ಕಲರ್‌ಫುಲ್ ಪ್ಯಾಂಟ್
Team Udayavani, Jul 6, 2018, 2:28 PM IST
ಫ್ಯಾಶನ್ ಜಗತ್ತು ದಿನೇ ದಿನೇ ಅಪ್‌ಡೇಟ್ ಆಗುತ್ತಲೇ ಇದೆ. ಅದರಲ್ಲೂ ಹುಡುಗಿಯರ ಫ್ಯಾಶನ್ ಪ್ರಪಂಚದಲ್ಲಿ ಹೊಸತನಗಳು ನಿರಂತರ. ಲಂಗದಾವಣಿ ಹಾಕುತ್ತಿದ್ದ ಸಾಂಪ್ರದಾಯಿಕ ಕಾಲದಿಂದ ಜೀನ್ಸ್, ಸ್ಕರ್ಟ್‌ಗಳ ಆಧುನಿಕ ಯುಗಕ್ಕೆ ಬಂದಾಯಿತು. ಟೀ ಶರ್ಟ್ ಜತೆಗೆ ನಾನಾ ವಿಧದ ಪ್ಯಾಂಟ್‌ಗಳ ಕಮಾಲ್ ಹೊಸ ಸೇರ್ಪಡೆ.
ಬಣ್ಣ ಬಣ್ಣದ ಜೆಗ್ಗಿಂಗ್ಸ್
ಜೀನ್ಸ್ ಪ್ಯಾಂಟ್ ಹುಡುಗಿಯರ ಪ್ರಿಯ ಧಿರಿಸಿನಲ್ಲೊಂದು. ಈ ಜೀನ್ಸ್‌ನಲ್ಲಿಯೂ ಹಲವು ವೆರೈಟಿಗಳನ್ನು ನೋಡಿದ್ದಾಯಿತು. ಸಾದಾ ಸೀದ ಕಪ್ಪು, ನೀಲಿ, ಬಿಳಿ ಬಣ್ಣದ ಜೀನ್ಸ್ ಗಳಿಂದ ಹಿಡಿದು ನೀಲಿ ಬಣ್ಣದ ನಡುವಿನಲ್ಲಿ ಬಿಳಿ, ಬೂದು ಜೀನ್ಸ್ ಫ್ಯಾಶನ್ ಹಳತಾದಂತೆ ಜೀನ್ಸನ್ನೇ ಹೋಲುವ ಪ್ರಿಂಟೆಡ್ ಡಿಸೈನ್ ಹೊಂದಿರುವ ಜೆಗ್ಗಿಂಗ್ಸ್‌ಗಳು ಈಗ ಹುಡುಗಿಯರ ಫ್ಯಾಶನ್ ಪ್ರಪಂಚದಲ್ಲಿ ಕಾಣಿಸಿಕೊಂಡಿವೆ.
ತಿಳಿ ಗುಲಾಬಿ, ತಿಳಿ ಕೇಸರಿ ಬಣ್ಣ
ಜೀನ್ಸ್ ಪ್ಯಾಂಟಿನಲ್ಲಿ ನಾನಾ ಬಣ್ಣದ ಪ್ಯಾಂಟುಗಳು ಮನ ಸೆಳೆಯುತ್ತಿವೆ. ಅದರಲ್ಲೂ ಕೆಂಪು, ಪಿಂಕ್, ಗುಲಾಬಿ, ತಿಳಿ ಕೇಸರಿ ಬಣ್ಣದ ಪ್ಯಾಂಟ್‌ಗಳು ಹುಡುಗಿಯರ ಆಕರ್ಷಣೆಗೆ ಕಾರಣವಾಗುತ್ತಿವೆ. ಜೀನ್ಸ್‌ನಂತೇ ಕಾಣುವ ಜೆಗ್ಗಿಂಗ್ಸ್‌ಗಳಲ್ಲಿಯೂ ನಾನಾ ವೆರೈಟಿಗಳಿದ್ದು, ಬಣ್ಣ ಬಣ್ಣದ ಜೆಗ್ಗಿಂಗ್ಸ್‌ಗಳು ಮಾರುಕಟ್ಟೆಯನ್ನಾವರಿಸಿವೆ. ಈಗ ನಗರದ ಸಿಟಿ ಸೆಂಟರ್ ಮಾಲ್‌ನ ಕೆಲವು ಶಾಪ್‌ಗ್ಳಲ್ಲಿ ಶೇ. 50ರಷ್ಟು ದರ ಕಡಿತ ಮಾರಾಟವಿರುವುದರಿಂದ ಬಣ್ಣ ಬಣ್ಣದ ಜೆಗ್ಗಿಂಗ್ಸ್ ಮತ್ತು ಜೀನ್ಸ್‌ಗೆ ಬೇಡಿಕೆ ಕುದುರಿದೆ. ಸ್ಪಾರ್ ಶಾಪ್‌ನಲ್ಲಿ 1,000ಕ್ಕೂ ಹೆಚ್ಚು ಬೆಲೆ ಬಾಳುವ ಪ್ಯಾಂಟ್‌ಗಳು ಕೇವಲ 500 ರೂ. ಗಳಿಗೂ ದೊರೆಯುತ್ತಿವೆ. ಹೊರಗಿನ ಶಾಪ್‌ಗಳಲ್ಲಿಯೂ ಸುಮಾರು 700 ರೂ.ಗಳಿಂದ 2,000 ರೂ.ಗಳ ತನಕವೂ ಬೆಲೆ ಇದೆ.
