ಕಾರಿನ ಟಯರ್ ಹೆಚ್ಚಿನ ಕಾಳಜಿ ಅಗತ್ಯ
Team Udayavani, Sep 6, 2019, 5:32 AM IST
ವಾಹನವನ್ನು ಬಳಸುತ್ತಿರುವಿರಾದರೆ, ಅದರ ಟಯರ್ ಬಗ್ಗೆಯೂ ಹೆಚ್ಚಿನ ಕಾಳಜಿ ಅಗತ್ಯ. ಟಯರ್ ಬಗ್ಗೆ ಕಾಳಜಿ ವಹಿಸದಿದ್ದರೆ, ಪ್ರಯಾಣದಲ್ಲಿ ಟಯರ್ ಪಂಕ್ಷರ್, ಅಥವಾ ಬಿರುಕು ಬಿಡುವ ಅತಿ ವೇಗದ ಸಂದರ್ಭ ಸ್ಫೋಟದ ಅಪಾಯವೂ ಇದೆ. ಆದ್ದರಿಂದ ಮುಂಜಾಗ್ರತೆಗಳೇನು? ನೋಡೋಣ.
ನಿಯಮಿತವಾಗಿ ಪರಿಶೀಲನೆ
ಕಾರಿನ ಟಯರ್ ಬಗ್ಗೆ ನಿಯಮಿತವಾಗಿ ನೀವೇ ಪರಿಶೀಲನೆ ನಡೆಸಿ. ವಾಹನವನ್ನು ತೊಳೆಯುವ ವೇಳೆ ಅಥವಾ ಪ್ರಯಾಣ ಹೊರಡುವ ಮುನ್ನ ನಾಲ್ಕೂ ಟಯರ್‌ಗಳ ಮೇಲೆ ಕಣ್ಣು ಹಾಯಿಸಿ. ಅಪರೂಪಕ್ಕೆ ಕಾರನ್ನು ಬಳಸುವ ಅಭ್ಯಾಸವಿದ್ದರೆ, ಕಾರು ಹೆಚ್ಚಾಗಿ ನಿಂತೇ ಇರುತ್ತದೆ. ನಿಂತೇ ಇರುವ ಸಂದರ್ಭದಲ್ಲಿ ಟಯರ್‌ನ ಗಾಳಿ ಕಡಿಮೆಯಾಗುವುದು ಬೇಗ. ಆದ್ದರಿಂದ ನಾಲ್ಕೂ ಟಯರ್‌ಗಳಲ್ಲಿ ಗಾಳಿ ಸರಿಯಾಗಿದೆಯೇ ಎಂದು ವೀಕ್ಷಿಸಿ.
ಏರ್ ಚೆಕಪ್
ಯಾವುದೇ ವಾಹನವಾದರೂ ಕನಿಷ್ಠ 15 ದಿನಕ್ಕೊಮ್ಮೆಯಾದರೂ ಗಾಳಿಯನ್ನು ಪರಿಶೀಲಿಸುತ್ತಿರಬೇಕು. ನೈಟ್ರೋಜನ್ ಆದರೆ ಸುಮಾರು 25 ದಿನಕ್ಕೊಮ್ಮೆ ಪರಿಶೀಲಿಸುವುದು ಉತ್ತಮ.
ಟ್ರೆಡ್
ಟಯರ್‌ನಗಳ ಮಧ್ಯೆ ಗೀರುಗಳಿರುತ್ತವೆ. ಇದಕ್ಕೆ ಟ್ರೆಡ್ ಎಂದು ಹೆಸರು. ಈ ಟ್ರೆಡ್‌ಗಳು ಸರಿಯಾಗಿ ಒಂದೇ ಪ್ರಮಾಣದಲ್ಲಿ ಸವೆಯಬೇಕು. ಯಾವುದಾದರೂ ಟ್ರೆಡ್ ಹೆಚ್ಚು ಸವೆಯುತ್ತದೆ ಎಂದಾದಲ್ಲಿ ಆ ಭಾಗದಲ್ಲಿ ಸಮಸ್ಯೆಯಿದೆ ಎಂದರ್ಥ. ಬ್ಯಾಲೆನ್ಸಿಂಗ್ ಸಮಸ್ಯೆಯಿಂದ ಹೀಗಾಗುವ ಸಾಧ್ಯತೆ ಇದೆ. ಈ ಟ್ರೆಡ್ ಪರಿಶೀಲನೆಗೆ ಸುಲಭದ ಉಪಾಯವೆಂದರೆ ಒಂದು ರೂಪಾಯಿ ನಾಣ್ಯ ತೆಗೆದು ಎಲ್ಲ ಟ್ರೆಡ್‌ಗಳಲ್ಲಿ ಇಟ್ಟು ನೋಡಬೇಕು. ಎಲ್ಲವೂ ಒಂದೇ ರೀತಿ ಸವೆದಿದ್ದರೆ ಚಿಂತೆ ಇಲ್ಲ. 2 ಎಂಎಂಗಿಂತ ಹೆಚ್ಚು ಸವೆದಿದ್ದರೆ ಬದಲಿಸಬೇಕಾಗಬಹುದು. ಟಯರ್ ಟ್ರೆಡ್ ಸಂಪೂರ್ಣ ಸವೆದರೆ ಟಯರ್ ಬದಲಾಯಿಸುವುದು ಉತ್ತಮ.
