ನಗರದ ಸೌಂದರ್ಯ ಹೆಚ್ಚಿಸಲಿ ವೃತ್ತಗಳು


Team Udayavani, Jul 1, 2018, 3:57 PM IST

1-july-20.jpg

ವೃತ್ತಗಳು ನಗರದ ಸೌಂದರ್ಯವನ್ನು ಹೆಚ್ಚಿಸುವಂತಿರಬೇಕೇ ಹೊರತು ಕಡೆಗಣಿಸುವಂತೆ ಮಾಡಬಾರದು. ಮಂಗಳೂರು ನಗರದಲ್ಲಿ ಸಾಕಷ್ಟು ವೃತ್ತಗಳಿವೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಕಡೆಗಣಿಸಲ್ಪಟ್ಟಿವೆ. ಮಂಗಳೂರಿನ ಪ್ರಮುಖ ಕೇಂದ್ರ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಹ್ಯಾಮಿಲ್ಟನ್‌ ವೃತ್ತದಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಸೊಳ್ಳೆ ಉತ್ಪತ್ತಿ ತಾಣದಂತಾಗಿದೆ. ಹಿಂದೊಮ್ಮೆ ಈ ವೃತ್ತದ ಶೋಚನೀಯ ಕಥೆ ಉದಯವಾಣಿಯಲ್ಲಿ ಪ್ರಕಟಗೊಂಡಿತ್ತು. ಬಳಿಕ ದುರಸ್ತಿಪಡಿಸಲಾಗಿತ್ತು. ಆದರೆ ಈಗ ಮತ್ತೆ ನಿರ್ವಣೆಯಿಲ್ಲದೆ ಈ ವೃತ್ತ ಸೊರಗುತ್ತಿದೆ. ಸ್ವಲ್ಪ ದೂರದಲ್ಲಿರುವ ಎ.ಬಿ. ಶೆಟ್ಟಿ ವೃತ್ತ ಹಲವು ವರ್ಷಗಳಿಂದ ಕಾರಂಜಿಯಂತಿತ್ತು. ಆದರೆ ನಿರ್ವಹಣೆ ಕೊರತೆಯಿಂದಾಗಿ ಇದರ ವಿನ್ಯಾಸವನ್ನೇ ಬದಲಿಸಿ ಸೌರ ಫ‌ಲಕ, ಎಲ್‌ .ಇ.ಡಿ. ಬಲ್ಬ್ಗಳನ್ನು ಅಳವಡಿಸಲಾಯಿತು. ಇಲ್ಲಿದ್ದ ಕಾರಂಜಿಯ ದೀಪಗಳು, ಪಂಪ್‌, ಕೊಳವೆಗಳು ತುಕ್ಕು ಹಿಡಿದು ನಿಷ್ಪ್ರಯೋಜಕವಾದವು. ಈಗ ಇದೊಂದು ವೃತ್ತವಾಗಿ ಮಾತ್ರ ಉಳಿದಿದೆ.