ತ್ರೀಫೋರ್ತ್ ಜೆಗ್ಗಿಂಗ್ಸ್
ವಿಶೇಷವೆಂದರೆ ಈಗಿನ ಟ್ರೆಂಡ್‌ಗನುಗುಣವಾಗಿ ಫುಲ್ ಲೆಗ್ ಪ್ಯಾಂಟ್ ಗಳಿಗಿಂತ ಹೆಚ್ಚಾಗಿ ತ್ರೀಫೋರ್ತ್ ಪ್ಯಾಂಟ್‌ಗಳಿಗೇ ಬೇಡಿಕೆ ಹೆಚ್ಚಿದೆ. ಅದೂ ಕಾಲಿನಿಂದ ಸ್ವಲ್ಪ ಮೇಲ್ಭಾಗದವರೆಗೆ ಮಾತ್ರ ಈ ಪ್ಯಾಂಟ್ ಸ್ಟಿಚ್ ಆಗಿರುವುದರಿಂದ ನೋಡುಗರಿಗೆ ಆಕರ್ಷಕವಾಗಿ ಕಾಣುತ್ತದೆ. ತಿಳಿ ಕೇಸರಿ, ತಿಳಿ ಪಿಂಕ್ ಮತ್ತು ನೇರಳೆ ಬಣ್ಣದ ಪ್ಯಾಂಟ್‌ಗಳು ಹುಡುಗಿಯರ ಫೇವರಿಟ್ ಆಗಿದೆ. ತ್ರೀಫೋರ್ತ್ ಪ್ಯಾಂಟ್ ಸಿಗದಿದ್ದಲ್ಲಿ ಫುಲ್ ಲೆಗ್ ಪ್ಯಾಂಟನ್ನೇ ಕಟ್ ಮಾಡಿ ತ್ರೀಫೋರ್ತ್ ಸೈಝ್ಗಿಳಿಸಿ ಧರಿಸುವ ಟ್ರೆಂಡ್ ಕೂಡಾ ಈಗ ಜಾಸ್ತಿಯಾಗುತ್ತಿದೆ.
ಸೈಝ್ ನೋಡಿ ಖರೀದಿಸಿ
ಹೆಚ್ಚಾಗಿ ಎಲ್ಲ ಸೈಝ್ನವರಿಗೆ ಹೊಂದಿಕೆಯಾಗುವ ಪ್ಯಾಂಟ್‌ಗಳು ಬಟ್ಟೆ ಅಂಗಡಿಗಳಲ್ಲಿ ಧಾರಾಳವಾಗಿ ದೊರೆಯುತ್ತವೆ. ಆದರೂ ಕೆಲವೊಮ್ಮ ಇಷ್ಟವಾದ ಪ್ಯಾಂಟ್ ಸೈಝ್ ದೊಡ್ಡದಾಗಿರುತ್ತದೆ. ಹೀಗಿದ್ದಾಗ ಸೈಝ್ನ್ನು ಸಣ್ಣ ಮಾಡಬಹುದು ಎಂದು ಕೊಳ್ಳಲು ಹೋದರೆ ಕೆಲವೊಮ್ಮೆ ಸೌಂದರ್ಯಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ. ದೊಡ್ಡ ಸೈಝ್ನ ಪ್ಯಾಂಟನ್ನು ತೆಳ್ಳಗಿರುವವರು ಸಣ್ಣದಾಗಿಸಿಕೊಂಡರೆ ಅದು ಕಾಲಿನಲ್ಲಿ ಸರಿಯಾಗಿ ನಿಲ್ಲದೆ ಸಡಿಲವಾಗಿ ಕಾಣುತ್ತದೆ. ಇದು ಜೀನ್ಸ್ ಮೇಲೆ ಶರ್ಟ್ ಧರಿಸಿದಾಗ ಚೆನ್ನಾಗಿ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿ ಚೆನ್ನಾಗಿದೆ ಎಂದು ಖರೀದಿಸದೆ, ಸೈಝ್ನ್ನು ಸರಿಯಾಗಿ ನೋಡಿಕೊಂಡು ಖರೀದಿಸುವುದು ಉತ್ತಮ.
ತೆಳ್ಳಗಿನ ಶರೀರದವರು ಆದಷ್ಟು ತೆಳುವಾದ ಪ್ಯಾಂಟ್ ಗಳ ಬದಲಾಗಿ ದಪ್ಪಗಿರುವ ಪ್ಯಾಂಟ್‌ಗಳನ್ನು ಖರೀದಿಸಿದರೆ
ಒಳ್ಳೆಯದು. ಏಕೆಂದರೆ ತೆಳುವಾದ ಪ್ಯಾಂಟ್‌ಗಳು ಕಾಲಿಗೆ ಅಂಟಿಕೊಂಡು ನಿಲ್ಲುವುದರಿಂದ ಕಾಲು ಸಪೂರವಾಗಿ ಕಾಣುವುದರಿಂದ ಅದು ಆಕರ್ಷಕವಾಗಿ ಕಾಣುವುದಿಲ್ಲ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.