ಮನೆ ಮನ ಒಪ್ಪುವಂಥ ಅಲಂಕಾರ


Team Udayavani, Feb 2, 2019, 7:03 AM IST

february-13.jpg

ಸುಂದರ ಮತ್ತು ಅಚ್ಚುಕಟ್ಟಾದ ಮನೆಯೊಂದನ್ನು ನಿರ್ಮಿಸುವ ಕನಸು ಎಲ್ಲರಿಗೂ ಸಾಮಾನ್ಯ. ಮನೆ ಕಟ್ಟಿದರೆ ಮುಗಿಯಿತೇ? ಅದನ್ನು ಒಪ್ಪ ಓರಣವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬುದರ ಬಗ್ಗೆಯೂ ತಿಳಿವಳಿಕೆ ಮುಖ್ಯವಾಗುತ್ತದೆ. ಏಕೆಂದರೆ ಮನೆಯ ಸೌಂದರ್ಯ ಹೆಚ್ಚಿಸುವ ಕಲೆಗಳೊಂದಿಗೆ ಆಟವಾಡುವ ನೈಪುಣ್ಯತೆ ಎಲ್ಲರಲ್ಲಿಯೂ ಇರುವುದು ಅಸಾಧ್ಯ. ಮನೆಗೆ ಬಳಸುವ ಪ್ರತಿಯೊಂದು ವಸ್ತುಗಳನ್ನು ಆರಿಸುವಾಗಲೂ ಕಾಳಜಿ ವಹಿಸಿ, ಅವುಗಳನ್ನು ಜೋಡಿಸುವಲ್ಲಿಯೂ ತಮ್ಮ ಕೈಚಳಕವನ್ನು ತೋರಿಸಬಹುದಾದ ಕುರಿತು ಇಲ್ಲಿದೆ ಒಂದು ಚಿಕ್ಕ ಝಲಕ್‌.

ಬಾಗಿಲೇ ಬಾಗಿ ಸತ್ಕರಿಸುವಂತಿರಲಿ
ಮನೆ ದೊಡ್ಡದೋ, ಚಿಕ್ಕದೋ ಎಂಬುದು ಮುಖ್ಯವಲ್ಲ. ಅದನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಿದರೆ ಮಾತ್ರ ನಮಗೆ ಮತ್ತು ಅತಿಥಿಗಳಿಗೆ ಖುಷಿ ದೊರೆಯುವುದು ಸಾಧ್ಯ. ಮನೆಯ ಅಲಂಕಾರ ಮುಂಬಾಗಿಲಿನಿಂದಲೇ ಆರಂಭವಾಗಿ ಬಿಡುತ್ತದೆ. ಹಾಗಾಗಿ ಬಾಗಿಲಿನ ಬಗ್ಗೆಯೂ ನಾವು ವಿಶೇಷ ಆಸ್ಥೆ ವಹಿಸಬೇಕಾಗುತ್ತದೆ.

ಬಾಗಿಲಿಗೆ ಬಣ್ಣ ಬಳಿಯುವಾಗ ಅದು ಮನೆಯ ಹೊರ ಗೋಡೆಗಳಿಗೆ ಬಳಿದ ಬಣ್ಣಗಳಿಗೆ ಹೊಂದುವಂತಿದೆಯೇ ಎಂದು ಗಮನಿಸಬೇಕು. ಅದರೊಂದಿಗೆ ಬಾಗಿಲಿನ ಎರಡೂ ಪಕ್ಕಗಳಲ್ಲಿ ಹೂಕುಂಡಗಳನ್ನಿಡಬೇಕು. ಬಾಗಿಲ ಮುಂದೆ ಸುಂದರ ಕಸೂತಿಯನ್ನು ಹೊಂದಿರುವ ಮ್ಯಾಟ್‌ಗಳನ್ನು ಬಳಕೆ ಮಾಡುವ ಮೂಲಕ ಮನೆಗೆ ಮತ್ತಷ್ಟು ಅಂದವನ್ನು ತಂದುಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು.

ಗೋಡೆಗಳ ಬಣ್ಣ ಕಣ್ಣಿಗೆ ಹಬ್ಬವಾಗಲಿ
ಗೋಡೆಗಳಿಗೆ ಆದಷ್ಟು ತಿಳಿಯಾದ ಬಣ್ಣಗಳನ್ನು ಆರಿಸಿ ಬಳಕೆ ಮಾಡಬೇಕು. ಗಾಢ ಬಣ್ಣಗಳನ್ನು ಬಳಿಯುವುದರಿಂದ ಮನೆಯ ಅಂದ ಹೆಚ್ಚಾಗುವ ಬದಲು ಕಣ್ಣಿಗೆ ಹೊಡೆಯುವಂತಿದ್ದು, ಮನಸ್ಸನ್ನು ಡಿಸ್ಟರ್ಬ್ ಮಾಡುವಂತಿರಬಾರದು. ಅದರ ಜತೆಯಲ್ಲಿ ಗೋಡೆಗಳಲ್ಲಿ ಸುಂದರ ಪೈಂಟಿಗ್ಸ್‌ಗಳನ್ನು ಅಳವಡಿಸಿ. ಸ್ಟೆರ್‌ಕೇಸ್‌ಗಳಿಗೂ ಸುಂದರ ಮನಕ್ಕೊಪ್ಪುವ ಬಣ್ಣಗಳನ್ನು ಆಯ್ಕೆ ಮಾಡಿ. ಹಾಗೆಯೇ ಹಾಲ್‌ನ ಗೋಡೆಯಲ್ಲಿ ದೊಡ್ಡ ಕನ್ನಡಿಯೊಂದನ್ನು ಅಳವಡಿಸಿ. (ಪ್ರತಿಯೊಂದು ರೂಮ್‌ನಲ್ಲಿಯೂ ದೊಡ್ಡ ಕನ್ನಡಿಗಳನ್ನು ಅಳವಡಿಸಿದಾಗ ಮನೆಗೆ ಲುಕ್‌ ಬರುತ್ತದೆ).

