ಇ -ಕಾಮರ್ಸ್, ಖೆಡ್ಡಾದೊಳಗೆ ಬೀಳುವ ಮುನ್ನ ಎಚ್ಚರ
Team Udayavani, Nov 12, 2018, 1:28 PM IST
ಇ- ಕಾಮರ್ಸ್ ಬಗ್ಗೆ ಇಂದು ಜನರಲ್ಲಿ ಕುತೂಹಲ, ಆಸಕ್ತಿ ಹೆಚ್ಚುತ್ತಿದ್ದಂತೆಯೇ ಅದರ ಲಾಭ ಪಡೆದುಕೊಳ್ಳಲು ಹೊಂಚು ಹಾಕುತ್ತಿರುವವರೂ ಅಲ್ಲಲ್ಲಿ ಇದ್ದಾರೆ. ಸಾವಿರಾರು ವಿಧಗಳಲ್ಲಿ ಇ- ಕಾಮರ್ಸ್ ವೆಬ್‌ಸೈಟ್ ಹೆಸರಲ್ಲಿ ಮೋಸ ಮಾಡುವವರಿದ್ದಾರೆ. ಇನ್ನೂ ಕೆಲವು ಸನ್ನಿವೇಶಗಳಲ್ಲಿ ನಾವೇ ಸರಿಯಾದ ವೆಬ್‌ಸೈಟ್ ನಲ್ಲೇ ತಪ್ಪು ಉತ್ಪನ್ನ ಆರ್ಡರ್ ಮಾಡಿ ಎಡವುತ್ತೇವೆ.
ಆನ್‌ಲೈನ್ ನಲ್ಲಿ ಚೆಂದಚೆಂದದ ಜಾಹೀರಾತು, ಆಕರ್ಷಕ ರೇಟು, ಭರ್ಜರಿ ರಿಯಾಯಿತಿ ಇಷ್ಟು ಕಾಣುತ್ತಿದ್ದಂತೆಯೇ ಬಾಯಲ್ಲಿ ನೀರೂರದೆ ಇರುತ್ತದೆಯೇ? ಹಾಗಂತ ಎಲ್ಲವೂ ಪ್ರಾಮಾಣಿಕವೇ ಎಂಬುದನ್ನು ನಾವು ಮೊದಲು ಕೇಳಿಕೊಳ್ಳಬೇಕು. ಇ- ಕಾಮರ್ಸ್ ಬಗ್ಗೆ ಜನರಲ್ಲಿ ಕುತೂಹಲ, ಆಸಕ್ತಿ ಹೆಚ್ಚುತ್ತಿದ್ದಂತೆಯೇ ಅದರ ಲಾಭ ಪಡೆದುಕೊಳ್ಳಲು ಹೊಂಚು ಹಾಕುತ್ತಿರುವವರೂ ಅಲ್ಲಲ್ಲಿ ಇದ್ದಾರೆ.
ಇತ್ತೀಚೆಗಷ್ಟೇ ನಕಲಿ ವೆಬ್‌ಸೈಟ್ ಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಫ್ಲಿಪ್‌ಕಾರ್ಟ್ ಸೂಚನೆ ಹೊರಡಿಸಿತ್ತು. ಅಷ್ಟೇ ಅಲ್ಲ, ಫ್ಲಿಪ್ ಕಾರ್ಟ್ ಹೆಸರಲ್ಲಿ ಇ-ಮೇಲ್, ಎಸ್ಸೆಮ್ಮೆಸ್, ವಾ ಟ್ಸಪ್ ಸಂದೇಶಗಳು ಬರುತ್ತವೆ. ಇದರ ಬಗ್ಗೆಯೂ ಎಚ್ಚರಿಕೆಯಿಂದ ಇರಿ ಎಂದು ತನ್ನ ಬ್ಲಾಗ್‌ನಲ್ಲಿ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಎಚ್ಚರಿಕೆ ನೀಡಿತ್ತು. ಸಾಮಾನ್ಯವಾಗಿ ಯಾವುದೇ ಜನಪ್ರಿಯ ಹೆಸರನ್ನು ಬಳಸಿಕೊಂಡು ಮೋಸ ಮಾಡುವ ಮಂದಿ ಎಲ್ಲೆಲ್ಲೂ ಇರುತ್ತಾರೆ. ಇದು ಇ-ಕಾಮರ್ಸ್ ವಿಷಯದಲ್ಲೂ ಆಗುತ್ತಿದೆ.
