ನಗರದಲ್ಲಿ ಇ-ತ್ಯಾಜ್ಯ ಮರುಬಳಕೆ ಅಗತ್ಯ


Team Udayavani, Dec 29, 2019, 4:10 AM IST

bg-1

ನಗರಗಳಲ್ಲಿ ಇತ್ತೀಚೆಗೆ ಎಲೆಕ್ಟ್ರಾನಿಕ್‌ ತ್ಯಾಜ್ಯ ಕೂಡ ಒಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇ-ತ್ಯಾಜ್ಯವನ್ನು ಮರುಬಳಕೆ ಮಾಡುವುದರಿಂದ ಆರ್ಥಿಕವಾಗಿ ಉಳಿತಾಯ, ಸಂಪನ್ಮೂಲಗಳ ಸಂರಕ್ಷಣೆ ಮತ್ತು ಉಂಟಾಗುವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಹಾಯಕವಾಗುತ್ತದೆ. ಅಲ್ಲದೇ ಇದರಿಂದ ಆಗುವ ಅಪಾಯಗಳನ್ನು ತಡೆಯಲು ಸಹಕಾರಿಯಾಗಿದೆ.

ಸಾಮಾನ್ಯವಾಗಿ ಹಾಳಾದ ಕಂಪ್ಯೂಟರ್‌ ಮಾನಿಟರ್‌ಗಳು, ಮದರ್‌ ಬೋರ್ಡ್‌, ಮೊಬೈಲ್‌ಫೋನ್‌ ಮತ್ತು ಚಾರ್ಜರ್‌ಗಳು, ಕಾಂಪ್ಯಾಕ್ಟ್ ಡಿಸ್ಕ್, ಹೆಡ್‌ಫೋನ್‌, ಟೆಲಿವಿಷನ್‌ ಸೆಟ್‌, ಹವಾನಿಯಂತ್ರಕ ಮತ್ತು ರೆಫ್ರಿಜರೇಟರ್‌ ಇತ್ಯಾದಿಗಳಿಂದ ಉಂಟಾಗುತ್ತಿರುವ ತ್ಯಾಜ್ಯವೇ ಇ-ತ್ಯಾಜ್ಯವಾಗಿದೆ. ಗ್ಲೋಬಲ್‌ ಇ-ವೇಸ್ಟ್‌ ಮಾನಿಟರ್‌ನ 2017ರ ವರದಿ ಪ್ರಕಾರ ಭಾರತವು ವಾರ್ಷಿಕವಾಗಿ ಸುಮಾರು 2 ಮಿಲಿಯನ್‌ ಟನ್‌ ಇ-ತ್ಯಾಜ್ಯವನ್ನು ಉತ್ಪಾದಿಸುತ್ತದೆ ಅಂದರೆ ಯುಎಸ್‌, ಚೀನ ಜಪಾನ್‌ ಮತ್ತು ಜರ್ಮನಿಯ ನಂತರ ಇ-ತ್ಯಾಜ್ಯ ಉತ್ಪಾದಿಸುವ ದೇಶಗಳಲ್ಲಿ ಐದನೇ ಸ್ಥಾನದಲ್ಲಿದೆ. 2016-17ರಲ್ಲಿ ಭಾರತ ತನ್ನ ಇ-ತ್ಯಾಜ್ಯದ ಶೇ 0.036 ಮೆ. ಟನ್‌ನ್ನು ಮಾತ್ರ ಸಂಸ್ಕರಣೆ ಮಾಡಿದೆ. ನಾವು ಸರಿಯಾಗಿ ಇ-ತ್ಯಾಜ್ಯ ಸಂಸ್ಕರಣೆ ಮಾಡುತ್ತಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ.

ವಿಶ್ವಸಂಸ್ಥೆ ಜನವರಿ 24, 2019ರಲ್ಲಿ ಮಂಡಿಸಿದ ವರದಿಯೊಂದರ ಪ್ರಕಾರ 2018ರಲ್ಲಿ ವಿಶ್ವದ ಇ-ತ್ಯಾಜ್ಯದ ಹರಿವು 48.5 ಮೆ.ಟನ್‌ನಷ್ಟಿದೆ. ಇದರ ನಿರ್ವಹಣೆ ಸರಿಯಾಗಿ ಆಗದೇ ಇದ್ದಲ್ಲಿ ಇದು ದ್ವಿಗುಣಗೊಳ್ಳಬಹುದು ಎಂದು ಆತಂಕವನ್ನು ಸಹ ಹೋರಹಾಕಿದೆ.

