ಜೀವನ ಸುಂದರವಾಗಲು ಉಳಿಪೆಟ್ಟು ಬೀಳಲೇಬೇಕು


Team Udayavani, Oct 29, 2018, 2:47 PM IST

29-october-12.gif

ಸಿಹಿಯಾದ ಗೆಲುವು ತುಂಬಾ ಕಷ್ಟ. ಆಳವಾಗಿರುವ ಗೆಲುವನ್ನು ಸಾಧಿಸಬೇಕಾದರೆ, ಅದಕ್ಕಿಂತ ಮೊದಲು ನಮ್ಮನ್ನು ಕಾಡುವ ಶಕ್ತಿಯನ್ನು ಭೇದಿಸಬೇಕು. ಆದರೆ ಈ ಮಧ್ಯೆ ನಮಗೆ ಸೋಲಾಗುವುದು ಎಂಬ ಭಯದಿಂದ ಶಸ್ತ್ರತ್ಯಾಗ ಮಾಡಬಾರದು. ‘ಕ್ರಿಸ್ಟಲ್‌ ಕ್ಲಿಯರ್‌’ ಎಂಬಂತೆ, ಸಮಾಜ ಯಾವತ್ತು ಸೋಲಿಗೆ ಪ್ರತಿಫ‌ಲ ನೀಡುವುದಿಲ್ಲ. ಒಂದು ಶ್ವೇತವರ್ಣದ ಬಟ್ಟೆ ಅಥವಾ ಗೋಡೆಗಳು ನಮ್ಮ ಕಣ್ಣ ಮುಂದಿದೆ ಎಂದು ಕೊಳ್ಳೋಣ, ನೀವಾಗಿ ಅಲ್ಲಿ ಒಂದು ಪೆನ್ನಿನಿಂದ ಗುರುತು ಮಾಡಿ ಅಲ್ಲಿ ನಮಗೆ ಮೊದಲು ಆ ಕಪ್ಪು ವರ್ತುಲ ಕಾಣುವುದೇ ಹೊರತು ಅದರ ಸುತ್ತ ಇರುವ ಶುಭ್ರ ಶ್ವೇತ ಬಣ್ಣ ಕಾಣದು.

ಇದು ಯಾರಾದರೂ ಸರಿ. ಜೀವನದ ಕುರಿತು ಎಷ್ಟೇ  ಬೋಧನೆ ಮಾಡುವವರೂ ಮೊದಲು ನೋಡುವುದೇ ಆ ಬಾಧಿತ ಅಂಶವನ್ನು ಎಂಬುದಂತು ನಿಜ. ಇದೇ ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತಿರುತ್ತದೆ. ಓರ್ವ ಜೀವನದಲ್ಲಿ ಒಂದು ಮೆಟ್ಟಿಲು ಕುಸಿತ ಅನುಭವಿಸಿದರೆ, ಅವನತ್ತ ಬೆರಳು ಮಾಡಿ ಹೀಯಾಳಿಸುವ ಕ್ರಮ ಇದೆ. ಶಿಲ್ಪಿಯಿಂದ ಸರಿಯಾಗಿ ಪೆಟ್ಟು ತಿಂದ ಶಿಲೆ ಮಾತ್ರ ನಾಳೆ ಸುಂದರ ಮೂರ್ತಿಯಾಗಿ ಎದ್ದು ನಿಲ್ಲುತ್ತದೆ. ಒಂದು ವೇಳೆ ಆ ಶಿಲೆ ಶಿಲ್ಪಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ, ನಾಲ್ಕು ಜನ ತುಳಿದು ಹೋಗುವ ಕಲ್ಲಾಗುತ್ತಿತ್ತು.

