ಮನೆಯ ಅಂದ ಹೆಚ್ಚಿಸುವ ಸೊಬಗಿನ ಅಂಗಳ


Team Udayavani, Jul 20, 2019, 5:00 AM IST

p-21

ನಿಮ್ಮ ಮನೆಯನ್ನು ಆಕರ್ಷಕವಾಗಿಸಲು ಒಳಾಂಗಣದ ಜತೆಗೆ ಅಂಗಳದ ಕಡೆಗೂ ಗಮನ ಹರಿಸಬೇಕು. ಮನೆ ಸುತ್ತ ಖಾಲಿ ಜಾಗ ಇದ್ದರೆ ನಿಮ್ಮ ಅಭಿರುಚಿಗೆ ತಕ್ಕಂತೆ ಸುಂದರ ರೂಪ ಕೊಡಬಹುದು. ಕೈ ತೋಟ ನಿರ್ಮಾಣ ಮಾಡುವುದು ಮನೆಯ ಸೊಬಗು ಹೆಚ್ಚಿಸುವುದರ ಜತೆಗೆ ಉತ್ತಮ ವಾತಾವರಣ ಹೊಂದಲೂ ಕಾರಣವಾಗುತ್ತದೆ.

ಸುಂದರ ಮನೆಯ ಮೆರಗು ಹೆಚ್ಚಿಸುವಲ್ಲಿ ಅಂಗಳದ ಪಾತ್ರವೂ ಮುಖ್ಯವಾಗುತ್ತದೆ. ಹಿಂದಿನ ಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಹರಡಲು, ಒಣ ಹಾಕಲು ಬಳಸಲ್ಪಡುತ್ತಿದ್ದ ಅಂಗಳ ಇಂದಿಗೂ ಕೂಡ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿಲ್ಲ. ಕಿರಿದಾದರೂ ಅಂಗಳ ಹೊಂದಿರಬೇಕು ಎನ್ನುವುದು ಬಹುತೇಕರ ಅಭಿಪ್ರಾಯ. ಇಷ್ಟು ಪ್ರಾಧಾನ್ಯ ಹೊಂದಿರುವ ಅಂಗಳದ ವಿಷಯದಲ್ಲಿ ಒಂದಷ್ಟು ಎಚ್ಚರಿಕೆ ವಹಿಸಿದರೆ ಆಕರ್ಷಕವಾಗಿಸಬಹುದು ಮತ್ತು ಇನ್ನಷ್ಟು ಉಪಯೋಗ ಯೋಗ್ಯವನ್ನಾಗಿಸಬಹುದು.

ಮೊದಲೇ ನಿರ್ಧರಿಸಿ
ಮನೆ ಕಟ್ಟುವಾಗಲೇ ಅಂಗಳ ಹೀಗಿರಬೇಕು ಎನ್ನುವ ಕಲ್ಪನೆ ನಿಮ್ಮಲ್ಲಿರಲಿ. ಜತೆಗೆ ವಾಹನ ನಿಲುಗಡೆಗೆ ಅಂಗಳದ ಬದಿಯಲ್ಲಿ ಸ್ಥಳ ನಿಗದಿಗೊಳಿಸಿ. ಇದು ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯುವಂತಿರಬೇಕು. ಜತೆಗೆ ಓಡಾಡಲು ತೊಂದರೆಯಾಗದಂತೆ ಅಂಗಳದ ಬದಿಯಲ್ಲೇ ಇದರ ಜಾಗ ನಿರ್ಧರಿಸುವುದು ಅವಶ್ಯ. ಜತೆಗೆ ತುಳಸಿಕಟ್ಟೆಗೆ ಸಶಕ್ತ ಜಾಗವನ್ನೂ ಮೊದಲೇ ಅಂತಿಮಗೊಳಿಸಿ.

