ಸೆರಾಮಿಕ್ ಪಾತ್ರೆಗೆ ಬಂತು ಬೇಡಿಕೆ
Team Udayavani, Dec 28, 2019, 4:25 AM IST
ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಸಾಗಿಬಂದ, ಅಳವಡಿಸಿಕೊಂಡ ಮೌಲ್ಯವನ್ನು ಮತ್ತೆ ನಾವು ಅರಿಯುವಂತಾಗಬೇಕು. ಇಂದು ನಮ್ಮ ಮನೆಗಳಲ್ಲಿ ಉಂಟಾಗಿರುವ ಪ್ಲಾಸ್ಟಿಕ್‌ನ ಪ್ರಭಾವವನ್ನು ಕಡಿಮೆ ಮಾಡಬೇಕಾದರೆ ಇದರ ಬದಲಿಗೆ ಮಣ್ಣಿನ ಪಾತ್ರೆಗಳನ್ನು ಮನೆಗಳ ಅಲಂಕಾರಕ್ಕೆ, ಅಡುಗೆಗೆ ಬಳಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಆರೋಗ್ಯದ ಜತೆಗೆ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಪ್ಲಾಸ್ಟಿಕ್ ಆಗಮನಕ್ಕೂ ಮುಂಚೆಯೇ ಮಣ್ಣಿನಿಂದ ಮತ್ತು ಸೆರಾಮಿಕ್ ಪಾತ್ರೆಗಳು ನಿತ್ಯ ಬಳಕೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದನ್ನು ಕಾಣಬಹುದು.
ಅನೇಕ ಉಪಯೋಗಳು
ಜೇಡಿ ಮಣ್ಣಿನಲ್ಲಿರುವ ಖನಿಜಗಳು ನೀರಿನಲ್ಲಿ ಬೆರೆತು ಹೋಗುವುದರಿಂದ ಬೇಸಿಗೆಯಲ್ಲಿ ಕೂಡ ನೀರು ತಂಪಾಗಿರಲು ಸಹಕರಿಸುತ್ತದೆ. ಇದರಿಂದ ಫ್ರಿಜ್jನ ಬಳಕೆಯನ್ನು ಕಡಿಮೆ ಮಾಡಬಹುದು.
ಮಣ್ಣಿನ ಪಾತ್ರೆಗಳು ಶಾಖ ನಿರೋಧಕ
ಮಣ್ಣಿನ ಪಾತ್ರೆಯಲ್ಲಿಟ್ಟ ಆಹಾರ ಬಿಸಿಯಾಗಿ ಮತ್ತು ಉತ್ತಮ ರುಚಿಯನ್ನು ಸಹ ನೀಡುತ್ತದೆ.
ಮೌಕ್ರೊವೇವ್‌ಗಳಿಗಿಂತ ಸುರಕ್ಷಿತವಾಗಿದೆ ಆಹಾರವನ್ನು ಬಿಸಿಮಾಡಲು ಮೈಕ್ರೋವೇವ್ ಬಳಸುವುದರಿಂದ ಅದು ರಾಸಾಯನಿಕ ಬಿಡುಗಡೆ ಮಾಡುವ ಮೂಲಕ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಆದರೆ ಮಣ್ಣಿನ ಪಾತ್ರೆಗಳು ಸಾವಯವವಾಗಿದ್ದು ಮತ್ತು ಮಾನವ ದೇಹಕ್ಕೆ ಸುರಕ್ಷಿತವಾಗಿವೆ. ಅಲ್ಲದೇ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಯಾವುದೇ ಹಾನಿಕಾರಕ ರಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ. ಇತ್ತೀಚಿನ ಪಾತ್ರೆಗಳಲ್ಲಿ ಹಾಲು ಅಥವಾ ಇತರೆ ಆಹಾರ ಪದಾರ್ಥಗಳನ್ನು ಇಟ್ಟಾಗ ಬೇಗನೇ ಹಾಳಾಗುತ್ತವೆ. ಆದರೆ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿ ಇಡುವುದರಿಂದ ಆಹಾರ ಬೇಗನೇ ಕೆಡುವುದಿಲ್ಲ ಮತ್ತು ರುಚಿ ಕೂಡ ಹೆಚ್ಚು.
ಭಾರತೀಯ ಕರಕುಶಲತೆಯನ್ನು ಉತ್ತೇಜಿಸುತ್ತದೆ
ದೊಡ್ಡ ಮನೆ ಆಲಂಕಾರಿಕ ಬ್ರಾಂಡ್‌ಗಳು ಭಾರತೀಯ ಪಿಂಗಾಣಿಗಳ ಸೌಂದರ್ಯವನ್ನು ಸೆಳೆದಿದ್ದರೂ, ಇತ್ತೀಚೆಗೆ ಸೆರಾಮಿಕ್ ಪಾತ್ರೆಗಳತ್ತ ಜನರ ಹೆಚ್ಚಿನ ಒಲವು ಕಾಣಬಹುದು. ಇದು ಅಗ್ಗದ ಉತ್ಪನ್ನವೂ ಹೌದು.
ಮನೆಯ ಅಲಂಕಾರಕ್ಕೆ ಮಣ್ಣಿನ ಪಾತ್ರೆ
ಹೌದು ಮನೆಯ ಅಲಂಕಾರಕ್ಕೆ ಹೆಚ್ಚಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವ ಬದಲು ಮಣ್ಣಿನ ಪಾತ್ರೆಗಳನ್ನು ಬಳಸಬಹುದು, ನಮಗೆ ಬೇಕಾದ ರೀತಿಯ ಬಣ್ಣಗಳನ್ನು ಬಳಿದು ಹೂ ಕುಂಡ, ವಾಸ್, ಇನ್ನಿತರ ಮನೆ ಆಲಂಕಾರಿಕ ವಸ್ತುವಾಗಿಯೂ ಬಳಸಬಹುದು ಇದು ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವುದಲ್ಲದೇ ಪಕ್ಕಾ ದೇಶಿ ಶೈಲಿಯ ಮೆರುಗು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ವಿಜೀತಾ ಅಮೀನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.