ಫ್ಲಾಪಿ : ಎರಡು ದಶಕ ಆಳಿದ ತರುಣ


Team Udayavani, Feb 15, 2020, 6:30 AM IST

floopy

ಜಗತ್ತು ಬದಲಾಗುವುದಕ್ಕೆ ಕ್ರಮವಿಲ್ಲ. ಅದು ನದಿಯ ಹಾಗೆ ; ಝರಿಯ ಹಾಗೆ. ತನ್ನ ದಾರಿಯನ್ನು ತಾನೇ ಮಾಡಿಕೊಂಡು ಸಾಗುತ್ತಲೇ ಇರುತ್ತದೆ. ಉಳಿದೆಲ್ಲವೂ ಅದನ್ನು ಹಿಂಬಾಲಿಸಬೇಕು. ತಂತ್ರಜ್ಞಾನದ ಕ್ರಮವೂ ಹಾಗೆಯೇ ಇದೆ. ತನ್ನಷ್ಟಕ್ಕೇ ದಾಪುಗಾಲು ಇಡುತ್ತಾ ಸಾಗುತ್ತಿದೆ.
ನಾವೆಲ್ಲಾ ಹಿಂಬಾಲಿಸುತ್ತಿದ್ದೇವೆ ಅಷ್ಟೇ.

ನಿಜ, ಜಗತ್ತು ಬದಲಾಗುವುದಕ್ಕೆ ಯಾವ ಕ್ರಮವೂ ಇಲ್ಲ. ಅದರ ಇಷ್ಟ. ಮೂರು ದಶಕಗಳ ಕಥೆಗಳಲ್ಲಿ ಉಲ್ಲೇಖವಾಗುತ್ತಿರುವುದೇ ಅದು. ಹೇಗೆ ತಾಂತ್ರಿಕ ಪ್ರಗತಿ ನಮ್ಮ ಬದುಕನ್ನು ಬದಲಾಯಿಸಿದೆ, ಬದುಕಲು ಹೊಸ ಕ್ರಮ ಕಲಿಸಿದೆ ಹಾಗೂ ಬದುಕಿನ ಬಗ್ಗೆ ನೋಡುವ ಕ್ರಮವನ್ನು ಬದಲಾಯಿಸಿದೆ ಎಂಬುದನ್ನು ಲೆಕ್ಕ ಹಾಕಬೇಕು.

ಬಹಳಷ್ಟು ಇದೆ. ಲೌಡ್‌ ಸ್ಪೀಕರಗಳ ಕಥೆ ಕೇಳುವುದರ ಮೊದಲು ಕಂಪ್ಯೂಟರ್‌ ಗೆ ಬಳಸುತ್ತಿದ್ದ ಫ್ಲಾಪಿ ಡಿಸ್ಕ್ ಕಥೆ ಕೇಳಿ. 1970ರ ದಶಕದಲ್ಲಿ ಫ್ಲಾಪಿ ಚಾಲ್ತಿಗೆ ಬಂದಿತು. ನಮ್ಮಲ್ಲಿ ಆಗಲಿನ್ನೂ ಕಂಪ್ಯೂಟರ್‌ ತೀರಾ ವಿರಳವಾಗಿ ಜನ ಬಳಕೆಯಲ್ಲಿತ್ತು. ಆದರೆ 1990 ರ ಬಳಿಕ ಕಂಪ್ಯೂಟರ್‌ ಬಳಕೆ ತೀವ್ರವಾಗತೊಡಗಿತು. ಫ್ಲಾಪಿ ಸಹ ಇದೇ ಸಮಯದಲ್ಲಿ ಜನರ ಕೈಯಲ್ಲಿತ್ತು.
ಫ್ಲಾಪಿ ಏನು?

