ಹಬ್ಬಗಳ ಸೀಸನ್ ಶಾಪಿಂಗ್ ಪ್ರಿಯರಿಗೆ ಧಮಾಕಾ ಆಫರ್‌ಗಳು
Team Udayavani, Oct 18, 2019, 5:45 AM IST
ಅಕ್ಟೋಬರ್ ತಿಂಗಳು ಹಬ್ಬದ ತಿಂಗಳು. ಒಂದಾದ ಮೇಲೆ ಒಂದು ಹಬ್ಬಗಳು ಜನರ ಸಂಭ್ರಮವನ್ನು ಹೆಚ್ಚಿಸಿದೆ. ಈ ಸಂದರ್ಭ ಶಾಪಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತದೆ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು, ಮನೆಗೆ ಹೊಸ ಎಲೆಕ್ಟ್ರಿಕ್ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇದರಂತೆ ಕಂಪೆನಿಗಳು ಕೂಡ ಜನರನ್ನು ಮರುಳು ಮಾಡಲು ವಿವಿಧ ಆಫರ್, ಡಿಸ್ಕಂಟ್‌ಗಳು ನೀಡುತ್ತಿವೆ. ದೀಪಾವಳಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಆಫರ್‌ಗಳು ಯಾವ ರೀತಿ ಇದೆ ಎಂಬ ಮಾಹಿತಿ ಇಲ್ಲಿದೆ.
ಇದೀಗ ಹಬ್ಬದ ಸೀಸನ್. ಈಗಾಗಲೇ ನವರಾತ್ರಿ ಕಳೆದು ಇನ್ನೇನು ಕೆಲ ದಿನಗಳಲ್ಲಿ ದೀಪಾವಳಿ ಹಬ್ಬ ಕಾಲಿಡಲಿದೆ. ಹಬ್ಬದ ಸವಿ ಸವಿಯುವುದರ ಜತೆಗೆ ಅನೇಕ ಮಂದಿ ಶಾಪಿಂಗ್ ಮಾಡುವದರಲ್ಲೂ ಬ್ಯುಸಿ ಇರುತ್ತಾರೆ. ಅದಕ್ಕೆಂದೇ ಇಲೆಕ್ಟ್ರಾನಿಕ್ ವಸ್ತುಗಳು, ಅಟೋಮೊಬೈಲ್ ಸಂಸ್ಥೆಗಳು ಹಲವಾರು ಆಫರ್‌ಗಳನ್ನು ನೀಡುತ್ತಿದೆ. ಇನ್ನು ಆನ್‌ಲೈನ್ ಶಾಪಿಂಗ್ ತಾಣಗಳಲ್ಲಂತೂ ಧಮಾಕಾ ಆಫರ್‌ಗಳು ಆರಂಭವಾಗಿದೆ.
ದೀಪಾವಳಿ ಹಬ್ಬಕ್ಕೆ ಗ್ರಾಹಕರನ್ನು ಸೆಳೆಯಲು ಅಟೋಮೊಬೈಲ್ ಕಂಪೆನಿಗಳು ಸಜ್ಜಾಗಿವೆ. ಹೀರೋ ಮೋಟಾರ್ಸ್ ದೀಪಾವಳಿ ಹಬ್ಬಕ್ಕೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ರಿಯಾಯಿತಿ ನೀಡಿದೆ. ಹೀರೋ ಇಆರ್ ಹಾಗೂ ಎನ್‌ವೈಎಕ್ಸ್ ಇಆರ್ ಎರಡು ಇ-ಸ್ಕೂಟರ್ ಮೇಲೆ ಹಬ್ಬಕ್ಕೆಂದು 3,000 ರೂ. ಕ್ಯಾಶ್ ಡಿಸ್ಕೌಂಟ್ ನೀಡಿದೆ. ಇನ್ನು ಹೊಸ ಬೈಕ್, ಸ್ಕೂಟರ್ ಖರೀದಿ ಮೇಲೆ ಹೆಚ್ಚುವರಿ ಬಿಡಿ ಭಾಗ ಅಳವಡಿಸಿದರೆ ಹೆಲ್ಮೆಟ್ ಉಚಿತವಾಗಿ ಪಡೆಯಬಹುದು. ಇನ್ನು ಬಜಾಜ್ ಕಂಪೆನಿಯು ಪಲ್ಸರ್ ಬೈಕ್ ಖರೀದಿಗೆ ಮೂಲ ಬೆಲೆಯಲ್ಲಿ 3,000 ರೂ. ಆಫರ್ ಇದೆ. ಎಲ್ಲ ಬೈಕ್, ಸ್ಕೂಟರ್‌ಗಳಿಗೆ ಈವರೆಗೆ 3 ಉಚಿತ ಸರ್ವಿಸ್ ಇತ್ತು. ಇದೀಗ ಹಬ್ಬದ ಪ್ರಯುಕ್ತ 5 ಕ್ಕೆ ಏರಿಸಲಾಗಿದೆ. ಎಲ್ಲ ವಾಹನಗಳಿಗೆ 5 ವರ್ಷಗಳ ವಾರೆಂಟಿ ಇದೆ. ಜತೆಗೆ ಕಡಿಮೆ ಡೌನ್ ಪೇಮೆಂಟ್ ಇಎಂಐ ಸೌಲಭ್ಯ ಕೂಡ ಇದೆ.
