“ಕಾಂಪೋಸ್ಟ್ ಸ್ಪ್ರೆಡ್ಡರ್’
Team Udayavani, Feb 23, 2020, 4:21 AM IST
ಕಾಂಪೋಸ್ಟ್ ಗೊಬ್ಬರವನ್ನು ಹರಡುವ ಯಂತ್ರಚಾಲಿತ ಉಪಕರಣ ಇದು. ಇದರ ಹೆಸರು “ಕಾಂಪೋಸ್ಟ್ ಸ್ಪ್ರೆಡ್ಡರ್’. ದೊಡ್ಡ ಪ್ರಮಾಣದಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಹಾಕುವ ಸಂದರ್ಭದಲ್ಲಿ ಈ ಯಂತ್ರ ಸಮಯ ಮತ್ತು ಹೆಚ್ಚಿನ ಮಾನವ ಶ್ರಮವನ್ನು ಉಳಿಸುತ್ತದೆ.
ಹಾಗಾಗಿ ಇದರ ಉಪಯೋಗ ಇತ್ತೀಚೆಗೆ ಹೆಚ್ಚಲು ಆರಂಭವಾಗಿದೆ.ಹಿಂದಿನ ಚಕ್ರಗಳ ಚಲನೆಯನ್ನು ಆಧರಿಸಿ ಇದು ಚಾಲನೆಯಾಗುತ್ತದೆ. ಇದನ್ನು ಟ್ರ್ಯಾಕ್ಟರ್‌ನ ಹಿಂಭಾಗ ಅಳವಡಿಸಿದರೆ ಸಾಕಾಗುತ್ತದೆ. ಉಪಕರಣದಲ್ಲಿ ಫ್ಯಾನ್ ಮಾದರಿಯ ಬ್ಲೇಡುಗಳಿದ್ದು, ಅದನ್ನು ಚಾಲಕ ನಿಯಂತ್ರಿಸುತ್ತಾನೆ. ಮೊದಲಿಗೆ ಗದ್ದೆಯ ವಿವಿಧ ಜಾಗಗಳಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಗುಡ್ಡೆ ಹಾಕಬೇಕು. ಅನಂತರ ಟ್ರ್ಯಾಕ್ಟರ್‌ನ ಫ್ಯಾನ್ ಇರುವ ಭಾಗವನ್ನು ಆ ರಾಶಿಯ ಬಳಿ ಕೊಂಡೊಯ್ಯಬೇಕು. ಬ್ಲೇಡುಗಳನ್ನು ತಿರುಗುವ ಸ್ಥಿತಿಯಲ್ಲಿ ಕೆಳಕ್ಕಿಳಿಸುತ್ತಾ ಗೊಬ್ಬರದ ರಾಶಿಯ ಮೇಲೆ ಒತ್ತುತ್ತಿರುವಂತೆಯೇ ಗೊಬ್ಬರ ಸುತ್ತಲೂ ಹರಡಿ ಹೋಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.