ನಕಲಿ ವೆಬ್ ಸೈಟ್ ಗಳು
ಸಾಮಾನ್ಯವಾಗಿ fl ipkart.dhamaka&off ers.com, fl ipkart&bigbillion&sale.com ಹೆಸರಿನ ವೆಬ್ ಸೈಟ್ ಗಳು ವಾಟ್ಸಪ್ ಅಥವಾ ಇತರ ಮೆಸೆಂಜರ್‌ಗಳಲ್ಲಿ ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಫ್ಲಿಪ್ ಕಾರ್ಟ್ ಹೆಸರಿರುತ್ತವೆ. ಆದರೆ, ಇವು ಫ್ಲಿಪ್ ಕಾರ್ಟ್‌ನದ್ದಲ್ಲ. ಇದೇ ರೀತಿಯ ನೂರಾರು ವೆಬ್‌ಸೈಟ್ ಗಳ ಹೆಸರುಗಳು ಚಾಲ್ತಿಯಲ್ಲಿವೆ. ಇದರಲ್ಲಿ ನಾವು ಯಾವುದಾದರೂ ಪ್ರಾಡಕ್ಟ್ ಖರೀದಿಗೆ ನಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಿದರೆ ಸಾಕು. ಇದನ್ನೇ ಬಳಸಿಕೊಂಡು ಅವರು ನಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಖಾಲಿ ಮಾಡಿರುತ್ತಾರೆ.
ಮೆಸೆಂಜರ್‌ನಲ್ಲಿ ಮೋಸ
ಮೆಸೆಂಜರ್ ಎಂಬುದು ವ್ಯಕ್ತಿಗಳನ್ನು ನೇರವಾಗಿ ಸಂಪರ್ಕಿಸುವುದಕ್ಕೆ ಇರುವ ಉತ್ತಮ ಸಾಧನ. ಇವುಗಳ ಮೂಲಕ ಜನರನ್ನು ಸಂಪರ್ಕಿಸುವ ಮೋಸಗಾರರು ಲಿಂಕ್ ಕಳುಹಿಸುತ್ತಾರೆ. 32 ಜಿಬಿ ಪೆನ್‌ಡ್ರೈವ್ ಗೆ ಕೇವಲ 25 ರೂ.!, ಐಫೋನ್ ಕೇವಲ 5,000 ರೂ. ಎಂಬಂಥ ಜಾಹೀರಾತುಗಳು ಅಲ್ಲಿರುತ್ತವೆ. ಇದನ್ನು ನಂಬಿ ಆರ್ಡರ್ ಮಾಡಿದಿರಿ ಎಂದರೆ, ಹಣವೂ ಹೋಯ್ತು, ಉತ್ಪನ್ನವೂ ಸಿಗದು ಎಂಬಂಥ ಸ್ಥಿತಿ. ಹೀಗಾಗಿ, ಇಂಥ ಸಂದೇಶಗಳನ್ನು ನಿರ್ಲಕ್ಷಿಸುವುದು ಹಾಗೂ ಬ್ಲಾಕ್ ಮಾಡುವುದು ಒಳಿತು. ವಾಟ್ಸಪ್ ನಲ್ಲಂತೂ ಇಂಥ ದಂಧೆ ಜೋರು. ವಾಟ್ಸಪ್ ಇಂಥವುಗಳ ವಿರುದ್ಧ ಕಠಿನ ಕ್ರಮ ಕೈಗೊಂಡ ಬಳಿಕ, ಈಗ ಕೊಂಚ ತಗ್ಗಿದೆ.
