ಕಾಫಿ ಟೇಬಲ್, ಆಯ್ಕೆ, ಅಲಂಕಾರ ಇರಲಿ ಕಾಳಜಿ
Team Udayavani, Oct 27, 2018, 2:56 PM IST
ಮುಂಜಾನೆ ದಿನಪತ್ರಿಕೆಯೊಂದಿಗೆ ಕಾಫಿ ಅಥವಾ ಟೀ ಕುಡಿಯುತ್ತ ದಿನ ಆರಂಭಿಸುವ ಅಭ್ಯಾಸ ಹೆಚ್ಚಿನವರಿಗಿರುತ್ತದೆ. ಹೀಗೆ ದಿನವನ್ನು ಸ್ವಾಗತಿಸುತ್ತಾ ಕುಳಿತಿರುವಾಗ ನಿಮ್ಮ ಹತ್ತಿರ ಒಂದು ಸುಂದರವಾದ ಕಾಫಿ ಟೇಬಲ್‌ವೊಂದಿದ್ದರೆ ಅದು ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ. ವಿಶಿಷ್ಟ ಕಾಫಿ ಟೇಬಲ್ ಮನೆಗೆ ಮತ್ತಷ್ಟು ಮೆರುಗು ನೀಡುತ್ತದೆ. ಕಾಫಿ ಟೇಬಲ್ ನಲ್ಲಿ ಕಾಫಿ ಮಾತ್ರವಲ್ಲ ಅಲ್ಲಿ ನಿಮ್ಮ ನೆಚ್ಚಿನ ಪುಸ್ತಕ, ಪತ್ರಿಕೆಗಳನ್ನಿಡಬಹುದು. ಇದನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ಮನೆಯ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು.
ಕಾಫಿ ಟೇಬಲ್ ಬುಕ್
ಕಾಫಿ ಟೇಬಲ್ ಬುಕ್ ಎಂದರೆ ನಿಮ್ಮ ಮನೆಯ ಕಾಫಿ ಟೇಬಲ್ ನಲ್ಲಿ ನೀವು ಪ್ರದರ್ಶಿಸುತ್ತಿರುವ ಪುಸ್ತಕ. ಮನೆಗೆ ಬಂದ ಅತಿಥಿಗಳಿಗೆ ಇದು ನಿಮ್ಮ ಮನೆಯ ವಾತವರಣ ಹಾಗೂ ಅಭಿರುಚಿಯನ್ನು ಪರಿಚಯಿಸುತ್ತದೆ. ಕೆಲವೊಂದು ಬಾರಿ ಚರ್ಚೆ ವಿಷಯವಾಗುತ್ತದೆ. ಜತೆಗೆ ಅತಿಥಿಗಳಲ್ಲಿ ಓದುವಿಕೆಯನ್ನು ಆಸಕ್ತಿಯನ್ನು ಹೆಚ್ಚಿಸುತ್ತದೆ.
ಹೇಗಿರಬೇಕು?
ಸಾಮಾನ್ಯ ಕಾಫಿ ಟೇಬಲ್ ಮನೆಯ ಆಲಂಕಾರಿಕ ವಸ್ತುವಾಗಲಾರದು. ಹೀಗಾಗಿ ಮನೆಯ ಸೌಂದರ್ಯವನ್ನು ಹೆಚ್ಚಿಸಬೇಕೆಂದಿದ್ದರೆ ಕಾಫಿ ಟೇಬಲ್ ಆಯ್ಕೆಯಲ್ಲಿ ಎಚ್ಚರವಹಿಸಬೇಕು. ಕಾಫಿ ಟೇಬಲ್ ಕಾಫಿ ಇಡಲು ಮಾತ್ರವಲ್ಲ, ಪುಸ್ತಕ, ಪತ್ರಿಕೆ, ಪೆನ್ ಸ್ಟಾಂಡ್, ಹೂದಾನಿ ಮೊದಲಾದವುಗಳನ್ನು ಇಡಲು ಇದರ ಮೇಲೆ ಅವಕಾಶವಿರಬೇಕು. ಎರಡು ರ್ಯಾಕ್‌ನ ಕಾಫಿ ಟೇಬರ್ ಗಳಿದ್ದರೆ ಉತ್ತಮ. ಇಲ್ಲದಿದ್ದರೆ ಕಾಫಿ ಇಡುವ ಜಾಗದಲ್ಲಿ ಬೇರೆ ವಸ್ತುಗಳ ಹರಡಿಕೊಂಡಿರುತ್ತವೆ. ಕಾಫಿ ಟೇಬಲ್ ಮೇಲ್ಭಾಗದಲ್ಲಿ ಪುಸ್ತಕ ಅಥವಾ ಹೂದಾನಿ ಬಿಟ್ಟರೆ ಬೇರಾವ ವಸ್ತುಗಳನ್ನು ಇಡಬೇಡಿ. ಉಳಿದ ವಸ್ತುಗಳು ಕೆಳಭಾಗದಲ್ಲಿರಲಿ. ಕಾಫಿ ಟೇಬಲ್ ನಲ್ಲಿ ಸದ್ಯ ಹಲವಾರು ಟ್ರೆಂಡ್ ಗಳಿವೆ. ಇವುಗಳ ಆಯ್ಕೆ ಮಾಡಿದರೆ ಮನೆಯನ್ನು ಮತ್ತಷ್ಟು ಸುಂದರಗೊಳಿಸಬಹುದು.
