ಯಾರನ್ನೂ ಅವಗಣಿಸದಿರಿ


Team Udayavani, Feb 17, 2020, 5:54 AM IST

S-2

ನಾವು ಕಾಲ ಕಸಮಾಡಿ ಬಿಸಾಡುವ ಹಾಳೆಯೇ ಮುಂದೊಂದು ದಿನ ಗಾಳಿಪಟವಾಗಿ ಮೇಲೆ ಹಾರಬಹುದು. ಯಾರ ಶಕ್ತಿಯನ್ನೂ ಅವಗಣನೆ ಮಾಡುವುದು ಸರಿಯಲ್ಲ. ಜೀವನದಲ್ಲಿ ನಾವಂದುಕೊಂಡದ್ದು ನಡೆಯುವುದು ತೀರಾ ವಿರಳ. ಕೆಲವೊಮ್ಮೆ ನಾವು ಕನಸು ಮನಸ್ಸಿನಲ್ಲೂ ಊಹಿಸದೇ ಇರುವಂಥ ಘಟನೆಗಳು ನಡೆದು ನಮ್ಮ, ನಂಬಿಕೆ, ನಿರೀಕ್ಷೆ, ಅಳತೆ ಕೋಲುಗಳನ್ನು ಮುರಿದು ಹಾಕುವಂಥ ಘಟನೆಗಳು ನಡೆದುಬಿಡುತ್ತವೆ. ಕೆಲವೊಮ್ಮೆ ನಾವು ಈ ವ್ಯಕ್ತಿಯಿಂದ ಎನೂ ಸಾಧ್ಯವೇ ಇಲ್ಲ ಎಂದು ಹಿಯಾಳಿಸಿ ನಗುತ್ತೇವೆ ಮುಂದೋದು ದಿನ ಅವರು ತಮ್ಮ ಸಾಧನೆ ಮೂಲಕ ನಮ್ಮ ಕುಹಕ ಮಾತಿಗೆ ಉತ್ತರ ನೀಡುತ್ತಾರೆ ಎನ್ನುವುದನ್ನು ನಾವು ಆ ಕ್ಷಣಕ್ಕೆ ಮರೆತಿರುತ್ತೇವೆ.