ಫೋನ್‌ಕಾಲ್ ಅಥವಾ ಎಸ್ಸೆಮ್ಮೆಸ್ ಮೋಸ
ಹಠಾತ್ತನೆ ಯಾರೋ ನಿಮಗೆ ಕರೆ ಮಾಡಿ ಫ್ಲಿಪ್ ಕಾರ್ಟ್ ಅಥವಾ ಅಮೆಜಾನ್‌ನಲ್ಲಿ ಇಷ್ಟು ಕಡಿಮೆ ದರಕ್ಕೆ ಯಾವುದೋ ಉತ್ಪನ್ನ ಸಿಗುತ್ತದೆ ಎಂದು ನಂಬಿಸಬಹುದು. ಕನ್ನಡದಲ್ಲಿ, ಇಂಗ್ಲಿಷ್ ಅಥವಾ ಹಿಂದಿಯಲ್ಲೋ ಮಾತನಾಡಿ ನಿಮ್ಮನ್ನು ಮರುಳು ಮಾಡಬಹುದು. ಅಷ್ಟೇಅಲ್ಲ, ಉಚಿತ ಕೊಡುಗೆ ಇದೆ ಎಂದೂ ಹೇ ಳಬಹುದು. ಆದರೆ, ಇದನ್ನು ನಿಮಗೆ ಡೆಲಿವರಿ ಮಾಡುವುದಕ್ಕೂ ಮೊದಲು ಇಷ್ಟು ದುಡ್ಡನ್ನು ನೀವು ಈ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಇಡುತ್ತಾರೆ. ಈ ಬೇಡಿಕೆ ಇಟ್ಟಾಗ ನೀವು ಬೇಡಪ್ಪ ನಂಗೆ ನಿನ್ನ ಸಹವಾಸ ಎಂದು ಕಾಲ್ ಕಟ್ ಮಾಡಿ ಸುಮ್ಮನಾದರೆ ಬಚಾವ್. ಇಲ್ಲವಾದರೆ ನಿಮ್ಮ ಜೇಬಿಗೆ ಕತ್ತರಿ ಬಿದ್ದಂತೆ!
ನಮ್ಮ ಕಣ್ಣೇ ಮೋಸ ಮಾಡುತ್ತೆ!
ಇ- ಕಾಮರ್ಸ್ ವೆಬ್‌ಸೈಟ್ ಗಳಲ್ಲಿ ಪ್ರಾಡಕ್ಟ್
ಆರ್ಡರ್ ಮಾಡುವಾಗ ಜಾಗ್ರತೆ ವಹಿಸಬೇಕು.
ಬಹುತೇಕ ಸಂದರ್ಭದಲ್ಲಿ ನಾವು ನಮಗೆ ಬೇಕಾದ ಉತ್ಪನ್ನಕ್ಕಿಂತ ಬೇರೆ ಉತ್ಪನ್ನವನ್ನು ಆರ್ಡರ್ ಮಾಡುವ ಸಾಧ್ಯತೆ ಇರುತ್ತೆ.
ರಿಟರ್ನ್ ಆಪ್ಶನ್ ಇರುತ್ತದೆಯಾದರೂ, ಅನಗತ್ಯವಾಗಿ ರಿಟರ್ನ್ ಮಾಡುವುದು ಇ-ಕಾಮರ್ಸ್ ವೆಬ್‌ಸೈಟ್ ಗಳಿಗೆ ಹೊರೆ ಎಂಬುದನ್ನು ನಾವು ಮನದಲ್ಲಿಟ್ಟುಕೊಳ್ಳಬೇಕು.
ಸಾಮಾನ್ಯವಾಗಿ ಜನರು ಮೋಸ ಹೋಗುವುದು ಕಲರ್‌ನಲ್ಲಿ.
ನಮಗೆ ಬೇಕೆಂದ ಕಲರ್ ಬಟ್ಟೆಯನ್ನೋ ಅಥವಾ ಇತರ ವಸ್ತುವನ್ನು ನಾವು ಬುಕ್ ಮಾಡಿದರೆ, ವಾಸ್ತವವಾಗಿ ಕೈಗೆ ಬರುವ ಉತ್ಪನ್ನದ ಬಣ್ಣವೇ ಬೇರೆ ಆಗಿರುತ್ತದೆ.
ನಮ್ಮ ಸ್ಮಾರ್ಟ್‌ಫೋನ್ ನಲ್ಲಿ ಕಾಣುವ ಕಲರ್ ಗೂ ವಾಸ್ತವ ಕಲರ್ ಗೂ ಸ್ವಲ್ಪ ವ್ಯತ್ಯಾಸವಿರುತ್ತದೆ. ಇದು ಬಟ್ಟೆಯ ವಿಚಾರದಲ್ಲಿ ಹೆಚ್ಚು ವ್ಯತ್ಯಾಸಕ್ಕೆ ಕಾರಣವಾಗುತ್ತದೆ.
ಕೃಷ್ಣಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.