ವೃತ್ತಿ-ಜೀವನದ ಸಮಾನತೆ
Team Udayavani, Dec 3, 2018, 3:05 PM IST
ಬದುಕು-ಕೆಲಸ ಅಥವಾ ವೃತ್ತಿಗಳೆರಡೂ ಒಂದರೊಳಗೊಂದು ಮೇಳವಿಸಿದೆ. ಮನುಷ್ಯ ಬಾಲ್ಯದಲ್ಲಿ ಏನನ್ನೂ ಸಂಪಾದಿಸಲಾರ. ತಾನು ತನ್ನ ವೈಯಕ್ತಿಕ ಜೀವನದ ಸಹಜ ಕಾರ್ಯಗಳನ್ನು ಮಾಡುತ್ತಾ ಮುಂದುವರಿಯುವನು. ಸಂದರ್ಭ ಅನುಸಾರ ನಡೆದುಕೊಳ್ಳುವುದಷ್ಟೇ ಅವನ ಕಾಯಕ. ಶಿಕ್ಷಣದ ಮೂಲ ಉದ್ದೇಶವಾದ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಸಾಧನಾ ಪಥದಲ್ಲಿ ಸಾಗಿ ಸಾಧಕನಾದಾಗ ಬದುಕಿನ ಒಂದು ಮೂಲ ಅಗತ್ಯವೇ ಪರಿಪೂರ್ಣ ವ್ಯವಸ್ಥೆಯನ್ನು ಪಡೆಯಿತೆನ್ನಬೇಕು. ಆಗ ಅವನೊಬ್ಬ ಮಾನವ ಸಂಪತ್ತು ಎಂದು ಕರೆಸಿಕೊಳ್ಳುತ್ತಾನೆ. ಅಲ್ಲಿಗೆ ಆತನ ಜೀವಿತದ ಧ್ಯೇಯವೂ ಪರಿಪೂರ್ಣ ವ್ಯವಸ್ಥೆಯನ್ನು ಪಡೆಯಿತೆಂದರೆ ಆಶ್ಚರ್ಯವಿಲ್ಲ.
ಜವಾಬ್ದಾರಿ ಪಾತ್ರ
ಆತನನ್ನು ಸಮಾಜ ಆಗ ಗುರುತಿಸುವುದು ಮೊದಲಿನಂತಲ್ಲ. ಜವಾಬ್ದಾರಿ ಹೊಂದಿದ್ದಾನೆ ಎನ್ನುವುದೇ ಇಲ್ಲಿನ ಮಹತ್ವದ ಅಂಶವಾಗಿದೆ. ಅಂದರೆ ಆತನೊಬ್ಬ ಸಮುದಾಯದ ಅವಿಭಾಜ್ಯ ಅಂಗವಾಗುವನು ವೃತ್ತಿ ನಿರತರ ಗುಂಪಿನಲ್ಲಿ ಸೇರಿ ಹೋಗುವನು. ಸಾಮಾನ್ಯ ಮಾನವರಲ್ಲಿ ಅವನೊಬ್ಬ ಮಾನವ ಸಂಪನ್ಮೂಲ. ಹೀಗಿರುವಾಗ ಅವನು ಪಡೆದ ವೃತ್ತಿಯೊಂದಿಗೆ ಆತ ಹೇಗಿರಬೇಕು ಎಂಬ ಅಂಶವೇ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಕೆಲವೊಂದು ಪ್ರಶ್ನೆ ಕಾಡುತ್ತದೆ. ವೃತ್ತಿಯಲ್ಲಿಯೇ ಆತ ಮುಳುಗಬೇಕೆ?, ವೃತ್ತಿಯ ಸರ್ವಸ್ವವೇ?, ವೃತ್ತಿಯೇ ಬದುಕಾಗಬೇಕೆ? ಎಂಬುವುದು.
ಈ ಜಿಜ್ಞಾಸೆಯಿಂದ ಉತ್ತಮ ಫಲಿತಾಂಶ ಕಂಡುಕೊಳ್ಳುವುದೇನೆಂದರೆ ಜೀವನದ ನಿರ್ವಹಣೆಗೆ ಉದ್ಯೋಗ ವೃತ್ತಿ ಅನಿವಾರ್ಯ. ಆದರೆ ಅದೇ ಉದ್ಯೋಗ ವೃತ್ತಿಗೆ ಹೆಚ್ಚಿನ ಮಹತ್ವ ನೀಡಿ ತನ್ನ ಜೀವ-ಜೀವನ-ಸಂಸಾರವನ್ನು ಲೆಕ್ಕಿಸದೇ ಬದ್ಧತೆ, ಸಮರ್ಪಣೆಯ ತಲೆಬರೆಹದಡಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೊರ ಬಂದಿದ್ದರೆ ಅವನ ಜೀವನ ಅರ್ಥಹೀನವೆಂಬುವುದೇ ಪ್ರಮುಖ ಅಂಶ. ಆದುದರಿಂದ ವೃತ್ತಿಗೆ, ಜೀವನಕ್ಕೆ ಎಷ್ಟು ಮಹತ್ವ ನೀಡಬೇಕೆಂಬ ಚಿಂತನೆಯು ನಮ್ಮ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಜೀವನದ ರೂಪು ರೇಷೆಗಳನ್ನು ಕೈಗೊಂಡು ಮುನ್ನುಗ್ಗುವುದು ಅತೀ ಅಗತ್ಯ.
ಉಮೇಶ್ ಕಾರಂತ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.