ಭೀತಿಯೇ ಎಲ್ಲ ದುಃಖಕ್ಕೂ ಕಾರಣ: ಸ್ವಾಮಿ ವಿವೇಕಾನಂದ
Team Udayavani, Sep 3, 2018, 12:49 PM IST
ಭಾರತ ಕಂಡ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದ ಕೂಡ ಒಬ್ಬರು. ತಮ್ಮ ಚಿಂತನೆಗಳ ಮೂಲಕ ಅವರು ಜಗತ್ತಿನ ಗುರುಗಳಾದವರು. ಭಾರತದ ತಣ್ತೀಜ್ಞಾನ, ಯೋಗ, ವೇದಾಂತ ಎಲ್ಲವನ್ನೂ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಾರಪಡಿಸಿದರು. ನಿನಗೆ ಯಾರು ಸಹಾಯ ಮಾಡುತ್ತಾರೆ ಅವರನ್ನು ಮರೆಯಬೇಡ, ನಿನ್ನನ್ನು ಯಾರು ಪ್ರೀತಿಸುತ್ತಾರೆ ಅವರನ್ನು ದ್ವೇಷಿಸಬೇಡ, ಯಾರು ನಿಮ್ಮನ್ನು ನಂಬುತ್ತಾರೋ ಅವರಿಗೆ ಮೋಸ ಮಾಡಬೇಡ ಎಂಬ ಮಾತುಗಳ ಮೂಲಕ ಹೇಗೆ ಬದುಕ ಬೇಕು, ಯಾವ ಆದರ್ಶವನ್ನು ಪಾಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಯಾವುದಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನು ಮಾಡಲು ಶಕ್ತನಾಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲ ಭೀತಿಯೇ ಕಾರಣ. ನಿರ್ಭೀತಿ ಕ್ಷಣ ಮಾತ್ರದಲ್ಲಿ ಸ್ವರ್ಗವನ್ನೇ ಕೊಡಬಲ್ಲದು. ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ತಲುಪುವವರೆಗೂ ನಿಲ್ಲದಿರು ಎನ್ನುವ ಸ್ವಾಮಿ ವಿವೇಕಾನಂದರ ಮಾತುಗಳಲ್ಲಿ ಧೈರ್ಯದಿಂದ ಮುನ್ನುಗ್ಗಿದರೆ ಯಾವುದೂ ಅಸಾಧ್ಯವಲ್ಲ ಎಂಬ ಅರ್ಥವೂ ಇದೆ. ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು; ಒಳ್ಳೆಯದನ್ನು ಮಾಡುವುದು- ಇದೇ ಧರ್ಮದ ಸರ್ವಸ್ವ ಎಂದ ವಿವೇಕಾನಂದರ ನುಡಿಗಳು ಧರ್ಮದ ಹಾದಿ ಹೇಗಿರಬೇಕು ಎಂಬುದನ್ನು ತೋರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.