ಸ್ಮಾರ್ಟ್‌ ನಗರಕ್ಕೆ ಪೂರಕ ಮೋನೋ ಹ್ಯಾಂಗಿಂಗ್‌ ರೈಲು

Team Udayavani, Sep 15, 2019, 5:10 AM IST

as-13

ದೇಶದ ಎಲ್ಲ ಪ್ರಮುಖ ನಗರಗಳು ಹಲವು ಸಮಸ್ಯೆಗಳ ನಡುವೆ ಒದ್ದಾಡುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ವಾಹನಗಳ ದಟ್ಟಣೆ, ರಸ್ತೆಗಳೆಲ್ಲ ವಾಹನಮಯವಾಗಿರುವಾಗ ಜನಸಂಚಾರಕ್ಕೆ ಜಾಗವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಮೂಲೆ ಮೂಲೆಯಲ್ಲಿನ ಜನರು ನಗರ ಕೇಂದ್ರಗಳನ್ನು ಆಶ್ರಯಿಸುವಾಗ ಇಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುವುದು ಸಹಜ. ಸೀಮಿತ ವಲಯದಲ್ಲಿ ಎಲ್ಲವನ್ನೂ ಕಟ್ಟಿಕೊಡುವ ಪ್ರಯತ್ನ ಮತ್ತು ಮುಂದಾಲೋಚನೆ ಇಲ್ಲದಿರುವುದರಿಂದ ನಗರ ಇಂದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.

ನಗರದಲ್ಲಿನ ಈ ಇಕ್ಕಟ್ಟಿನ ಬದುಕು ಮುಂದೆ ಅನೇಕ ಸಮಸ್ಯೆಗಳನ್ನು ತಂದೊಡ್ಡಲಿದೆ ಎನ್ನುವುದು ದೇಶದ ಪ್ರಮುಖ ನಗರವಾದ ಹೊಸದಿಲ್ಲಿಯನ್ನು ನೋಡಿದಾಗ ತಿಳಿದು ಬರುತ್ತದೆ. ಟ್ರಾಫಿಕ್‌ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದೇ ಸಮ, ಬೆಸ ಸಂಖ್ಯೆಯಲ್ಲಿ ಗಾಡಿಗಳು ರಸ್ತೆಗಿಳಿಸುವಂತಹ ವ್ಯವಸ್ಥೆ ಅಲ್ಲಿ ಜಾರಿಯಾಗಿದೆ ಅಂದರೆ ಗಂಭೀರತೆಯ ಅರಿವು ನಿಮಗೆ ಬಾರದೆ ಇರಲಾರದು. ಮುಂದುವರಿದಿರುವ ಅನೇಕ ವಿದೇಶಗಳ ನಗರಗಳಲ್ಲಿ ಮೇಲಿನ ಸಮಸ್ಯೆಗಳಿಗೆ ಒಂದೊಂದಾಗಿ ಉತ್ತರ ಕಂಡುಕೊಳ್ಳಲಾಗಿದೆ. ಅದರಲ್ಲಿ ಮೋನೋ ಹ್ಯಾಂಗಿಂಗ್‌ ರೈಲು ಕೂಡ ಒಂದು.

