ಚೆಕ್ ಓವರ್‌ಕೋಟ್
Team Udayavani, Jan 4, 2019, 7:55 AM IST
ಹೊಸ ಫ್ಯಾಶನ್‌ಗಳ ಕನಸುಗಳನ್ನು ಹೊತ್ತು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷಕ್ಕಿಂತ ಈ ಬಾರಿ ದಿರಿಸಿನಲ್ಲಿ ಯಾವ ರೀತಿ ಹೊಸತನ ತೊರಬಹುದು ಎಂದು ಅವಲೋಕಿಸಿದಾಗ ಕಾಣಸಿಕ್ಕಿದ್ದು ಚಳಿಗಾಲಕ್ಕೆ ಸೂಕ್ತವಾದ ಮತ್ತು ನೋಡುಗರ ಕಣ್ಣಿಗೆ ಅಂದವಾಗಿಯೂ ಕಾಣಿಸಿಕೊಳ್ಳುವ ಪುರುಷ, ಮಹಿಳೆಯರೆನ್ನದೆ ಯಾರೂ ಬೇಕಾದರೂ ಧರಿಸಬಹುದಾದ ಚೆಕ್ ಗಳು ಮಾರುಕಟ್ಟೆಯಲ್ಲಿವೆ. ಇದರಲ್ಲೂ ಹಲವಾರು ವೈವಿಧ್ಯಗಳಿವೆ. ಫ್ಯಾಶನೇ ಬಲ್, ಟ್ರೆಂಡೀ ಲುಕ್ ಕೊಡುವ ಈ ದಿರಿಸನ್ನು ಕಚೇರಿಗೂ ಧರಿಸಬಹುದಾಗಿದೆ.
ಪಪ್ಫರ್
ಚಳಿಗಾಲದಲ್ಲಿ ಚಳಿಯಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳುವುದಕ್ಕೆಂದೇ ಸಿದ್ಧಪಡಿಸಿದಂತಿದೆ ಈ ಓವರ್ ಕೋಟ್. ಇದರಲ್ಲಿ ತಲೆಗೆ ಪಪ್ಫರ್ ಇದ್ದು ಪ್ರವಾಸ, ಚಾರಣಕ್ಕೆ ಹೊರಡುವವರಿಗೆ ಸೂಕ್ತವಾದದ್ದು. ಇತ್ತೀಚೆಗೆ ಇತರೆಲ್ಲ ಓವರ್ ಕೋಟ್ ಗಳಿಗಿಂತಲೂ ಇದು ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರೂ ತಪ್ಪಾಗಲಾರದು.
ಇದೇ ಮಾದರಿಯಲ್ಲಿ ಟೆಕ್ನಿಕಲ್ ಜಾಕೆಟ್ ಸಹ ಮಾರುಕಟ್ಟೆಯಲ್ಲಿದ್ದು, ಇದರಲ್ಲಿ ವಸ್ತುಗಳನ್ನು ತುಂಬಿಡುವುದಕ್ಕೂ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಟ್ರೆಂಡೀ ಲುಕ್ ನೊಂದಿಗೆ ಬಹುಬಳಕೆಗೆ ಯೋಗ್ಯವಾದಂತಿದೆ.
ಟ್ರಿಂಚ್ ಕೋಟ್
ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಈ ಕೋಟ್‌ನ ಆವಿಷ್ಕಾರ ಮಾಡಲಾಗಿದ್ದು, ಮಿಲಿಟರಿ ಮಂದಿ ಇದನ್ನು ಹೆಚ್ಚಾಗಿ ಬಳಕೆ ಮಡುತ್ತಾರೆ. ರಷ್ಯಾ ದೇಶದಲ್ಲಿನ ಭಾಗಶಃ ಜನರು ಈ ಕೋಟ್‌ಗೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ಇದು ವಾಟರ್ ಪ್ರೂಫ್ ಆಗಿದ್ದು, ಬೆಲ್ಟ್ಸೌ ಲಭ್ಯವನ್ನೂ ಹೊಂದಿದೆ. ಅಲ್ಲದೆ ಈ ಕೋಟ್ ಮೊಣಕಾಲಿನಷ್ಟು ಉದ್ದವಿದ್ದು ಚಳಿಯಿಂದ ನಮ್ಮ ದೇಹವನ್ನು ಬೆಚ್ಚಗಿರಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ಮಲ್ಟಿ ಪರ್ಪಸ್ ಯೂಸ್ ಎಂದರೂ ತಪ್ಪಾಗಲಾರದು. ಅಗಲ ಶೋಲ್ಡರ್ ಹೊಂದಿರುವ ಈ ಕೋಟ್ ಚಳಿಯಿಂದ ದೇಹಕ್ಕೆ ರಕ್ಷಣೆಯನ್ನೂ ಕೊಡುತ್ತದೆ.
