ಎಪ್ರಿಲ್‌ನಲ್ಲಿ ಬರಲಿದೆ ಬಿಎಸ್ 6
Team Udayavani, Feb 28, 2020, 7:20 AM IST
ಎಪ್ರಿಲ್ 1ರಿಂದ ಭಾರತ್ ಸ್ಟೇಜ್-6 (ಬಿಎಸ್-6) ಜಾರಿಯಾಗಲಿದೆ. ಬಿಎಸ್-6 ಎಂಬುದು ಭಾರತ್ ಸ್ಟೇಜ್ 6 ಎಂಬುದರ ಸಂಕ್ಷಿಪ್ತ ರೂಪ.
ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ ಸ್ಟೇಜ್ ಎನ್ನಲಾಗುತ್ತದೆ. ಭಾರತದಲ್ಲಿ “ಭಾರತ್ ಸ್ಟೇಜ್’ ಎಂದು ಪರಿವರ್ತಿಸಿಕೊಳ್ಳಲಾಗಿದೆಯಷ್ಟೇ. 2000ರಲ್ಲಿ ಭಾರತ್ ಸ್ಟೇಜ್ ಪರಿಕಲ್ಪನೆ ಆರಂಭವಾಯಿತು. ಆರಂಭಿಕ ಹಂತದಲ್ಲಿ ಬಿಎಸ್-1 ಜಾರಿಗೆ ತರಲಾ ಯಿತು. ಬಳಿಕ ಬಿಎಸ್-2, ಬಿಎಸ್3, ಬಿಎಸ್-4 ಜಾರಿಗೆ ಬಂದವು. ಈಗ ಬಿಎಸ್ -4 ಜಾರಿಯಲ್ಲಿದೆ.
ವಾಹನಗಳು ಉಗುಳುವ ಹೊಗೆಯಲ್ಲಿರುವ ಮಾಲಿನ್ಯ ಕಾರಕಗಳಿಗೆ ಇವುಗಳು
ಕಡಿವಾಣ ಹಾಕುತ್ತವೆ.
ಬಿಎಸ್ 4ರಿಂದ ಬಿಎಸ್ 6
ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣವನ್ನು ಶೀಘ್ರವಾಗಿ ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಬಿಎಸ್-5 ಜಾರಿಯನ್ನು ಕೈಬಿಟ್ಟು, ನೇರವಾಗಿ ಬಿಎಸ್-6ಕ್ಕೆ ಹೋಗಲಾಗಿದೆ. ವಿಶ್ವದ ಬಹುತೇಕ ಕಡೆ ಈಗಾಗಲೇ ಯೂರೋ-6 ಜಾರಿಯಲ್ಲಿದೆ. ಬಿಎಸ್ ಎಂಬುದು ಇಂಧನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ ಮತ್ತು ವಾಹನಗಳು ಹೊರಹಾಕುವ ಮಾಲಿನ್ಯಕಾರಕ ಗಳ ಮೇಲೂ ನಿಯಂತ್ರಣ ಹೇರುತ್ತದೆ.
ಬಿಎಸ್-4 ವಾಹನಗಳಲ್ಲಿ ಬಿಎಸ್-4 ಗುಣಮಟ್ಟದ ಇಂಧನವನ್ನು ಬಳಸಲಾಗುತ್ತದೆ. ಬಿಎಸ್-6 ವಾಹನಗಳಲ್ಲಿ ಬಿಎಸ್-6 ಇಂಧನವನ್ನೇ ಬಳಸಬೇಕಾಗುತ್ತದೆ. ಬಿಎಸ್-4 ಪೆಟ್ರೋಲ್ ಎಂಜಿನ್‌ಗಳ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆ ಏನೂ ಇರುವುದಿಲ್ಲ. ಹೀಗಾಗಿ ಬಿಎಸ್-6 ಪೆಟ್ರೋಲ್
ವಾಹನಗಳ ಬೆಲೆಯಲ್ಲಿ ಹೆಚ್ಚು ಏರಿಕೆಯಾಗುವುದಿಲ್ಲ. ಮಾಲಿನ್ಯಕಾರಕಗಳ ಪ್ರಮಾಣಗಳೂ ಕಡಿಮೆ ಇರುತ್ತವೆೆ.
ಡೀಸೆಲ್ ಎಂಜಿನ್
ಬಿಎಸ್-4 ಮತ್ತು ಬಿಎಸ್-6 ಡೀಸೆಲ್ ಎಂಜಿನ್‌ಗಳ ಮಧ್ಯೆ ವ್ಯತ್ಯಾಸವಿದೆ. ಡೀಸೆಲ್ ಎಂಜಿನ್‌ನ ಎಕ್ಸಾಸ್ಟ್ ಸಿಸ್ಟಂನಲ್ಲಿ (ಸೈಲೆನ್ಸರ್) ದುಬಾರಿ ಮೌಲ್ಯದ ಡೀಸೆಲ್ ಪರ್ಟಿಕ್ಯುಲೇಟ್ ಫಿಲ್ಟರ್-ಡಿಪಿಎಫ್ ಅನ್ನು ಅಳವಡಿಸಲಾಗುತ್ತದೆ. ಹೀಗಾಗಿ ಬಿಎಸ್-6 ಡೀಸೆಲ್ ಎಂಜಿನ್ ಇರುವ ವಾಹನಗಳ ಬೆಲೆ ಪೆಟ್ರೋಲ್ ವಾಹನಕ್ಕೆ ಹೋಲಿಸಿದರೆ ಹೆಚ್ಚಿರಲಿದೆ. ಅದೇ ರೀತಿ ಡೀಸೆಲ್ ಎಂಜಿನ್‌ಗಳು ಉಗುಳುವ ಮಾಲಿನ್ಯಕಾರಕ ಕಣಗಳೂ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿವೆ. ಬಿಎಸ್-4 ಡೀಸೆಲ್ ಎಂಜಿನ್‌ನಲ್ಲಿ ನೈಟ್ರೊಜನ್ ಆಕ್ಸೆ„ಡ್ ಪ್ರಮಾಣವು 250 ಮಿ.ಗ್ರಾಂ ಇದ್ದರೆ ಬಿಎಸ್-6 ಎಂಜಿನಲ್ಲಿ 80 ಮಿ.ಗ್ರಾಂ ಗೆ ಇಳಿಕೆಯಾಗಲಿದೆ.