ವೀಲ್ ರೊಟೇಶನ್/ ಬ್ಯಾಲೆನ್ಸಿಂಗ್/ಅಲೈನ್‌ಮೆಂಟ್
ಕಾರಿನ ಟಯರ್‌ಗಳು ಒಳಮುಖವಾಗಿದ್ದು, ಭಾರ ಬಿದ್ದಂತೆ ರಸ್ತೆಗೆ ಸಮವಾಗಿರ ಬೇಕಾಗುತ್ತದೆ. ಕಾರಿನ ಟಯರ್‌ಗಳು ಸರಿ ಯಾಗಿರುತ್ತವೆೆ ಮತ್ತು ಉತ್ತಮ ಮೈಲೇಜ್, ಟಯರ್ ಬಾಳಿಕೆ ಬರುತ್ತವೆ. ಇದನ್ನು ಪರಿಶೀಲಿಸಲು ವೀಲ್ ಅಲೈನ್‌ಮೆಂಟ್ ಮಾಡಿಸಬೇಕು. ಪ್ರತಿ 5 ಸಾವಿರ ಕಿ.ಮೀ.ಗೆ ಒಂದು ಬಾರಿ ವೀಲ್ ಅಲೈನ್‌ಮೆಂಟ್ ಅಗತ್ಯ. ಸ್ಟೀರಿಂಗ್ ಸೆಟಪ್ ಸರಿಮಾಡಬೇಕು. (ಕಾರಿನ ಸ್ಟೀರಿಂಗ್ ಯಾವುದಾದರೂ ಒಂದು ಬದಿಗೆ ಎಳೆಯುತ್ತದೆ ಎಂದರೆ ವೀಲ್ ಅಲೈನ್‌ಮೆಂಟ್ ಹೋಗಿದೆ ಎಂದರ್ಥ. ಸಾಮಾನ್ಯವಾಗಿ ಎಡಭಾಗದ ಅಲೈನ್‌ಮೆಂಟ್ ಹೋಗುತ್ತದೆ. ಅಂದರೆ ನೀವು ಸ್ಟೀರಿಂಗ್ ಅನ್ನು ತುಸು ಬಲಭಾಗಕ್ಕೆ ಎಳೆಯಬೇಕಾಗುತ್ತದೆ) ಇನ್ನು ಪ್ರತಿ 10 ಸಾವಿರ ಕಿ.ಮೀ.ಗೆ ಒಂದು ಬಾರಿ ವೀಲ್ ರೊಟೇಶನ್ ಮಾಡಿಸಬೇಕು.(ಚಿತ್ರದಲ್ಲಿ ನೋಡಿ) ಜತೆಗೆ ಕಾರಿನ ವೀಲ್ ಸರಿಯಾಗಿ ತಿರುಗುತ್ತದೆಯೇ ಎಂದು ಪರಿಶೀಲಿಸಲು ಬ್ಯಾಲೆನ್ಸಿಂಗ್ ಪರಿಶೀಲನೆ ನಡೆಸಬೇಕು. ನಿಮ್ಮ ಕಾರು ಪಂಕ್ಚರ್ ಆದರೆ, ಅಥವಾ ದೊಡ್ಡ ಹೊಂಡ ಗುಂಡಿಗೆ ಬಿದ್ದ ಸಂದರ್ಭ ಅಲೈನ್‌ಮೆಂಟ್, ಬ್ಯಾಲೆನ್ಸಿಂಗ್ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.