ಇಲೆಕ್ಟ್ರಾನಿಕ್ ವಸ್ತುಗಳಾದ ಎಲ್.ಇ.ಡಿ. ಟಿ.ವಿ., ರೆಫ್ರಿಜರೇಟರ್, ಲ್ಯಾಪ್‌ಟಾಪ್, ಎ.ಸಿ., ಕೂಲರ್, ಮೈಕ್ರೋವೇವ್, ವಾಷಿಂಗ್ ಮೆಶಿನ್, ಎಲ್‌ಇಡಿ ಟಿ.ವಿ. ಖರೀದಿಗೆ ಪ್ರಮುಖ ಎಲೆಕ್ಟ್ರಾನಿಕ್ ಶಾಪ್‌ಗ್ಳಲ್ಲಿ ಆಫರ್ ಇದ್ದು, ಬಡ್ಡಿ ರಹಿತ ಕಂತುಗಳು, ಶೇ.20ರವರೆಗೆ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವಾರು ಬಹುಮಾನಗಳಿವೆ.
ಮೊಬೈಲ್‌ಗಳಿಗೆ ಫುಲ್ ಡಿಮ್ಯಾಂಡ್
ಹಬ್ಬದ ಆಫರ್ ಇರುವ ಕಾರಣ ಮೊಬೈಲ್ ಶಾಪ್‌ಗ್ಳಲ್ಲಿ ಜನಜಂಗುಳಿ ಇದೆ. ಹೆಚ್ಚಿನ ಮೊಬೈಲ್‌ಗಳಿಗೆ ಆಫರ್ ಇದ್ದು, ಹೊಸ ಮೊಬೈಲ್ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಹೊಸ ಮೊಬೈಲ್ ಖರೀದಿಗೆ ಗಿಫ್ಟ್ ವೋಚರ್, ಶೇ.0 ಬಡ್ಡಿದರದಲ್ಲಿ ಡೌನ್ ಪೇಮೆಂಟ್, ಹೆಡ್‌ಸೆಟ್, ಪವರ್ ಬ್ಯಾಂಕ್ ಸೇರಿದಂತೆ ಇತರೆ ಕೊಡುಗೆಗಳು, ಮೊಬೈಲ್ ಮೂಲ ದರದ ಮೇಲೆ ರಿಯಾಯಿತಿ, ಕೂಪನ್‌ಗಳು, ಅದೃಷ್ಟಶಾಲಿಗಳಿಗೆ ಬಹುಮಾನ ಸೇರಿದಂತೆ ವಿವಿಧ ಆಫರ್‌ಗಳಿವೆ.
