ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮುನ್ನ ಹೀಗೆ ಮಾಡಿ
Team Udayavani, Nov 1, 2019, 4:08 AM IST
ಹೊಸ ಕಾರು ಬೇಡ. ಸೆಕೆಂಡ್ ಹ್ಯಾಂಡ್ ಕಾರು ಸಾಕು ಎಂಬ ಮನೋಭಾವ ಹಲವರದ್ದಾಗಿರುತ್ತದೆ. ಹೆಚ್ಚು ಬಳಕೆಯಿಲ್ಲ. ಚೆನ್ನಾಗಿ ಡ್ರೈವಿಂಗ್ ತಿಳಿದಿಲ್ಲ ಎಂಬ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಖರೀದಿಸಲು ಮುಂದಾಗುತ್ತಾರೆ. ಆದರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಮುನ್ನ ಅಳುಕು ಇದ್ದದ್ದೇ. ಅದರ ಮಾಲಕರು ಚೆನ್ನಾಗಿ ಇಟ್ಟುಕೊಂಡಿದ್ದಾರಾ? ಅಪಘಾತಕ್ಕೀಡಾಗಿದೆಯೇ ಇತ್ಯಾದಿ ಸಂಶಯಗಳಿರಬಹುದು. ಆದ್ದರಿಂದ ಖರೀದಿಗೆ ಮುನ್ನ ಗಮನಿಸಬೇಕಾದ್ದೇನು? ಚೆಕ್‌ಲಿಸ್ಟ್ ಇಲ್ಲಿದೆ.
ಬಾಡಿ ಚೆಕ್
ಕಾರಿನ ಬಾಡಿ ಪರೀಕ್ಷೆ ಮುಖ್ಯ. ಇದಕ್ಕಾಗಿ ಇಡೀ ಕಾರನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಬಂಪರ್ ಮತ್ತು ಬಾಡಿ ಕಲರ್ ಒಂದೇ ಇದೆಯೇ, ಬದಿಗಳು ಒಂದೇ ರೀತಿ ಇವೆಯೇ? ಡೋರ್‌ಗಳು ಚೆನ್ನಾಗಿ ಹಾಕಿ-ತೆಗೆಯಲು ಸಾಧ್ಯವಾಗುತ್ತದೆಯೇ ಪರಿಶೀಲಿಸಿ. ಕಾರಿನ ತಳಭಾಗದ ವೆಲ್ಡಿಂಗ್, ಎಕ್ಸಾಸ್ಟ್ ಪೈಪ್‌ಗ್ಳನ್ನೂ ಪರಿಶೀಲಿಸುವುದು ಉತ್ತಮ. ಎಂಜಿನ್ ಬೇ ತೆರೆದು ನೋಡಬೇಕು. ಈ ಮೂಲಕ ಕಾರು ಯಾವುದೇ ಅಪಘಾತ, ರೀಪೈಂಟ್ ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ರಬ್ಬರ್ ಬಿಡಿಭಾಗಗಳು
ಕಾರು ಹೆಚ್ಚು ಬಳಕೆಯಾಗಿದ್ದರೆ ರಬ್ಬರ್ ಬಿಡಿಭಾಗಗಳು ಸವೆದಿರುತ್ತವೆ. ಉದಾ: ಡೋರ್‌ನ ಬೀಡಿಂಗ್‌ಗಳು ಕಿರಿದಾಗಿ ಶಬ್ದ ಮತ್ತು ಸಸ್ಪೆನÒನ್ ಬುಶ್‌ಗಳು ಸವೆದು ಟಯರ್ ಹೊಂಡ-ಗುಂಡಿಗೆ ಬಿದ್ದಾಗ ಶಬ್ದ ಬರಬಹುದು. ಹಾಗೆಯೇ ವಿವಿಧ ರಬ್ಬರ್ ಭಾಗಗಳು ಸವೆದಿದ್ದರೆ ಅದರ ಅನುಭವ ಡ್ರೈವಿಂಗ್ ವೇಳೆ ಆಗತ್ತದೆ. ಕಾರಿನ ಟಯರ್ ಕೂಡ ಪರಿಶೀಲನೆ ಉತ್ತಮ. ಟಯರ್‌ಗಳು ಒಂದೇ ರೀತಿ ಸವೆದಿದೆಯೇ? ಸ್ಟೆಪ್ನಿ ಟಯರ್ ಹೇಗಿದೆ? ಒಂದು ವೇಳೆ ಕಾರು ಬಳಕೆಯೇ ಮಾಡುತ್ತಿಲ್ಲ ಎಂದಾದರೆ ಅದರ ಟಯರ್ ಕಾಂಪೌಂಡ್ ಬಿರುಕು ಬಿಟ್ಟಿರುವುದೂ ಕಾಣಿಸುತ್ತದೆ.
