ಕುಸುರಿ ಕೆತ್ತನೆ


Team Udayavani, Jun 9, 2018, 3:06 PM IST

9-june-13.jpg

ಮನೆಯ ಬಣ್ಣ, ವಿನ್ಯಾಸ, ಪೀಠೊಪಕರಣ, ಸೌಂದರ್ಯ ಹೆಚ್ಚಿಸುವ ಸಾಧನಗಳಲ್ಲಿ ಹೊಸ ಹೊಸ ವಿಧಾನವನ್ನು ಬಳಸಿದ್ದಾಯಿತು. ಆದರೆ ಈಗ ಕುಸುರಿ ಕೆತ್ತನೆಗಳ ಸರದಿ. ಕುಸುರಿ ಕೆತ್ತನೆಗಳು ಹಿಂದಿನ ಆಕರ್ಷಣೆಯನ್ನು ಉಳಿಸಿಕೊಂಡಿದ್ದರೂ ಬದಲಾದ ಕಾಲಕ್ಕೆ ಸರಿಸಮಾನವಾಗಿ ಮನೆಯ ಒಳಾಂಗಣ ಹಾಗೂ ಹೊರಾಂಗಣದ ಮೆರುಗು ಹೆಚ್ಚಿಸಲು ಇದರಲ್ಲೂ ಹೊಸತನವನ್ನು ಹುಡುಕಲಾಗುತ್ತಿದೆ. 

ಸ್ವಂತ ಮನೆ ಬೇಕು ಎಂಬುದು ಪ್ರತಿಯೊಬ್ಬರ ಮನದಾಸೆ. ಸಾಲ ಮಾಡಿಯಾದರೂ ಸ್ವಂತದೊಂದು ಸೂರು ನಿರ್ಮಾಕ್ಕೆ ಪಡಬಾರದ ಕಷ್ಟಗಳನ್ನು ಪಡುವವರೂ ಇದ್ದಾರೆ. ಅದರಲ್ಲೂ ತನ್ನ ಮನೆ ಎಲ್ಲರಿಗೂ ಮೆಚ್ಚುಗೆಯಾಗಬೇಕು. ಅದರ ಅಂದಚಂದವನ್ನು ಪ್ರತಿಯೊಬ್ಬರೂ ಹೊಗಳಬೇಕು ಎನ್ನುವುದು ಎಲ್ಲರ ಮನದ ಮಾತು. ಹಾಗಾಗಿ ತನ್ನ ಮನೆಯನ್ನು ಇತರರ ಮನೆಗಿಂತ ಭಿನ್ನವಾಗಿ ನಿರ್ಮಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಇದ ರಲ್ಲಿ ಈಗ ಹಳೆ ಮಾದರಿಯ ಹೊಸ ಪ್ರಯೋಗ ಕುಸುರಿ ಕೆತ್ತನೆಗಳು.

ಕುಸುರಿ ಕೆತ್ತನೆಗಳನ್ನು ಉಪಯೋಗಿಸಿಕೊಂಡು ಮನೆಯ ಅಂದ ಹೆಚ್ಚಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಹಳೆಯ ಮನೆ‌ಗಳಲ್ಲಿ ಸುಂದರವಾದ ಕುಸುರಿ ಕೆತ್ತನೆಗಳನ್ನು ಗಮನಿಸಬಹುದು. ಆಗ ಮರಮುಟ್ಟುಗಳು ಯಥೇತ್ಛವಾಗಿ ಲಭ್ಯವಿರುತ್ತಿದ್ದ ಕಾರಣಕ್ಕಾಗಿ ಹೆಚ್ಚಾಗಿ ಕೆಟಕಿ ಬಾಗಿಲುಗಳಿಗೆ ಬೆಲೆಬಾಳುವ ವಿವಿಧ ಜಾತಿಯ ಮರಗಳನ್ನೇ ಬಳಸುತ್ತಿದ್ದರು. ಅಲ್ಲದೆ, ಹಳೆಯ ಕಾಲದ ಮನೆಗಳಲ್ಲಿ ಕುಸುರಿ ಕೆತ್ತನೆಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದವು.

