ಸಿಡಿಯಂತೆ ಸಿಡಿದು ಬಂದದ್ದು ಸಿ. ಡಿ.


Team Udayavani, Mar 21, 2020, 4:53 AM IST

ಸಿಡಿಯಂತೆ ಸಿಡಿದು ಬಂದದ್ದು  ಸಿ. ಡಿ.

ಈ ಸಿ.ಡಿ ಯ ಕಥೆ ಕೇಳಿದರೆ ವಿಚಿತ್ರವೆನಿಸಬಹುದು. ಇದೂ ಸಹ ಒಂದು ಜೋರಾದ ಮಳೆ ಸುರಿಯುವ ಸಂದರ್ಭದಲ್ಲಿಯೇ ಬಂದದ್ದು. ಈಗ ಬದಿಗೆ ಸರಿದು ನಿಂತಿರುವುದೂ ಅಂತದ್ದೇ ಒಂದು ಮಳೆಗಾಲದಲ್ಲಿ. ದತ್ತಾಂಶಗಳನ್ನು ಕೊಂಡೊಯ್ಯುವುದು ಹೇಗೆಂದು ಯೋಚಿಸುವಾಗ ಬಂದ ಈ ತಾಂತ್ರಿಕ ಆವಿಷ್ಕಾರ ಒಂದಷ್ಟು ಕಾಲ ಮೆರೆದದ್ದು ನಿಜ.

ಈ ಕಥೆ ಹೇಗೆಂದರೆ ಫ್ಲಾಪಿಯನ್ನು ಸಿಡಿ ನುಂಗಿತ್ತಾ? ಸಿ.ಡಿ. ಯನ್ನು ಯುಎಸ್‌ಬಿ ನುಂಗಿತ್ತಾ ಎಂದೇ ಆರಂಭಿಸಬೇಕು. ಆಗಲೇ ಹೆಚ್ಚು ಅರ್ಥಪೂರ್ಣ.

ಇದು ಆದದ್ದು ಹೀಗೆಯೇ. ಕಂಪ್ಯೂಟರ್‌ ಪರಿಚಯವಾದಾಗ ಅಚ್ಚರಿಯಂತೆ ಕಂಡಿದ್ದ ಜನರು, ಫ್ಲಾಫಿ ಸಂಶೋಧನೆಗೊಂಡಾಗ ಬಹಳ ಒಳ್ಳೆಯದಾಯಿತು ಎಂದಿದ್ದರು. ಕಾರಣವೇನೆಂದರೆ, ದತ್ತಾಂಶಗಳನ್ನು (ಡಾಟಾ) ಕೊಂಡೊಯ್ಯುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಆಗ ಇಂಟರ್‌ನೆಟ್‌ ಪರಿಚಯಗೊಂಡಿದ್ದರೂ, ವೇಗವಿರಲಿಲ್ಲ. ಭಾರತದಲ್ಲೂ ಅಷ್ಟೇ. ಅಂಥ ಸಂದರ್ಭದಲ್ಲಿ ಇಮೇಲ್‌ಇತ್ಯಾದಿ ಅಂಶಗಳೆಲ್ಲವೂ ಅಪರಿಚಿತ ಎನ್ನುವುದು ಒಂದು ಕಡೆಯಾದರೆ, ಮತ್ತೂಂದೆ‌ಡೆ ಅವೆಲ್ಲವೂ ಹಲವರ ಪಾಲಿಗೆ ಗಗನ ಕುಸುಮ.

ಇಂಥ ಸರಿ ಹೊತ್ತಿನಲ್ಲಿ ಫ್ಲಾಪಿ ಪರಿಚಯವಾದಾಗ ಎಲ್ಲರಿಗೂ ಅಬ್ಟಾ, ಈಗಾಗಲೇ ಒಂದಿಷ್ಟು ಅಂಶಗಳನ್ನು ಯಾವ ಕಂಪ್ಯೂಟರ್‌ (ಫ್ಲಾಪಿ ಡಿಸ್ಕ್ ಇರುವ) ನಲ್ಲಾದರೂ ಹಾಕಿ ಮಾಹಿತಿ ಬಳಸಬಹುದು, ರವಾನಿಸಬಹುದು- ಹೀಗೆಲ್ಲಾ ಲೆಕ್ಕಾಚಾರ ನಡೆದಿತ್ತು. ಒಂದಿಷ್ಟು ಕಾಲವೂ ಇದರ ದರಬಾರು ನಡೆದಿತ್ತು.

