ಪರಸ್ಪರ ಮಾತನಾಡಿಕೊಳ್ಳುವ ಕಾರು, ಟ್ರಾಫಿಕ್ ಸಿಗ್ನಲ್
Team Udayavani, Aug 4, 2019, 5:00 AM IST
ಕಾರ್ ಮತ್ತು ಟ್ರಾಫಿಕ್ ಸಿಗ್ನಲ್ ಮಾತನಾಡುವುದು ನೀವೆಂದಾದರೂ ಕೇಳಿದ್ದೀರಾ? ಇಲ್ಲ ತಾನೇ ಹೌದು ಇಂಥಹದ್ದೊಂದು ಅನ್ವೇಷಣೆ ವೋಲ್ಸ್ ರ್ಬಗ್‌ನಲ್ಲಿ ನಡೆದಿದೆ. ಟ್ರಾಫಿಕ್ ಸಿಗ್ನಲ್‌ನಿಂದ ಅನೇಕ ಜನ ಪರದಾಡುವುದು, ಗೊತ್ತಿಲ್ಲದೆ ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿಕೊಂಡು ಪಜೀತಿಗೆ ಒಳಗಾಗುವುದು, ರೆಡ್ ಸಿಗ್ನಲ್ ಬೀಳುವ ಮುನ್ನವೇ ದಾಟಲು ಆತುರ ಪಡುವುದು. ಇವೆಲ್ಲಾ ಜೀವನದ ಜಂಜಾಟದ ನಡುವೆ ರಗಳೆ ಆಗಿ ಹೋಗಿ ಬಿಟ್ಟಿದೆ. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ ಎನ್ನುವುದು ಕೆಲವರ ಪ್ರಶ್ನೆಯಾದರೆ ಅದಕ್ಕೆ ಜರ್ಮನ್‌ನ ಸಿಟಿ ಖಂಡಿತ ಪರಿಹಾರವಿದೆ ಎಂದು ಹೇಳುತ್ತದೆ. ಹೌದು ಅದುವೇ ಪರಸ್ಪರ ಮಾತನಾಡುವ ಕಾರ್ ಟ್ರಾಫಿಕ್ ಸಿಗ್ನಲ್‌ಗಳು
ಕಾರ್ ಮತ್ತು ಟ್ರಾಫಿಕ್ ಸಿಗ್ನಲ್‌ಗಳು
ಪರಸ್ಪರ ಮಾತನಾಡುವದೆಂದರೆ ಅದೇಗೆ ಎನ್ನುವ ಪ್ರಶ್ನೆ ಸಹಜವಾಗಿ ನಿಮ್ಮ ಮನದ ಗೋಡೆಯಲ್ಲಿ ಮೂಡಿರ ಬಹುದು. ತಂತ್ರಜ್ಞಾನದ ಈ ಹೊಸ ಅಲೆಯು ನಗರಗಳನ್ನು ಚುರುಕುಗೊಳಿಸುವಂತೆ ಮಾಡಿದೆ. ಉದಾಹರಣೆಗೆ ಒಂದು ಸಿಗ್ನಲ್ ಕಂಬ ಯಾವ ಸಿಗ್ನಲ್ ( ಸೂಚನೆ)ಅನ್ನು ಕೊಟ್ಟಿದೆ ಎಂದು ಚಾಲಕನಿಗೆ ಗೊತ್ತಾಗುತ್ತದೆ. ಇದು ಹೇಗೆ ಅಂದರೆ ಮುಂದುವರಿದ ತಂತ್ರಜ್ಞಾನ ಹೊಂದಿರುವ ದೊಡ್ಡ ದೊಡ್ಡ ಕಾರುಗಳು ಮತ್ತು ಸಿಗ್ನಲ್ ಕಂಬದ ಜತೆಗೆ ಸೆನ್ಸಾರ್ ತಂತ್ರಜ್ಞಾನ ನೀಡಲಾಗಿದೆ. ಬಿಎಮ್‌ಡಬ್ಲೂ ಕಾರ್ ಈ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾಡಿಕೊಂಡಿದೆ. ಬಿಎಮ್ ಡಬ್ಲೂ 5 – 4 – 3 – 2 – 1 ಸೆಕೆಂಡ್ ತಿಳಿಸುವ ಮೂಲಕ ನಿಖರ ಗುರಿ ತಲುಪಲು ಸಹಾಯ ಮಾಡುತ್ತದೆ. ಆದರೆ ಮರ್ಸಿಡಿಸ್ “ನೀವು ಗಂಟೆಗೆ 32 ರಿಂದ 52 ಕಿಲೋಮೀಟರ್ ನಡುವೆ ಓಡಿಸಿದರೆ, ನೀವು ಹಸಿರು ದೀಪ ಪಡೆಯುತ್ತೀರಿ’ ಎನ್ನುವ ಸೂಚನೆಗಳು ಚಾಲಕರಿಗೆ ರವಾನೆ ಮಾಡುತ್ತವೆ. ಅಗತ್ಯವಿದ್ದಾಗ ಕಾರ್‌ನೊಳಗಿನ ಸಿಸ್ಟಮ್ ಚಾಲಕನಿಗೆ ದೃಶ್ಯ ಮತ್ತು ಶ್ರವ್ಯ ಎಚ್ಚರಿಕೆಗಳನ್ನು ಒದಗಿಸುತ್ತದೆ.
ಮಂಗಳೂರಿನಲ್ಲಿ ಜಾರಿಯಾಗಲಿ
ಸ್ಮಾರ್ಟ್ ನಗರದೆಡೆಗೆ ಹೆಜ್ಜೆ ಹಾಕುತ್ತಿರುವ ಮಂಗಳೂರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸುವತ್ತ ಇನ್ನಷ್ಟು ಗಮನಹರಿಸಬೇಕು. ಹೀಗಾಗಿ ಬೇರೆ ದೇಶಗಳಲ್ಲಿ ಅಳವಡಿಸುವ ಹೊಸ ತಂತ್ರಜ್ಞಾನಗಳನ್ನು ಬಹು ಬೇಗನೆ ಅಳವಡಿಸಿಕೊಳ್ಳು ವ ಪ್ರಯತ್ನ ಪಟ್ಟರೆ ಉಳಿದ ಜಿಲ್ಲೆಗಳಿಗೆ ಮಾದರಿಯಾಗಬಹುದು. ಮಂಗಳೂರೇನು ಟ್ರಾಫಿಕ್ ಸಮಸ್ಯೆಯಿಂದ ಹೊರತಾಗಿಲ್ಲ. ಟ್ರಾಫಿಕ್ ನಿಯಂತ್ರಣಕ್ಕೆ ಭವಿಷ್ಯದಲ್ಲಿ ಇಂತಹ ಯೋಜನೆಗಳನ್ನು ಪರಿಚಯಿಸಿದರೆ ನಗರದ ಜನತೆಯ ಒತ್ತಡ ಕಡಿಮೆ ಮಾಡುವಲ್ಲಿ ಪ್ರಯತ್ನಪಡಬಹುದು.
- ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.