ಏನಿದು ಮೋನೋ ಹ್ಯಾಂಗಿಂಗ್‌ ರೈಲು
ನಗರದಲ್ಲಿನ ಜನಸಂಚಾರದ ಒತ್ತಡವನ್ನು ಕಡಿಮೆ ಮಾಡಲು ರೈಲು ಮಾರ್ಗದ ನಿರ್ಮಾಣಕ್ಕೆ ಸರಿಯಾದ ಸ್ಥಳಾವಕಾಶ ನಗರಗಳಲ್ಲಿ ಇಲ್ಲದೇ ಇರುವುದರಿಂದ ರೈಲಿನಂತೆಯೇ ಕಾರ್ಯನಿರ್ವಹಿಸುವ ಮೋನೋ ಹ್ಯಾಂಗಿಂಗ್‌ ರೈಲುಗಳು ಕಾರ್ಯರೂಪಕ್ಕೆ ಬಂದವು. ಈ ಮೋನೋ ಹ್ಯಾಂಗಿಂಗ್‌ ರೈಲು ಹೆಸರು ಮತ್ತು ಚಿತ್ರವೇ ಹೇಳುವಂತೆ ಇದು ನಾವು ಕಂಡ ರೈಲಿನಂತೆ ಕಾರ್ಯನಿರ್ವಹಿಸುವುದಿಲ್ಲ. ಇವು ಪಿಲ್ಲರ್‌ಗಳ ಮೂಲಕ ಹ್ಯಾಂಗಿಂಗ್‌ ರೈಲಿಗೆ ಆಧಾರವಾಗಿ ಸುಧಾರಿತ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಸಾಂಪ್ರದಾಯಿಕ ರೈಲು ವ್ಯವಸ್ಥೆಗಳ ಮೇಲೆ ಮೋನೋ ರೈಲುಗಳ ಪ್ರಾಥಮಿಕ ಪ್ರಯೋಜನವೆಂದರೆ ಅವುಗಳಿಗೆ ಅಡ್ಡಲಾಗಿ ಮತ್ತು ಲಂಬವಾಗಿ ಕನಿಷ್ಠ ಸ್ಥಳಾವಕಾಶ ಬೇಕಾಗುತ್ತದೆ. ಆಧುನಿಕ ಮೋನೋ ರೈಲ್‌ಗ‌ಳು ಕಾಂಕ್ರೀಟ್‌ ಟ್ರ್ಯಾಕ್‌ನಲ್ಲಿ ರಬ್ಬರ್‌ ಚಕ್ರಗಳನ್ನು ಬಳಸುವುದರಿಂದ ಶಬ್ದ ರಹಿತವಾಗಿವೆ. ಮೋನೋ ರೈಲ್‌ಗ‌ಳು ಭಾರೀ ಅಥವಾ ಲಘು ರೈಲು ವ್ಯವಸ್ಥೆಗಳಿಗಿಂತ ಕಡಿದಾದ ಶ್ರೇಣಿಗಳನ್ನು ಏರಲು ಮತ್ತು ಇಳಿಯಲು ಸಮರ್ಥವಾಗಿವೆ. ಇಂತಹ ಈ ಮೋನೋ ಹ್ಯಾಂಗಿಂಗ್‌ ರೈಲುಗಳು ಜಪಾನ್‌ನ ಪ್ರಮುಖ ನಗರಗಳಲ್ಲಿ ಕಂಡು ಬರುತ್ತವೆ.

ಈಗಾಗಲೇ ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳು ಚಾಲ್ತಿಯಲ್ಲಿದೆ. ಇವು ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ ಸುಗುಮ ಸಂಚಾರಕ್ಕೆ ಸಹಕರಿಸಿದೆ. ಮೆಟ್ರೋ ಬಂದ ಬಳಿಕ ಬೆಂಗಳೂರಿನ ಅದೆಷ್ಟೋ ಜನರು ತಮ್ಮ ವಾಹನಗಳನ್ನು ಬಳಸುವುದನ್ನು ಬಿಟ್ಟು ದಿನನಿತ್ಯದ ಓಡಾಟಕ್ಕೆ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಮೆಟ್ರೋ ರೈಲುಗಳ ಆಗಮನ ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಒಂದು ರೀತಿ ಅಲ್ಫಾವಧಿಯ ಪರಿಹಾರವಾಗಿ ಬದಲಾಗಿದೆ.