ಹೀಗೆ ಎಲ್ಲವೂ ಸರಿಯಾಗಿ ಸಾಗುತ್ತಿದ್ದಾಗಲೇ ಒಂದು ದಿನ ಜೋರಾದ ಗಾಳಿ. ಎಲ್ಲರೂ ಏನಪ್ಪಾ ಇದು ಗಾಳಿ ಎಂದು ನೋಡುವಾಗ ಸ್ವಲ್ಪ ಮಳೆಯೂ ಸಹ. ಇಷ್ಟೆಲ್ಲಾ ಆಗಿ ವಾತಾವರಣವೇ ಬದಲಾದಂತೆ ಕಂಡುಬಂದಾಗ ಎದುರಿಗೆ ಬಂದದ್ದು ಸಿ.ಡಿ.ಗಳು. ಕಾಂಪ್ಯಾಕ್ಟ್ ಡಿಸ್ಕ್ ರೀಡ್‌ ಓನ್ಲಿ ಮೆಮೊರಿ ಎನ್ನುವ ಇದು ಬಂದಾಗಲೇ ಹರ್ಷದ ವಾತಾವರಣ. ಅಷ್ಟಕ್ಕೂ ಅದರಲ್ಲಿದ್ದದ್ದು ಓದಬಹುದಿತ್ತೇ ಹೊರತು ನಮಗೆ ಬೇಕಾದದ್ದನ್ನು ತುಂಬಿಸಿ ತೆಗೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಆದರೂ ಜನರಿಗೆ ಏನೋ ಹೊಸತು ಪಡೆದ ಸಂಭ್ರಮ.

1990ರ ಸರಿ ಕಾಲ. ಹೊಸತಾಗಿ ನಳನಳಿಸುತ್ತಿದ್ದ ಸಿ.ಡಿ. ಸಹ ಹೆಚ್ಚು ಬಳಕೆಯಾಗಿದ್ದು ದತ್ತಾಂಶ ರವಾನೆಗಿಂತ ಕಂಪ್ಯೂಟರ್‌ ಸಾಫ್ಟ್ವೇರ್‌ಗಳ ಹಂಚಿಕೆಗಾಗಿ. ಕ್ರಮೇಣ ಅದು ಬೇರೆ ಉದ್ದೇಶಗಳಿಗೂ ಬಳಕೆಯಾಗತೊಡಗಿತು. ಸಿ.ಡಿ. ಪ್ಲೇಯರ್‌ ಸಂಶೋಧನೆಗೊಂಡ ಬಳಿಕ ಸಂಗೀತ ಸಂಗತಿಗಳಿಗೆ ಹೆಚ್ಚು ಬಳಕೆಯಾದದ್ದು ಸುಳ್ಳಲ್ಲ.

ಮತ್ತೆ ಇಲ್ಲೂ ಸಹ ಅದೇ. 1982 ರಲ್ಲಿ ಇದು ಸಂಶೋಧನೆಗೊಂಡರೂ ಭಾರತದಂಥ ದೇಶದಲ್ಲಿ ಬಳಕೆಗೆ ಲಭ್ಯವಾಗತೊಡಗಿದ್ದು 1990 ರ ದಶಕದಲ್ಲಿಯೇ. ಆಗ ಹೆಚ್ಚೆಂದರೆ ಆ ಸಿಡಿ ಯಲ್ಲಿ ಸುಮಾರು 650 ಎಂಬಿ ಯಷ್ಟು ದತ್ತಾಂಶಗಳನ್ನು ತುಂಬಲು ಅವಕಾಶವಿತ್ತು.

