ಕಾರ್‌ಕ್ರೇಝ್, ಹೊಸ ಟ್ರೆಂಡ್‌ ಸೃಷ್ಟಿಸಿದೆ ಬಾಡಿಗೆ ಕಾರು


Team Udayavani, Jan 18, 2019, 6:57 AM IST

18j-anuary-9.jpg

ಸ್ವಂತದ್ದೊಂದು ಕಾರು ಬೇಕು, ಅದರಲ್ಲಿ ಕುಳಿತು ಒಮ್ಮೆಯಾದರೂ ದೂರದೂರಿಗೆ ಹೋಗಬೇಕು ಎಂಬ ಕನಸು ಹಲವರಲ್ಲಿರುತ್ತದೆ. ಅದರೆ ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುವವರು ಇನ್ನು ಚಿಂತಿಸಬೇಕಿಲ್ಲ. ಯಾಕೆಂದರೆ ಈಗಾಗಲೇ ಹಲವು ನಗರಗಳಲ್ಲಿ ದಿನ, ತಿಂಗಳುಗಟ್ಟಲೆ ಬಾಡಿಗೆ ಕಾರು ಪಡೆದು ಅದರ ಮಾಲಕರು ನೀವಾಗಬಹುದು. ಇದು ಕಾರುಕೊಳ್ಳುವ ಕ್ರೇಝ್ ಕಡಿಮೆ ಮಾಡಿಸಿ ಕಾರು ಬಾಡಿಗೆ ಪಡೆಯುವ ತುಡಿತವನ್ನು ಹೆಚ್ಚಿಸುತ್ತಿದೆ.

ಡ್ರೈವಿಂಗ್‌ ಗೊತ್ತಿದ್ದರೂ, ಹೊಸ ಕಾರು ತೆಗೆದುಕೊಳ್ಳಲು ಹಣಕಾಸಿನ ಸಮಸ್ಯೆ. ಆದರೆ ಈಗ ಅದಕ್ಕಾಗಿ ಚಿಂತಿಸಬೇಕಿಲ್ಲ. ನಿಮಗೆ ಕಾರು ಬಿಡಲು ಗೊತ್ತಿದ್ದರೆ ಸಾಕು, ನೀವೇ ಚಾಲನೆ ಮಾಡಿಕೊಂಡು ಎಲ್ಲಿ ಬೇಕಾದರಲ್ಲಿಗೆ ಹೋಗಿ ಬರುವುದಕ್ಕೆ ಬಾಡಿಗೆ ಕಾರು ನೀಡುವ ಅನೇಕ ಕಂಪೆನಿಗಳು ಮಾರುಕಟ್ಟೆಯಲ್ಲಿ ಈಗ ಹವಾ ಸೃಷ್ಟಿಸಿದೆ.

ಈ ಟ್ರೆಂಡ್‌ ಮೆಟ್ರೋ ಸಿಟಿಗಳಲ್ಲಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮಂಗಳೂರಿಗೂ ವ್ಯಾಪಿಸಲಿದೆ. ಕಾರು ತೆಗೆದುಕೊಳ್ಳುವ ಕನಸು ಕಾಣುವವರಿಗೆ ಇದೊಂದು ವರದಾನ. ಅಂದಹಾಗೆ ಈ ಹಿಂದೆ ಗಂಟೆಗಳ ಲೆಕ್ಕದಲ್ಲಿ ಕಾರು ಬಾಡಿಗೆಗೆ ಸಿಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ದಿನಗಳಿಂದ ತಿಂಗಳುಗಟ್ಟಲೆ ಕಾರುಗಳನ್ನು ಬಾಡಿಗೆಗೆ ಕೊಡುವ ಕಂಪೆನಿಗಳು ಕೂಡ ತಲೆ ಎತ್ತಿವೆ.

