ಹೊಸ ತಲೆಮಾರಿನಲ್ಲಿ ಹಳೆ ಪೀಠೊಪಕರಣಕ್ಕೆ ಬೇಡಿಕೆ


Team Udayavani, Oct 4, 2019, 5:11 AM IST

c-42

ಮನೆ ಎಂದಮೇಲೆ ಸುಂದರವಾದ ಪೀಠೊಪಕರಣಗಳು ಇರುವುದು ಸಾಮಾನ್ಯ. ಕಾಲ ಬದಲಾದಂತೆ ವಿಭಿನ್ನ ಮಾದರಿಯ ಪೀಠೊಪಕರಣಗಳು ಮಾರುಕಟ್ಟೆಗೆ ಬರುತ್ತವೆ. ಇದೀಗ ಟು ಇನ್‌ ವನ್‌ ಪೀಠೊಪಕರಣಗಳ ಹಾವಳಿ. ಕುಳಿತುಕೊಳ್ಳುವ ಸೋಫಾ ರಾತ್ರಿ ವೇಳೆ ಮಲಗುವ ಬೆಡ್‌ ಆಗಬಹುದು. ಮನೆಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದವರು ಈ ಟು ಇನ್‌ ವನ್‌ ಪೀಠೊಪಕರಣಗಳಿಗೆ ಮೊರೆ ಹೋಗುತ್ತಾರೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಸದ್ಯ ಹಳೆಯ ಮಾದರಿ ಪೀಠೊಪಕರಣಗಳಿಗೆ ಬೇಡಿಕೆ ಹೆಚ್ಚು.

ಅಂದದ ಮನೆಯ ಶೃಂಗಾರಕ್ಕೆ ಮನೆಯೊಳಗಿನ ವಿನ್ಯಾಸವೂ ಕಾರಣ. ಅದರಲ್ಲೂ ಮನೆಯೊಳಗೆ ಯಾವ ಬಗೆಯ ಪೀಠೊಪಕರಣಗಳನ್ನು ಜೋಡಿಸಿಡಲಾಗುತ್ತದೆ ಎಂಬ ಅಂಶವೂ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಾನಾ ವಿನ್ಯಾಸದ ಪೀಠೊಪಕರಣಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಬೇಡಿಕೆಯೂ ಹೆಚ್ಚಿದೆ.

ಅನೇಕ ವರ್ಷಗಳ ಹಿಂದೆ ಹಳೆಯ ಕಾಲದ ಮನೆಗಳಲ್ಲಿ ಬಿದಿರಿನಿಂದ ಮಾಡಿದ ಕುರ್ಚಿಗಳು ಸಾಮಾನ್ಯವಾಗಿದ್ದವು. ಬಳಿಕ ಪ್ಲಾಸ್ಟಿಕ್‌ ಕುರ್ಚಿಗಳು ಬಂದ ಮೇಲೆ ಇವುಗಳು ಮೂಲೆ ಸರಿದವು. ಆದರೆ, ಇತ್ತೀಚಿನ ದಿನಗಳಲ್ಲಿ ಮತ್ತೆ ಹಳೆಯ ಸಂಪ್ರದಾಯ ಮರುಕಳಿಸುತ್ತಿದೆ. ಕೆಲವೊಂದು ಮನೆಗಳಲ್ಲಿ ಬಿದಿರಿನ ಕುರ್ಚಿಗಳು ಕಾಣುತ್ತದೆ.