ಇ-ತ್ಯಾಜ್ಯದಿಂದ ಪದಕ
ಚೀನದಲ್ಲಿ ಈಗಾಗಲೇ ಮರುಬಳಕೆಯಿಂದ ಕೊಬಾಲ್ಟ್ನ್ನು ಉತ್ಪಾದಿಸಲಾಗುತ್ತಿದೆ. ಈ ರೀತಿ ಮರುಬಳಕೆಯಿಂದ ತಯಾರಿಸಿದ ಲೋಹಗಳು 2ರಿಂದ 10 ಪಟ್ಟು ಶಕ್ತಿಯುತ ಮತ್ತು ಪರಿಣಾಮಕಾರಿಯಾಗಿರುತ್ತವೆ. ಇನ್ನೊಂದು ಆಶ್ಚರ್ಯಕರ ಅಂಶವೆಂದರೆ 2020ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸನ ವಿಜೇತರಿಗೆ ನೀಡುವ ಪದಕಗಳನ್ನು ಇ-ತ್ಯಾಜ್ಯವನ್ನು ಸಂಸ್ಕರಿಸುವ ಮೂಲಕ ತಯಾರು ಮಾಡಲಾಗುತ್ತಿದೆಯಂತೆ. ಇದಕ್ಕೆ 50,000 ಟನ್‌ನಷ್ಟು ತ್ಯಾಜ್ಯವನ್ನು ಬಳಸಲಾಗುತ್ತಿದೆ. ಇದರಿಂದ 8 ಟನ್‌ನಷ್ಟು ಚಿನ್ನ, ಬೆಳ್ಳಿ ಮತ್ತು ಕಂಚು ಬೇರ್ಪಡಿಸಿ 5,000 ಪದಕಗಳನ್ನು ಮಾಡಲಾಗುತ್ತಿದೆ.

ಇ-ತ್ಯಾಜ್ಯ ನಿರ್ವಹಣೆಯಲ್ಲಿ ಜಾಗೃತಿ
ಇ-ತ್ಯಾಜ್ಯದಲ್ಲಿ ಸೀಸ, ಕ್ಯಾಡ್ಮಿಯಮ್‌, ಬೆರಿಲಿಯಮ್‌ ಮತ್ತು ಪಾದರಸದಂಥ ಹಾನಿಕಾರಕ ಅಂಶಗಳನ್ನು ಹೊಂದಿದ್ದು ಇದರಿಂದ ಮಾನವನಿಗೆ ಅಷ್ಟೇ ಅಲ್ಲದೆ ಭೂಮಿ ಮೇಲಿನ ಮತ್ತು ಜಲಚರ ಜೀವಿಗಳಿಗೂ ಹೆಚ್ಚು ಅಪಾಯವಿದೆ. ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಜಿಟಲ್‌ ಇಂಡಿಯಾದ ಅಡಿಯಲ್ಲಿ ಕೈಗಾರಿಕೆ ಸಂಘಗಳೊಂದಿಗೆ 2015ರಿಂದ ಇ-ತ್ಯಾಜ್ಯ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದು, ಇದರಿಂದಾಗುವ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಭಾರತದಲ್ಲಿ ಇ-ತ್ಯಾಜ್ಯವನ್ನು ಮರುಬಳಕೆ ವಸ್ತುವಾಗಿ ಪರಿವರ್ತಿಸಬಲ್ಲ ಹಲವಾರು ಚಿಕ್ಕ ಕೈಗಾರಿಕೆಗಳನ್ನು ತಯಾರಿಸುವ ಮೂಲಕ ಇ-ತ್ಯಾಜ್ಯವನ್ನು ಅತ್ಯಂತ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ ಇದರ ನಿರ್ವಹಣೆ ಮಾಡುವುದರಿಂದ ಅನೇಕ ಉದ್ಯೋಗಗಳನ್ನು ಸೃಷ್ಠಿ ಮಾಡುತ್ತದೆ ಮತ್ತು ದೇಶದ ಆರ್ಥಿಕತೆಯನ್ನು ಬಲಗೊಳಿಸುತ್ತದೆ.

ನಮ್ಮಲ್ಲೂ ಇರಲಿ ಇ-ತ್ಯಾಜ್ಯ ಸಂಸ್ಕರಣೆ
ಪ್ರತೀ ನಗರದಲ್ಲೂ ಇ-ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವತ್ತ ಸರಕಾರ ಮುಂದಾಗಬೇಕು. ಇದರಿಂದ ನಗರದಲ್ಲಿ ಉಂಟಾಗುತ್ತಿರುವ ಇ-ತ್ಯಾಜ್ಯದ ರಾಶಿಯನ್ನು ಸರಿಯಾದ ಬಳಕೆ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

- ಶಿವಾನಂದ ಎಚ್‌.

ಟಾಪ್ ನ್ಯೂಸ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

1-sulakshana

AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.