ಪರಿಸರ, ಆರೋಗ್ಯಕ್ಕೆ ಹಾನಿಯಿಲ್ಲ
ವಾಹನಗಳು ಹೆಚ್ಚಾದಂತೆ ವಾಯುಮಾಲಿನ್ಯ, ಪರಿಸರ ಮಾಲಿನ್ಯಗಳು ಅಧಿಕವಾಗುತ್ತಿದೆ. ವಾಹನಗಳಿಂದ ಬಿಡುಗಡೆಯಾಗುವ ಕಾಬೋìನ್‌ ಡೈ ಆಕ್ಸಿಡ್‌ಗಳು ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮೇನೋ ರೈಲುಗಳಿಂದ ವಾಹನಗಳಿಂದ ಉಂಟಾಗುವ ಮಾಲಿನ್ಯ ಸಮಸ್ಯೆಗಳಿಲ್ಲ. ಇದರಿಂದಾಗಿ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಯಾವುದೇ ಸಮಸ್ಯೆಯಿಲ್ಲ ಮಂಗಳೂರಿನಲ್ಲೂ ಮೇನೋ ರೈಲುಗಳು ಕಾಣುವಂತಾಗಲಿ ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ನಮ್ಮ ಮಂಗಳೂರು ನಗರ ಯೋಜಿಸಿಕೊಂಡ ಬೃಹತ್‌ ಕಾಮಗಾರಿಗಳನ್ನು ಪಾರದರ್ಶಕವಾಗಿ ನಿರ್ಮಿಸುವಲ್ಲಿ ವೆೇಗವನ್ನು ಕಂಡುಕೊಂಡರೆ, ನಗರಕ್ಕೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕತ್ತರಿ ಬೀಳಬಹುದು. ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು, ಪರ್ಯಾಯ ದಾರಿಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ವಿದೇಶಗಳಲ್ಲಿ ಸೃಷ್ಟಿಯಾಗಿರುವ ಹ್ಯಾಂಗಿಂಗ್‌ ಮೊನೋ ರೈಲಿನಂತಹ ಯೋಜನೆಗಳು ನಮ್ಮ ನಗರದಲ್ಲೂ ಜಾರಿಯಾದರೆ ರಸ್ತೆಗಳಲ್ಲಿ ವಾಹನ ದಟ್ಟಣೆಗೆ ಸ್ವಲ್ಪ ಮಟ್ಟಿಗೆ ಬ್ರೇಕ್‌ ದೊರಕಲು ಸಾಧ್ಯ ಜತೆಗೆ ಪಾದಚಾರಿಗಳಿಗೆ ಯಾವುದೇ ಸಮಸ್ಯೆಗಳಿಲ್ಲದೆ ರಸ್ತೆಯಲ್ಲಿ ಓಡಾಡಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಇದರೊಂದಿಗೆ ಸ್ಮಾರ್ಟ್‌ ನಗರದ ಕಲ್ಪನೆಗೆ ಈ ಯೋಜನೆಯೂ ಹೇಳಿ ಮಾಡಿಸಿದಂತಿದೆ.

ಎಲ್ಲಿ,ಹೇಗೆ ಉಪಯೋಗ?
·  ಈ ಮೋನೋ ರೈಲು ವಾಹನದ ಒತ್ತಡವನ್ನು ಎದುರಿಸುವ ನಗರಗಳಲ್ಲಿ ಬಳಸಬಹುದು.
·  ಪ್ರಮುಖವಾಗಿ ಸ್ಥಳಾವಕಾಶದ ಕೊರತೆ ಎದುರಿಸುವ ನಗರಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದು.
·  ಜನರು ಹೆಚ್ಚು ಹೊತ್ತು ಟ್ರಾಫಿಕ್‌ನಲ್ಲಿ ಕಳೆಯುವುದನ್ನು ತಪ್ಪಿಸುತ್ತದೆ.
·  ಪರಿಸರ ಮತ್ತು ಆರೋಗ್ಯ ದೃಷ್ಟಿಯಿಂದ ಉತ್ತಮ.

-  ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.