ಕಾರುಗಳ ನಿರ್ವಹಣೆ ಮತ್ತು ಭದ್ರತೆಯ ಉದ್ದೇಶದಿಂದ ನಗರದಲ್ಲಿರುವ ಹೆಚ್ಚಿನ ಕಾರ್‌ ಡೀಲರ್‌ಗಳು ಸೆಲ್ಫ್ ಕಾರ್‌ ಡ್ರೈವಿಂಗ್‌ಗೆ ಬಾಡಿಗೆಗೆ ನೀಡುವುದಿಲ್ಲ. ಆದರೆ ಆ್ಯಪ್‌ ಆಧಾರಿತ ಕಾರು ಬಾಡಿಗೆ ಸಂಸ್ಥೆಗಳು ಮಾತ್ರ ನಿಮ್ಮ ಕೈಗೆ ಕಾರುಗಳನ್ನು ನೀಡುತ್ತಿವೆ. ಕಾರು ಬಾಡಿಗೆಗೆ ನೀಡುವ ಸಂಸ್ಥೆಗಳಲ್ಲಿ ಮುಖ್ಯವಾದುದು ಅಂದರೆ ಝೂಮ್‌ ಸಂಸ್ಥೆ. ಆ್ಯಪ್‌ ಆಧಾರಿತ ಬುಕ್ಕಿಂಗ್‌ ಇದಾಗಿದ್ದು, ಒಂದು ಗಂಟೆ, ವಾರ, ತಿಂಗಳುಗಳ ಲೆಕ್ಕದಲ್ಲಿ ಬಾಡಿಗೆಗೆ ನೀಡುತ್ತಾರೆ. ಆನ್‌ಲೈನ್‌ ಮುಖೇನ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಗ್ರಾಹಕರು ದಿನಗಳ ಬಗ್ಗೆ ನಮೂದಿಸಬೇಕಿದೆ.

ಸೆಲ್ಫ್ ಬಾಡಿಗೆ ಕ್ರಮ
ಕೆಲವೊಂದು ಸೆಲ್ಫ್ ಬಾಡಿಗೆ ಕಾರು ಕಂಪೆನಿಗಳು ಬಾಡಿಗೆಗೆ ಕಾರು ಕೊಡುವ ಮುನ್ನ ಗ್ರಾಹಕನಿಂದ ಸುಮಾರು 5,000 ರೂ. ನಷ್ಟು ಅಡ್ವಾನ್ಸ್‌ ಪಡೆದುಕೊಳ್ಳುತ್ತಾರೆ. ಆ ಹಣವನ್ನು ಕಾರು ಹಿಂಪಡೆಯು ವಾಗ ವಾಪಸ್‌ ನೀಡಲಾಗುತ್ತದೆ. ಸಾಮಾನ್ಯವಾಗಿ ಫಿಗೋ, ಅಮೇಝ್, ಸಿಟಿ, ಇಕೋ ನ್ಪೋರ್ಟ್‌, ಸ್ಕಾರ್ಪಿಯೋ, ಸಫಾರಿ, ಇ-20, ವ್ಯಾಗನರ್‌, ಇ-20 ಪ್ಲಸ್‌, ಮಾರುತಿ ಸ್ವಿಪ್ಟ್, ಮಹೇಂದ್ರ ಕೆಯುವಿ ಸಹಿತ ಮತ್ತಿತರ ಕಾರುಗಳು ಬಾಡಿಗೆಗೆ ಇವೆ.

ದರ ಎಷ್ಟು?
ನಾವು ಯಾವ ಕಾರುಗಳನ್ನು ಬಾಡಿಗೆಗೆ ಆಯ್ಕೆ ಮಾಡುತ್ತೇವೆ, ಎಷ್ಟು ತಿಂಗಳುಗಳವರೆಗೆ ಕಾರು ಬೇಕು ಎನ್ನುವುದರ ಮೇಲೆ ಕಾರಿನ ಬಾಡಿಗೆ ದರ ನಿಗದಿಯಾಗುತ್ತದೆ. ಬಾಡಿಗೆ ಕಾರು ಗಳಲ್ಲಿ ಡೀಸೆಲ್‌ ಜತೆ ಮತ್ತು ಡೀಸೆಲ್‌ ಇಲ್ಲದೆಯೇ ಎರಡು ಪ್ರಕಾರದಲ್ಲಿ ಆಯ್ಕೆ ಇದೆ. ಡೀಸೆಲ್‌ ಇದ್ದು ಕಾರು ಬಾಡಿಗೆಗೆ ತೆಗೆದುಕೊಳ್ಳುವುದಾದರೆ 3 ಗಂಟೆಗೆ 15 ಕಿಲೋ ಮೀಟರ್‌ಗೆ 180 ರೂ. ದರದಿಂದ ಪ್ರಾರಂಭವಾಗುತ್ತದೆ. ತಿಂಗಳುಗಳ ಕಾಲ ಬಾಡಿಗೆ ಕಾರ್‌ ಬುಕ್ಕಿಂಗ್‌ ಮಾಡುವುದಾದರೆ ಡೀಸೆಲ್‌ ಇಲ್ಲದೇ ಕಾರು ಪಡೆಯುವ ಆಯ್ಕೆ ಉತ್ತಮ. ಈ ವೇಳೆ ಹೆಚ್ಚಿನ ಆಫರ್‌ಗಳನ್ನು ಆಯಾ ಕಂಪೆನಿಗಳು ನೀಡುತ್ತವೆ.

