ತೆಂಗಿನ ಚಿಪ್ಪಿನ ವಿಭಿನ್ನ ಕಲಾಕೃತಿ…


Team Udayavani, Mar 7, 2020, 4:55 AM IST

ತೆಂಗಿನ ಚಿಪ್ಪಿನ ವಿಭಿನ್ನ ಕಲಾಕೃತಿ…

ಮನೆಯಲ್ಲಿ ನಾವು ಬಳಸಿ ಎಸೆಯುವ ಹಲವು ವಸ್ತುಗಳಿಂದ ಅನೇಕ ರೀತಿಯ ಮನೆ ಬಳಕೆ ಸಾಮಗ್ರಿಗಳಾಗುತ್ತವೆ ಎಂಬುದನ್ನು ನಾವು ಯೋಚಿಸಿಯೇ ಇರುವುದಿಲ್ಲ. ಪ್ಲಾಸ್ಟಿಕ್‌ ಬಳಸುವ ಬದಲು ಮನೆಯಲ್ಲಿ ಬಳಸಿ ಕಸದ ಬುಟ್ಟಿಗೆ ಹಾಕುವ ತೆಂಗಿನ ಚಿಪ್ಪುಗಳಿಂದ ಮನೆ ಬಳಕೆ ವಸ್ತುಗಳನ್ನು ತಯಾರಿಸಬಹುದಾಗಿದ್ದು ಬೇಕಾದ ಆಕೃತಿಯಲ್ಲಿ ಉಪಯೋಗಿಸಿ ಕೊಳ್ಳಬಹುದಾಗಿದೆ.

ಮನೆ ಕಟ್ಟುವುದು ಎಷ್ಟು ಕಷ್ಟವೋ ಅದಕ್ಕಿಂತ ಕಟ್ಟಿದ ಮನೆಯನ್ನು ಚೆನ್ನಾಗಿ ಇಟ್ಟು ಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ಇತ್ತೀಚೆಗೆ ಮನೆಯಲ್ಲಿ ಉಳಿದ ಸಾಮಗ್ರಿಗಳಿಂದ ವಿವಿಧ ರೀತಿಯ ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ಸಾಮಾನ್ಯ. ಇದು ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವುದಲ್ಲದೆ ಮನೆ ವಿಭಿನ್ನವಾಗಿ ಕಾಣಲು ಸಹಾಯ ಮಾಡುತ್ತದೆ.

ಮನೆಯಲ್ಲಿ ದಿನವೂ ತೆಂಗಿನಕಾಯಿ ಬಳಸುವುದು ಸಾಮಾನ್ಯ ಆದರೆ ಅದನ್ನು ಬಿಸಾಡುವ ಬದಲು ಅದರಿಂದ ಮನೆಗೆ ಬೇಕಾಗುವ ಅನೇಕ ದಿನಬಳಕೆಯ ವಸ್ತುಗಳನ್ನು ತಯಾರಿಸುವ ಟ್ರೆಂಡ್‌ ಆರಂಭವಾಗಿದ್ದು ಇದು ಆರೋಗ್ಯದ ದೃಷ್ಟಿಯಿಂದಲೂ ಉಪಕಾರಿಯಾಗಿ ಪರಿಣಮಿಸುತ್ತಿದೆ.

