ಆಧುನಿಕತೆಯ ಸವಾಲು ಸಮರ್ಥವಾಗಿ ಎದುರಿಸಿ
Team Udayavani, Jul 30, 2018, 2:53 PM IST
ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಶಕ್ತಿ ಮಹಿಳೆಯರಲ್ಲಿದೆ. ಸಾಮರಸ್ಯದಿಂದ ಪರಂಪರೆಯ ಧ್ಯೋತಕವಾಗಿ ಆಕೆ ಕಾರ್ಯ ನಿರ್ವಹಿಸುತ್ತಾಳೆ. ಬದುಕಿನ ಎಲ್ಲ ಮಜಲುಗಳನ್ನು ದಾಟಿ ಸಾಧನೆ ಮಾಡಿರುವ ಮಹಿಳೆಯರು ಆಧುನಿಕತೆಯ ಎಲ್ಲ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು.
ಮಹಿಳೆ ಸಮಾಜದಲ್ಲಿ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಕ್ಕ- ತಂಗಿಯಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಇವುಗಳ ಜತೆಗೆ ಬುದ್ಧಿವಂತಿಕೆ, ಉತ್ತಮ ಸಾಮರ್ಥ್ಯ, ನಡೆ- ನುಡಿ, ಆತ್ಮಸ್ಥೈರ್ಯ, ಹೋರಾಟದ ಮನೋಭಾವ, ಉತ್ತಮ ವ್ಯಕ್ತಿತ್ವ, ಶಿಸ್ತು- ಸಂಯಮ, ಸಾಮಾನ್ಯ ಜ್ಞಾನ ಅಳವಡಿಸಿಕೊಂಡು ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಸಂಘಟನೆ ಮೂಲಕ ಮಹಿಳೆಯರು ವ್ಯವಹಾರದಲ್ಲಿರುವ ಸವಾಲು ಮತ್ತು ಸಂಕಷ್ಟಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಆಗ ಸಮಾಜದಲ್ಲಿ ವಿಶೇಷ ಸ್ಥಾನಮಾನ ಸಿಗಲು ಸಾಧ್ಯವಾಗುತ್ತದೆ.
ಮಹಿಳೆಯರು ಇಂದು ಹೆಚ್ಚುಹೆಚ್ಚು ಉನ್ನತ ಶಿಕ್ಷಣ ಪಡೆಯುತ್ತಿರುವುದು ಸಮಾಜದ ಸವಾಲು ಹಾಗೂ ಸಮಸ್ಯೆ ಎದುರಿಸಲು ಪೂರಕವಾಗಲಿದೆ. ಮಹಿಳೆಯರು ಕೀಳರಿಮೆ ಬಿಟ್ಟು ಪರಿಪೂರ್ಣ ಜ್ಞಾನ ಹೊಂದಿದರೆ ಸಾಮಾಜಿಕವಾಗಿ ಬಲಿಷ್ಠರಾಗಬಹುದು. ವಿವಿಧ ಇಲಾಖೆಗಳಲ್ಲಿ ತರಬೇತಿ ಹಾಗೂ ಹಣ ಕಾಸಿನ ಸೌಲಭ್ಯವಿದ್ದು, ಅವುಗಳನ್ನು ಪಡೆಯವುದರ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು.
ಮಹಿಳೆಯರು ಸಂಘಟಿತರಾಗಿ
ದೇಶದ ಸರ್ವತೋಮುಖ ಅಭಿವೃದ್ಧಿಯು ಮಹಿಳೆಯರ ಕೈಯಲ್ಲಿದೆ. ಆದರೆ ಮಹಿಳೆಯರ ಮೇಲೆ ಹಿಂದಿನಿಂದಲೂ ದೌರ್ಜನ್ಯ, ತಾರತಮ್ಯ, ಶೋಷಣೆ, ಅಸಮಾನತೆ ನಡೆಯುತ್ತಿದೆ. ಅದರ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಟ ನಡೆಸಿ. ಸರಕಾರ ಮಹಿಳೆಯರಿಗಾಗಿ ಹಲವು ಸೌಲಭ್ಯ ಕಲ್ಪಿಸಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು. ಅಪನಂಬಿಕೆ, ಮೌಡ್ಯಗಳಿಂದ ಹೊರಬರಬೇಕು. ಅಂಬೇಡ್ಕರ್, ಬಸವಣ್ಣ ಅವರು ಸಾರಿದ ಸಮಾನತೆಯ ಅರಿವು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು.
