ಇಸ್ತ್ರಿ ಪೆಟ್ಟಿಗೆ ಹೀಗೆ ಶುಚಿಗೊಳಿಸಿ
Team Udayavani, Sep 21, 2019, 5:00 AM IST
ದಿನನಿತ್ಯ ಆಫೀಸ್‌ಗೆ ಹೋಗಬೇಕು, ಇವತ್ತು ಇಂಟರ್‌ವ್ಯೂ ಎಟೆಂಡ್ ಆಗಬೇಕು. ಒಂದಲ್ಲ ಒಂದು ಕೆಲಸಕ್ಕೆ ಹೊರಗೆ ಹೋಗಬೇಕು ಎಂದಾಗ ನಾವು ನೀಟ್ ಆದ ಬಟ್ಟೆ ತೊಡುವುದು ಸಾಮಾನ್ಯ. ನಾವು ಧರಿಸುವ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂಬ ಮಾತಿದೆ. ನೀಟ್ ಆಗಿ ಆಫೀಸ್‌ಗೆ ತೆರಳದಿದ್ದರೆ ಮೇಲಧಿಕಾರಿಗಳಿಂದ ಬೈಸಿಕೊಳ್ಳುವ ಪ್ರಮೇಯಗಳು ಬರುತ್ತವೆ. ಹೀಗಾಗಿ ಬಟ್ಟೆಗಳಿಗೆ ನೀಟಾಗಿ ಇಸ್ತ್ರಿ ಹಾಕಿ ಅಚ್ಚುಕಟ್ಟಾಗಿ ರೆಡಿಯಾಗುತ್ತೇವೆ. ಹೀಗೆ ನಮ್ಮ ಡ್ರೆಸ್ ನೀಟಾಗಿ ಕಾಣಬೇಕಾದರೆ ಅದಕ್ಕೆ ಸರಿಯಾಗಿ ಇಸ್ತ್ರಿ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಾವು ಇಸ್ತ್ರಿ ಹಾಕುವ ಭರದಲ್ಲಿ ಬಟ್ಟೆಗಳನ್ನು ಸುಟ್ಟು ಬಿಡುತ್ತೇವೆ. ಹೀಗೆ ಬಟ್ಟೆ ಸುಟ್ಟು ಹೋದಾಗ ಬಟ್ಟೆಗಳ ಚೂರುಗಳು ಇಸ್ತ್ರಿ ಪೆಟ್ಟಿಗೆಯಲ್ಲಿ ಅಂಟಿಕೊಂಡು ಬಿಡುತ್ತವೆ. ಅವುಗಳನ್ನು ಶುಚಿಗೊಳಿಸುವುದು ತಲೆನೋವಿನ ವಿಷಯ. ಶುಚಿಗೊಳಿಸದೇ ಇದ್ದರೆ ಮುಂದೆ ಬಟ್ಟೆಗಳಿಗೆ ಇಸ್ತ್ರಿ ಮಾಡಲಾಗದು. ಇಸ್ತ್ರಿ ಪೆಟ್ಟಿಗೆಯ ಕಲೆಯನ್ನು ತೆಗೆಯುವುದಕ್ಕೆ ಇಲ್ಲಿದೆ ಸಲಹೆ.
ಟೂತ್‌ಪೇಸ್ಟ್ ಬಳಸಿ ನೋಡಿ
ಸಾಮಾನ್ಯವಾಗಿ ಎಲ್ಲರೂ ಹಲ್ಲುಜ್ಜಲು ಟೂತ್‌ಪೇಸ್ಟ್ ಬಳಸುತ್ತೇವೆ. ಒಂದು ವೇಳೆ ಇಸ್ತ್ರಿ ಪೆಟ್ಟಿಗೆಯಲ್ಲಿ ಕಲೆಗಳಾದರೆ ಟೂತ್‌ಪೇಸ್ಟ್ ಅನ್ನು ಇಸ್ತ್ರಿ ಪೆಟ್ಟಿಗೆಗೆ ಹಚ್ಚಿ ಒಂದು ಐದು ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ಒಂದು ಒಣ ಬಟ್ಟೆಯಲ್ಲಿ ಶುಚಿಗೊಳಿಸಿ.
ಬಿಸಿನೀರು ಮತ್ತು ಸಾಬೂನು
ಒಂದು ಬಟ್ಟಲಿನಲ್ಲಿ ಬಿಸಿ ನೀರು ಮತ್ತು ಸಾಬೂನ್ ನೀರನ್ನು ಮಿಶ್ರ ಮಾಡಿ ಅದನ್ನು ಕಲೆಯಾದಂತಹ ಸ್ಥಳಗಳಿಗೆ ಹಚ್ಚಿ ಉಜ್ಜಿ. ಇಸ್ತ್ರಿ ಪೆಟ್ಟಿಗೆಯ ಕಲೆಗಳು ಮಾಯವಾಗುವುದು.
ನೀರು, ಬೇಕಿಂಗ್ ಸೋಡ
ಮೊದಲಿಗೆ ನೀರು ಮತ್ತು ಬೇಕಿಂಗ್ ಸೋಡವನ್ನು ಕಲಸಿಟ್ಟುಕೊಳ್ಳಿ. ಬಳಿಕ ಇಸ್ತ್ರಿ ಪೆಟ್ಟಿಗೆಯ ತೂತಿನೊಳಗೆ ಈ ದ್ರಾವಣವನ್ನು ಹಾಕಿ. ಸ್ವಲ್ಪ ಸಮಯದ ಬಳಿಕ ಒಂದು ಒಣ ಬಟ್ಟೆಯಿಂದ ಇಸ್ತ್ರಿ ಪಟ್ಟಿಗೆಯನ್ನು ಚೆನ್ನಾಗಿ ಒರೆಸಿ. ಇದರಿಂದ ಇಸ್ತ್ರಿ ಪೆಟ್ಟಿಗೆಯಲ್ಲಿ ಅಂಟಿಕೊಂಡಿರುವ ಕಲೆಗಳು ಮಾಯವಾಗುತ್ತವೆ.
ವಿನೆಗರ್ ಮತ್ತು ಉಪ್ಪು
ಒಂದು ಲೋಹದ ತಟ್ಟೆಗೆ ಉಪ್ಪು ಮತ್ತು ವಿನೆಗರ್ ಅನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಅನಂತರ ಅದನ್ನು ಒಂದು ತವದಲ್ಲಿ ಹಾಕಿ ಒಲೆಯ ಮೇಲೆ ಇಡಿ. ಉಪ್ಪು ಕರಗುವ ತನಕ ಹಾಗೆ ಬಿಡಿ. ಬಳಿಕ ಈ ಬಿಸಿ ದ್ರಾವಣವನ್ನು ಇಸ್ತ್ರಿ ಪೆಟ್ಟಿಗೆಯಲ್ಲಿ ಕಲೆಯಾಗಿರುವ ಜಾಗಕ್ಕೆ ಹಾಕಿ ಉಜ್ಜಿ ಇದರಿಂದ ಬೇಗನೆ ಕಲೆ ದೂರವಾಗುವುದು.
- ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.