ಬದುಕಿನಲ್ಲಿರಲಿ ಆರ್ಥಿಕ ಶಿಸ್ತು
Team Udayavani, Aug 13, 2018, 3:34 PM IST
ಹೀಗೊಂದು ಉಳಿತಾಯದ ಯೋಜನೆ ಇದೆ. ಇದರಲ್ಲಿ ಹೂಡಿಕೆ ಮಾಡಿದರೆ ಇಂತಿಷ್ಟು ದಿನದಲ್ಲಿ, ಇಂತಿಷ್ಟು ಹಣ ಸಿಗುತ್ತದೆ ಎಂದು ನಮಗೆ ಏಜೆಂಟೋ, ಪರಿಚಯದ ಹಿರಿಯರೋ ಹೇಳುತ್ತಾರೆ ಅಂದುಕೊಳ್ಳಿ. ತಮ್ಮ ಮಾತಿಗೆ ಉದಾಹರಣೆ
ಹಾಗೂ ಸಮರ್ಥನೆಯ ರೂಪದಲ್ಲಿ ಅವರು ಒಂದು ಲೆಕ್ಕಾಚಾರವನ್ನು ನಮ್ಮ ಮುಂದಿಡುತ್ತಾರೆ. ಮುಂದಿನ ಇಷ್ಟು ವರ್ಷದಲ್ಲಿ ನಿಮ್ಮ ಹಣ ಇಷ್ಟಾಗುತ್ತದೆ.
ಅದಕ್ಕೊಂದು ಲೆಕ್ಕಾಚಾರ ಕೊಡುತ್ತಾರೆ. ಆ ಲೆಕ್ಕಾಚಾರ ಕರಾರುವಕ್ಕಾಗಿರುತ್ತದೆ. ಅದರಲ್ಲಿ ತಪ್ಪು ಇಲ್ಲ. ಉದಾಹರಣೆಗೆ
ವರ್ಷಕ್ಕೆ 5,000 ರೂಪಾಯಿಯ ಹಾಗೆ ಮುಂದಿನ 20 ವರ್ಷ ನೀವು ಕಟ್ಟುತ್ತ ಬಂದರೆ ನಿಮ್ಮ ಹಣ ಇಷ್ಟಾಗುತ್ತದೆ ಎನ್ನುತ್ತಾರೆ.
ಈ ವಿವರಗಳೂ ನಮಗೆ ಆಪ್ತವಾಗುತ್ತವೆ. ಕುಳಿತಲ್ಲಿಯೇ ನಾವು ನಿರ್ಧರಿಸುತ್ತೇವೆ. ಖಂಡಿತ ಹೀಗೆ ಮಾಡಬೇಕು ಅಂತಾ. ಆದರೆ ಮನೆಗೆ ಬಂದಾಗ ನಮ್ಮ ನಿರ್ಧಾರಗಳ ತೀವ್ರತೆ ಕಡಿಮೆ ಆಗುತ್ತದೆ. ಒಂದೆರಡು ದಿನ ಕಳೆಯುವುದರಲ್ಲಿ ನಮಗೆ ಅದು ಮರೆತೇ ಹೋಗುತ್ತದೆ.
ಹಾಗಾಗಿ, ಯಾವುದೇ ಹಣಕಾಸು ಹೂಡಿಕೆ ಮಾಡುವಾಗ, ಯಾಕೆ ಇಂತಹ ಹೂಡಿಕೆ ಮಾಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿದ್ದಾಗ ಹೂಡಿಕೆ ಮಾಡಿಯೇ ತೀರುತ್ತೇವೆ. ಮಕ್ಕಳ ಶಿಕ್ಷಣ. ಮನೆ, ನಿವೃತ್ತಿ ಜೀವನ, ಆರೋಗ್ಯ ವಿಮೆ ಕಟ್ಟುವುದು ಹೀಗೆ. ನಮ್ಮ ಎದುರು ಇಂತಹ ಹಲವು ಗುರಿಗಳು ಸ್ಪಷ್ಟವಾಗಿರುವಾಗ ನಮ್ಮ ನಡಿಗೆಗೆ ಖಚಿತತೆ ಇರುತ್ತದೆ. ಈಗೇನೂ ಅಂಥ ಅವಸರವಿಲ್ಲ. ಇವತ್ತಲ್ಲದಿದ್ದರೆ ನಾಳೆ ಮಾಡಿದರಾಯಿತು ಎನ್ನುವ ಮನೋಭಾವ ಇರುವುದಿಲ್ಲ. ಮಾಡಲೇ ಬೇಕು ಎನ್ನುವ ಸ್ವಯಂ ಒತ್ತಡ ನಮಗೆ ನಾವೇ ಹಾಕಿಕೊಳ್ಳುತ್ತೇವೆ.
ಎಷ್ಟೋ ಮೆಟ್ಟಿಲುಗಳನ್ನು ಹತ್ತುವ ಕೆಲಸ ಮೊದಲ ಮೆಟ್ಟಿಲಿನಿಂದಲೇ ಶುರು ಆಗಬೇಕು. ಕೊನೆಯ ಮಟ್ಟಿಲಿನ ಬಗೆಗೆ ಯೋಚಿಸುತ್ತ ಕುಳಿತಿರುವ ಬದಲು, ಒಂದೊಂದಾಗಿ ಮೆಟ್ಟಿಲು ಹತ್ತುವುದು ಆಗಬೇಕು. ಮಾಡಿ ಮುಗಿಸುವ ಮೊದಲು ಅದು ಆರಂಭ ಆಗಬೇಕಲ್ಲಾ. ಹೂಡಿಕೆ ಮೊದಲು ಆರಂಭ ಆಗಲಿ, ಅದಕ್ಕೂ ಮೊದಲು ಆರ್ಥಿಕ ಶಿಸ್ತು ಇರಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.