ಡ್ಯಾಶ್‌ಬೋರ್ಡ್ ವೈಬ್ರೇಷನ್ ಸಮಸ್ಯೆ ಕಾರಣ ಪತ್ತೆ ಹಚ್ಚಿ
Team Udayavani, Oct 5, 2018, 1:56 PM IST
ಕಾರುಗಳಲ್ಲಿ ಡ್ಯಾಶ್‌ಬೋರ್ಡ್ ವೈಬ್ರೇಷನ್ ಸಾಮಾನ್ಯ. ಹೊಂಡಗುಂಡಿಗಳ ರಸ್ತೆಗಳಲ್ಲಿ ಚಾಲನೆ ಮತ್ತು ಡ್ಯಾಶ್‌ಬೋರ್ಡ್ ಫಿಟ್ಟಿಂಗ್‌ನಲ್ಲಿನ ಸಮಸ್ಯೆ ಇತ್ಯಾದಿ ಕಾರಣಗಳಿಗಾಗಿ ಡ್ಯಾಶ್‌ಬೋರ್ಡ್ ವೈಬ್ರೇಷನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇವುಗಳು ತೀರ ಕಿರಿಕಿರಿ ಎಂದೆನಿಸಿದರೆ, ಮತ್ತೆ ಕೆಲವೊಮ್ಮೆ ಸ್ಟಾರ್ಟಿಂಗ್ ವೇಳೆ ಅಥವಾ ತೀರ ವೇಗದ ಚಾಲನೆ ವೇಳೆ ಕಾಣಿಸಿಕೊಳ್ಳುವುದುಂಟು. ಇದರ ಪರಿಹಾರಕ್ಕೆ ತುಸು ಪರಿಣತರ ನೆರವು ಅಗತ್ಯವಿದೆ.
ಕಾರಣವೇನು?
ಡ್ಯಾಶ್‌ಬೋರ್ಡ್ ಶಬ್ದಕ್ಕೆ ಕಾರಣಗಳು ಎರಡು. 1. ಡ್ಯಾಶ್‌ಬೋರ್ಡ್ ಫೈಬರ್ ಆಗಿದ್ದು, ಇದನ್ನು ವಾಹನದ ಬಾಡಿಗೆ ಫಿಟ್ ಮಾಡಲಾಗಿರುತ್ತದೆ. ಹೀಗೆ ಮಾಡಲಾದ ಜಾಗದಲ್ಲಿ ಸೂಕ್ತ ಪ್ಯಾಕಿಂಗ್ ವಸ್ತುಗಳು ಇಲ್ಲದಿದ್ದರೆ ಅಥವಾ ಫೈಬರ್ ಮತ್ತು ವಾಹನದ ಬಾಡಿಯ ಲೋಹಕ್ಕೆ ಘರ್ಷಣೆಯಾಗಿ ಶಬ್ದ ಬರುತ್ತದೆ. 2. ಕೆಲವೊಂದು ಕಡೆ ಫೈಬರ್- ಫೈಬರ್ ಘರ್ಷಣೆಯಿಂದಲೂ ಶಬ್ದ ಬರಬಹುದು. ಹೆಚ್ಚಾಗಿ ಲೋಹ-ಫೈಬರ್ ಘರ್ಷಣೆಯಿಂದಲೇ ಶಬ್ದ ಬರುತ್ತದೆ.
ಪತ್ತೆ ಹಚ್ಚೋದು ಹೇಗೆ?
ಡ್ಯಾಶ್‌ಬೋರ್ಡ್‌ನ ಯಾವ ಭಾಗದಿಂದ ಶಬ್ದ ಬರುತ್ತಿದೆ ಎಂಬುದನ್ನು ಗಮನಿಸಿ. ಶಬ್ದ ಬರುವ ಜಾಗವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಶಬ್ದ ಬರುವ ಜಾಗದ ಮೇಲೆ ಕೈಯಿಟ್ಟು ಅಥವಾ ಅದುಮಿದಾಗ ಅಥವಾ ಇಡೀ ಡ್ಯಾಶ್‌ಬೋರ್ಡ್ ಅನ್ನು ಒತ್ತಿ ಹಿಡಿದಾಗ ಶಬ್ದ ಬರುತ್ತದೋ/ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದು.
ಪರಿಹಾರವೇನು?