ಅಡುಗೆ ಮನೆಯ ಸೊಬಗು
ಹೆಂಗಸರಿಗೆ ಅಡುಗೆ ಮನೆ ಶುಚಿಯಾಗಿರುವ ಜತೆಗೆ ಚಂದವಾಗಿರಬೇಕು ಎಂಬ ಹಂಬಲವಿರುತ್ತದೆ. ಅದಕ್ಕೆ ಪೂರಕವೆಂಬ ಹಾಗೇ ಈ ತೆಂಗಿನ ಚಿಪ್ಪುಗಳನ್ನು ಬಳಸಿಕೊಂಡು ಅದನ್ನು ಚೆನ್ನಾಗಿ ಶುಚಿಗೊಳಿಸಿ ಅದರ ಎರಡೂ ಬದಿಗಳಲ್ಲಿ ಹೋಲ್‌ ಮಾಡಿಕೊಂಡು ಅದಕ್ಕೆ ಚಿಕ್ಕ ಕಲರ್‌ ಬಳ್ಳಿ ಕಟ್ಟಿಕೊಂಡರೆ ಬೌಲ್‌ ಆಗಿ ಉಪಯೋಗಿಸಿಕೊಳ್ಳಬಹುದು. ಇತ್ತೀಚೆಗೆ ಇದರಿಂದ ಮಾಡಿದ ಸೌಟ್‌, ಸ್ಪೂನ್‌, ಬೌಲ್‌ಗ‌ಳು ಲಭ್ಯವಿದ್ದು ಇದನ್ನು ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಅದನ್ನು ಕೊಂಡುಕೊಳ್ಳಬಹುದು. ಇದರಿಂದ ಆಗುವ ಮುಖ್ಯ ಉಪಯೋಗವೆಂದರೆ ಪ್ಲಾಸ್ಟಿಕ್‌ ಪ್ಲೇಟ್‌, ಚಮಚ ಇನ್ನಿತರ ಮನೆ ಬಳಕೆಯ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇತ್ತೀಚೆಗೆ ಅನೇಕ ಕಾಯಿಲೆಗಳು ಕಂಡು ಬರುತ್ತಿದ್ದು, ಮನೆಯಲ್ಲಿ ಆದಷ್ಟು ಬೇರೆ ಪಾತ್ರೆ ಬಳಕೆ ಕಡಿಮೆ ಮಾಡಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಕೆಲವು ಮನೆಗಳಲ್ಲಿ ಹೆಂಗಸರು ದೊಡ್ಡ ತೆಂಗಿನಕಾಯಿಯನ್ನು ಸುಲಿದು ಅದನ್ನು ಸೂತ್ತಲೂ ಚೆಂದವಾಗಿ ಹೋಲ್‌ ಮಾಡಿಕೊಂಡು ಅದರೊಳಗೆ ಚಿಕ್ಕ ಕಲರ್‌ ಬಲ್ಪ್ ಅಳವಡಿಸುತ್ತಾರೆ. ಇನ್ನು ಕೆಲವೆಡೆ ಇದರ ಮೇಲೆ ಲೈಟ್‌ ಸರಗಳನ್ನು ಹಾಕಿ ಪಾರ್ಟಿಗಳಿಗೆ ಬಳಸಿಕೊಳ್ಳುತ್ತಾರೆ. ಇದು ಮನೆಯ ಅಂದ ಹೆಚ್ಚಿಸುವುದರ ಜತೆಗೆ ವಿಭಿನ್ನವಾಗಿ ಕಾಣುತ್ತದೆ.

ಇದು ಅತೀ ಸುಲಭದ ಕೆಲಸವೆನಲ್ಲ ಇದೊಂದು ಕಲೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಇದು ಒಂದು ಉದ್ಯಮವಾಗಿ ಬೆಳೆಯುತ್ತಿದ್ದು ನೀವು ಆರ್ಡ್‌ರ್‌ ಮಾಡಿದ ರೀತಿಯ ವಸ್ತುಗಳನ್ನು ಕೆಲವೇ ದಿನಗಳಲ್ಲಿ ನಿಮಗೆ ತಂದುಕೊಡಲಾಗುತ್ತದೆ. ಶೋ ಪೀಸ್‌ಗಳು, ಮಗ್ಗಗಳು, ಚಮಚ, ಪಾಟ್‌ ರೀತಿಯಲ್ಲಿ ಚಿಕ್ಕ ಗಿಡಗಳನ್ನು ನೆಡಲು, ಟೀ ಕಪ್‌ ಮತ್ತು ಸೋಸರ್‌ ಇನ್ನಿತರ ವಸ್ತುಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅದಲ್ಲದೆ ಇದನ್ನು ನೀವು ಮನೆಗಳಲ್ಲಿಯೂ ಮಾಡಬಹುದಾಗಿದ್ದು ನಿಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳಬಹುದಾಗಿದೆ.

ದಿನನಿತ್ಯ ನೀವು ಬಳಸಿದ ತೆಂಗಿನ ಕಾಯಿ ಚಿಪ್ಪುಗಳನ್ನು ಮಾರಾಟ ಮಾಡಬಹುದು ಅಥವಾ ಮನೆಯಲ್ಲಿ ಅದನ್ನು ಸ್ವತ್ಛ ಮಾಡಿ ಪೈಟಿಂಗ್‌ ಮಾಡಿ ಅದಕ್ಕೆ ಹೊಸ ರೀತಿಯ ಟಚ್‌ ಕೊಡಬಹುದು.

ಮನೆಯಲ್ಲಿ ಮದುವೆ ಸಮಾರಂಭಗಳಿಗೆ ಕಲಶಕ್ಕೆ ತೆಂಗಿನಕಾಯಿ ಇಡುವುದು ಸಾಮಾನ್ಯ. ಆದರೆ ಇದಕ್ಕೆ ಕೈ ಕಸೂತಿ ಮಾಡಿ ಬಳಸುವುದರಿಂದ ನ್ನು ಹೆಚ್ಚಿನ ಅಂದ ನೀಡುತ್ತವೆ. ಇದು ಮಾರುಕಟ್ಟೆಗಳಲ್ಲಿಯೂ ದೊರೆಯುತ್ತಿದ್ದು ನಿಮ್ಮ ಸೀರೆ ಮ್ಯಾಚಿಂಗ್‌ ಮಾಡಿ ಕಾಯಿಯನ್ನು ಕೊಳ್ಳಬಹುದಾಗಿದೆ.