ಅಷ್ಟೇ ಲಾಭವಾಯಿತೇ?
ಇಂಥದೊಂದು ಪ್ರಶ್ನೆ ಕೇಳಲೇಬೇಡಿ. ಇದಕ್ಕೂ ಉತ್ತರವಿದೆ. ಸಾಮಾನ್ಯವಾಗಿ ಈ ತಂತ್ರಜ್ಞಾನ ದ ಆವಿಷ್ಕಾರಗಳು ಒಂದು ರೂಪದಲ್ಲಿರುವುದೇ ಇಲ್ಲ. ಅವು ಬಹುರೂಪಿಗಳು ಮತ್ತು ಬಹು ಬಳಕೆಗಳು. ಸೃಷ್ಟಿಯ ಮೂಲದಲ್ಲಿ ಒಂದು ಉದ್ದೇಶವಿದ್ದರೂ, ಸೃಷ್ಟಿಯಾದ ಕೆಲವೇ ಸಮಯದಲ್ಲಿ ಅದಕ್ಕೆ ಬಹು ಬಳಕೆಯ ಸಾಧ್ಯತೆಯನ್ನು ಸೇರಿಸಲಾಗುತ್ತದೆ. ಈ ಮಾತಿಗೆ ನಾವು ಹಲವಾರು ಉದಾಹರಣೆಗಳನ್ನು ಹೆಸರಿಸಬಹುದು. ನಮ್ಮ ಕೈಯಲ್ಲೇ ಸದಾ ಕುಣಿಯುವ ಪುಟ್ಟ ಮೊಬೈಲ್‌ ಫೋನ್‌ ಸ್ಮಾರ್ಟ್‌ ಫೋನ್‌ ಆದ ಮೇಲೆ ಹೇಗೆಲ್ಲ ರೂಪ ಬದಲಾಗಿದೆ? ಯಾವುದನ್ನೂ ಬಿಡದೇ ಆಪೋಶನ ತೆಗೆದುಕೊಂಡು ಸಾಗುತ್ತಿಲ್ಲವೇ? ಇಡೀ ಜಗತ್ತಿನಾದ್ಯಂತ ತನ್ನ ರಾಜ್ಯ ಸ್ಥಾಪಿಸಬೇಕೆಂಬ ಅಭೀಪ್ಸೆಯ ರಾಜನೊಬ್ಬ ಎಲ್ಲರನ್ನೂ ಜಯಿಸಿ ಮೆರೆಯುತ್ತಾ ರಾಜ ಮೆರವಣಿಗೆಯಲ್ಲಿ ಸಾಗುತ್ತಿರುವಂತೆ ಅನಿಸುವುದಿಲ್ಲವೇ? ಈ ಮಾತು ಸಿ.ಡಿ. ಗೂ ಅನ್ವಯವಾಗುತ್ತದೆ.

ಸಿ.ಡಿ.ಗಳು ಮೊದಲು ಪರಿಚಯವಾದಾಗ ಇದು ಮತ್ತೂಂದರ ಪರಿಪೂರ್ಣ ಪರ್ಯಾಯ ಎಂದು ಯಾರಿಗೂ ಅನಿಸಿರಲಿಲ್ಲ. ಯಾಕೆಂದರೆ ಆಗ ಹತ್ತಾರು ಪರ್ಯಾಯಗಳಿದ್ದವು. ಹಾಗೆಯೇ ಒಂದನ್ನು ನುಂಗಿ ಹೀಗೆ ಬೆಳೆಯುತ್ತದೆಂದೂ ನಿರೀಕ್ಷಿಸಿರಲಿಲ್ಲ. ಆರಂಭದಲ್ಲಿ ಅಂಥದೊಂದು ಸಾಧ್ಯತೆಯನ್ನೂ ಸಿ.ಡಿ ತೋರಿರಲಿಲ್ಲ.