ಉಪಯೋಗ ಬಹಳ
ಬಾಡಿಗೆ ಕಾರುಗಳನ್ನು ಪಡೆಯುವು ದರಿಂದ ಉಪಯೋಗ ಬಹಳಷ್ಟಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಹೊಸ ಕಾರು ಖರೀದಿ ಮಾಡಲು ಕಷ್ಟವಾಗುವವರಿಗೆ ಇದು ವರದಾನವಾಗಿದೆ. ಹೊಸ ಕಾರು ಕೊಂಡುಕೊಳ್ಳುವುದು ಸುಲಭ. ಆದರೆ ಮುಂದಿನ ನಿರ್ವಹಣೆ ಕಷ್ಟ. ಬಾಡಿಗೆ ಕಾರು ಪಡೆದುಕೊಂಡರೆ ಇದು ತಪ್ಪಲಿದೆ.

ಆ್ಯಪ್‌ ಮೂಲಕವೇ ಬುಕ್ಕಿಂಗ್‌
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಿದ್ದು, ಬೆರಳ ತುದಿಯಲ್ಲೇ ಕ್ಲಿಕ್‌ ಮಾಡುವ ಮೂಲಕ ಕಾರು ಬುಕ್‌ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ನ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಬಾಡಿಗೆ ಕಾರುಗಳ ಹತ್ತಾರು ಆ್ಯಪ್‌ ಇದ್ದು, ಇದರ ಮೂಲಕ ಮನೆಯಲ್ಲೇ ಕೂತು ಕಾರು ಬುಕ್‌ ಮಾಡಬಹುದು. ಅದರಲ್ಲಿಯೂ ಜೂಮ್‌, ಎಕೋ ಕಾರ್‌ ರೆಂಟ್, ಮೈಲ್ಸ್‌, ಎವಿಸ್‌, ಡ್ರೈವ್‌ ಈಸೀ, ಲೆಟ್ ಮಿ ಡ್ರೈವ್‌ ಮುಂತಾದ ಆ್ಯಪ್‌ಗ್ಳು ಪ್ರಸಿದ್ಧಿ ಪಡೆದಿವೆ.

ಹೊಸ ಕಾರು ಖರೀದಿ ಮಾಡುವುದಕ್ಕಿಂತ ಆನ್‌ಲೈನ್‌ನಲ್ಲಿ ಕಾರು ಬಾಡಿಗೆಗೆ ಪಡೆಯುವುದೇ ಉತ್ತಮ. ಇದರಿಂದ ಲಕ್ಷಾಂತರ ರೂಪಾಯಿ ಹಣ ಹೊಂದಿಸುವುದು ಉಳಿಯುತ್ತದೆ. ಅಲ್ಲದೆ, ಇನ್ಶೂರೆನ್ಸ್‌ ಸಹಿತ ಕಾರಿನ ನಿರ್ವಹಣೆಯ ವೆಚ್ಚ ಕಡಿಮೆಯಾಗಲಿದೆ.
– ಸತ್ಯನಾರಾಯಣ, ಉದ್ಯೋಗಿ 

ಮಂಗಳೂರಿನಲ್ಲಿ ಇತ್ತೀಚೆಗೆ ಆನ್‌ಲೈನ್‌ ಕಾರುಗಳಿಗೆ ಬೇಡಿಕೆ ಬರುತ್ತಿದೆ. ಅದರಲ್ಲಿಯೂ ಇಲ್ಲಿಗೆ ಬರುವ ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಬಾಡಿಗೆಗೆ ವಾಹನ ನೀಡುವಾಗ ದೃಢೀಕೃತ ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ಇರಿಸಿಕೊಳ್ಳುತ್ತೇವೆ.
 – ಆದೇಶ್‌,
ಕಾರು ಡೀಲರ್‌ ಹಂಪನಕಟ್ಟೆ

ಮಂಗಳೂರಿನಲ್ಲೂ ಬೇಡಿಕೆ
ಮಂಗಳೂರಿನಲ್ಲಿ ಆನ್‌ಲೈನ್‌ ಕಾರುಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಬರುತ್ತಿದೆ. ಅದರಲ್ಲಿಯೂ ಬೇರೆ ರಾಜ್ಯದಿಂದ ಮಂಗಳೂರಿಗೆ ಬಂದವರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳಿಂದ ಬೇಡಿಕೆ ಬರುತ್ತಿದೆ. ಮಂಗಳೂರಿನಲ್ಲಿ ಹೆಚ್ಚಾಗಿ ಗಂಟೆಯ ಲೆಕ್ಕದಲ್ಲಿ ಕಾರು ಬಾಡಿಗೆಗೆ ಸಿಗುತ್ತಿದೆ.

ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.