ಕಾರ್‌ ಪ್ರೇಮ್‌ ರಿಪೇರಿ; ಏನು ಎತ್ತ?

Team Udayavani, Dec 13, 2019, 4:33 AM IST

sa-39

ಕಾರು ಅಪಘಾತಕ್ಕೊಳಗಾದಾಗ ಮುಂಭಾಗ, ಹಿಂಭಾಗ, ಡೋರ್‌ಗಳಿಗೆ ಹಾನಿಯಾಗಬಹುದು. ಕಾರಿನ ಬಾಡಿಗಳಲ್ಲಿ ಗುಳಿ(ಡೆಂಟ್‌) ಬಿದ್ದಿದೆ ಎಂದರೆ ಅದು ಆತಂಕಕಾರಿ ವಿಚಾರವೇ ಅಲ್ಲ. ಆದರೆ ಕಾರಿನ ಪ್ರೇಮ್‌ಗೆ ಹಾನಿಯಾಗಿದೆ ಎಂದರೆ ಅದು ನಿಜಕ್ಕೂ ಆತಂಕ ಪಡಬೇಕಾದ ವಿಚಾರ. ಪ್ರೇಮ್‌ಗೆ ಹಾನಿಯಾದಾಗ ಏನು ಮಾಡಬೇಕು, ಅದನ್ನು ರಿಪೇರಿ ಮಾಡುವ ವಿಧಾನಗಳನ್ನು ನೋಡೋಣ.

ಪ್ರೇಮ್‌ ಹೇಗಿರುತ್ತದೆ?
ಕಾರಿನ ಪ್ರೇಮ್‌ ಎಂದರೆ ಮೂಲ ರೂಪ. ಇದನ್ನು ಯುನಿಬಾಡಿ ಪ್ರೇಮ್‌ಗಳು ಎಂದು ಕರೆಯುತ್ತಾರೆ. ಟ್ರಕ್‌ ಸೇರಿದಂತೆ ದೊಡ್ಡ ವಾಹನಗಳಲ್ಲಿ ಲ್ಯಾಡರ್‌ ಪ್ರೇಮ್‌ ಎಂದಿರುತ್ತದೆ. ಕಾರುಗಳಲ್ಲಿ 11 ರೀತಿಯ ವಿವಿಧ ಭಾಗಗಳು ಸೇರಿ ಒಂದು ಯುನಿಬಾಡಿ ಪ್ರೇಮ್‌ ಆಗಿರುತ್ತದೆ. ಈ ಭಾಗಗಳನ್ನು ವೆಲ್ಡಿಂಗ್‌ ಮೂಲಕ ಜೋಡಿಸಲಾಗಿರುತ್ತದೆ. ಆಧುನಿಕ ಕಾರುಗಳಲ್ಲಿ ಪ್ರೇಮ್‌ಗಳಿಗೆ ಹಾನಿಯಾದಾಗ, ಆ ಭಾಗದ ಫ್ರೆàಮ್‌ ಅನ್ನು ಕತ್ತರಿಸಿ ತೆಗೆದು ಹೊಸ ಭಾಗವನ್ನು ಕೂಡಿಸಲಾಗುತ್ತದೆ. ಆದರೆ ಇವುಗಳ ರಿಪೇರಿ ಸಾಧ್ಯವಿದೆ. ಕುಶಲ ಕೆಲಸಗಾರರು, ವಿಶೇಷವಾದ ಹಲವು ಸಲಕರಣೆಗಳನ್ನು ಬಳಸಿ ರಿಪೇರಿಯನ್ನು ಮಾಡಬಲ್ಲರು.

ಪ್ರೇಮ್‌ ರಿಪೇರಿ ಏಕೆ?
ಪ್ರೇಮ್‌ ಸರಿಯಾಗಿಲ್ಲದಿದ್ದರೆ ಕಾರಿನ ಸುಗಮ ಚಾಲನೆಗೆ ಕಷ್ಟ. ಅಷ್ಟೇ ಅಲ್ಲದೇ ಪ್ರೇಮ್‌ಗೆ ಹಾನಿಯಾಗಿದ್ದಾಗ ಇಡೀ ಕಾರಿನ ಸ್ವರೂಪದಲ್ಲಿ ಬದಲಾಗಿರುತ್ತದೆ. ಸುರಕ್ಷತೆ ದೃಷ್ಟಿಯಿಂದಲೂ ಕಾರಿನ ಪ್ರೇಮ್‌ ಹಾನಿಗೊಳಗಾದಾಗ ರಿಪೇರಿ ಮಾಡಿಸುವುದು ಉತ್ತಮ. ಕಾರಿನ ಪ್ರೇಮ್‌ ಹಾನಿ ಗೊಂಡಿದ್ದರೆ ವಾಹನದ ಮೌಲ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಇಂತಹ ವಾಹನಗಳ ಮಾರಾಟ ಸುಲಭವಿಲ್ಲ.