ವೈಫ‌ಲ್ಯದಿಂದ ಬದುಕಿನ ಪಾಠ
ನಾವು ಇತಿಹಾಸದುದ್ದಕ್ಕೂ ಶ್ರೇಷ್ಠ ಚಿಂತಕರನ್ನು ಹತ್ತಿರದಿಂದ ನೋಡಿದಾಗ, ವೈಫ‌ಲ್ಯವನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಇಚ್ಛೆ ಬೇಕಾಗಿದೆ. ಅದು ಸಾಮಾನ್ಯವಾದ ಚಿಂತನೆಯಲ್ಲ. ವೈಫ‌ಲ್ಯ ಮತ್ತು ಸೋಲು ಜೀವನದ ಅತಿ ಶ್ರೇಷ್ಠ ಶಿಕ್ಷಕರು. ಆದರೆ ದುಃಖಕರವಾಗಿರುವ ಕಾರಣ ಜನರು ಅದರ ಹತ್ತಿರ ಹೋಗಲು ಬಯಸುವುದಿಲ್ಲ. ಸೋತಾಗ ಕುಗ್ಗದೇ ಯಾರೂ ಮುಂದಡಿಯಿಡುತ್ತಾರೆಯೋ ಅವರು ತಮ್ಮ ಸುಂದರ ಬದುಕಿನ ಶಿಲ್ಪಿಯಾಗುತ್ತಾರೆ. ಸಾಧನೆಯ ಶಿಖರವನ್ನು ಎರುವಲ್ಲಿ ಯಶಸ್ವಿಯಾಗುತ್ತಾರೆ.

ವಿನಾಯಿತಿಗಳೇ ಸೋಲು
ಬದುಕಿನಲ್ಲಿ ಸೋತಾಗ ನಮ್ಮನ್ನು ವಿನಾ ಪ್ರಶ್ನಿಸಲೆಂದೇ ಪದೇ ಪದೇ ಮಾತನಾಡಿಸುವವರು ಇರುತ್ತಾರೆ. ಆದರೆ ನಾವು ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಯಾರು ಇಂತಹ ಸವಾಲುಗಳನ್ನು ಸ್ವೀಕರಿಸುತ್ತಾರೋ ಅವರು ನಾಳೆ ಸಮಾಜದ ಪ್ರತಿನಿಧಿಯಾಗುತ್ತಾರೆ ಎಂಬುವುದರಲ್ಲಿ ಸಂಶಯವಿಲ್ಲ. ಸವಾಲುಗಳ ಸ್ವೀಕಾರ ಅಥವಾ ಸಾಧನೆಯ ಹಾದಿಯ ಜತೆ ನಾವು ಕಾಂಪ್ರಮೈಸ್‌ ಆಗಬಾರದು. ಇಂತಹ ಸಂದರ್ಭದಲ್ಲಿ ನಾವು ವಿನಾಯಿತಿ ಬಯಸಿದ್ದೇ ಆದರೆ, ಅದು ವಿಫ‌ಲತೆಯ ಮೊದಲ ಹೆಜ್ಜೆ ಎಂದೇ ಭಾವಿಸಬಹುದಾಗಿದೆ. ಎಡಿಸನ್‌ ಟಂಗ್‌ಸ್ಟನ್‌ ಬಲ್ಬನ್ನು ಆವಿಷ್ಕರಿಸುವ ಹಂತದಲ್ಲಿ ಹಲವು ಬಾರಿ ವಿಫ‌ಲನಾಗಿದ್ದ. ಆದರೆ ಕೊನೆಗೆ ಸಫ‌ಲನಾಗುತ್ತಾನೆ. ಈ ಕುರಿತು ಎಡಿಸನ್‌ ಹೇಳುವ ಮಾತು ಪ್ರತಿಯೊಬ್ಬನನ್ನು ಬಡಿದೆಬ್ಬಿಸುವಂತಿದೆ. ಒಂದು ಬಲ್ಬನ್ನು ಕಂಡುಹಿಡಿಯಲು ನಾನು ಅನುಭವಿಸಿದ ವಿಫ‌ಲತೆ ನನ್ನ ಪಾಲಿಗೆ ಸೋಲಾಗಿ ಕಾಣಲಿಲ್ಲ. ಬದಲಾಗಿ ಅಷ್ಟು ಅವಕಾಶಗಳು ನನಗೆ ಲಭಿಸಿತು ಎಂದು ವಿಶ್ಲೇಷಿಸುತ್ತಾರೆ. ಅವರ ಮೊದಲ ಆವಿಷ್ಕಾರ ಇಂದು ಹಲವು ಮನೆ- ಮನಗಳನ್ನು ಬೆಳಗಿತು, ಇನ್ನೂ ಬೆಳಗುತ್ತಿದೆ.

ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

5

Bajpe: ಕೆಂಜಾರು ಹಾಸ್ಟೆಲ್‌  ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ

4

Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು

3

Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.