ವಿಂಟರ್ ಬಾಂಬರ್
ಇದೊಂದು ಸಾಮನ್ಯ ಓವರ್ ಕೋಟ್ ಆಗಿದ್ದು, ತಲೆಯನ್ನು ರಕ್ಷಿಸಲು ಹುಡ್ ಮತ್ತು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಈ ಜಾಕೆಟ್ ಸಣ್ಣ ಮತ್ತು ಕ್ಯಾಶುವಲ್ ಕಾಂಟಾಕ್ಟ್ಗಳಲ್ಲಿಯೂ ಲಭ್ಯವಿದೆ. ಈ ಕೋಟ್ ನಲ್ಲಿ ತೊಟ್ಟುಕೊಳ್ಳುವವರ ಕಂಫರ್ಟ್‌ನೆಸ್‌ಗೆ ಹೆಚ್ಚು ಪ್ರಾಧಾನ್ಯವನ್ನು ನೀಡಲಾಗಿದೆ.
ಟೆಕ್ನಿಕಲ್ ಪರ್ಕಾ
10 ಡಿಗ್ರಿಗಿಂತಲೂ ಕಡಿಮೆ ಚಳಿಯ ಪ್ರದೇಶದಲ್ಲಿ ಈ ಕೋಟ್‌ನ ಬಳಕೆ ಹೆಚ್ಚು ಸೂಕ್ತ. ಇತರ ಕೋಟುಗಳಿಗಿಂತ ಹೆಚ್ಚು ದಪ್ಪವಾಗಿ ಈ ಕೋಟ್‌ನ್ನು ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಲಕ್ಸುರಿ ಹುಡ್ಸ್ ಅಳವಡಿಸಿದ್ದು, ತಲೆಯ ಭಾಗವನ್ನು ಚಳಿಯಿಂದ ರಕ್ಷಿಸುವುದಕ್ಕೆ ಸಹಾಯ ಮಾಡುತ್ತದೆ. ದಪ್ಪನೆಯ ಶೂಗಳು ಮತ್ತು ಜೀನ್ಸ್ ಜತೆಗೆ ಧರಿಸಿದರೆ ಇದು ನಿಮ್ಮ ವ್ಯಕ್ತಿತ್ವದ ಆಕರ್ಷಣೆಯನ್ನೂ ಹೆಚ್ಚಿಸುತ್ತದೆ. ಇನ್ನು ಇದರ ಜೇಬುಗಳು ಉದ್ದವಾಗಿದ್ದು ಚಳಿಯಿಂದ ಕೈಗಳ ರಕ್ಷಣೆಗೂ ಇದು ಸಹಕಾರಿ.
ಟೆಕ್ಶ್ಚರ್ಡ್ ಕೋಟ್
ಗ್ರಾಫಿಕ್ ಅನ್ನು ಬಳಕೆ ಮಾಡಿ ಈ ಕೋಟ್ ತಯಾರಿಸಲಾಗಿರುವ ಕಾರಣ ಇದು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ಮಿಕ್ಸ್‌ಡ್ ಮೆಟೀರಿಯಲ್‌ನಿಂದ ಈ ಕೋಟ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಒಳ ಮತ್ತು ಹೊರ ಮೈಗಳೆರಡನ್ನೂ ನಾವು ಬಳಕೆ ಮಾಡಬಹುದಾಗಿದೆ. ಸುಲಭವಾಗಿ ಮಡಚಿಯೂ ಇಡಬಹುದು. ಹೀಗೆ ವಿವಿಧ ವಿನ್ಯಾಸದ ಚೆಕ್ ಕೋಟ್ ಗಳು ಮಾರುಕಟ್ಟೆಯಲ್ಲಿದ್ದು, ಹೆಚ್ಚು ಚಳಿ ಇರುವ ಪ್ರದೇಶಗಳಿಗೆ ಮತ್ತು ಚಳಿಗಾಲಕ್ಕೆ ಮಾತ್ರ ಇದು ಹೆಚ್ಚು ಸೂಕ್ತವಾಗಿದ್ದರೂ ಫ್ಯಾಶನೇ ಬಲ್ ದಿರಿಸು ಆಗಿರುವುದರಿಂದ ಎಲ್ಲೆಡೆಯೂ ಇದು ಬಹು ಬೇಡಿಕೆಯನ್ನು ಪಡೆದಿದೆ.
ಭುವನಾ ಬಾಬು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.