ಸರ್ವೀಸ್ ಹಿಸ್ಟರಿ
ಕಾರಿನ ಅಧಿಕೃತ ಡೀಲರ್ ಬಳಿ ಸರ್ವೀಸ್ ಮಾಡಿಸುತ್ತಿದ್ದೀರಾ ಎಂದು ಕೇಳಿಕೊಳ್ಳಬೇಕು. ಹೌದು ಎಂದಾಗಿದ್ದರೆ, ಕಾರು ಸರ್ವೀಸ್ ಮಾಡಿಸಿದ ಹಿಂದಿನ ವಿವರಗಳು ಲಭ್ಯ. ಇದರಿಂದ ಕಾರು ಸುಸ್ಥಿತಿಯಲ್ಲಿತ್ತು, ಅಥವಾ ನಿಗದಿತವಾಗಿ ಸರ್ವೀಸ್ ಆಗುತ್ತಿತ್ತು, ಇತ್ತೀಚೆಗೂ ಸರ್ವೀಸ್ ಆಗಿದೆ ಎಂಬ ವಿವರಗಳು ನಿಮಗೆ ಸಿಗುತ್ತದೆ.
ಎಲೆಕ್ಟ್ರಿಕಲ್ ಪರಿಶೀಲನೆ
ಕಾರಿನ ಪ್ರತಿ ಎಲೆಕ್ಟ್ರಿಕಲ್ ವಸ್ತುಗಳನ್ನೂ ಪರಿಶೀಲಿಸಿ. ಹಾರರ್ನ್, ಲೈಟ್‌ಗಳು, ಪಾರ್ಕಿಂಗ್ ಲೈಟ್, ರಿವರ್ಸ್ ಲೈಟ್, ಬ್ರೇಕ್‌ಲೈಟ್‌ಗಳು ಉರಿಯುತ್ತವೆಯೇ ನೋಡಿ. ಕಾರಿನ ಎಂಜಿನ್ ಬೇ ಒಳಗೆ ವಯರ್‌ಗಳು ಸುಸ್ಥಿತಿಯಲ್ಲಿವೆಯೇ ಪರಿಶೀಲಿಸಿ. ವೈಪರ್, ಪವರ್ ವಿಂಡೋ, ಆಡಿಯೋ ಸಿಸ್ಟಂ, ಸೆನ್ಸರ್‌ಗಳು ಸರಿಯಾಗಿವೆಯೇ ಎಂಬುದನ್ನೂ ನೋಡಿ.
ದಾಖಲೆಗಳ ಬಗ್ಗೆ
ಎಲ್ಲ ದಾಖಲೆಗಳು ಇವೆಯೇ ಎಂಬುದನ್ನೂ ನೋಡಬೇಕು. ಇನ್ಸುರೆನ್ಸ್, ರಿಜಿಸ್ಟ್ರೇಷನ್ ಯಾರ ಹೆಸರಲ್ಲಿದೆ? ನಂಬರ್ (ರಿಜಿಸ್ಟ್ರೇಷನ್ ಪರಿಶೀಲನೆಗೆ ನಂಬರ್ ಹಾಕಿ ಆನ್‌ಲೈನ್‌ನಲ್ಲೂ ನೋಡಬಹುದು) ಅಪಘಾತದ ಬಗ್ಗೆ ಸಂಶಯವಿದ್ದರೆ, ಇನುÏರೆನ್ಸ್ ಕಂಪೆನಿಯವರ ಬಳಿಯೂ ಕೇಳಬಹುದು. ನೋ ಕ್ಲೇಮ್ ಬೋನಸ್ ಸಿಗುತ್ತಿರುವ ಬಗ್ಗೆ ಇನ್ಸೂರೆನ್ಸ್ ನೋಡಿ ಖಚಿತಪಡಿಸಿಕೊಳ್ಳಬಹುದು.
- ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.