ಆತ್ಮವಿಶ್ವಾಸದಿಂದ ಮುನ್ನಡೆಯಿರಿ
ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಯಾವುದೇ ಸಮಸ್ಯೆ ಬಂದರೂ ಧೃತಿಗೆಡದೆ, ದೃಢವಾಗಿದ್ದು, ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕು. ಶಿಕ್ಷಣದ ಜತೆಗೆ ಸದಾ ಚಟುವಟಿಕೆಗಳಲ್ಲಿ ತೊಡಗಿ, ಆತ್ಮವಿಶ್ವಾಸ ವೃದ್ಧಿಕೊಂಡು ಮುನ್ನಡೆಯಿರಿ.
ಸೃಜನಶೀಲ ಚಿಂತನೆ ಅಳವಡಿಸಿ
ಇಂದು ಪ್ರ ಪಂಚವೇ ನಮ್ಮ ಅಂಗೈಯಲ್ಲಿದೆ ಎನ್ನುವಷ್ಟು ತಂತ್ರಾಜ್ಞಾನ ಅಭಿವೃದ್ಧಿ ಹೊಂದಿದೆ. ಕೈಯಲ್ಲಿರುವ ಒಂದು ಪುಟ್ಟ ಮೊಬೈಲ್ ಫೋನ್ ಮೂಲಕ ನಾವು ವಿಶ್ವದ ಎಲ್ಲ ಆಗುಹೋಗುಗಳನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಹಾಗೆ ನಮ್ಮ ಬಗೆಗೂ ಪ್ರಪಂಚಕ್ಕೆ ತಿಳಿಯಪಡಿಸಬಹುದು. ಇದು ಡಿಜಿಟಲ್ ಕ್ರಾಂತಿಯ ಪರಿಣಾಮ.
ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸಲು ಮಹಿಳೆಯರು ಸೃಜನಶೀಲ ಚಿಂತನೆಯನ್ನು ಅಳವಡಿಸಿಕೊಂಡು , ಆ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು. ಅನುಭವದ ಕೊರತೆಗಳು ಇದ್ದಾಗ ವೈಫಲ್ಯಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಾಗಿ ಸ್ವೀಕರಿಸಿ ದಿಟ್ಟತನದಿಂದ ಪ್ರಯತ್ನಶೀಲರಾಗಿ. ವೈಯಕ್ತಿಕ ಕೌಶಲಗಳ ಮೂಲಕ ಡಿಜಿಟಲ್ ಯುಗದ ಓಟದಲ್ಲಿ ಹಿಂದೆ ಬೀಳದೆ ಪ್ರಗತಿ ಸಾಧಿಸಿ.
ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಸಾಧಿ ಸಿದ್ದು, ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಆದ್ದರಿಂದ ನವೀನ ಆವಿಷ್ಕಾರಗಳ ಸದುಪಯೋಗಗಳ ಬಗ್ಗೆ ಅರಿತು ಬಳಸಿದಾಗ ಡಿಜಿಟಲ್ ಯುಗದ ಸವಾಲುಗಳನ್ನು ಸಲೀಸಾಗಿ ಎದುರಿಸಬಹುದು. ಮಹಿಳೆಯರು ತಮ್ಮಲ್ಲಿರುವ ಸುಪ್ತ ಪ್ರತಿಭೆ, ಕೌಶಲಗಳನ್ನು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಸ್ವತಂತ್ರರಾಗಲು ಡಿಜಿಟಲೀಕರಣದ ಸವಾಲುಗಳ ಬಗ್ಗೆ ಅರಿತುಕೊಳ್ಳವುದು ಅತೀ ಅಗತ್ಯ. ಇಂದು ಹೆಚ್ಚಿನ ಆರ್ಥಿಕ ವ್ಯವಹಾರ, ವಾಣಿಜ್ಯ ವಹಿವಾಟುಗಳು ಡಿಜಿಟಲೀಕರಣಗೊಂಡಿರುವುದರಿಂದ ಅವುಗಳ ಕುರಿತಾಗಿ ಅಧ್ಯಯನ ಮಾಡಿ ತೊಡಗಿಕೊಳ್ಳುವುದು ಆರ್ಥಿಕ ಭದ್ರತೆ ದೃಷ್ಟಿಯಿಂದ ಸಹಕಾರಿ.
ಜಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.