ಬಿದಿರಿನ ಪೀಠೊಪಕರಣದಿಂದ ಹೆಚ್ಚಾಗಿ ಕಿಟಕಿ ಪರದೆಗಳನ್ನು ರೂಪಿಸಲಾಗುತ್ತಿದೆ. ಮನೆಗಳಲ್ಲಿ ಅಲ್ಲದೆ, ಕಚೇರಿಯ ಒಳಾಂಗಣದಲ್ಲಿ ಬಿದಿರಿನ ಕುರ್ಚಿಗಳನ್ನು ಬಳಕೆ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಕುರ್ಚಿಗಳು, ಸೋಫಾಗಳು ಮಳೆಗಾದಲ್ಲಿ ನೆಂದು ಬಿಟ್ಟರೆ ಹಾಳಾಗುತ್ತವೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬಿದಿರಿನ ಪೀಠೊಪಕರಣಗಳ ಖರೀದಿ ಹೆಚ್ಚಾಗುತ್ತಿದೆ. ಇವುಗಳು ಮಳೆಗೆ ನೆಂದರೂ ಯಾವುದೇ ಸಂರಕ್ಷಣೆಯ ಆವಶ್ಯಕತೆ ಇರುವುದಿಲ್ಲ. ಇದಲ್ಲದೆ ಬಿದಿರಿನಿಂದ ಮಾಡಿದ ಶೆಲ್ಫ್ಗಳು, ಡೈನಿಂಗ್‌ ಸೆಟ್‌ಗಳು, ಮಕ್ಕಳ ಪೀಠೊಪಕರಣಗಳು, ಆರಾಮದಾಯಕ ಕುರ್ಚಿಗಳು, ಡ್ರೆಸ್ಸಿಂಗ್‌ ಟೇಬಲ್‌ಗ‌ಳಿಗೆ ಬೇಡಿಕೆ ಹೆಚ್ಚಾಗಿದೆ.

ಒಂದು ಪೀಠೊಪಕರಣ ಖರೀದಿಸಿದರೆ ಅದರಲ್ಲಿ ಎರಡು ಉಪಯೋಗ ಪಡೆಯಲು ಸಾಧ್ಯ. ಇತ್ತೀಚಿನ ದಿನಗಳ ಲೇಟೆಸ್ಟ್‌ ಟ್ರೆಂಡ್‌ ಎಂಬಂತೆ ವಿಶೇಷ ರೀತಿಯ ಸೋಫಾ ಸೆಟ್‌ ಮಾರುಕಟ್ಟೆಗೆ ಬಂದಿದ್ದು, ಹೆಚ್ಚಾಗಿ ಬಿಕರಿಯಾಗುತ್ತಿದ್ದು, ಇದನ್ನು ಮಲಗಲು ಹಾಸಿಗೆಯಾಗಿಯೂ ಉಪಯೋಗಿಸಿಕೊಳ್ಳಬಹುದು. ನಗರ ಪ್ರದೇಶಗಳಲ್ಲಿ ಮನೆ ಇದ್ದರೆ ಮನೆಯೊಳಗೆ ಹೆಚ್ಚಾದ ಸ್ಥಳಾವಕಾಶ ಇರುವುದಿಲ್ಲ. ಈ ವೇಳೆ ಟು ಇನ್‌ ಒನ್‌ ಸೋಫಾ ಮತ್ತು ಬೆಡ್‌ ಅನ್ನು ಕಡಿಮೆ ಸ್ಥಳಾವಕಾಶದಲ್ಲಿ ಹೊಂದಿಸಲು ಸಾಧ್ಯವಿದೆ. ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 25 ರಿಂದ 35 ಸಾವಿರ ರೂ.ವರೆಗೆ ಬೆಲೆ ಇದೆ.

ಡೈನಿಂಗ್‌ ಟೇಬಲ್‌ಗ‌ಳಲ್ಲಿಯೂ ಹೊಸ ಟ್ರೆಂಡ್‌ ಶುರುವಾಗಿದ್ದು, ಸ್ಟೋರೇಜ್‌ ಸಾಮರ್ಥ್ಯ ಇರುವ ಡೈನಿಂಗ್‌ ಟೇಬಲ್‌ ಹೊಸ ಟ್ರೆಂಡ್‌ ಆಗಿದೆ. ಈ ಡೈನಿಂಗ್‌ ಟೇಬಲ್‌ನ ಎರಡೂ ಬದಿಗಳಲ್ಲಿ ಡ್ರಾಯರ್‌ಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ 15 ರಿಂದ 25 ಸಾವಿರ ರೂ.ವರೆಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ.