ಪಾರ್ಟಿಪ್ರಿಯರಿಗೆ ಹೇಗೆ ಸಹಾಯ?
ಕೆಲವು ಪಾರ್ಟಿ ಪ್ರಿಯರಿಗೆ ಇದು ಹೇಳಿ ಮಾಡಿಸಿದಾಗಿದ್ದು ತೆಂಗಿನ ಚಿಪ್ಪಿನ ಅಲಂಕಾರಗಳಿಂದ ಕಡಿಮೆ ಬಜೆಟ್‌ನಲ್ಲಿ ಪಾರ್ಟಿ ಮಾಡಬಹುದಾಗಿದೆ. ಹೇಗೆ ಎಂಬುದು ಎಲ್ಲರ ಪ್ರಶ್ನೆಯಾಗಿದ್ದರೂ ಅತಿ ಸುಲಭವಾಗಿ ಎಲ್ಲವನ್ನೂ ಅಂದವಾಗಿ ಜೋಡಿಸಬಹುದಾಗಿದೆ. ಮನೆಯಲ್ಲಿ ಚಿಕ್ಕ ಕಲರ್‌ ಲೈಟ್‌ಗಳನ್ನು ತಂದು ವಿವಿಧ ಬಗೆಯ ತೆಂಗಿನ ಚಿಪ್ಪುಗಳನ್ನು ಸ್ವತ್ಛಗೊಳಿಸಿ ಅದಕ್ಕೆ ದಾರ ಕಟ್ಟಿ ಬೇಕಾದಲ್ಲಿ ಅದಕ್ಕೆ ಚಿಕ್ಕ ಚಿಕ್ಕ ರಂದ್ರಗಳನ್ನು ಕೊರೆದಿಟ್ಟುಕೊಳ್ಳಿ ಇದರಿಂದ ಕತ್ತಲೆಯಲ್ಲಿ ಲೈಟ್‌ ತುಂಬಾ ಸುಂದರವಾಗಿ ಕಾಣುತ್ತದೆ. ಹೀಗೆ ಅನೇಕ ರೀತಿಯಲ್ಲಿ ಇದು ಉಪಯೋಗವಾಗುತ್ತಿದ್ದು, ಮನೆಗೆ ವಿಭಿನ್ನ ಲುಕ್‌ ನೀಡಲು ಬಯಸುವವರು ಇದನ್ನು ಬಳಸಬಹುದು.

ಮನೆ ಬಳಕೆಗೆ ಹೇಗೆ ಸಹಾಯ?
ಮಾರುಕಟ್ಟೆಗಳಲ್ಲಿ ಇದರಿಂದ ಮಾಡಿದ ಡಬ್ಬಗಳು ದೊರೆಯುತ್ತವೆ. ಅದಲ್ಲದೆ ಟೀ ಕುಡಿಯಲು ಸಹಾಯವಾಗುವ ಕಪ್‌ಗ್ಳು, ಮನೆಯ ಹೊರಾಂಗಣದಲ್ಲಿ ಬಳಸಲು ಚಿಕ್ಕ ಚಿಕ್ಕ ಪೂಟ್‌ಗಳು ಲಭ್ಯವಿದ್ದು ಅದನ್ನು ಕರಿದಿಸಿಕೊಂಡು ತರಬಹುದು. ಇದು ನಿಮ್ಮ ಬೇರೆ ಪಾತ್ರೆಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅದಲ್ಲದೆ ಅಲಂಕಾರಕ್ಕಾಗಿ ಬಳಸುವವರು ಟೇಬಲ್‌ಗ‌ಳ ಮೇಲೆ ಇಡಲು ಇದರ ಪೈಟಿಂಗ್‌ ಚಿಪ್ಪುಗಳನ್ನು ಆಯ್ದು ತರಬಹುದು. ಅದಲ್ಲದೆ ಇದಕ್ಕೆ ಅಲಂಕಾರ ಮಾಡಲು ಸಮುದ್ರದ ದಡಗಳಲ್ಲಿ ಸಿಗುವ ವಿವಿಧ ರೀತಿಯ ಚಿಪ್ಪುಗಳನ್ನು ಬಳಸಿಕೊಂಡು ವಿಭಿನ್ನ ಲುಕ್‌ ನೀಡಬಹುದು.

– ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.