ಮರದಿಂದ ತಯಾರಿಸುವ ಬಾಗಿಲು ಹಾಗೂ ಇನ್ನಿತರ ಪೀಠೊಪಕರಣಗಳಿಗೆ ಖರ್ಚು ಕೂಡ ಅಧಿಕವಾದ್ದರಿಂದ ಜನರು ಹೆಚ್ಚಾಗಿ ಫೈಬರ್‌ ಬಾಗಿಲು ಹಾಗೂ ಸಿಮೆಂಟ್‌ ನಿಂದ ತಯಾರಿಸಿದ ದಾರಂದಗಳನ್ನೇ ಬಳಸುತ್ತಾರೆ. ಹಾಗಿದ್ದರೂ, ಮನೆಯ ಎದುರು ಹಾಗೂ ಹಿಂದಿನ ಬಾಗಿಲುಗಳನ್ನು ತಯಾರಿಸುವಾಗ ಈಗಲೂ ಮರದ ಬಾಗಿಲುಗಳನ್ನೇ ಬಳಸಿಕೊಂಡು ಅದರಲ್ಲಿ ಸುಂದರ ಕುಸುರಿ ಕೆತ್ತನೆಗಳು ಇರುವಂತೆ ನೋಡಿಕೊಳ್ಳುತ್ತಾರೆ.

ವಿಶೇಷ ಮಾದರಿ
ಬಗೆಬಗೆಯ ಚಿತ್ರಗಳನ್ನು ಕುಸುರಿ ಕೆತ್ತನೆಗಳ ಮೂಲಕ ಅಚ್ಚಾಗಿಸಬಹುದಾದರೂ ಎಲ್ಲ ಬಗೆಯ ಚಿತ್ರಗಳನ್ನು ಮನೆಯ ಗೋಡೆಗಳಲ್ಲಿ ಮೂಡುವಂತೆ ಮಾಡುವುದು ತರವಲ್ಲ. ನೋಡಿದಾಗ ಮನಸ್ಸಿಗೆ ಮುದವನ್ನುಂಟು ಮಾಡುವ ರಚನೆಗಳನ್ನಷ್ಟೇ ಆಯ್ದುಕೊಳ್ಳುವುದು ಅತ್ಯಗತ್ಯ. ಪ್ರಕೃತಿಯ ಸುಂದರ ದೃಶ್ಯಗಳು ಅದ ರಲ್ಲೂ ಹೆಚ್ಚಾಗಿ ತರುಲತೆಗಳನ್ನೇ ಕುಸುರಿ ಕೆತ್ತನೆಗಳಾಗಿ ಮಾಡುತ್ತಾರೆ. ಓಲಾಡುವ ಬಳ್ಳಿ, ಉದಯಿಸುವ ಸೂರ್ಯ, ಸರಸಸಲ್ಲಾಪವಾಡುವ ಸುಂದರ ಹಕ್ಕಿಗಳು.. ಮೊದ ಲಾದ ದೃಶ್ಯಗಳೇ ಮನೆಯ ಒಳಾಂಗಣ ಹಾಗೂ ಹೊರಾಂಗಣದ ಅಂದ ಹೆಚ್ಚಿಸುತ್ತವೆ.