ಪೆಟ್ರೋಲ್ ಎಂಜಿನ್
ಬಿಎಸ್-4 ಮಾದರಿ ಪೆಟ್ರೋಲ್ ಎಂಜಿನ್‌ಗಳ ಹೊಗೆಯಲ್ಲಿ ಇಂಗಾಲದ ಮೊನೊಕ್ಸೆ„ಡ್ 833 ಇದ್ದರೆ ಅದೇ ಬಿಎಸ್-6ನಲ್ಲಿ 667 ಇರಲಿದೆ. ಹೈಡ್ರೊಕಾರ್ಬನ್ ಪ್ರಮಾಣ 83 ಕಣಗಳಿಂದ 76 ಕಣಗಳಿಗೆ ಇಳಿಕೆಯಾಗಲಿದೆ. ನೈಟ್ರೋಜನ್ ಆಕ್ಸೆçಡ್ ಪ್ರಮಾಣವೂ ಇಳಿಕೆಯಾಗಲಿದೆ.
ಎಪ್ರಿಲ್ 1ರಿಂದ ಬಿಎಸ್ 6
ಎಪ್ರಿಲ್ 1ರಿಂದ ಬಿಡುಗಡೆಯಾಗುವ ಮತ್ತು ಮಾರಾಟವಾಗುವ ಎಲ್ಲ ವಾಹನಗಳು ಬಿಎಸ್-6 ಆಗಿರಲಿವೆ. ಅಲ್ಲದೇ ಈ ಮಾದರಿಯ ವಾಹನಗಳು ಮಾತ್ರ ನೋಂದಣಿಯಾಗುತ್ತವೆ. ಆದರೆ 2020ರ ಮಾರ್ಚ್ 31ರ ವರೆಗೆ ನೋಂದಣಿಯಾದ ಯಾವುದೇ ಬಿಎಸ್-4 ವಾಹನಗಳನ್ನು ಅವುಗಳ ನೋಂದಣಿ ಅವಧಿ ಮುಗಿಯುವ ವರೆಗೂ ಬಳಸಬಹುದಾಗಿದೆ. ಈಗ ಬಳಕೆಯಲ್ಲಿರುವ ವಾಹನಗಳನ್ನು ಅವುಗಳ ನೋಂದಣಿ ಅವಧಿ ಮುಗಿಯುವವರೆಗೂ ಬಳಸಬಹುದು.
ಬಿಎಸ್-6 ಇಂಧನ
ಬಿಎಸ್-6 ಇಂಧನದಲ್ಲಿ ಗಂಧಕದ ಪ್ರಮಾಣ ತೀರಾ ಕಡಿಮೆ ಇದೆ. ಬಿಎಸ್-4 ವಾಹನಗಳಲ್ಲಿ ಬಿಎಸ್-6 ಇಂಧನ ಬಳಸುವುದರಿಂದ ಎಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಎಪ್ರಿಲ್ 1ಕ್ಕೂ ಮುನ್ನ ದೇಶದ ಬಹುತೇಕ ಕಡೆಗಳಲ್ಲಿ ಬಿಎಸ್-6 ಇಂಧನ ಲಭ್ಯವಾಗಲಿದೆ. ಬಿಎಸ್-6 ವಾಹನಗಳಲ್ಲಿ ಬಿಎಸ್-4 ಇಂಧನ ಬಳಸುವುದರಿಂದ ಎಂಜಿನ್‌ಗೆ ತೊಂದರೆ ಎಂದು ಹೇಳಲಾಗುತ್ತದೆ.
ದುಬಾರಿಯೂ ಹೌದು
ಬಿಎಸ್-6 ವಾಹನಗಳು ಖಂಡಿತವಾಗಿಯೂ ಬಿಎಸ್-4 ವಾಹನಗಳಿಗಿಂತ ದುಬಾರಿ ಆಗಿರಲಿವೆ. ಪೆಟ್ರೋಲ್ ಎಂಜಿನ್ ವಾಹನಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಡೀಸೆಲ್ ವಾಹನಗಳ ಬೆಲೆ ತುಸು ಹೆಚ್ಚು ಏರಿಕೆಯಾಗಲಿದೆ. ಈಗಾಗಲೇ ಕೆಲವು ಕಾರು ತಯಾರಕ ಸಂಸ್ಥೆಗಳು ಸಣ್ಣ ಗಾತ್ರದ ಡೀಸೆಲ್ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿವೆೆ. ಬಿಎಸ್-6 ಟ್ರ್ಯಾಕ್ಟರ್‌ಗಳು, ಜೆಸಿಬಿ, ಬ್ಯಾಕ್ ಲೋಡರ್, ಹಿಟಾಚಿ ಮೊದಲಾದ ವಾಹನಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ.
– ಕಾರ್ತಿಕ್ ಅಮೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.