ಇವತ್ತು ಟಿಬಿ ಗಳ ಲೆಕ್ಕದಲ್ಲಿ ಹಾರ್ಡ್‌ ಡಿಸ್ಕ್ಗಳು ಬಂದಿವೆ, ಜಿಬಿ ಗಳ ಲೆಕ್ಕದಲ್ಲಿ ಪೆನ್‌ ಡ್ರೈವ್‌ಗಳು ಬಂದಿವೆ. ಈಗ ಎಲ್ಲೆಲ್ಲೂ ಅದರದ್ದೇ ಪ್ರಪಂಚ. 500 ಎಂಬಿ, ಒಂದು ಜಿಬಿ ಪೆನ್‌ ಡ್ರೈವ್‌ಗಳೆಲ್ಲಾ ಮೂಲೆಗುಂಪು ಸೇರಿ ವರ್ಷಗಳಾಗಿವೆ. ಈಗ ಏನಿದ್ದರೂ 60, 70, 100 ಜಿಬಿಗಳ ಪೆನ್‌ ಡ್ರೈವ್‌ಗಳು ಚಾಲ್ತಿಯಲ್ಲಿವೆ. ಆಗ ಅವೆಲ್ಲಾ ಕನಸು. ಆಗ ಈ ಪೆನ್‌ ಡ್ರೈವ್‌ಗಳ ಬದಲು ಬಳಕೆಯಲ್ಲಿದ್ದುದು 1.44 ಎಂಬಿ ಸಾಮರ್ಥ್ಯದ ಫ್ಲಾಪಿಗಳು. ಐಬಿಎಂ ಕಂಪೆನಿ ಇದನ್ನು ಚಾಲ್ತಿಗೆ ತಂದು ಜನಪ್ರಿಯಗೊಳಿಸಿತ್ತು. ಎಲ್ಲ  ಸಂಗ್ರಹಕ್ಕೆ ಅದೇ ಆಧಾರ.

ಸ್ವಾಮಿ, ನಿಮ್ಮಲ್ಲಿ ಫ್ಲಾಪಿ ಹಾಕೋಕೇ ಆಗುತ್ತಾ? ಎಂದು ಕಂಪ್ಯೂಟರ್‌ ಅಂಗಡಿಯಲ್ಲಿದ್ದವರನ್ನು ಕೇಳುವುದು ಆಗ ಸಾಮಾನ್ಯ. ಕೆಲವರ ಮನೆಗಳಲ್ಲಿ ಕಂಪ್ಯೂಟರ್‌ ಇದ್ದರೂ ಎಲ್ಲದರಲ್ಲಿ ಆ ಸೌಲಭ್ಯ ಇರುತ್ತಿರಲಿಲ್ಲ. ಒಂದುವೇಳೆ ಅದಿದ್ದರೆ ಅದೇ ಲೇಟೆಸ್ಟ್‌ ಕಂಪ್ಯೂಟರ್‌ ಎನ್ನಲಾಗುತ್ತಿತ್ತು.

1967ರ ಸುಮಾರಿಗೆ ಅಮೆರಿಕದಲ್ಲಿ ಬಳಕೆಗೆ ಬಂದದ್ದು ಫ್ಲಾಪಿ. 1972 ರಲ್ಲಿ ಎಂಟು ಇಂಚಿನ ಫ್ಲಾಪಿ ಬಳಕೆಗೆ ಬಂದಿತು. ಅಲ್ಲಿಯವರೆಗೆ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲಾದ ಮಾಹಿತಿ ರವಾನೆಗೆ ಸಿಕ್ಕ ಒಂದೇ ಅವಕಾಶವದು.

ಸುಮಾರು ಇಪ್ಪತ್ತು ವರ್ಷ ಕಂಪ್ಯೂಟರ್‌ ಜಗತ್ತನ್ನು ಆಳಿದ ಫ್ಲಾಪಿ ಯುಎಸ್‌ಬಿ ಮತ್ತು ಎಸ್‌ಡಿ ಕಾರ್ಡ್‌ ಗಳು ಆಗಮಿಸುತ್ತಿದ್ದಂತೆ ತೆರೆಗೆ ಸರಿಯಿತು. ಒಂದು ಪರಿಕಲ್ಪನೆಯ ಆಯಸ್ಸು ಇಪ್ಪತ್ತು ವರ್ಷ ಎಂಬುದು ದೊಡ್ಡದೇ ಎಂದೆನಿಸಬಹುದು. ಆದರೆ, ಹಿಂದಕ್ಕೆ ಹೋಲಿಸಿದರೆ ಕಡಿಮೆ. ತಾಂತ್ರಿಕ ಪ್ರಗತಿಯ ವೇಗ ಹೇಗೆ ಬದಲಾಗುತ್ತಿದೆ ಎಂಬುದಕ್ಕೂ ಫ್ಲಾಪಿ ಸಾಕ್ಷಿಯಾಗಿ ನಿಂತಿತು.

ಭಾರತದ ಕಂಪೆನಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕೆಂಬ ಹುಚ್ಚು ಸಣ್ಣದೇನೂ ಆಗಿರಲಿಲ್ಲ. ಫ್ಲಾಪಿ ಕಂಪ್ಯೂಟರ್‌ನ ಅವಿಭಾಜ್ಯ ಅಂಗವೆನಿಸಿದಾಗ ನಮ್ಮ ದೇಶದ ಫ್ಲಾಪಿ ತಯಾರಕ ಕಂಪೆನಿಯೊಂದು ಬಹಳ ಪ್ರಸಿದ್ಧವಾಗಿಬಿಟ್ಟಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, ಬೇರೆ ದೇಶಗಳ ಫ್ಲಾಪಿಗಳಿಗೆ ಸವಾಲೊಡ್ಡುವಷ್ಟು ಬೃಹತ್ತಾಗಿ ಬೆಳೆದಿತ್ತು. ಅದೇ ಅಮೆRಟ್‌.