ಮನೆಯ ಅಂದವನ್ನು ಹೆಚ್ಚಿಸುವುದೇ ಕುಸುರಿ ಕೆತ್ತನೆಗಳ ಜವಾಬ್ದಾರಿಯಾದುದರಿಂದ ಈ ಕೆತ್ತನೆಗಳನ್ನು ಆಯಕಟ್ಟಿನ ಜಾಗದಲ್ಲಿ ಅಳವಡಿಸುವುದೇ ನಿಜವಾದ ಜಾಣ್ಮೆ. ಮನೆಯ ಮುಂಭಾಗದ ಬಾಗಿಲು ಕುಸುರಿ ಕೆತ್ತನೆಗಳು ಇಲ್ಲದೇ ಖಾಲಿಯಾಗಿದ್ದರೆ ಮನೆ ಆಕರ್ಷಣೆಯನ್ನೇ ಕಳೆದುಕೊಳ್ಳುತ್ತದೆ ಎನ್ನುವವರಿದ್ದಾರೆ. ಹೀಗಾಗಿ ಹೆಚ್ಚಾಗಿ ಕುಸುರಿ ಕೆತ್ತನೆಗಳನ್ನು ಹೆಚ್ಚಾಗಿ ಕೇಂದ್ರೀಕರಿಸುವುದು ಈ ಬಾಗಿಲ ಮೇಲೆಯೇ. ಇನ್ನು ಮನೆಯ ಒಳಾಂಗಣದಲ್ಲೂ ಅಲಂಕಾರಕ್ಕಾಗಿ ಕುಸುರಿ ಕೆತ್ತನೆಗಳಿರುವ ಫ‌ರ್ನಿಚರ್‌, ಆಲಂಕಾ ರಿಕ ವಸ್ತುಗಳನ್ನು ಬಳಸುತ್ತಾರೆ. ಇದು ಅವರವರ ಅಭಿರುಚಿಯನ್ನು ಅವಲಂಭಿಸಿರುತ್ತದೆ. 

ಎಲ್ಲಿ, ಹೇಗೆ?
ಮನೆಯ ಎದುರಿನ ಬಾಗಿಲು, ದಾರಂದಗಳಲ್ಲಿ, ಹಾಲ್‌ನ ಶೋಕೇಸ್‌ನ ಬದಿಗಳಲ್ಲಿ, ಸಿಟೌಟ್‌ನ ಅಂಚಿನಲ್ಲಿ ಇರಿಸುವ ಪೀಠೊಪಕರಣಗಳಲ್ಲಿ ಕುಸುರಿ ಕೆತ್ತನೆಗಳಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮನೆಯ ಎದುರು ಬದಿಯ ಬಾಗಿಲು, ಸಿಟೌಟ್‌, ಹಾಲ್‌ ಹಾಗೂ ದೇವರ ಕೋಣೆಯ ಮುಂಬಾಗಿಲಿನಲ್ಲಿರುವ ಕುಸುರಿ ಕೆತ್ತನೆಗಳಲ್ಲಿ ಸಾಂಪ್ರದಾಯಿಕ ಮಾದರಿ ಅಥವಾ ಅಧುನಿಕ ಮಾದರಿಯನ್ನು ಬಳಸಬಹುದು. ಸಾಂಪ್ರದಾಯಿಕ ಮಾದರಿಯಲ್ಲಿ ಮನೆಯ ಮುಂಭಾಗದಲ್ಲಿ ಆರತಿ ಹಿಡಿದು ಸ್ವಾಗತಿಸುವ ಮಹಿಳೆಯರ ಚಿತ್ರಣವನ್ನು ಮೂಡಿಸುಬಹುದು, ತಳಿರು ತೋರಣದ ಚಿತ್ರವನ್ನೂ ಕೆತ್ತಿಸಬಹುದು. ಆಧುನಿಕ ಮಾದರಿಯ ವಿನ್ಯಾಸ ಬೇಕಿದ್ದರೆ ಕಂಪ್ಯೂಟರಿನಲ್ಲಿರುವ ಡಿಸೈನ್‌ಗಳನ್ನು ನೋಡಬಹುದು. ದೇವರ ಕೋಣೆಯ ಬಾಗಿಲು ಹಾಗೂ ಅದರ ಬದಿಗಳಲ್ಲಿ ಶಂಖ, ಜಾಗಟೆಯನ್ನು ಕೆತ್ತುವುದು, ದೇವರ ಚಿತ್ರಗಳನ್ನು ಪಡಿಮೂಡಿಸುವುದು, ಹೂಮಾಲೆಗಳ ರಚನೆಯನ್ನು ದೇವರ ಚಿತ್ರಪಟವಿದ್ದ ಬಳಿ ಇರುವಂತೆ ನೋಡಿಕೊಳ್ಳಬಹುದು. 

 ಗಣೇಶ್‌ ಮಾವಂಜಿ

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.