ಪ್ರೇಮ್‌ ರಿಪೇರಿ ಖರ್ಚೆಷ್ಟು?
ವಿವಿಧ ಕಾರುಗಳಿಗೆ ಅನುಗುಣವಾಗಿ ಈ ದರ ನಿಗದಿಯಾಗುತ್ತದೆ. ಕೆಲಸಗಾರರ ಕುಶಲತೆ, ಪರಿಣಾಮಕಾರಿತ್ವ ಹೆಚ್ಚಿದಷ್ಟೂ ದರವೂ ಹೆಚ್ಚು. ಸಾಮಾನ್ಯವಾಗಿ 25-50 ಸಾವಿರ ರೂ. ಖರ್ಚಾಗಬಹುದು. ಐಷಾರಾಮಿ ಕಾರುಗಳಾದರೆ ರಿಪೇರಿ ದರ ಲಕ್ಷ ರೂ. ದಾಟಬಹುದು.

ಪ್ರೇಮ್‌ ರಿಪೇರಿ ವಿಧಾನಗಳು
ಫ್ಲೋರ್‌ ಆ್ಯಂಕರ್‌ ಪೋಸ್ಟ್‌: ಕಾರಿನ ತಳಭಾಗಕ್ಕೆ ಹಾನಿಗೀಡಾದಾಗ ಫ್ಲೋರ್‌ ಆ್ಯಂಕರ್‌ ಪೋಸ್ಟ್‌ ಚೈನ್‌ ಮೂಲಕ ತಳಭಾಗವನ್ನು ಎಳೆದು ಸರಿಮಾಡಲಾಗುತ್ತದೆ. ಮುದ್ದೆಯಾದ ಭಾಗವನ್ನು ಬಿಸಿ ಮಾಡಿ ಎಳೆಯಲಾಗುತ್ತದೆ. ಇದನ್ನು ಫ್ಲೋರ್‌ ಆ್ಯಂಕರ್‌ ಪೋಸ್ಟ್‌ ರಿಪೇರಿ ಎಂದು ಕರೆಯುತ್ತಾರೆ.

ಪುಲ್ಲಿಂಗ್‌ ಪೋಸ್ಟ್‌: ಕಾರಿನಲ್ಲಿ ಮುಂಭಾಗ ಎರಡು ಮತ್ತು ಹಿಂಭಾಗ ಎರಡು ಕಡೆಗಳಲ್ಲಿ ಪ್ರಮುಖವಾಗಿ ಜೋಡಣೆಯಾದ ಭಾಗವಿದೆ. ಈ ಭಾಗಗಳು ಹಾನಿಗೊಳಗಾದಾಗ ಅವುಗಳ ಬದಿಗಳನ್ನು ಎಳೆದು ಹಿಂದಿನಂತೆ ಮಾಡಲಾಗುತ್ತದೆ ಅಥವಾ ಕತ್ತರಿಸಿ ಮರುಜೋಡಣೆ ಮಾಡಲಾಗುತ್ತದೆ. ಇದಕ್ಕೆ ಪುಲ್ಲಿಂಗ್‌ ಪೋಸ್ಟ್‌ಗಳು ಎಂದು ಹೆಸರು. ಪ್ರೇಮ್‌ನ ಬದಿಗಳು ಒಳಕ್ಕೆ ಹೋಗಿದ್ದರೂ ಇದೇ ವಿಧಾನದಲ್ಲಿ ರಿಪೇರಿ ಮಾಡಲಾಗುತ್ತದೆ.

ಪ್ರೇಮ್‌ ರ್ಯಾಕ್‌: ಇಡೀ ಕಾರು ನೇರವಾಗಿರಬೇಕು. ಹೀಗಿ ಲ್ಲದಿದ್ದರೆ ತಿರುವುಗಳಲ್ಲಿ ಎಳೆದ ಅನುಭವಗಳಾಗುತ್ತವೆ. ಪ್ರೇಮ್‌ಗೆ ಹಾನಿಯಾಗಿದ್ದರೆ ಅದನ್ನು ನೇರಗೊಳಿಸುವುದು ಪ್ರೇಮ್‌ ರ್ಯಾಕ್‌. ಇದೊಂದು ಸಾಧನದ ಮೂಲಕ ಕಾರಿನ ಮೂಲ ಪ್ರೇಮ್‌ ರ್ಯಾಕ್‌ ಅನ್ನು ನೇರಗೊಳಿಸಲಾಗುತ್ತದೆ.

ಬಾಡಿ ರಿಪೇರಿ: ಇಡೀ ಕಾರಿನ ಬಾಡಿ ಒಂದೇ ರೀತಿ ಯಾಗಿರಬೇಕು. ಡೋರುಗಳು, ಹಿಂಭಾಗ, ಮುಂಭಾಗದ ಬಾನೆಟ್‌ ನವಿರಾಗಿ ರೂಪಿತವಾಗಿರಬೇಕು. ಇದಕ್ಕಾಗಿ ವಿವಿಧ ಸಲಕರಣೆಗಳ ಮೂಲಕ ಬಾಡಿ ರಿಪೇರಿ, ನೇರಗೊಳಿಸುವ, ಬೇಕಾದ ಕಡೆಗಳಲ್ಲಿ ಬಾಗಿಸುವ ಕೆಲಸವನ್ನು ಮಾಡಲಾಗುತ್ತದೆ.

- ಈಶ

ಟಾಪ್ ನ್ಯೂಸ್

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.