ಸೃಜನಶೀಲತೆಯೇ ಯಶಸ್ಸಿನ ಗುಟ್ಟು


Team Udayavani, Oct 21, 2019, 5:11 AM IST

Creativity-is

ದಿನಗಳು ಉರುಳುತ್ತಿದಂತೆ ಕಾಲವೂ ಕೂಡ ಬದಲಾಗುತ್ತಿದೆ. ಅದರಲ್ಲಿ ಇದು ತಂತ್ರಜ್ಞಾನದ ಯುಗ. ದಿನಕ್ಕೊಂದು ಅನ್ವೇಷಣೆಗಳು ನಡೆಯತ್ತಲೇಯಿರುತ್ತದೆ. ಅಂತಹ ಕಾಲದಲ್ಲಿ ಕೆಲವರೂ ಈ ಯುಗವೂ ನಮ್ಮಂತವರಿಗಲ್ಲ ಎಂಬ ಆಲೋಚನೆಯನ್ನು ವ್ಯಕ್ತಪಡಿಸವವ‌ರನ್ನು ನೋಡಿದ್ದೇವೆ. ಇದರ ಬಗ್ಗೆ ನಾವು ಯೋಚಿಸಬೇಕಿದೆ. ಬದಲಾವಣೆ ಜಗದ ನಿಯಮ. ಅಂತಹದರಲ್ಲಿ ಓಡುತ್ತಿರುವ ಕಾಲದೊಂದಿಗೆ ನಮ್ಮ ತನದೊಂದಿಗೆಯೇ ನಾವು ಹೆಜ್ಜೆ ಹಾಕಬೇಕಿದೆ. ಇದು ಅನಿವಾರ್ಯವೂ ಕೂಡ.

ಇಂದು ಯುವಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೆಣಗಾಡುತ್ತಾರೆ. ಒಂದು ಬಾರಿಯ ಸೋಲನ್ನು, ಇಡೀ ಜೀವನವೇ ಮುಗಿಯಿತು ಎಂಬ ಅಭಾಸದೊಂದಿಗೆಯೇ ತಮ್ಮ ಜೀವನವನ್ನು ಮುಗಿಸಿಕೊಳ್ಳುತ್ತಾರೆ. ಇದು ಶುದ್ಧ ಮೂರ್ಖತನ. ನಾವು ಕಟ್ಟಿಕೊಳ್ಳಬೇಕಾದ ಆಲೋಚನೆಗಳ ಕಟ್ಟಡವನ್ನುಸರಿಯಾಗಿ ಕಟ್ಟುತ್ತಿಲ್ಲ ಎಂಬ ಸಂದೇಶ ಈ ಒಂದು ಉದಾಹರಣೆಯಿಂದಲೇ ಸಾಕ್ಷಿ. ಭವಿಷ್ಯ ನಿರ್ಧಾರಿತವಾಗುವುದು ಒಂದು ಸನ್ನಿವೇಶದ ಸೋಲಿನಿಂದಲ್ಲ. ಅದು ನಿರಂತರವಾದ ಪ್ರಯತ್ನಶೀಲತೆಯಿಂದ ಎಂಬ ಸಾಮಾನ್ಯ ತಿಳಿವಳಿಕೆ ನಮ್ಮಲ್ಲಿರುವುದು ಒಳಿತು.

ಹೌದು. ಇದು ಸ್ಪರ್ಧಾತ್ಮಕ ಯುಗ. ಇಂದು ಹೆಚ್ಚಿನ ಸ್ಪರ್ಧೆಯಿದೆ. ನಮ್ಮ ನಿಮ್ಮಂತೆಯೇ ಬೇರೆಯವರೂ ಕೂಡ ಭವಿಷ್ಯಕ್ಕಾಗಿ ಸ್ಪರ್ಧಿಸುತ್ತಾರೆ, ಅವರಲ್ಲಿರುವ ಭಿನ್ನ ಸಾಮರ್ಥ್ಯದಿಂದಾಗಿ ಅವರು ತಮ್ಮ ಗುರಿಯನ್ನು ಮುಟ್ಟುತ್ತಾರೆ. ಗೆಲುವಿಗೆ ಕಾರಣ ಅವರ ಪ್ರಯತ್ನ ಹಾಗೂ ಅದರ ಹಿಂದೆ ಇರುವ ಹಲವಾರು ಸೋಲುಗಳ ಪಟ್ಟಿ.

ಸಾಮಾನ್ಯವಾಗಿ ಗೆಲುವು ಎನ್ನುವುದು ಹಾಗೇ ಬರುವುದಿಲ್ಲ. ಅದಕ್ಕೆ ಬೇಕಾದ ತಯಾರಿ ಹಾಗೂ ಬೌದ್ಧಿಕಶಕ್ತಿ, ತಾಳ್ಮೆಯ ಜತೆ ಜತೆಗೆ ನಮ್ಮಲ್ಲಿರುವ ಸೃಜನಾಶೀಲತೆಯ ಬಹುಮುಖ್ಯವಾದ ಸರಕು. ಎಲ್ಲ ಯುವಕರು ರೂಢಿಸಿಕೊಳ್ಳಬೇಕಾದುದು ಮುಖ್ಯವಾದುದೆಂದರೆ, ಸೃಜನಾಶೀಲತೆ. ಯಾರಲ್ಲಿ ಸೃಜನಾಶೀಲತೆ ಇರುತ್ತದೆಯೋ, ಅವರು ಯಶಸ್ವಿಯಾಗಲು ಸಾಧ್ಯ. ಏಕೆಂದರೆ ಬೇರೆಯವರಿಗಿಂತ ಭಿನ್ನವಾಗಿ ನಮ್ಮ ತನವನ್ನು ತೋರಿಸಿಕೊಳ್ಳಲು ಹಾಗೂ ಕಾರ್ಯನ್ಮೋಖವಾಗುವಂತೆ ಮಾಡುವುದು ಸೃಜನಾಶೀಲತೆ. ಮಾಡುವ ಕೆಲಸವನ್ನು ಭಿನ್ನವಾಗಿ ಹಾಗೂ ಮೆಚ್ಚುಗೆ ಗಳಸಿಸುವಂತೆ ಮಾಡುವುದು. ಸೃಜನಾಶೀಲತೆ ಎಂಬುವುದು ಅರಳುವ ಹೂವಿನಂತೆ ಕೋಮಲವಾದುದು. ಅದಕ್ಕಾಗಿ ಹೂವಿನ ಗಿಡಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿ ಪೋಷಿಸಬೇಕಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಫೇಲಾದವರೂ ಬದುಕಿನಲ್ಲಿ ಪಾಸಾಗಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರಲ್ಲಿರುವ ಸೃಜನಾಶೀಲತೆ. ಅದು ಅವರನ್ನು ಭಿನ್ನವಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಸೃಜನಾಶೀಲ ವ್ಯಕ್ತಿಯೊಬ್ಬ ಯೋಜಿಸಿದಷ್ಟು ಮತ್ಯಾರು ಯೋಚಿಸಲಾರರು ಎಂಬ ಮಾತು ಕೂಡ ಒಪ್ಪಬಹುದು. ಈ ಭವ್ಯವಾದ ಆಲೋಚನೆಗಳಿಂದ ನಾವೆಲ್ಲ ಆರಂಭಿಸಬೇಕಿದೆ. ಬದುಕಿನಲ್ಲಿ ಸುಖ- ದುಃಖ ಇರುವುದೇ, ಆದರೆ ಇವುಗಳ ಮಧ್ಯದಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ ಎಂಬುದು ಬಹುಮುಖ್ಯ.

-ಸುಜಾತಾ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.