ಹೈನುಗಾರಿಕೆಗೆ ಮುಳುವಾಗಿರುವ ಕಾಲುಬಾಯಿ ರೋಗ
Team Udayavani, Sep 1, 2019, 5:46 AM IST
ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರ ಭೀಕರವಾದುದು. ಪ್ರಪಂಚದಲ್ಲಿ ಪ್ರತಿ ವರ್ಷ ಇದರಿಂದಾಗುವ ಹಾನಿ 20,000 ಕೋ.ರೂ.ಗಳಷ್ಟು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ರೋಗವನ್ನು ‘ಶತಮಾನದ ಮಹಾಮಾರಿ’ ಎಂದಿದೆ.
ಈ ರೋಗ ಶತಮಾನಗಳಷ್ಟು ಹಳೆಯದಾಗಿದ್ದು 1514ರಲ್ಲಿ ಮೊದಲು ಕಾಣಿಸಿಕೊಂಡಿತ್ತು. 1897ರಲ್ಲಿ ಫ್ರಾನ್ಸ್‌ನಲ್ಲಿ , 2001ರಲ್ಲಿ ಯುರೋಪಿನ ಹಲವು ರಾಷ್ಟ್ರಗಳಿಗೆ ಹರಡಿತ್ತು. ಕರ್ನಾಟಕದಲ್ಲಿ ಈ ರೋಗ ಇತ್ತೀಚೆಗೆ ಅಧಿಕವಾಗಿ ಕಾಣಿಸಿಕೊಂಡಿದೆ. ಉತ್ತರಾಂಚಲ ರಾಜ್ಯದ ಮುಕ್ತೇಶ್ವರದಲ್ಲಿ ಈ ರೋಗದ ಸಂಶೋಧನಾ ಕೇಂದ್ರ 1943ರಲ್ಲಿ ಸ್ಥಾಪಿತವಾಗಿದೆ. ಪ್ರತಿ ವರ್ಷ ಒಂದೊಂದು ಭಾಗದಲ್ಲಿ ಈ ರೋಗ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ.
ಹರಡುವ ವಿಧಾನ
1. ವೈರಾಣು ಜಾನುವಾರಿನ ಜೊಲ್ಲು, ವಿಸರ್ಜಿತ ದ್ರವಗಳು, ಹಾಲಿನ ಮೂಲಕ ಹೊರಸೂಸುತ್ತದೆ.
2. ವೈರಾಣು ಸುಲಭವಾಗಿ ತೇವಮಿಶ್ರಿತ ಗಾಳಿಯ ಮೂಲಕ ಸ್ಥಳದಿಂದ ಸ್ಥಳಕ್ಕೆ ಪಸರಿಸುತ್ತದೆ.
3. ರೋಗಪೀಡಿತ ಜಾನುವಾರುಗಳ ಸಂಪರ್ಕ, ಕೊಟ್ಟಿಗೆ ಕೆಲಸಗಾರರು, ಮೇವು, ನೀರು ಹಾಗೂ ಇತರ ಪ್ರಾಣಿಗಳಾದ ನಾಯಿ, ಬೆಕ್ಕುಗಳ ಚಲನವಲನಗಳ ಮೂಲಕ ಹರಡುತ್ತದೆ.
4. ರೋಗಪೀಡಿತ ಕುರಿ, ಹಂದಿಗಳಿಂದ ವೈರಾಣು ಅತ್ಯಧಿಕ ಪ್ರಮಾಣದಲ್ಲಿ ವಿಸರ್ಜಿತವಾಗಿ ರೋಗ ಹರಡಲು ಕಾರಣವಾಗುತ್ತದೆ.
5. ಮಿಶ್ರ ತಳಿ ರಾಸುಗಳು ಸ್ಥಳೀಯ ತಳಿಗಳಿಗಿಂತ ಅಧಿಕವಾಗಿ ರೋಗಕ್ಕೆ ತುತ್ತಾಗುತ್ತವೆೆ.
6. ರೋಗಪೀಡಿತ ಜಾನುವಾರುಗಳ ಸಾಗಾಣಿಕೆಯಿಂದ ಸ್ಥಳದಿಂದ ಸ್ಥಳಕ್ಕೆ ಹರಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.