ವಿಂಟೇಜ್ ಕಾಫಿ ಟೇಬಲ್
ರೆಟ್ರೋ ಅಥವಾ ವಿಂಟೇಜ್ ಶೈಲಿಯನ್ನು ನೀವು ಹೆಚ್ಚಾಗಿ ಪಾಲಿಸುತ್ತೀರಿ ಎಂದಾದರೆ ಸರಳ ವೃತ್ತಾಕಾರದ ಮರದ ಕಾಫಿ ಟೇಬಲ್ ಗಳನ್ನು ಬಳಸಿ. ಸುಗಂಧಭರಿತ ಮರಗಳಿಂದ ತಯಾರಿಸಿರುವ ಕಾಫಿ ಟೇಬಲ್ ಗಳನ್ನು ಉಪಯೋಗಿಸಿ. ಇವು ನಿಮ್ಮ ಅಭಿರುಚಿಗೆ ತಕ್ಕಂತಿರುತ್ತವೆ. ರೆಟ್ರೋ ಶೈಲಿಯು ಅಲಂಕಾರಕ್ಕೆ ಸೂಕ್ತವಾಗಿರುತ್ತದೆ.
ಪಾಪ್ ಶೈಲಿ ಕಾಫಿ ಟೇಬಲ್
ಬೋಹೀಮಿಯನ್ ಎಂದರೆ ಸಂಗೀತ, ಕಲಾತ್ಮಕ, ಸಾಹಿ ತ್ಯಿಕ ಅಥವಾ ಅಧ್ಯಾತ್ಮಿಕ ಚಟುವಟಿಕೆಗಳಿಂದ ಕೂಡಿರುವುದು. ವಿನ್ಯಾಸಗಳಿರು ಮೆಟಲ್ ಟೇಬಲ್ ಗಳನ್ನು ಉಪಯೋಗಿಸಿ. ಇತ್ತೀಚೆಗೆ ಇಂಥ ಕಾಫಿಟೇಬಲ್ ಗಳೂ ಹೆಚ್ಚು ಪ್ರಚಲಿತಗೊಳ್ಳುತ್ತಿವೆ. ಗೋಡೆಬದಿಯಲ್ಲಿ ಇಟ್ಟರೆ ಮತ್ತಷ್ಟು ಸುಂದರವಾಗಿ ಕಾಣಿಸುತ್ತವೆ.
ತಗ್ಗಿನ ಕಾಫಿ ಟೇಬಲ್‌ಗಳು
ಎತ್ತರದ ಕಾಫಿ ಟೇಬಲ್ ಗಳ ಕಾಲ ಈಗಿಲ್ಲ. ಸೊಗಸಾದ ನೋಟಕ್ಕಾಗಿ ತಗ್ಗಿನ ಕಾಫಿ ಟೇಬಲ್ ಗಳು ಉತ್ತಮವಾಗಿರುತ್ತದೆ.
ಮಹಾರಾಜ ಶೈಲಿಯ ಕಾಫಿ ಟೇಬಲ್
1930ರ ಪೀಠೊಪಕರಣಗಳು 2018ರ ಪೀಠೊಪಕರಣಗಳಿಗೆ ಪ್ರೇರಣೆಯಾಗಿವೆ. 1930ರ ಶೈಲಿಗಳು ಇಂದು ಹೆಚ್ಚು ಪ್ರಚಲಿತದಲ್ಲಿವೆ. ಒಳ್ಳೆಯ ವಸ್ತು, ಸರಳ ಆಕಾರವು ಯಾವತ್ತು ಬೇಡಿಕೆ ಕಳೆದುಕೊಳ್ಳುವುದಿಲ್ಲ. ಕಾಫಿ ಟೇಬಲ್ ಗಳಲ್ಲಿ ರಾಯಲ್ ಲುಕ್ ಗಳನ್ನು ಯಾರು ಬೇಡವೆನ್ನುವುದಿಲ್ಲ.
ಕಾಫಿ ಟೇಬಲ್ ನಲ್ಲಿ ಪುಸ್ತಕಗಳಿಂದ ಓದುವಿಕೆಯಲ್ಲಿ ನೀವು ಹೆಚ್ಚು ತೊಡಗಿಸಿಕೊಳ್ಳುತ್ತೀರಿ. ಕಾಫಿ ಟೇಬಲ್ ನಲ್ಲಿ ಮೇಣದ ಬತ್ತಿಗಳು ಅಥವಾ ಗಿಡಗಳಿದ್ದರೆ ನೀವು ಶಾಂತಿಪ್ರಿಯರು ಹಾಗೂ ಸ್ನೇಹಜೀವಿಗಳಾಗಿರುತ್ತೀರಿ. ಟೇಬಲ್ ಗಳು ಸಣ್ಣ ಆಭರಣಗಳಿಂದ ಕೂಡಿದ್ದರೆ ನೀವು ಕಲಾತ್ಮಕ ವ್ಯಕ್ತಿಯಾಗಿರುತ್ತೀರಿ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಕಾಫಿ ಟೇಬಲ್ ಗಳ ಆಯ್ಕೆಯಲ್ಲಿ ಎಷ್ಟು ಕಾಳಜಿ ವಹಿಸುತ್ತೀರೋ, ಅಲಂಕಾರದಲ್ಲೂ ಅಷ್ಟೇ ಕಾಳಜಿ ಇರಲಿ.
ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.