1986 ರ ಸಂದರ್ಭದಲ್ಲಿ ರಾಜೀವ್‌ ಬಾಪ್ನಾ ಎಂಬ ಉದ್ಯಮಿ, ಅಮೆRಟ್‌ ಕಂಪೆನಿಯನ್ನು ಸ್ಥಾಪಿಸಿದರು. ಫ್ಲಾಫಿ ತಯಾರಿಕೆಯಲ್ಲಿ ಜಾಗತಿಕ ದಿಗ್ಗಜ ಕಂಪೆನಿಗಳಾದ ಸೋನಿಗೆ ಸವಾಲು ಕೊಟ್ಟವರು. ತಾಂತ್ರಿಕ ಪದವೀಧರನಾಗಿ, ಐಐಟಿ ದಿಲ್ಲಿಯಲ್ಲಿ ಎಂಟೆಕ್‌ ಮುಗಿಸಿ ಬಂದವರು ಬಾಪ್ನಾ. ಸರಕಾರಿ ಉದ್ಯೋಗ ಮಾಡಿ, ಅಲ್ಲಿಂದ ಸೌದಿ ಅರೇಬಿಯಾಕ್ಕೆ ಹೋಗಿ, ಬಳಿಕ ಮತ್ತೆ ಬೇರೆ ಬೇರೆ ಬ್ಯಾಂಕುಗಳ ತಾಂತ್ರಿಕ ವಿಭಾಗಗಳನ್ನು ಮುನ್ನಡೆಸಿ ಒಂದು ಕ್ಷಣ ನಿಂತವರು. ದೇಶದಲ್ಲಿ ದೂರ ಸಂಪರ್ಕ ಕ್ಷೇತ್ರ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರ ವೇಗ ಪಡೆಯುತ್ತಿದ್ದ ಹೊತ್ತು ಅದು.

ಕಂಪ್ಯೂಟರ್‌ಗಳು ಆಗಲೇ ಎಲ್ಲರ ಮನೆಯಂಗಳಕ್ಕೆ ಬರುತ್ತಿದ್ದವು. ಈ ಸಂದರ್ಭದಲ್ಲಿ ಸ್ಟೋರೇಜ್‌ ಕ್ಷೇತ್ರವನ್ನು ತನ್ನ ಅವಕಾಶವಾಗಿ ಬಳಸಿಕೊಂಡಿದ್ದು ಬಾಪ್ನಾ.

ದೇಶಿ ಮಾರುಕಟ್ಟೆಯಲ್ಲದೇ, ವಿದೇಶಿ ಮಾರುಕಟ್ಟೆಯಲ್ಲೂ ಛಾಪು ಒತ್ತಿದ ಅಮೆRಟ್‌, ಎಂಟು ಇಂಚಿನಿಂದ ಐದೂ ಕಾಲು ಇಂಚಿಗೆ (ಆಯತಾಕಾರ), ಮೂರೂವರೆ ಇಂಚಿನ ಗಾತ್ರಕ್ಕೆ ಇಳಿಸಿತು. ಹಾಗಾಗಿ ಬಹುಬೇಗ ಪ್ರಸಿದ್ಧವಾಯಿತು. ಎಲ್ಲ ದೊಡ್ಡ ದೊಡ್ಡ ಕಂಪೆನಿಗಳಿಗೂ ಫ್ಲಾಪಿ ಪೂರೈಸುತ್ತಿದ್ದುದು ಇದೇ ಕಂಪೆನಿ. ಇನ್ನೂ ವಿಚಿತ್ರವೆಂದರೆ, ಮೈಕ್ರೋಸಾಫ್ಟ್ ವಿಂಡೋಸ್‌ 95 ಭಾರತದಲ್ಲಿ ಪರಿಚಯವಾದದ್ದು ಅಮೆRಟ್‌ನ ಫ್ಲಾಪಿ ಮೂಲಕವೇ ಎನ್ನುತ್ತದೆ ಲಭ್ಯ ಮಾಹಿತಿ. ಇಂದು ಇದೇ ಕಂಪೆನಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ಹಲವಾರು ಉತ್ಪನ್ನಗಳನ್ನು ಹೊಂದಿದೆ.