ಬಟ್ಟೆಯ ಗಮ್‌ಸ್ಟ್ರಾಪ್ ಗಳ ಬಳಕೆ ಫೈಬರ್ ಭಾಗದಲ್ಲಿ ಘರ್ಷಣೆಯಾಗುತ್ತಿದ್ದರೆ ಅಲ್ಲಿಗೆ ಬಟ್ಟೆಯ ಗಮ್‌ಸ್ಟ್ರಾಪ್ ಗಳನ್ನು ಬಳಸಿ ಶಬ್ದ ಕೇಳದಂತೆ ಬಳಸಬಹುದು. ತುಸು ದಪ್ಪನೆ ಗಮ್‌ಸ್ಟ್ರಾಪ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಶಬ್ದ ಬರುವ ಜಾಗಗಳಲ್ಲಿ ಅಂಟಿಸುತ್ತಾ ಬರಬೇಕು.
ಫೋಮ್ ಸ್ಟಫ್ ಗಳ ಬಳಕೆ
ಫೈಬರ್ ಮತ್ತು ಲೋಹ ಘರ್ಷಣೆಯಾಗುವ ಜಾಗಕ್ಕೆ ತುಸು ತೆಳುವಾದ ಫೋಮ್ ಅಥವಾ ದಪ್ಪನೆಯ ಸ್ಪಾಂಜ್‌ನ ಸಣ್ಣ ತುಂಡುಗಳನ್ನು ಬಳಸಿಯೂ ಸಮಸ್ಯೆ ಪರಿಹರಿಸಬಹುದು. ಇವುಗಳನ್ನು ಅಳವಡಿಸಲು ತೆಳುವಾದ ಚಾಕು ಅಥವಾ ಸ್ಕ್ರೂ ಡ್ರೈವರ್ ಮೊನೆಯ ಅಗತ್ಯವಿದೆ. ಇದನ್ನು ಮೆಕ್ಯಾನಿಕ್‌ಗಳು ಮಾಡಿಕೊಡಬಲ್ಲರು.
ರಬ್ಬರ್ ಬೀಡಿಂಗ್‌ಗಳ ಬಳಕೆ
ಕಾರಿನ ಡೋರ್ ಹಾಕುವ ಭಾಗದಲ್ಲಿ ಅಥವಾ ಡ್ಯಾಶ್‌ಬೋರ್ಡ್‌ಗೆ ಹೊಂದಿಕೊಂಡಂತಿರುವ ಜಾಗದಲ್ಲೂ ಕೀರಲು ಶಬ್ದ ಬರುತ್ತದೆ. ಈ ವೇಳೆ ಕಾರಿನ ಡೋರ್ ಬೀಡಿಂಗ್ ಚೆನ್ನಾಗಿದೆಯೇ? ಎಂದು ಪರಿಶೀಲಿಸಿ. ಕಾರಿನ ಬೀಡಿಂಗ್ ಅನ್ನು ಬದಲಿಸಿ ಅಥವಾ ತುಸು ದಪ್ಪನೆ ಬೀಡಿಂಗ್ ಅಳವಡಿಸಿದರೆ ಸಮಸ್ಯೆ ಪರಿಹಾರ ಸಾಧ್ಯ.
ರಬ್ಬರ್ ಬ್ಯಾಂಡ್/ಬುಶ್‌ಗಳ ಬಳಕೆ
ಫ್ಯೂಸ್‌ಬಾಕ್ಸ್/ ಡ್ಯಾಶ್‌ಬೋರ್ಡ್ ಬಾಕ್ಸ್ ಗಳ ಕಿರು ಬಾಗಿಲುಗಳಲ್ಲೂ ವೈಬ್ರೇಷನ್ ಬರಬಹುದು. ಇದಕ್ಕಾಗಿ ಅಲ್ಲಿ ರಬ್ಬರ್ ಬುಷ್ ಬಳಸಬಹುದು. ಇದನ್ನು ಗಮ್ ಹಾಕಿ ಅಂಟಿಸಬೇಕು. ಇನ್ನು ಫ್ಯೂಸ್ ಭಾಗಕ್ಕೆ ಸಾಗುವ ವಯರ್‌ಗಳ ಕನೆಕ್ಟರ್‌ನಿಂದ ಶಬ್ದ ಬರುತ್ತಿದ್ದರೆ ರಬ್ಬರ್ ಬ್ಯಾಂಡ್ ಹಾಕಿ ಅವುಗಳನ್ನು ಒಟ್ಟಾಗಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ.
ಈಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.