ಪ್ರಮುಖ ಮೊಬೈಲ್ ಬ್ರ್ಯಾಂಡ್ ಆದ ಸ್ಯಾಮ್‌ಸಂಗ್ ದೀಪಾವಳಿ ಆಫರ್ ಪರಿಚಯಿಸಿದ್ದು, 64 ಜಿ.ಬಿ.ಯ ಗ್ಯಾಲಕ್ಸಿ ಎಂ30ಎಸ್ ಮೂಲ ಬೆಲೆ 15,500 ರೂ. ಆಗಿದ್ದು ಇದೀಗ 13,999 ರೂ.ಗೆ ದೊರಕಲಿದೆ. ಇನ್ನು, 10,000 ರೂ. ಬೆಲೆಯ ಗ್ಯಾಲಕ್ಸಿ ಎಂ10ಎಸ್ 7,999 ರೂ.ಗೆ, 73,600 ರೂ. ಬೆಲೆಯ ಗ್ಯಾಲಕ್ಸಿ ನೋ1-9 ಮೊಬೈಲ್ 42,999 ರೂ.ಗೆ, 62,000 ರೂ. ಬೆಲೆಯ ಗ್ಯಾಲಕ್ಸಿ ಎಸ್-9 ಮೊಬೈಲ್ 29,999 ರೂ.ಗೆ ದೊರಕಲಿದೆ. ಪ್ರಮುಖ ಬ್ರ್ಯಾಂಡ್ ಆದ ನೋಕಿಯಾ ಸಂಸ್ಥೆ ಕೂಡ ದೀಪಾವಳಿ ಆಫರ್ ನೀಡಿದ್ದು, 8,599ರೂ. ಬೆಲೆಯ ನೋಕಿಯಾ 2.2 ಮೊಬೈಲ್ 6,599ರೂ.ಗೆ, 10,199 ರೂ. ಬೆಲೆಯ ನೋಕಿಯಾ 3.2 ಮೊಬೈಲ್‌ಗೆ 7,499 ರೂ., 17,599 ರೂ. ಬೆಲೆಯ ನೋಕಿಯಾ 6.1 ಪ್ಲಸ್ 11,999 ರೂ. ಬೆಲೆಗೆ, 24, 561 ರೂ. ಬೆಲೆಯ ನೋಕಿಯಾ 7.1 ಮೊಬೈಲ್ 12,999 ರೂ.ಗೆ ದೊರಕಲಿದೆ. ರೆಡ್‌ಮಿ ಸಂಸ್ಥೆಯ ಮೊಬೈಲ್‌ಗೂ ಆಫರ್ ಇದ್ದು, 28,999 ಬೆಲೆಯ ರೆಡ್‌ಮಿ ಕೆ.20 ಪ್ರೋ ಮೊಬೈಲ್ 24,999 ರೂ., 14,999 ರೂ. ಬೆಲೆಯ ಎಂಐ ಎ3 ಮೊಬೈಲ್ 12,999 ರೂ.ಗೆ, 15,999 ರೂ. ಬೆಲೆಯ ರೆಡ್‌ಮಿ ನೋಟ್ 7 ಪ್ರೋ 11,999 ರೂ.ಗೆ ಸಿಗಲಿದೆ. ಇನ್ನು, ಒಪ್ಪೋ, ವಿವೋ, ಮೋಟೊರೋಲಾ ಸೇರಿದಂತೆ ವಿವಿಧ ಮೊಬೈಲ್ ಬ್ರಾಂಡ್‌ಗಳಿಗೂ ದೀಪಾವಳಿ ಆಫರ್‌ನಲ್ಲಿ ಸಿಗಲಿದೆ. ದಸರಾ, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಯೋ ತನ್ನ 4ಜಿ ಎಲ್‌ಟಿಇ ಫೋನಿನ ಬೆಲೆಯನ್ನು 800 ರೂ.ಗೆ ಕಡಿತಗೊಳಿಸಿದೆ.
ಆನ್‌ಲೈನ್ ಧಮಾಕ
ದೀಪಾವಳಿ ಹಬ್ಬದ ಪ್ರಯುಕ್ತ ಪ್ರಮುಖ ಶಾಪಿಂಗ್ ತಾಣಗಳಾದ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಅಮೇಜಾನ್ ಸೇರಿದಂತೆ ವಿವಿಧ ತಾಣಗಳಲ್ಲಿ ಆಫರ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಮೂಲಬೆಲೆಗಿಂತ ಶೇ.30, 40 ರಷ್ಟು ಕಡಿಮೆ ಬೆಲೆ, ಉಚಿತ ಆನ್‌ಲೈನ್ ಡೆಲಿವೆರಿ, ಎಕ್ಸ್‌ಚೇಂಜ್ ಆಫರ್, ಶೇ.0 ಬಡ್ಡಿದರದಲ್ಲಿ ಇಎಂಐ, ಮತ್ತು ಡೀಲ್ ಆಫ್ ದಿ ಡೇ ಎಂದು ಕೊಂಡುಕೊಳ್ಳುವ ವಸ್ತುಗಳಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ.
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.