ಜೀವನದಲ್ಲಿ ಎಲ್ಲರಿಗೂ ಅವರದೇ ಆದ ಸಾಮರ್ಥ್ಯ, ಕೌಶಲ, ವೈಶಿಷ್ಟé ಇರುತ್ತದೆ. ಅದನ್ನು ಗೌರವಿಸುವ ಉದಾರ ಗುಣ ಪ್ರತಿಯೊಬ್ಬರಲ್ಲಿಯೂ ಇರಬೇಕಾದ ಮುಖ್ಯ ಅಂಶ. ನಾನು ಹತ್ತನೇ ತರಗತಿ ಓದುವಾಗ ನನ್ನ ಸಹಪಾಠಿ ಮಂಜ ಇದಕ್ಕೆ ಒಂದು ಉದಾಹರಣೆ. ಆತ ವಿಜ್ಞಾನ ವಿಷಯದಲ್ಲಿ ಯಾವಾಗಲೂ ಹಿಂದೆ ಬೀಳುತ್ತಿದ್ದ. ತರಗತಿಯಲ್ಲಿ ನಡೆಯುವ ಕಿರು ಪರೀಕ್ಷೆಗಳಲ್ಲಿ ಸದಾ ಅನುತ್ತೀರ್ಣನಾಗುತ್ತಿದ್ದ. ಅದಕ್ಕೆ ಕಾರಣ ವಿಜ್ಞಾನ ವಿಷಯದಲ್ಲಿರುತ್ತಿದ್ದ ರಸಾಯನಿಕ ಸೂತ್ರಗಳು, ಕ್ಲಿಷ್ಟಕರವಾದ ವಿಜ್ಞಾನಿಗಳ ಹೆಸರು. ಶಾಲೆಯಿಂದ ಇಬ್ಬರು ಮನೆ ದಾರಿ ಹಿಡಿದಾಗ ದಿನವೂ ಈ ವಿಜ್ಞಾನಿಗಳು ಮತ್ತವರ ಸಂಶೋಧನೆಯ ಬಗ್ಗೆ ಸುಸಂಸ್ಕೃತದಲ್ಲಿ ಗುಣಗಾನ ಮಾಡುತ್ತಿದ್ದ. ಹೀಗೇ ದಿನ ಕಳೆದು ಪೂರ್ವಭಾವಿ ಪರೀಕ್ಷೆ ಬಂದೆ ಬಿಟ್ಟಿತು. ಮಂಜನ ದುರದೃಷ್ಟವೋ, ಸತ್ವ ಪರೀಕ್ಷೆಯೋ ಮೊದಲ ದಿನವೇ ವಿಜ್ಞಾನ ಪರೀಕ್ಷೆ ಬರಬೇಕೆ. ಪರೀಕ್ಷೆ ಮುಗಿದು ಅದರ ಮೌಲ್ಯ ಮಾಪನವೂ ಆಗಿ ನಮ್ಮ ಚಿದಾನಂದ ಮೇಷ್ಟ್ರು ಎಂದಿನಂದೆ ಉತ್ತರ ಪತ್ರಿಕೆಗಳ ಬಂಡಲ್‌ ಹಿಡಿದು ಗಂಭೀರವಾಗಿ ತರಗತಿಯ ಒಳಬಂದು ಒಬ್ಬೊಬ್ಬರದ್ದಾಗಿ ಅಂಕಗಳನ್ನು ಹೇಳಲು ಪ್ರಾರಂಭಿಸಿದರು. ಪ್ರಶ್ನೆಪತ್ರಿಕೆ ತುಂಬಾ ಕಷ್ಟಕರವಾಗಿದ್ದ ಕಾರಣ ತರಗತಿಯಲ್ಲಿ ಎಲ್ಲರಲ್ಲೂ ಭಯವಿತ್ತು. ಆದರೇ ಮಂಜ ಮಾತ್ರ ಅವತ್ತು ಯಾವುದೇ ಭಯವಿಲ್ಲದೇ ಪ್ರಸನ್ನನಾಗಿಯೇ ಇದ್ದ. ತರಗತಿಯ ಒಟ್ಟು 52 ವಿದ್ಯಾರ್ಥಿಗಳಲ್ಲಿ ಪಾಸಾಗಿದ್ದು ಕೇವಲ 5 ಜನ ಅದರಲ್ಲಿ ಮಂಜ ಕೂಡ ಇದ್ದ ಸಾಲದಕ್ಕೆ ಎರಡನೇ ಸ್ಥಾನಕೂಡ ಪಡೆದಿದ್ದ. ಅವತ್ತು ಅವನನ್ನು ಕಂಡು ಗಹಗಹಿಸಿ ನಗುತ್ತಿದ್ದ ಎಲ್ಲರೂ ತಮ್ಮ ತಪ್ಪಿನ ಅರಿವಾಗಿ ತಲೆತಗ್ಗಿಸಿ ಚಪ್ಪಾಳೆ ತಟ್ಟಿದ್ದರು. ಅವತ್ತು ನಾನು ಕಂಡುಕೊಂಡ ಸಾರ್ವಕಾಲಿಕ ಸತ್ಯ ಯಾರನ್ನೂ ಅವಗಣಿಸ ಬಾರದು. ಯಾರು ಅವಮಾನ, ಅಪಹಾಸ್ಯಕ್ಕೆ ಒಳಗಾಗುತ್ತಾರೋ ಅವರೇ ಮುಂದೊಂದು ದಿನ ಸಾಧನೆಯ ರಂಗ ಪ್ರವೇಶ ಮಾಡಿರುತ್ತಾರೆ.

- ಶಿವಾನಂದ ಎಚ್‌.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.