ಪೀಠೊಪಕರಣ ಕ್ಷೇತ್ರದಲ್ಲಿ ಟ್ರೆಂಡ್‌ಬದಲಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮೆತ್ತನೆಯ ಪೀಠೊಪಕರಣಕ್ಕೆ ಬೇಡಿಕೆ ಬಂದಿದೆ. ಇವುಗಳ ನಿರ್ವಹಣೆ ಸುಲಭ. ಶೈಲಿ, ಅಲಂಕಾರ ವಿಶೇಷವಾಗಿದೆ. ಮರದ ಪೀಠೊಪಕರಣಗಳಿಗೆ ಮೆತ್ತನೆಯ ಬಟ್ಟೆ ಬಳಸಿ ಉಬ್ಟಾಗಿ ವಿನ್ಯಾಸ ಮಾಡಲಾಗುತ್ತಿದೆ. ಪ್ರಿಂಟೆಡ್‌ ಬಟ್ಟೆಗಳ ಫರ್ನಿಚರ್‌ಗಳತ್ತ ಅಭಿರುಚಿ ಹೆಚ್ಚಾಗುತ್ತಿದೆ.

ಆಫರ್‌ಗಳ ಸುರಿಮಳೆ
ಹೆಚ್ಚಿನ ಫರ್ನಿಚರ್‌ ಅಂಗಡಿ ಗಳಲ್ಲಿ ದಸರಾ-ನವರಾತ್ರಿ ಮತ್ತು ದೀಪಾವಳಿ ಹಬ್ಬದ ಆಫರ್‌ಗಳು ಈಗಾಗಲೇ ಆರಂಭಗೊಂಡಿವೆ. ವಿವಿಧ ವಿನ್ಯಾಸದ ಫರ್ನಿಚರ್‌ಗಳಿಗೆ ಮೂಲ ದರದಲ್ಲಿ ವಿಶೇಷ ರಿಯಾಯಿತಿ, ಖರೀದಿಗೆ ವಿಶೇಷ ಕೊಡುಗೆಗಳನ್ನು ನೀಡುತಿವೆೆ. ಇನ್ನು ಆನ್‌ಲೈನ್‌ ಶಾಪಿಂಗ್‌ನಲ್ಲೂ ಭರ್ಜರಿ ಆಫರ್‌ಗಳಿವೆ. ಇನ್ನು, ಒಂದು ಪೀಠೊಪಕರಣ ಖರೀದಿಗೆ ಮತ್ತೂಂದು ಉಚಿತ, ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಕೂಡ ಇದೆ.

ಹೆಚ್ಚಿದ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಮರದ ಪೀಠೊಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಶೇ.25ರಷ್ಟು ಬೇಡಿಕೆ ಬಂದಿದೆ. ಅತ್ಯಾಧುನಿಕ ಪೀಠೊಪಕರಣಗಳು ಹಾಳಾದರೆ ಅವುಗಳನ್ನು ಸರಿಪಡಿಸುವುದು ತುಸು ಕಷ್ಟ. ಇದೇ ಕಾರಣಕ್ಕೆ ಹಳೆಯ ಕಾಲದ ಪೀಠೊಪಕರಣದತ್ತ ಜನ ಆಸಕ್ತಿ ತೋರುತ್ತಿದ್ದಾರೆ.
– ಸುಂದರ್‌ ಕೆ. ಗೌಡ , ವುಡ್‌ಲೈಫ್‌ ಫರ್ನಿಚರ್ ಪಡೀಲ್‌

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Brahmavar

Belthangady: ಆತ್ಮಹ*ತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.