ಉದ್ಯಾನ ನಿರ್ಮಿಸಿ
ಮನೆ ಅಂಗಳಕ್ಕೆ ಸಾಕಷ್ಟು ಜಾಗ ಇದೆ ಎಂದಾದರೆ ಪುಟ್ಟ ಉದ್ಯಾನ ನಿರ್ಮಿಸಬಹುದು. ಹೂವಿನ ಗಿಡ, ಆಲಂಕಾರಿಕ ಸಸ್ಯಗಳ ಜತೆಗೆ ಔಷಧೀಯ ಗಿಡಗಳಾದ ಕಹಿ ಬೇವು, ಕರಿ ಬೇವು, ಸಾಂಬ್ರಾಣಿ, ಅಮೃತಬಳ್ಳಿ ಮುಂತಾದವುಗಳನ್ನು ಬೆಳೆಯಿರಿ. ಜತೆಗೆ ಸಣ್ಣ-ಪುಟ್ಟ ತರಕಾರಿ ಗಿಡಗಳನ್ನೂ ನೆಡಬಹುದು.

ಮಾತ್ರವಲ್ಲ ಮಾವಿನ ಗಿಡ, ಚಿಕ್ಕು, ದಾಳಿಂಬೆ ಮುಂತಾದ ಹಣ್ಣಿನ ಗಿಡಗಳನ್ನೂ ಬೆಳೆಸಿದರೆ ಉತ್ತಮ. ಉದ್ಯಾನದ ಬದಿಯಲ್ಲಿ ತೆಂಗಿನ ಗಿಡಗಳನ್ನು ನೆಡುವುದನ್ನು ಮರೆಯ ಬೇಡಿ. ಮಡಲು, ತೆಂಗಿನಕಾಯಿ ಬೀಳುವಾಗ ತೊಂದರೆಯಾಗದಂತೆ ಆದಷ್ಟು ಬದಿಗೆ ನೆಡಬೇಕು. ಜತೆಗೆ ಚಿಕ್ಕದೊಂದು ಕೊಳ ನಿರ್ಮಿಸಿದರೆ ನಿಮ್ಮ ಉದ್ಯಾನ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಉದ್ಯಾನದಲ್ಲಿ ಬೆಂಚು ಅಥವಾ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದರೆ ಉತ್ತಮ. ಜತೆಗೆ ವಾಕಿಂಗ್‌ ಮಾಡಲು ದಾರಿಯೂ ಇರಲಿ.

ಸ್ಥಳ ಇಲ್ಲವೆಂದರೆ ಚಿಂತೆ ಬೇಡ
ಉದ್ಯಾನ ನಿರ್ಮಿಸುವಷ್ಟು ಅಂಗಳದಲ್ಲಿ ಜಾಗ ಇಲ್ಲ ಎಂದಾದರೆ ಚಿಂತೆ ಬೇಡ. ಕೆಲವು ಸಣ್ಣ-ಪುಟ್ಟ ಗಿಡಗಳನ್ನು ಪಾಟ್‌ಗಳಲ್ಲಿ ನೆಡಬಹುದು. ಜತೆಗೆ ಗೋಣಿ ಚೀಲಗಳಲ್ಲಿ ಮಣ್ಣು ತುಂಬಿ ಬೆಂಡೆ, ಬದನೆ, ಟೊಮೇಟೊ, ಮೆಣಸು ಮುಂತಾದ ತರಕಾರಿಗಳನ್ನು ಬೆಳೆಯಬಹುದು. ಇವನ್ನು ಅಂಗಳದ ಬದಿ ಸಾಲಾಗಿ ಜೋಡಿಸಿದರಾಯಿತು.

ಪಾದರಕ್ಷೆ ಒಪ್ಪವಾಗಿ ಜೋಡಿಸಿ
ಅಂಗಳದಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಕಳಚಿಡಬೇಡಿ. ಚಪ್ಪಲಿ ಸ್ಟಾಂಡ್‌ ಅನ್ನು ಅಳವಡಿಸಬಹುದು. ಅಂಗಳದ ಮೂಲೆ ಯಲ್ಲಿ ಪಾದರಕ್ಷೆ ಇಡುವ ವ್ಯವಸ್ಥೆ ಮಾಡಿ.