ಇನ್ನು ನಗರದಲ್ಲಿ ಪ್ರಕಟವಾಗುತಿದ್ದ ಹೆಸರಾಂತ ದೈನಿಕ ಪತ್ರಿಕೆಯ ಕಚೇರಿ ಇರುವ ವೃತ್ತವನ್ನು ನವಭಾರತ್‌ ವೃತ್ತ ಎಂದು ಕರೆಯಲಾಗುತ್ತದೆ. ಆ ವೃತ್ತದಲ್ಲಿ ಕ್ರಮೇಣ ರಾಷ್ಟ್ರಕವಿ ಗೋವಿಂದ ಪೈ ವೃತ್ತ ಎಂದು ಪುನರ್‌ ನಾಮಕರಣ ಮಾಡಲಾಯಿತು. ಈ ವೃತ್ತದ ಬಳಿಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿರುವ ನಿಯಂತ್ರಣ ಫ‌ಲಕದ ಮೂಲಕ ಚಿತ್ತಾಕರ್ಷಕ ಕಾರಂಜಿ ಚಿಮ್ಮುತ್ತಿದ್ದು, ಆ ದಿನಗಳು ಈಗ ಇತಿಹಾಸ. ಸಮೀಪದಲ್ಲಿಯೇ ಇರುವ ತೈಲೋತ್ಪನ್ನ ಕಂಪೆನಿಯೊಂದು ಈ ವೃತ್ತದ ನಿರ್ವಹಣೆ ಮಾಡುತ್ತಿರುವ ಬಗ್ಗೆ ಫ‌ಲಕಗಳನ್ನು ಹಾಕಿದೆಯಾದರೂ ಈಗ ಎಲ್ಲ ಫ‌ಲಕಗಳು ತುಕ್ಕು ಹಿಡಿದು ಮಾಸಿಹೋಗಿವೆ.

ರಾಷ್ಟ್ರಕವಿ ಗೋವಿಂದ ಪೈ ವೃತ್ತ ಎಂದು ಬರೆದಿರುವ ಅಕ್ಷರಗಳೂ ತುಂಡಾಗಿದ್ದು, ಬಿದ್ದು ಹೋಗಿವೆ. ನೆಟ್ಟ ಹೂಗಿಡಗಳೆಲ್ಲ ಮಾಯವಾಗಿ ನಿಷ್ಪ್ರಯೋಜಕ ಹುಲ್ಲು ಹಾಗೂ ಇತರ ಕಳೆ ಗಿಡಗಳು ಬೆಳೆದಿವೆ. ವಿದ್ಯುತ್‌ ದೀಪಗಳೆಲ್ಲ ತುಕ್ಕು ಹಿಡಿದು ಜೋತು ಬಿದ್ದಿವೆ. ಇತ್ತೀಚೆಗೆ ಸ್ಥಳೀಯ ದೇವಸ್ಥಾನದ ಪುನರ್‌ ಪ್ರತಿಷ್ಠಾ ಮಹೋತ್ಸವದ ಸ್ವಾಗತ ಲಾಂಚನ ಈ ವೃತ್ತದಲ್ಲಿ ಅಳವಡಿಸಲಾಗಿದ್ದು, ಅದನ್ನು ತೆರವುಗೊಳಿಸಿದ ಅನಂತರ ಈ ವೃತ್ತದ ಕಡೆ ಯಾವ ಸಂಘ ಸಂಸ್ಥೆಯೂ, ನಗರ ಪಾಲಿಕೆಯೂ ತಿರುಗಿ ನೋಡಿಲ್ಲ. ವೃತ್ತಗಳಿಗೆ ಹಾಗೂ ರಸ್ತೆಗಳಿಗೆ ಹೆಸರಿಡಲು ಪೈಪೋಟಿ ನಡೆಸುವ ಈ ದಿನಗಳಲ್ಲಿ ರಾಷ್ಟ್ರಕವಿ ಗೋವಿಂದ ಪೈ ವೃತ್ತ ಎಂದು ಹೆಸರಿದ್ದರೂ ಎಲ್ಲ ಆಯಾಮಗಳಲ್ಲಿ ಈ ವೃತ್ತವನ್ನು ಕಡೆಗಣಿಸಿದಂತಾಗಿದೆ.

 ಪ್ರಶಾಂತ್‌ ನಾಯಕ್‌

ಟಾಪ್ ನ್ಯೂಸ್

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Sullia: ಅಸ್ವಸ್ಥ ಮಹಿಳೆ ಸಾವು

Sullia: ಅಸ್ವಸ್ಥ ಮಹಿಳೆ ಸಾವು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್‌ ಹೆಡ್‌ ಓಪನಿಂಗ್‌?

Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್‌ ಹೆಡ್‌ ಓಪನಿಂಗ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.