ಇನ್ನು ಸೋಫಾ ಸೆಟ್ ಚೇರ್‌ಗಳು ದುಬಾರಿ ಅಥವಾ ಕಡಿಮೆ ಬೆಲೆಯದ್ದೇ ಇರಲಿ ಅದನ್ನು ಸುಂದರವಾಗಿ ಜೋಡಿಸಿಡುವ ಬಗೆ ತಿಳಿದುಕೊಳ್ಳಿ. ಟೀಪಾಯಿಯ ಮೇಲೆ ಹೂದಾನಿ ಇರಲಿ. ಅದರಲ್ಲಿ ನೈಜ ಹೂಗಳನ್ನೇ ಪ್ರತಿನಿತ್ಯವೂ ಇಟ್ಟಾಗ ನಿಮ್ಮ ಹಾಲ್‌ ಸುಂದರವಾಗುತ್ತದೆ.

ಕಿಚನ್‌ ರೂಮ್‌, ಡೈನಿಂಗ್‌ ಹಾಲ್‌ಗ‌ಳಲ್ಲಿ ಪ್ರತಿಯೊಂದು ವಸ್ತುವಿಗೂ ಕ್ರಮವಾಗಿ ಜೋಡಿಸಿಡಲು ಸಾಧ್ಯವಾಗುವಂತೆ ಪ್ರತ್ಯೇಕ ಸ್ಥಳಾವಕಾಶಗಳನ್ನು ನಿರ್ಮಿಸಿ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿ.

ಮನೆಯೊಳಗೆ ಸೂರ್ಯನ ಕಿರಣ ಬೀಳಲಿ
ಹಗಲು ಹೊತ್ತಿನಲ್ಲಿಯೂ ಲೈಟ್ ಆನ್‌ ಮಾಡಿ ಕೂರುವಂತೆ ಮನೆ ನಿರ್ಮಾಣ ಬೇಡ. ಅದರ ಬದಲು ಸೂರ್ಯನ ಕಿರಣ ಹೆಚ್ಚಾಗಿ ಬೀಳುವಂತೆ ನೋಡಿಕೊಂಡು ಕಿಟಕಿಗಳನ್ನು ನಿರ್ಮಿಸಿ. ಪ್ರತಿಯೊಂದು ಕೋಣೆಯನ್ನೂ ಸೂರ್ಯರಶ್ಮಿ ಸ್ವರ್ಶಿಸುವಂತಿರಲಿ. ಮನೆಯ ಹಿಂದಿನ ಬಾಗಿಲಿನಿಂದ ಹೊರ ಬಂದಾಗ ಮನೋಲ್ಲಾಸ ನಿಡುವಂತಹ ಚಿಕ್ಕ ಪಾರ್ಕ್‌ ಒಂದನ್ನು ನಿರ್ಮಿಸಿ. ಹತ್ತಾರು ಹೂಗಿಡ, ಹುಲ್ಲುಗಳ ಮಧ್ಯೆ ನಿಮ್ಮ ಮುಂಜಾವು ಆರಂಭವಾಗುವಂತಿದ್ದಾಗ ಮನೆಯೂ ಸೂಪರ್‌. ಜತೆಗೆ ಮನವೂ ಫ‌ುಲ್‌ ಆಹ್ಲಾದಭರಿತವಾಗಿರುತ್ತದೆ. ದಿನ ಪೂರ್ತಿ ಫ‌ುಲ್‌ ಖುಷ್‌ ಆಗಿರುವುದಕ್ಕೂ ಸಾಧ್ಯವಾಗುತ್ತದೆ.

ಲೈಟಿಂಗ್ಸ್‌ ಬಗ್ಗೆ ಇರಲಿ ಕಾಳಜಿ
ಸುಂದರವಾದ ಲೈಟಿಂಗ್‌ ಮೆಟೀರಿಯಲ್‌ಗ‌ಳು ಮನೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಹಾಗಾಗಿ ಹೊಸ ಹೊಸ ಡಿಸೈನ್‌ಗಳಲ್ಲಿ ಲಭ್ಯವಿರುವ ಲೈಟ್‌ಗಳನ್ನು ಅಳವಡಿಸಿ. ಹಾಲ್‌ ಶ್ಯಾಂಡಿಲಿ ಯರ್‌ ಇದ್ದರೆ ಇನ್ನೂ ಚೆನ್ನ.

ಭುವನ ಬಾಬು, ಪುತ್ತೂರು

ಟಾಪ್ ನ್ಯೂಸ್

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.