ಮೆಟ್ಟಿಲುಗಳನ್ನು ಅಂದವಾಗಿಸಿ
ಅಂಗಳದ ಮೆಟ್ಟಿಲುಗಳನ್ನು ಇನ್ನಷ್ಟು ಆಕರ್ಷಕಗೊಳಿಸಲು ಎರಡೂ ಬದಿ ಹೂವಿನ ಪಾಟ್‌ಗಳನ್ನು ಇಡಿ. ಸಣ್ಣ ಗಿಡಗಳಲ್ಲಿ ಹೂವಾಗುವಂತಹ ಅಲಂಕಾರಿಕಾ ಗಿಡಗಳು ನಿಮ್ಮ ಆದ್ಯತೆಯಾಗಿರಲಿ. ಮುಳ್ಳಿನ ಗಿಡಗಳು ಬೇಡ. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಪಾಟ್‌ಗಳಿಗೆ ಹಾಕುವ ನೀರು ಹೊರಗಡೆ ಚೆಲ್ಲದಂತೆ ಎಚ್ಚರವಹಿಸುವುದು ಮತ್ತು ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯ.

ಗಮನಿಸಬೇಕಾದ ಅಂಶಗಳು
– ಅಂಗಳಕ್ಕೆ ಇಂಟರ್‌ ಲಾಕ್‌ ಅಳವಡಿಸಿದ್ದರೆ ಮಳೆಗಾಲದಲ್ಲಿ ಅದರ ಮಧ್ಯದಲ್ಲಿ ಹುಲ್ಲು-ಗಿಡ ಗಂಟಿಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
– ಮಳೆಗಾಲದಲ್ಲಿ ಸಿಮೆಂಟ್ ನೆಲ ದಲ್ಲಿ ಹಾವಸೆ ಬೆಳೆದು ಜಾರುವ ಸ್ಥಿತಿ ನಿರ್ಮಾಣವಾಗುವುದರಿಂದ ಆಗಾಗ ಉಜ್ಜಿ ತೊಳೆಯುವುದು ಒಳಿತು.
– ಅಂಗಳದ ಮೂಲೆಗಳಲ್ಲಿ ಕಸ ಕಡ್ಡಿ ಬಿದ್ದು ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ.
– ಗಿಡ, ಬಳ್ಳಿ ಮನೆಯೊಳಗೆ ಹಬ್ಬದಂತೆ ಗಮನ ಹರಿಸಿ.
-ಗಾರ್ಡನ್‌ನ ಗಿಡಗಳನ್ನು ನಿಯ ಮಿತವಾಗಿ ಕತ್ತರಿಸಿ ಸುಂದರ ರೂಪ ಕೊಟ್ಟರೆ ಆಕರ್ಷಕವಾಗಿರುತ್ತದೆ.
– ಮಳೆಗಾಲದಲ್ಲಿ ಗಿಡಗಳ ಕೊಂಬೆ ಕತ್ತರಿಸಿದರೆ ಚೆನ್ನಾಗಿ ಚಿಗುರುತ್ತದೆ.
-ವಿದ್ಯುತ್‌ ತಂತಿಗಳಿಗೆ ಕೊಂಬೆಗಳು ತಾಗದಂತೆ ನೋಡಿಕೊಳ್ಳಿ.
-ಅಂಗಳದಲ್ಲಿ ಬಾವಿ ಇದ್ದರೆ ಕಟ್ಟೆಗೆ ವಿವಿಧ ರೂಪಗಳನ್ನು ಕೊಟ್ಟು ಆಕರ್ಷಕವಾಗಿಸಬಹುದು.

-ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.