2003 ರ ಸಂದರ್ಭದಲ್ಲಿ ಕಂಪ್ಯೂಟರ್‌ನಲ್ಲಿ ಫ್ಲಾಪಿಗೆ ಮೀಸಲಿರಿಸಿದ್ದ ಸ್ಥಳವನ್ನು ತೆಗೆದು ಯುಎಸ್‌ಬಿ ಯನ್ನು ಪರಿಚಯಿಸತೊಡಗಿದವು ಕಂಪ್ಯೂಟರ್‌ ಕಂಪೆನಿಗಳು. ಅಂದಿನಿಂದ ಫ್ಲಾಪಿ ಕಥನದ ಅಧ್ಯಾಯಗಳು ಮುಗಿಯುತ್ತಾ ಬಂದವು. ಆದರೆ ಈ ಕಂಪೆನಿಯ ಉದಯಪುರ ಘಟಕದಲ್ಲಿ ಒಂದು ದಿನಕ್ಕೆ 30 ಮಿಲಿಯನ್‌ ಫ್ಲಾಪಿಗಳು ತಯಾರಾಗುತ್ತಿದ್ದವಂತೆ.

ನೆನಪುಗಳು ಕಡಿಮೆ
ಕೆಲವು ವಸ್ತುಗಳೊಂದಿಗೆ ನೆನಪುಗಳು ಇರುತ್ತವೆ. ಉದಾಹರಣೆಗೆ ಟೇಪ್‌ ರೆಕಾರ್ಡರ್‌ ಬಂದಾಗಲೂ ಸಂಗ್ರಹವಾಗಿದ್ದು ನೆನಪುಗಳೇ. ಯಾಕೆಂದರೆ ರೇಡಿಯೋ ಬಂದಾಗ ಪಟ್ಟ ಸಂಭ್ರಮ ಬೇರೆ. ವೈಯಕ್ತಿಕ ಎನ್ನುವ ಕಲ್ಪನೆಗೆ ಒತ್ತು ಕೊಟ್ಟದ್ದು ಟೇಪ್‌ ರೆಕಾರ್ಡರ್‌. ಹಾಗಾಗಿ ತಮಗೆ ಬೇಕಾದ ಹಾಡುಗಳನ್ನು ಮಾತ್ರ ಕೇಳುವ, ಖುಷಿಪಡುವ ನೆನಪುಗಳು ಸಾಕಷ್ಟು ಅದರಲ್ಲಿವೆ. ಅದರಂತೆ ಲೆಕ್ಕ ಹಾಕಿದರೆ ಫ್ಲಾಪಿಯ ಜತೆಗೆ ಇರುವ ನೆನಪುಗಳು ತೀರಾ ಕಡಿಮೆ.

ಹತ್ತರಿಂದ ಐವತ್ತು ರೂ.ವರೆಗೂ ಮಾರಾಟವಾಗುತ್ತಿದ್ದ ಕಾಲವದು. ಎಷ್ಟೋ ಬಾರಿ ಕಂಪ್ಯೂಟರ್‌ ಅಂಗಡಿಗಳಲ್ಲಿ ಬೇಕೆಂದಾಗ (ಆರಂಭದಲ್ಲಿ) ಸಿಗುತ್ತಿರಲಿಲ್ಲ. ಕ್ರಮೇಣ ಅದರ ಲಭ್ಯತೆ ಹೆಚ್ಚಾಯಿತು. 90ರ ದಶಕದ ಕೊನೆವರೆಗೂ ಇದರ ಬಳಕೆಗೇನೂ ಕೊರತೆ ಇರಲಿಲ್ಲ. ಅನಂತರ ಫ್ಲಾಪಿಗಳು ಅಪರೂಪದ ವಸ್ತುಗಳಾಗತೊಡಗಿದವು.

ಈಗ ಇದು ನೋಡಲಿಕ್ಕೆ ಸಿಗಬಹುದು, ಬಳಕೆಗಲ್ಲ. ಯಾವುದಾದರೂ ಹಳೆ ಕಂಪ್ಯೂಟರ್‌ಗಳಿದ್ದರೆ ಮಾತ್ರ ಅದರಲ್ಲಿ ಇದಕ್ಕೊಂದು ನಿಗದಿತ ಸ್ಥಳವಿದೆ. ಈಗಿನ ಕಂಪ್ಯೂಟರ್‌ಗಳಲ್ಲಿ ಆ ಸ್ಥಾನವನ್ನೆಲ್ಲಾ ಯುಎಸ್‌ ಬಿ ಆಕ್ರಮಿಸಿಕೊಂಡಿದೆ.

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.