ಸಾಲ ಮಾಡುವ ಮುನ್ನ ಬಡ್ಡಿ ದರ ಪರಿಶೀಲಿಸಿಕೊಳ್ಳಿ 


Team Udayavani, Nov 12, 2018, 3:18 PM IST

12-november-13.gif

ಬ್ಯಾಂಕ್‌ಗಳು ಮನಬಂದಂತೆ ಬಡ್ಡಿ ದರವನ್ನು ನಿಗದಿಗೊಳಿಸುವಂತಿಲ್ಲ. ರಿಸರ್ವ್‌ ಬ್ಯಾಂಕ್‌ನ ಹದ್ದಿನ ಕಣ್ಣು ಸದಾ ನೋಡುತ್ತಿರುತ್ತದೆ. ಕೆಲವು ಸರಕಾರದ ಯೋಜನೆಗಳ ಹೊರತಾಗಿ ಮೂಲ ದರಕ್ಕಿಂತ ಕಡಿಮೆ ದರದಲ್ಲಿ ಸಾಲ ಕೊಡುವಂತಿಲ್ಲ. ಹಾಗೆಯೇ ಮಾರುಕಟ್ಟೆ ಆಧರಿತ ದರಕ್ಕಿಂತ ಹೆಚ್ಚು ದರವನ್ನು ಠೇವಣಿಗೆ ಕೊಡುವಂತಿಲ್ಲ.

ಸಾಲ ನೀಡಿಕೆಯ ಮೇಲಿನ ಸರಾಸರಿ ಬಡ್ಡಿ ಮತ್ತು ಠೇವಣಿ ಮೇಲಿನ ಸರಾಸರಿ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಬ್ಯಾಂಕಿನ ಪರಿಭಾಷೆಯಲ್ಲಿ  ನೆಟ್‌ ಮಾರ್ಜಿನ್‌ ಎನ್ನುತ್ತಾರೆ. ಇದು ಹೆಚ್ಚಾದರೆ ಬ್ಯಾಂಕಿನ ಲಾಭ ಹೆಚ್ಚಾಗುತ್ತದೆ. ಕಡಿಮೆಯಾದರೆ ಲಾಭದ ಮೇಲೆ ಒತ್ತಡ ಬೀಳುತ್ತದೆ. ಬ್ಯಾಂಕಿನ ನಿರ್ವಹಣಾ ವೆಚ್ಚವನ್ನು ಬ್ಯಾಂಕ್‌ಗಳು ಈ ಮಾರ್ಜಿನ್‌ನಿಂದಲೇ ಸರಿದೂಗಿಸುವುದು. ಬ್ಯಾಂಕುಗಳ ನಿರ್ವಹಣೆಗೆ ಸರಕಾರದಿಂದ ಯಾವುದೇ ಅನುದಾನ ದೊರಕುವುದಿಲ್ಲ. ರಿಸರ್ವ್‌ ಬ್ಯಾಂಕ್‌ ಲೆಕ್ಕಾಚಾರದ ಪ್ರಕಾರ ಕನಿಷ್ಠ ಶೇ.3ರಷ್ಟು ಮಾರ್ಜಿನ್‌ ಅನಿವಾರ್ಯ. ಠೇವಣಿಗಾಗಲೀ ಅಥವಾ ಸಾಲಕ್ಕಾಗಲೀ ಬ್ಯಾಂಕ್‌ಗಳು ತಮ್ಮ ಬಡ್ಡಿ ದರವನ್ನು ನಿಗದಿ ಮಾಡುವಾಗ ಈ ಅಂಶವನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳುತ್ತವೆ. 

ಬಡ್ಡಿಯಲ್ಲಿ ಎರಡು ವಿಧ
ಬ್ಯಾಂಕ್‌ ಬಡ್ಡಿ ದರದ ಏರಿಳಿತದ ಲಾಭ ಗ್ರಾಹಕರಿಗೆ ದೊರಕುವಂತೆ, ಬದಲಾಗುವ ಬಡ್ಡಿ ದರ ((floating rate of interest) ಚಾಲ್ತಿಯಲ್ಲಿ ಬಂದಿದೆ. ಇದರ ಪ್ರಕಾರ ಬ್ಯಾಂಕಿನ ಮೂಲ ದರ ((base rate) ಬದಲಾದಂತೆ, ಸಾಲದ ಮೇಲಿನ ಬಡ್ಡಿ ದರವೂ ಏರಿಳಿತ ಕಾಣುತ್ತದೆ. ಠೇವಣಿ ಮೇಲಿನ ಬಡ್ಡಿ ದರವೂ ಸಾಲದ ಮೇಲಿನ ಬಡ್ಡಿ ದರದಂತೆ ಮುಖ್ಯವಾಗಿ ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಬಿತವಾಗಿರುತ್ತದೆ. ಹಾಗೆಯೇ ಇದು ಬ್ಯಾಂಕ್‌ ತಡೆದುಕೊಳ್ಳಬಹುದಾದ cost of funds ಮೇಲೂ ಇರುತ್ತದೆ. ಸಾಲದ ಬೇಡಿಕೆ ಹೆಚ್ಚಾದಾಗ, loanable funds  ಬೇಕಾದಾಗ, ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿ ದರ ಏರಿಸಿfunds mobilise ಮಾಡುತ್ತವೆ. ಸಾಲದ ಬೇಡಿಕೆ ಕಡಿಮೆಯಾದಾಗ, ಬ್ಯಾಂಕುಗಳಿಗೆ ಹೆಚ್ಚಿನ funds  ಆವಶ್ಯಕತೆ ಇರುವುದಿಲ್ಲ. ಅಂತೆಯೇ ಬ್ಯಾಂಕ್‌ ಗಳು ಠೇವಣಿ ಮೇಲಿನ ಬಡ್ಡಿದರವನ್ನು ಕೊಂಚ ತಗ್ಗಿಸುತ್ತವೆ. ಸ್ಪರ್ಧಾತ್ಮಕ ದರದ ಮೂಲಕ, ಹೆಚ್ಚು ಠೇವಣಿಯನ್ನು ಆಕರ್ಷಿಸುವುದು ಮತ್ತು cost of funds ಅನ್ನು ಲೆಕ್ಕಾಚಾರದೊಳಗೆ ಇಡುವುದು, ಈ ಎರಡು ಅಂಶಗಳು ಬ್ಯಾಂಕಿನಲ್ಲಿ ಠೇವಣಿ ಮೇಲಿನ ಬಡ್ಡಿದರವನ್ನು ನಿರ್ದೇಶಿಸುತ್ತವೆ.

