ್ಲಿ ಇದು ವರ್ಣದ್ರವ್ಯ ಉತ್ಪತ್ತಿ ಮಾಡುವ ಮೂಲಕ ಕಣ್ಣಿನ ರಕ್ಷಣೆ ಮಾಡುತ್ತದೆ.
· ಅಲಸಂಡೆ ಬೀಜದಲ್ಲಿ ನಾರಿನ ನಾಂಶ ಅಧಿಕವಾಗಿದ್ದು ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಸಣ್ಣ ಕರುಳು ಮತ್ತು ದೊಡ್ಡ ಕರುಳಿನಲ್ಲಿ ಜಮೆಯಾದ ಕೊಲೆಸ್ಟ್ರಾಲ್ ಅನ್ನು ಶುದ್ಧೀಕರಿಸುವ ಈ ಬೀಜವು ಹೃದಯಾಘಾತ, ಪಾರ್ಶ್ವವಾಯು ಮತ್ತು ಎದೆನೋವು ಉಂಟು ಮಾಡುವಂಥ ಅಪಧಮನಿಗಳಲ್ಲಿರುವ ತೊಂದರೆ ನಿವಾರಿಸುತ್ತದೆ.
ಇದರಲ್ಲಿನ ನಾರಿನಾಂಶ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ಇದು ಇನ್ಸುಲಿನ್ ಮತ್ತು ಲಿಪಿಡ್ ಮಟ್ಟವನ್ನು ಸುಧಾರಿಸುತ್ತದೆ. ಹೀಗಾಗಿ ಮಧುಮೇಹಿಗಳಿಗೂ ಒಳ್ಳೆಯದು.
·ಅಲಸಂಡೆ ಬೀಜದಲ್ಲಿರುವ ನಾರಿನಾಂಶವು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಅತಿಯಾಗಿ ತಿಂದು ಹೆಚ್ಚಿನ ಕ್ಯಾಲರಿ ಸೇವಿಸದಂತೆ ತಡೆಯುವುದು. ಇದರಿಂದ ಬೊಜ್ಜು ದೂರವಿಡಬಹುದು.
·ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು ಉಂಟಾಗುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಬೀಜವನ್ನು ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಇದರಲ್ಲಿ ಉನ್ನತ ಮಟ್ಟದ ಪೊಟ್ಯಾಶಿಯಂ ಇರುವುದರಿಂದ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು.
·ಅತ್ಯಧಿಕ ಕಬ್ಬಿಣಾಂಶ ಹೊಂದಿರುವ ಇದನ್ನು ಹಿಮೋಗ್ಲೋಬಿನ್ ಕಡಿಮೆಯಿದ್ದವರು ಸೇವಿಸಿದರೆ ಸೂಕ್ತ.
- ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.