ಆದರೆ, ಕ್ರಮೇಣ ಸಿ.ಡಿ. ಎಂಬುದು ಟೇಪ್‌ ರೆಕಾರ್ಡರ್‌ನಲ್ಲಿ ಬಳಕೆಯಾಗುತ್ತಿದ್ದ ಕ್ಯಾಸೆಟ್‌ಗಳನ್ನು ಬದಿಗೆ ಸರಿಸಿ, ತನ್ನದೇ ಹೊಸ ರೂಪದ ಮೂಲಕ (ಸಿಡಿ ಪ್ಲೇಯರ್‌ ಜತೆ) ಕಂಗೊಳಿಸತೊಡಗಿತು. ಸಂಗೀತದಿಂದ ಹಿಡಿದು ಹತ್ತಾರು ಸಂಗತಿಗಳು ಇದರಲ್ಲಿ ಮತ್ತೆ ಅವತಾರ ತಳೆಯತೊಡಗಿದವು. ಹಾಗೆ ನೋಡುವುದಾದರೆ, ಟೇಪ್‌ ರೆಕಾರ್ಡರನ್ನು ಬಹುತೇಕ ಮೂಲೆಗೆ ಸರಿಸಿದ್ದೇ ಈ ಸಿ.ಡಿ.

ಅದರದ್ದೇ ವಿಶೇಷ
ಈ ಅಂಶವನ್ನೂ ಉಲ್ಲೇಖೀಸಬೇಕು. ಆಗ ಸಿ.ಡಿ. ಪರಿಚಯವಾದಾಗ ಇರುವ ವ್ಯವಸ್ಥೆಯಲ್ಲಿ ಬಳಕೆ ಸಾಧ್ಯವಿರಲಿಲ್ಲ. ಆದ ಕಾರಣ ಸಿ.ಡಿ. ರೀಡರ್‌ ಅನ್ನು ಸಂಶೋಧಿಸಬೇಕಾಯಿತು. ಅದಿದ್ದರೆ ಮಾತ್ರ ಅದರ ಬಳಕೆ ಸಾಧ್ಯವಾಯಿತು. ಕಂಪ್ಯೂಟರ್‌ ಇದ್ದರೂ ಅದರಲ್ಲಿ ಸಿ.ಡಿ. ರೀಡರ್‌ ಅಗತ್ಯವಾಯಿತು.

2000 ದ ಹೊತ್ತಿಗೆ ಇಡೀ ಜಗತ್ತಿನಲ್ಲಿ ಸುಮಾರು 30 ಶತಕೋಟಿ ಸಿ.ಡಿ ಗಳು ಬಳಕೆಯಾದವು. ಇದೇ ಅಂಶ 2007 ರ ಹೊತ್ತಿಗೆ 200 ಶತಕೋಟಿಯನ್ನು ಮುಟ್ಟಿತೆಂದರೆ ಅದರ ಪ್ರಾಮುಖ್ಯತೆಯನ್ನು ಲೆಕ್ಕ ಹಾಕಿ.

ಈ ಸಂಶೋಧನೆಯ ನಂತರ ಅದರ ಸುಧಾರಿತ ಅವೃತ್ತಿಗಳು ಸಾಕಷ್ಟು ಬಂದವು. ಸುಧಾರಿತ ಆವೃತ್ತಿಯೆನ್ನುವುದು ಎರಡು ಅರ್ಥದಲ್ಲಿ ಎಂಬುದು ಗಮನಿಸಬೇಕು. ತಾಂತ್ರಿಕತೆಯ ಸುಧಾರಣೆ ಹಾಗೂ ರೂಪದಲ್ಲೂ ಸುಧಾರಣೆ ಎರಡೂ ಅದರಲ್ಲಿ ಸಾಧ್ಯವಾಗಿತ್ತು.

ಸುಮಾರು ಮೂರು ದಶಕಗಳನ್ನು ಆಳಿದ ಸಿ.ಡಿ. ಕಂಡರೆ ಅಚ್ಚರಿ ಎನಿಸಬಹುದು. ಮತ್ತೂಂದು ದಿನ ಹೀಗೆಯೇ ಮಳೆ ಸುರಿಯುತ್ತಿರುವಾಗ ಮಸುಕಿನ ಬೆಳಕಿನಲ್ಲಿ ಯಾರು ಬಂದದ್ದು ಎಂಬುದೇ ತೋಚಲಿಲ್ಲ. ಆದರೆ ಅದು ಯುಎಸ್‌ ಬಿ ಸಾಧನ. ಅದರ ಪ್ರಖರ ಬೆಳಕಿನ ಕಥೆಯೇ ಬೇರೆ.

ರೂಪರಾಶಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.