ನಿಗದಿ ಇಲ್ಲ
ಬ್ಯಾಂಕ್‌ಗಳು ಮನಬಂದಂತೆ ಬಡ್ಡಿ ದರವನ್ನು ನಿಗದಿಗೊಳಿಸುವಂತಿಲ್ಲ. ರಿಸರ್ವ್‌ ಬ್ಯಾಂಕ್‌ನ ಹದ್ದಿನ ಕಣ್ಣು ಸದಾ ನೋಡುತ್ತಿರುತ್ತದೆ. ಕೆಲವು ಸರಕಾರದ ಯೋಜನೆಗಳ ಹೊರತಾಗಿ ಮೂಲ ದರಕ್ಕಿಂತ ಕಡಿಮೆ ದರದಲ್ಲಿ ಸಾಲ ಕೊಡುವಂತಿಲ್ಲ. ಹಾಗೆಯೇ ಮಾರುಕಟ್ಟೆ ಆಧರಿತ ದರಕ್ಕಿಂತ ಹೆಚ್ಚು ದರವನ್ನು ಠೇವಣಿಗೆ ಕೊಡುವಂತಿಲ್ಲ. ಇದು ವಾಸ್ತವದಲ್ಲಿ ಒಂದು ರೀತಿಯ ನಿಯಂತ್ರಿತ  liberalization ಎನ್ನಬಹುದೇನೋ? ಬಡ್ಡಿ ದರ ನಿಗದಿ ಬ್ಯಾಂಕ್‌ಗಳಿಗೆ ಒಂದು ರೀತಿಯ ರಕ್ಷಣಾತ್ಮಕ ಆಟ. ಠೇವಣಿಯಾಗಲಿ ಅಥವಾ ಸಾಲವಾಗಲಿ, ಅವುಗಳ ಮೇಲೆ ಬಡ್ಡಿದರ ನಿಗದಿ ಮಾಡುವಾಗ ಬ್ಯಾಂಕ್‌ಗಳ ಆದ್ಯತೆ ತಮ್ಮ ಹಣಕಾಸು ಸ್ಥಿತಿಗತಿ ನೋಡಿಕೊಳ್ಳುತ್ತವೆ. ಗ್ರಾಹಕರ ಅನುಕೂಲ ಮತ್ತು ಅವರಿಗೆ ದೊರಕುವ ಲಾಭ ಅನಂತರದ ಆದ್ಯತೆ. ಪ್ರತಿ ಬಾರಿ ರೆಪೋ ದರ ಇಳಿಸಿದಾಗಲೂ ರಿಸರ್ವ್‌ ಬ್ಯಾಂಕ್‌, ಸರಕಾರ, ಗ್ರಾಹಕರು, ವಾಣಿಜ್ಯೋದ್ಯಮ ಸಂಘಗಳು ಮತ್ತು ಮಾಧ್ಯಮಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಸುವಂತೆ ಒತ್ತಾಯ ಮಾಡುತ್ತವೆ.

ರಿಸರ್ವ್‌ ಬ್ಯಾಂಕ್‌ ಕೂಡ ಅದೇ ನಿರೀಕ್ಷೆಯಲ್ಲಿ ರೆಪೋ ದರವನ್ನು ಕಡಿಮೆ ಮಾಡುತ್ತದೆ. ಆದರೆ, ಯಾವ ಬ್ಯಾಂಕೂ ಅಷ್ಟು ಸುಲಭವಾಗಿ ಬಡ್ಡಿ ದರವನ್ನು ಕಡಿಮೆ ಮಾಡುವುದಿಲ್ಲ. ಬ್ಯಾಂಕಿನಲ್ಲಿ ಬಡ್ಡಿ ದರ ನಿಗದಿ ಮಾಡುವ ಪ್ರಕ್ರಿಯೆ ಸುದೀರ್ಘ‌ವಾಗಿದ್ದು, ಹಲವು ಹತ್ತು ಕೋನಗಳಲ್ಲಿ ವಿಶ್ಲೇಷಿಸಿ, ಹಲವು ಹತ್ತು ಅಂಶಗಳನ್ನು ಪರಿಗಣಿಸಿ ಲೆಕ್ಕಹಾಕಬೇಕಾಗುತ್ತದೆ.

ರಮಾನಂದ ಶರ್ಮಾ

ಟಾಪ್ ನ್ಯೂಸ್

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.